Author: editor.udayarashmi@gmail.com

ಬಸವನ ಬಾಗೇವಾಡಿ: ಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ಭಾನುವಾರ ನವರಾತ್ರಿ ಉತ್ಸವದಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವ ಮೂಲಕ ನವರಾತ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆ ದೊರೆಯಿತು.ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು.ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆ ಸದಸ್ಯರಾದ ನೀಲಪ್ಪ ನಾಯಕ, ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಪುರಸಭೆ ಮಾಜಿ ಸದಸ್ಯ ಅಂಬೋಜಿ ಪವಾರ ಅವರು ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.ದೇವಸ್ಥಾನ ಅರ್ಚಕ ಚಿದಾನಂದ ಹಿರೇಮಠ ಇತರರು ಇದ್ದರು.ನಂತರ ದೇವಸ್ಥಾನದಿಂದ ಡೊಳ್ಳಿನ ಮೇಳ, ಸುಮಂಗಲೆಯರ ಆರತಿಯೊಂದಿಗೆ ಅಂಬಾಭವಾನಿ ದೇವಿಯ ಉತ್ಸವ ಮೂರ್ತಿ ಹಾಗೂ ಪ್ರತಿಷ್ಠಾಪನೆ ಮಾಡುವ ದೇವಿಯ ಮೂರ್ತಿ, ಶಿವಾಜಿ, ಬಸವ ಮೂರ್ತಿಗಳ ಮೆರವಣಿಗೆಯೊಂದಿಗೆ ಅಂಬಾಭವಾನಿಯ ಪಲ್ಲಕ್ಕಿಯು ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ತೆರಳಿತು. ಪಲ್ಲಕ್ಕಿ ಉತ್ಸವದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಯಮನೂರಿ ಬಿದರಕುಂದಿ, ಬಸವರಾಜ…

Read More

ಮೋರಟಗಿ: ಚುನಾವಣೆ ಪೂರ್ವದಲ್ಲಿ ಗ್ರಾಮೀಣ ಭಾಗದ ಜನತೆಗೆ ಕೊಟ್ಟ ಭರವಸೆಗಳನ್ನು ಹಂತ ಹಂತವಾಗಿ ಇಡೇರಿಸುವುರ ಜೊತೆಗೆ ಸರಕಾರದ ಸೌಲಭ್ಯಗಳನ್ನು ತಮ್ಮ ಮನರ ಬಾಗಿಲಿಗೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಸಾರ್ವಜನಿಕರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.ಸಮೀಪದ ಹಂಚಿನಾಳ ಗ್ರಾಮದಲ್ಲಿ ೨೦೨೨-೨೩ನೇ ಸಾಲಿನ ಜಲಜೀವನ್ ಮಷೀನ್ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ೭೧.೨೯ಲಕ್ಷರೂ ನಲ್ಲಿ ಸಂಪರ್ಕ ಯೋಜನೆ ಹಾಗೂ ೨೦೨೯-೨೦ನೇ ಸಾಲಿನ ಶಾಸಕರ ಪ್ರದೇಶಾಭಿವ್ರದ್ದಿ ಯೋಜನೆಯ ೩ ಲಕ್ಷ ಅನುದಾನದ ಅಡಿಯಲ್ಲಿ ಶ್ರೀಮರಗಮ್ಮ ದೇವಸ್ಥಾನದ ಹತ್ತಿರ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ನೀರು ಪ್ರತಿಯೊಂದು ಪ್ರಾಣಿಗಳಿಗೂ, ಮನುಷ್ಯನಿಗೂ, ಹಾಗೂ ಮಳೆರಾಯ ಧರೆಗೆ ಇಳಿಯದ ಪರಿಸ್ಥಿತಿಯಲ್ಲಿ ಹೊಲದಲ್ಲಿರುವ ಬೆಳೆಗಳಿಗೂ, ಅತೀ ಅವಶ್ಯವಿರುವಂತದ್ದು. ಜಲಹಾನಿಯಾಗಬಾರದು ಎನ್ನುವ ನಿಟ್ಟಿನಲ್ಲಿ ಸರಕಾರ ಇವತ್ತು ರಾಜ್ಯಾದಂತ ಜನಜೀವನ್ ಮಷೀನ್ ಯೋಜನೆಯ ಅಡಿಯಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ ಕಾಮಗಾರಿಗಳನ್ನು ಹಮ್ಮಿಕೊಂಡಿದೆ. ಗ್ರಾಮದ ಹಿರಿಯರು ಯುವಕರು ಗುತ್ತಿಗೆದಾರರಿಗೆ ಸಹಕಾರ ನೀಡಿ ಸರಕಾರದ ಯೋಜನೆಗಳು…

