Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ್ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದಲ್ಲಿ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಹಕ್ಕುಗಳ ರಕ್ಷಣೆ ಹಾಗೂ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಐಕ್ಯತೆಯ ಪ್ರದರ್ಶನ ಅತ್ಯಗತ್ಯವಾಗಿದ್ದು, ಆಗಸ್ಟ್ 28ರಂದು ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ ಪ್ಯಾಲೇಸ್ (ಗೇಟ್ ನಂ. 8)ನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ಜಾಗೃತ ನೌಕರರ ರಾಜ್ಯಮಟ್ಟದ 6ನೇ ಐಕ್ಯತಾ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ್ ಕರೆ ನೀಡಿದರು.ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ, ಬೆಂಗಳೂರು, ವಿಜಯಪುರ ಜಿಲ್ಲಾ ಘಟಕದ ವತಿಯಿಂದ ರಾಜ್ಯಮಟ್ಟದ ಸಮಾವೇಶದ ಪೂರ್ವಸಿದ್ಧತೆ ಹಾಗೂ ಕಾರ್ಯಕ್ರಮದ ರೂಪರೇಷೆಗಳ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ವಿಶೇಷವಾಗಿ ಎಸ್‌ಸಿ/ಎಸ್‌ಟಿ ಸರ್ಕಾರಿ ನೌಕರರ ಮೇಲೆ ತಾರತಮ್ಯ ನಡೆಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು…
ಮಳೆ ಇಲ್ಲದೇ ಪರದಾಡುತ್ತಿರುವ ರೈತರು | ಐದು ವರ್ಷಗಳಿಂದ ಕಾಲುವೆ ಸ್ವಚ್ಛಗೊಳಿಸದ ಆರೋಪ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಚವನಭಾವಿ ಗ್ರಾಮದ ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ ನೀರು ಪೂರೈಸುವ ಎಎಲ್‌ಬಿಸಿ ಕಾಲುವೆ (ಡಿಸ್ಟ್ರಿಬ್ಯೂಟರ್-೩೯) ನಿರ್ವಹಣೆ ಕೊರತೆಯಿಂದ ಕಾಲುವೆಯಲ್ಲಿ ಹೂಳು, ಕಸ, ಕಲ್ಲುಗಳು ಹಾಗೂ ಮುಳ್ಳಿನ ಗಿಡಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿಯದಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ.ತಾಲ್ಲೂಕಿನ ನಾಲತವಾಡ, ಅರೇಶಂಕರ, ಕಮಲಾಪುರ ಹಾಗೂ ಎಣ್ಣಿವಡಗೇರಿ ಮಾರ್ಗವಾಗಿ ಚವನಭಾವಿ ಗ್ರಾಮದ ರೈತರ ಜಮೀನುಗಳಿಗೆ ನೀರು ಪೂರೈಸುವ ಈ ಕಾಲುವೆಯ ಹಲವು ಭಾಗಗಳಲ್ಲಿ ಮಣ್ಣು, ಕಲ್ಲುಗಳು, ಆಪು ಹುಲ್ಲು ಹಾಗೂ ಗಿಡಗಂಟಿಗಳು ಬೆಳೆದು ನೀರಿನ ಹರಿವಿಗೆ ಅಡ್ಡಿಯಾಗಿವೆ. ಸುಮಾರು ಐದು ವರ್ಷಗಳಿಂದ ಕಾಲುವೆಯ ಹೂಳೆತ್ತುವ ಕಾರ್ಯ ನಡೆದಿಲ್ಲ ಎಂದು ರೈತರು ದೂರಿದ್ದಾರೆ.ಸಧ್ಯ ಮಳೆ ಇಲ್ಲದೇ ಪರದಾಡುತ್ತಿರುವ ರೈತರು ನೀರಿಗಾಗಿ ಹವಣಿಸುತ್ತಿದ್ದು, ಈ ಕಾಲುವೆ ಅನುಕೂಲವಾಗುತ್ತಿದ್ದರೂ, ಸಮರ್ಪಕ ನೀರು ತಲುಪುಪದಿರುವ ಕಾರಣ ತಮ್ಮ ಬೆಳೆಗಳು ಹಾಳಾಗುವ ಆತಂಕ ಎದುರಾಗಿದೆ. ಅಲ್ಲದೇ ಇದೇ ಕಾಲುವೆ ನೀರನ್ನು ಅವಲಂಬಿಸಿರುವ ಜಾನುವಾರುಗಳಿಗೂ…
ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದಲ್ಲಿ ಎಬಿವಿಪಿ ವತಿಯಿಂದ ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದ ವಂದೇ ಮಾತರಂ ಗೀತೆಗೆ ೧೫೦ ವರ್ಷಗಳು ಹಾಗೂ ಭಾರತಕ್ಕೆ ೭೯ ನೇ ಸ್ವಾತಂತ್ರ್ಯ ಸಂಭ್ರಮದ ಹಿನ್ನೆಲೆಯಲ್ಲಿ ಶ್ರೀ ಶಾಂತೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಕಾರ್ಯಕರ್ತರು ಸೇರಿ ೪೦೦ ಮೀಟರ್ ಉದ್ದದ ತಿರಂಗಾ ಯಾತ್ರೆ ನಡೆಸಿದರು.ಯಾತ್ರೆಯು ಶ್ರೀ ಶಾಂತೇಶ್ವರ ಪದವಿಪೂರ್ವ ಮಹಾವಿದ್ಯಾಲಯದಿಂದ ವಿಜಯಪುರ ರಸ್ತೆ, ನಂತರ ಬಸವೇಶ್ವರ ವೃತ್ತ , ಅಂಬೇಡ್ಕರ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೇರವಣೆಗೆ ನಡೆಸಿದರು.ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ಮಹಿಳಾ ಎಬಿವಿಪಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಮೆರವಣೆಗೆಯಲ್ಲಿ ದೇಶದ ಪರ ಮತ್ತು ಸ್ವಾತಂತ್ರö್ಯ ಹೋರಾಟಗಾರರ ಬಂಕಿಮ ಚಂದ್ರ ಚಟರ್ಜಿ ಸೇರಿದಂತೆ ಅನೇಕ ದೇಶ ಭಕ್ತರ ಜಯಘೋಷ ಹಾಕಿದರು.ಎಬಿವಿಪಿ ಮುಖಂಡರಾದ ರಾಹುಲ ಜಾಧವ, ಹಣಮಂತ ಹಳ್ಳುರ, ಸಚಿನ ಧನಗೊಂಡ ಸತೀಶ ಹೊಟಗಿ, ಸೋಮನಾಥ ಕಟಗೇರಿ ನಿರ್ಮಲಾ, ಸ್ನೇಹಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ವಿಜಯಪುರ ಜಿಲ್ಲೆಯಲ್ಲಿ ವಾಸ್ತವಿಕ ಮಳೆ ಪ್ರಮಾಣದ ಬಗ್ಗೆ ತಪ್ಪು ವರದಿ ಕಳಿಸಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುವ ಸಾಧ್ಯತೆಯಿದೆ. ಕಾರಣ ಮೇಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಇಂಡಿ ತಾಲ್ಲೂಕು ಅಧ್ಯಕ್ಷ ಬಾಳು ಮುಳಜಿ ಆಗ್ರಹಿಸಿದರು.ಅವರು ಶನಿವಾರ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ವಿಜಯಪೂರ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ನೀಡಿರುವ ವರದಿ ವಾಸ್ತವಿಕ ಪರಿಸ್ಥಿತಿಗೆ ವಿರುದ್ಧವಾಗಿದೆ. ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ರೈತರು ಸಂಕಷ್ಟದಲ್ಲಿದ್ದರೂ, ಮಳೆಯಾಗಿದೆ ಎಂದು ತಪ್ಪು ವರದಿ ನೀಡಿರುವುದರಿಂದ ರೈತರಿಗೆ ಭಾರೀ ಅನ್ಯಾಯವಾಗುವ ಸಾಧ್ಯತೆ ಇದೆ. ಈ ತಪ್ಪು ವರದಿಯಿಂದ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವ ಪ್ರಕ್ರಿಯೆಗೆ ತೊಂದರೆಯಾಗಬಹುದು. ರೈತರಿಗೆ ದೊರೆಯಬೇಕಾದ ಬರ ಪರಿಹಾರದಿಂದ ವಂಚಿತರಾಗಬಹುದು. ಹವಾಮಾನ ಆಧಾರಿತ ತೋಟಗಾರಿಕೆ ಬೆಳೆಗಳ ವಿಮಾ ಪರಿಹಾರವೂ ಸಿಗದಂತಾಗಬಹುದು.ರೈತರ ಬೆಳೆ ನಷ್ಟದ ವಾಸ್ತವಿಕ ಪರಿಸ್ಥಿತಿ ಸರ್ಕಾರದ ಗಮನಕ್ಕೆ ಬಾರದಿರುವ ಸಾಧ್ಯತೆ ಆಗುವದು ಎಂದಿದ್ದಾರೆ.ಜಿಲ್ಲೆಯ ಹಲವು ಭಾಗಗಳಲ್ಲಿ…