Read More

ದೇವರಹಿಪ್ಪರಗಿ: ಬೀದಿ ಬೆಳಗುವ ದೀಪಗಳು ಹಲವು ದಿನಗಳಿಂದ ಕಾರ್ಯನಿರ್ವಹಿಸದೇ ಇದ್ದು, ಪಾದಯಾತ್ರಿಗಳ ಅನುಕೂಲಕ್ಕಾಗಿ ಕೂಡಲೇ ಬೀದಿದೀಪಗಳನ್ನು ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಪಟ್ಟಣದ ಅಂಬೇಡ್ಕರ್ ವೃತ್ತದ ಹೈಮಾಸ್ಕ್ ದೀಪ ಸೇರಿದಂತೆ ಇಂಡಿ ರಸ್ತೆಯಲ್ಲಿನ ಕ.ರ.ವೇ ವೃತ್ತದವರೆಗೆ ಬೀದಿ ದೀಪಗಳು ಕಳೆದ ಹಲವು ದಿನಗಳಿಂದ ಬಂದಾಗಿವೆ. ಈ ಬಗ್ಗೆ ಹಲವು ಬಾರಿ ಸ್ಥಳೀಯ ಆಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ.ಈ ಬಗ್ಗೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ಗುಡಿಮನಿ ಅಸಮಾಧಾನ ವ್ಯಕ್ತಪಡಿಸಿ, ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ದಿ:೧೪ ಅಕ್ಟೋಬರ್ ದಂದು ೧೦ ಲಕ್ಷ ಜನರೊಂದಿಗೆ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ ದಿನವಾಗಿದೆ. ಆದರೆ ಇಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ ಆವರಣದಲ್ಲಿಯೇ ಕತ್ತಲೇ ಆವರಿಸಿ ಬೆಳಕು ಇರದಂತಾಗಿದೆ. ಇಲ್ಲಿನ ಹೈಮಾಸ್ಕ್ ದೀಪ ಹಲವಾರು ದಿನಗಳಿಂದ ಸರಿಯಾಗಿ ಬೆಳಗುತ್ತಿಲ್ಲ. ಒಂದು ದಿನ ದಿನ ಇದ್ದರೆ ಮೂರು ದಿನ ಬಂದಾಗುತ್ತದೆ. ಜೊತೆಗೆ ಇಂಡಿ ರಸ್ತೆಯಲ್ಲಿನ ಬಹುತೇಕ ಬೀದಿದೀಪ ಬಂದಾಗಿವೆ. ಈ ಬಗ್ಗೆ ಅಧಿಕಾರಿಗಳು ವಾರದ ಹಿಂದೆಯೇ ಗಮನ ಸೆಳೆಯಲಾಗಿದೆ. ಆದರೆ…

Read More

ಸಿಂದಗಿ: ಕಳೆದ ಹತ್ತಾರು ವರ್ಷಗಳಿಂದ ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಪಾದಾಧಿಕಾರಿಗಳ ಆಯ್ಕೆಯಾಗಿರುವುದಿಲ್ಲ. ನಮ್ಮೆಲ್ಲರ ದುಡಿಮೆ, ಪ್ರಯತ್ನ ಹೋರಾಟದ ಮೂಲಕ ಇಂದು ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಭಾನುವಾರ ಸಾಯಂಕಾಲದಂದು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ನೀವು ಸನ್ಮಾನಗೊಂಡಿದ್ದೀರಿ ಎಂದರೆ ನಿಮ್ಮ ಜವಾಬ್ದಾರಿ ಹೆಚ್ಚಾದಂತೆ. ನೂತನ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಅವರದೇ ಯಾದ ಜವಾಬ್ದಾರಿ ನೀಡಬೇಕೆಂಬ ಉದ್ದೇಶದಿಂದ ಆಯ್ಕೆಮಾಡಲಾಗಿದೆ. ಮುಂಬರುವ ಸ್ಥಳೀಯ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ತಳಮಟ್ಟದಿಂದ ನಾವೆಲ್ಲರೂ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸೋಣ ಎಂದರು.ಯಾರಲ್ಲಿಯೂ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಸದಸ್ಯರಾಗಿದ್ದೇವೆ ಎಂಬ ಅಸಮಾಧಾನ ಬೇಡ ಕಾಂಗ್ರೆಸ್ ಪಕ್ಷದಲ್ಲಿ ಕೆಳ ಹಂತದಿಂದ ಪಕ್ಷನಿಷ್ಠೆಯಿಂದ ದುಡಿದು ಶಾಸಕ, ಸಂಸದ, ವಿಪ ಸದಸ್ಯರಾದ ಉದಾಹರಣೆಗಳು ಸಾಕಷ್ಟಿವೆ. ನಿರಂತರವಾಗಿ ಚರ್ಚೆಯ ಮೂಲಕ ಸಂಘಟನೆ ಬಲಗೊಳ್ಳಲಿ ಎಂದು ಸಲಹೆ ನೀಡಿದರು.ಇದೇ ವೇಳೆ ಜಿ.ಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ,…

Read More

ಸಿಂದಗಿ: ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ಚಿಕ್ಕಸಿಂದಗಿಯ ಚಂದ್ರಕಾಂತ ಬೂದಿಹಾಳ ಅವರನ್ನು ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವುಕುಮಾರ ಅವರ ಅದೇಶದ ಮೇರೆಗೆ ತಾಲೂಕ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ ಹಾಗೂ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.

Read More

ಮುದ್ದೇಬಿಹಾಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉಪನಿರ್ದೇಶಕರ ಕಚೇರಿಯ ವತಿಯಿಂದ ವಿಜಯಪುರದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕೇಸಾಪುರ ಗ್ರಾಮದ ಸಿದ್ಧಾರ್ಥ ಪಬ್ಲಿಕ್ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಗೌತಮ ಕಾಳೆ ೮೦ಮೀ ಅಡತಡೆ ಓಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಶಾಲೆಯ ಮುಖ್ಯ ಗುರು ವಿನಾಯಕ ದೊಡಮನಿ ಸೇರಿದಂತೆ ಎಲ್ಲ ಶಿಕ್ಷಕರು, ಸಿಬ್ಬಂದಿ ಹಾಗೂ ಪೋಷಕರು ರಾಜ್ಯದಲ್ಲಿಯೂ ಗೌತಮ್ ಮಿಂಚುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Read More

ಮುದ್ದೇಬಿಹಾಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉಪನಿರ್ದೇಶಕರ ಕಚೇರಿಯ ವತಿಯಿಂದ ವಿಜಯಪುರದಲ್ಲಿ ನಡೆದ ಜಿಲ್ಲಾಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯದ ೯ನೇ ತರಗತಿಯ ವಿದ್ಯಾರ್ಥಿ ಸಾಗರ ಚಿಮ್ಮಲಗಿ ಗುಂಡು ಎಸೆತ ಮತ್ತು ಬಲ್ಲೆ ಎಸೆತ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಶಾಲೆಯ ಮುಖ್ಯ ಗುರುಮಾತೆ ನೀಲಮ್ಮ ತೆಗ್ಗಿನಮಠ, ದೈಹಿಕ ಶಿಕ್ಷಕ ಬಿ.ಕೆ.ನಾಯಕ ಸೇರಿದಂತೆ ಎಲ್ಲ ಶಿಕ್ಷಕರು, ಸಿಬ್ಬಂದಿ ಹಾಗೂ ಪೋಷಕರು ರಾಜ್ಯದಲ್ಲಿಯೂ ಸಾಗರ ಮಿಂಚುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Read More