ವಿಜಯಪುರ ದಿವ್ಯ ಸಂಜೆ ಕಾರ್ಯಕ್ರಮದಲ್ಲಿ ‘ಇವ ನಮ್ಮವ’ ತತ್ತ್ವದ ಪ್ರತಿಪಾದನೆ | ಸದ್ಗುರು ಶ್ರೀ ಮಧುಸೂದನ ಸಾಯಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಉತ್ತರ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆಯಿಂದಾಗಿ ರಕ್ತಹೀನತೆ, ಕಬ್ಬಿಣಾಂಶದ ಕೊರತೆ ವ್ಯಾಪಕವಾಗಿದೆ. ಇದರಿಂದ ಮಕ್ಕಳ ಎತ್ತರ ಕಡಿಮೆಯಾಗುತ್ತಿದ್ದು, ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ” ಎಂದು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಎಚ್ಚರಿಸಿದರು.ನಗರದಲ್ಲಿ ಶುಕ್ರವಾರ (ಆಗಸ್ಟ್ 7) ನಡೆದ “ದಿವ್ಯ ಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಡಾ ಅರವಿಂದ ಜತ್ತಿ ಅವರು ಕೇಳಿದ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು.“ಸಾಯಿಶ್ಯೂರ್ ಮುಂಜಾನೆ ಪೌಷ್ಟಿಕ ಆಹಾರ ಯೋಜನೆ ಆರಂಭಿಸಿದ ನಂತರ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಕರ್ನಾಟಕದಲ್ಲಿ ಪ್ರತಿದಿನ ಒಟ್ಟು 55 ಲಕ್ಷ ಮಕ್ಕಳಿಗೆ ಸಾಯಿ ಶ್ಯೂರ್ ಪೌಷ್ಟಿಕ ಉಪಾಹಾರ ಸಿಗುತ್ತಿದೆ. ವಿಜಯಪುರ ಜಿಲ್ಲೆಯ 3 ಲಕ್ಷ ಮಕ್ಕಳು ಇದರ ಫಲಾನುಭವಿಗಳಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ವರ್ಷಕ್ಕೆ 100…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇ.ಮೂ.ಚಿದಾನಂದಶಾಸ್ತ್ರಿ ಹಿರೇಮಠ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಕೋ ಜ್ಞಾನ , ಶ್ವಾನ ನಿದ್ರೆ, ಕಾಕ ದೃಷ್ಟಿ, ಮಿತ ಆಹಾರ ಎನ್ನುವ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದೆ ಆದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅಧ್ಯಾತ್ಮಿಕ ಚಿಂತಕರಾದ ವೇ.ಮೂ.ಚಿದಾನಂದಶಾಸ್ತ್ರಿ ಹಿರೇಮಠ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಆ.೮ ರಂದು ಹಮ್ಮಿಕೊಳ್ಳಲಾಗಿದ್ದ ೨೦೨೬-೨೭ ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣ ಕಲ್ಯಾಣ ಕ್ರಾಂತಿ ಮಾಡಿದರೆ, ಬಂಥನಾಳ ಸಂಗನಬಸವ ಶಿವಯೋಗಿಗಳು ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಅವರು ಹಚ್ಚಿರುವ ಜ್ಞಾನದ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅದನ್ನು ನಾವು ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದ ರೂಪದಲ್ಲಿ…
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಮಳೆ ಇಲ್ಲದ ಕಂಗೆಟ್ಟು ಹೋಗಿದ್ದ ರೈತ ಬಾಂದವರು ಶನಿವಾರರಂದು ಸಾಯಂಕಾಲ ಸುರಿದ ರಬಸದ ಕೂಡಿದ ಗುಡುಗು ಸಹೇತ ಭಾರಿ ಮಳೆಯಿಂದ ತಾಳಿಕೋಟೆ ಭಾಗದ ರೈತರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.ಸಾಯಂಕಾಲ ೫ ಗಂಟೆಯಿಂದ ೬ ಗಂಟೆಯವರೆಗೆ ಎಡಬಿಡದೇ ಸುರಿದ ಭಾರಿ ಮಳೆಯು ಎಲ್ಲರಲ್ಲಿಯೂ ಸಂತಸವನ್ನು ಮೂಡಿಸಿದೆ ಅಲ್ಲದೇ ಕೆಲವೆಡೆ ಒಣ ಭೂಮಿಯಲ್ಲಿ ಬಿತ್ತನೆ ಮಾಡಿದ್ದ ರೈತರಿಗೆ ಆಶ್ಲೇಸಾ ಮಳೆಯು ಖುಷಿ ತಂದುಕೊಟ್ಟಿದ್ದರೆ ಇನ್ನೂ ಕೆಲವು ರೈತರು ಬೀಜ ಗೊಬ್ಬರ ಖರೀದಿಯೊಂದಿಗೆ ಮುಗಿಲೆತ್ತರ ಮುಖ ಮಾಡಿದ್ದವರಿಗೆ ಬಿತ್ತನೆಗೆ ಸಜ್ಜಾಗುವಂತೆ ಮಾಡಿದೆ.ಸುರಿದ ರಭಸದ ಮಳೆಯಿಂದ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳ ಮೇಲೆ ದೊಡ್ಡ ಪ್ರಮಾಣದ ನೀರು ಹರಿಯುತ್ತಿರುವದು ಕಂಡು ಬಂದಿತ್ತಲ್ಲದೇ ಮಳೆ ಇಲ್ಲದೇ ಕೇವಲ ಮೋಡಕವಿದ ವಾತಾವರಣ ನೋಡುತ್ತಿದ್ದ ಜನತೆಗೆ ತಂಪೆರೆದಂತಾಗಿದೆ. ಕೈಕೊಟ್ಟ ವಿದ್ಯುತ್
ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ, (ಜಮಖಂಡಿ): ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ನಿಷ್ಠಾವಂತ ಹಾಗೂ ಗಮನಾರ್ಹ ಸೇವೆ, ಶಾಲೆಯ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಜಮಖಂಡಿ ತಾಲೂಕಿನ ಜಂಬಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಬಾಳಪ್ಪ ಮ. ಮಠೋಳಿ (ಬಿ.ಎಂ. ಮಠೋಳಿ) ಅವರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ‘ಶಿಕ್ಷಕ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಜಮಖಂಡಿ ತಾಲೂಕು ಘಟಕ ಮತ್ತು ವೀರೇಶ್ವರ ಪ್ರಕಾಶನ, ಜಮಖಂಡಿ ಇವರ ಸಹಯೋಗದಲ್ಲಿ ಶಿಕ್ಷಕರ ಶೈಕ್ಷಣಿಕ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.ಪ್ರಶಸ್ತಿ ಪಡೆದ ಬಿ.ಎಂ. ಮಠೋಳಿ ಅವರನ್ನು ಸಹ ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ವಾಹನ ಗ್ಯಾರೇಜ್‌ನಲ್ಲಿ ಧೂಳು ಹಿಡಿಯುತ್ತಿದ್ದರೂ ನಿರ್ಲಕ್ಷ್ಯ | ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಗ್ರಾಮದಲ್ಲಿ ನೈರ್ಮಲ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ನೀಡಲಾದ ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ನಿರ್ವಹಣೆ (ಕಸದ) ವಾಹನವು ಕಳೆದ ಮೂರು ತಿಂಗಳಿನಿಂದ ಗ್ಯಾರೇಜ್‌ನಲ್ಲಿ ಮೂಲೆ ಸೇರಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಗ್ರಹಣ ಹಿಡಿದಂತಾಗಿರುವವಾಹನದ ಬಾಡಿಯು ಸಂಪೂರ್ಣವಾಗಿ ಹಾನಿಗೊಂಡಿದ್ದು, ದುರಸ್ತಿಗಾಗಿ ಖಾಸಗಿ ಗ್ಯಾರೇಜ್‌ಗೆ ನೀಡಲಾಗಿತ್ತು. ಆದರೆ, ಹಣ ಪಾವತಿಸದ ಕಾರಣ ಗ್ಯಾರೇಜ್ ಮಾಲೀಕರು ರಿಪೇರಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದು, ಕಳೆದ ಹಲವು ತಿಂಗಳುಗಳಿಂದ ವಾಹನವು ಅನಾಥವಾಗಿ ನಿಂತಿದೆ. ಇದರಿಂದಾಗಿ ಸರ್ಕಾರಿ ಆಸ್ತಿ ಹಾಳಾಗುತ್ತಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಾಹನವು ಜಂಗ್ ಹಿಡಿಯುವ ಸ್ಥಿತಿಗೆ ತಲುಪಿದೆ.ಈ ಕುರಿತು ಪತ್ರಿಕೆಯು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ ನಡೆಸಿದ್ದಾರೆ:ಗ್ರಾಮದಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಯದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೆ, ಇತ್ತ ಲಕ್ಷಾಂತರ ರೂಪಾಯಿ ವೆಚ್ಚದ ಸರ್ಕಾರಿ ವಾಹನ…