ಸುಳ್ಳು ಪೋಸ್ಟ್‌: ಬಿಜೆಪಿ ಕಾರ್ಯಕರ್ತೆ ಶಕುಂತಲಾ ವಿರುದ್ಧ ಪ್ರಕರಣ ದಾಖಲು ಬೆಂಗಳೂರು: ನಗರದ ಲುಲು ಶಾಪಿಂಗ್‌ ಮಾಲ್‌ನಲ್ಲಿ ಭಾರತದ ಬಾವುಟಕ್ಕಿಂತ ಎತ್ತರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೊಂಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್‌ ವಿರುದ್ಧ ಪೊಲೀಸರು ಗುರುವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶಕುಂತಲಾ ನಟರಾಜ್‌, ಎಕ್ಸ್‌ ಖಾತೆಯಲ್ಲಿ ಹಾಕಿದ ಪೋಸ್ಟ್‌ನಲ್ಲಿ ಬೆಂಗಳೂರಿನ ಲುಲು ಶಾಪಿಂಗ್‌ ಮಾಲ್‌ನಲ್ಲಿ ಭಾರತದ ಬಾವುಟಕ್ಕಿಂತ ಎತ್ತರದಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೊಂಡಿದ್ದರು. ಬಾಯ್ಕಾಟ್ ಲುಲುಮಾಲ್‌ ಎಂದು ಬರೆದುಕೊಂಡಿದ್ದರು. ಪೋಸ್ಟ್‌ನ್ನು ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಟ್ಯಾಗ್‌ ಮಾಡಿದ್ದರು.ಶಕುಂತಲಾ ನಟರಾಜ್‌ ಸುಳ್ಳು ಪೋಸ್ಟ್‌ ಹಾಕಿದ್ದಾರೆ ಮತ್ತು ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆ ಎಂದು ಐಪಿಸಿ 153 (ಬಿ) ಅಡಿ ಇಲ್ಲಿಯ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಫೋಟೊ ಉದ್ದೇಶಪೂರ್ವಕವಾಗಿ ತೊಂದರೆ ಸೃಷ್ಟಿಸುವುದಾಗಿದೆ ಮತ್ತು ಎಡಿಟ್ ಮಾಡಿದ್ದಾಗಿದೆ. ಪೋಸ್ಟ್ ಮೂಲಕ ಜನರನ್ನು ಕೆರಳಿಸುವ ಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ…

Read More

ನವದೆಹಲಿ: ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಸ್ಮರಣಾರ್ಥ ಕೇಂದ್ರ ಸರ್ಕಾರವು ಪ್ರತಿ ವರ್ಷ ಆಗಸ್ಟ್ 23 ಅನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸಿದ್ದು ಈ ಕುರಿತು ಅಧಿಸೂಚನೆ ಹೊರಡಿಸಿದೆ.ಚಂದ್ರನ ಮೇಲ್ಮೈ ಮೇಲೆ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಲಾಗಿತ್ತು. ಈ ಮೂಲಕ ಚಂದ್ರನ ಮೇಲೆ ಇಳಿದ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶವಾಯಿತು. ಅದೇ ಸಮಯದಲ್ಲಿ, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದೆ.ಅಧಿಸೂಚನೆಯ ಪ್ರಕಾರ, ಈ ದಿನವು ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ದೇಶದ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲು. ಇದು ಬಾಹ್ಯಾಕಾಶ ಕ್ಷೇತ್ರಕ್ಕೆ ಉತ್ತೇಜನ ನೀಡಲಿದೆ. ಯುವಕರು ಈ ಕ್ಷೇತ್ರಕ್ಕೆ ಬರಲು ಉತ್ತೇಜನ ನೀಡಲಾಗುವುದು. ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೊದಲ ಮಿಷನ್ ಆಗಿ ಇತಿಹಾಸವನ್ನು ಸೃಷ್ಟಿಸಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಕೆಲವೇ ದೇಶಗಳಲ್ಲಿ ಭಾರತ…

Read More

ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ ಸೆಮಿಫೈನಲ್ ಗೆ ಹತ್ತಿರ ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 12ನೇ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದ ನಂತರ, ಭಾರತ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.2023ರ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿರುವ ಆತಿಥೇಯ ಭಾರತ ತಂಡ ಸತತ ಮೂರನೇ ಗೆಲುವು ಸಾಧಿಸಿ ಅಜೇಯವಾಗಿ ಮುನ್ನುಗ್ಗುತ್ತಿದೆ.ಇನ್ನು ವಿಶ್ವಕಪ್‌ ಇತಿಹಾಸದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಅಜೇಯ 8ನೇ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.ಪಾಕಿಸ್ತಾನ ವಿರುದ್ಧ ಮಾರಕ ಬೌಲಿಂಗ್ ಪ್ರದರ್ಶನದ ನಂತರ, ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ಅಮೋಘ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತು.ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪ್ರಸ್ತುತ +1.821ರ ಅದ್ಭುತ ನೆಟ್ ರನ್‌ರೇಟ್ (NRR) ನೊಂದಿಗೆ ಮೂರು…

Read More