Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜೈನಾಪುರ ಪುನರ್ವಸತಿ ಕೇಂದ್ರದಲ್ಲಿ ಸರ್ಕಾರ ಕಾಯ್ದಿರಿಸಿದ ಜಾಗದಲ್ಲಿ ಕೆಲವು ವ್ಯಕ್ತಿಗಳು ಗುಂಟಾ ಪ್ಲಾಟ್ ಹಾಕಿರುವುದನ್ನು ಮಹಾನಗರ ಪಾಲಿಕೆ ಅಧಿಕಾರಿಗಳ ಮೂಲಕ ಗುರುವಾರ ತೆರವುಗೊಳಿಸಿ, ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಜಾಗದಲ್ಲಿ, ಗುಂಟಾ ಪ್ಲಾಟ್ ಹಾಕಿ ಬಡವರಿಗೆ ಮೋಸದಿಂದ ಮಾರಾಟ ಮಾಡುವವರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ನಗರದ ಜಮಖಂಡಿ ರಸ್ತೆಗೆ ಸಮೀಪದ ಸ.ನಂ.584, 585, 586 ರಲ್ಲಿ, ಜೈನಾಪುರ ಗ್ರಾಮದ ಜಮೀನು ಕಳೆದುಕೊಂಡ ಜನರಿಗೆ ಪುನರ್ವಸತಿ ಸ್ಥಾಪಿಸಲು, ಸರ್ಕಾರದಿಂದ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲಾಗುತ್ತಿದೆ. ಈ ಜಮೀನಿನ ಕೆಲವು ಭಾಗವನ್ನು ಅಲ್ಲಿನ ಸಾರ್ವಜನಿಕರಿಗೆ ಉಪಯೋಗಿಸಲು ಆಟದ ಮೈದಾನ, ಪ್ರೌಢಶಾಲೆ ಹಾಗೂ ಇತರೆ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ.ಆದರೆ, ಆ ಜಾಗವನ್ನು ಕೆಲವು ವ್ಯಕ್ತಿಗಳು ಖೊಟ್ಟಿ ಹಕ್ಕುಪತ್ರ ಸೃಷ್ಟಿಸಿ, ಮಹಾನಗರ ಪಾಲಿಕೆಯಲ್ಲಿ ಖಾತಾ ದಾಖಲು ಮಾಡಿಸಿಕೊಂಡು, ಅಮಾಯಕ ಜನರಿಗೆ ಗುಂಟಾ ಪ್ಲಾಟ್ ಅಂತ ಮಾರಾಟ ಮಾಡಿ ಮೋಸ ಮಾಡುತ್ತಿರುವುದು…
ಇಂಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ, ಬಡವರಿಗಾಗಿ, ಮಹಿಳೆಯರಿಗಾಗಿ, ಬುಡಕಟ್ಟು ಜನರಿಗಾಗಿ, ನಿರ್ಲಕ್ಷಿತರಿಗೆ, ವಿಕಲಚೇತನರಿಗಾಗಿ, ದುಡಿಯುವ ಜನತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಪಟ್ಟಣದ ಎಸ್ ಬಿ ಐ ವ್ಯವಸ್ಥಾಪಕ ಆರ್.ಜಿ.ರಾಮಸ್ವಾಮಿ ಕರೆ ನೀಡಿದರು.ಪಟ್ಟಣದ ಪುರಸಭೆಯ ಎದುರು ಒಂದು ದೊಡ್ಡ ಪರದೆಯ ಮೇಲೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಪ್ರದರ್ಶನ ಮಾಡಿ ಅವರು ಮಾತನಾಡಿದರು.ಇತ್ತೀಚೆಗೆ ಸರ್ಕಾರಗಳು ಮನೆ ಮನೆಗಳಿಗೆ ಬೆಳೆ ಸಾಲ ಮಂಜೂರು ಮಾಡುತ್ತಿದೆ. ಇದು ರೈತರಿಗೆ ಉಪಯೋಗವಾಗಿದೆ. ಇದನ್ನು ರೈತರು ಪಡೆದುಕೊಂಡು ಹೆಚ್ಚಿನ ಉತ್ಪಾದನೆ ಮಾಡಿಕೊಳ್ಳಬೇಕು. ಇದರಂತೆ ರೈತರಿಗೆ ಇನ್ನೂ ಅನೇಕ ರೀತಿಯ ಸಾಲಗಳನ್ನು ನೀಡಲು ಮುಂದಾಗಿದೆ. ರೈತರು ಬ್ಯಾಂಕಿಗೆ ಭೇಟಿ ನೀಡಿ ಅವುಗಳ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದರು.ನಾವು ಈಗಾಗಲೇ ತಾಲೂಕಿನ ೭ ಕಡೆ ಸರಕಾರದ ಯೋಜನೆಗಳ ಬಗ್ಗೆ ಪ್ರಚಾರ ಕಾರ್ಯ ಮಾಡಿದ್ದೇವೆ. ಪಟ್ಟಣದಲ್ಲಿ ಇದು ಮೊದಲನೇ ಸಲ ಪ್ರಚಾರ ಮಾಡುತ್ತಿದ್ದೇವೆ. ಜನ ಸಾಮಾನ್ಯರು ಇದರ ಸದುಪಯೋಗ ಮಾಡಿಕೊಂಡು ಆರ್ಥಿಕ ಬೆಳವಣಿಗೆ…
ಇಂಡಿ: ಸಿಂದಗಿ, ಇಂಡಿ, ಮತ್ತು ಆಲಮೇಲ ತಾಲೂಕಿನಲ್ಲಿರುವ ಕೆರೆಗಳ ಅಂಚಿನ ಸುತ್ತಲೂ ೩೦ ಮೀ ಪರೀಧಿಯಲ್ಲಿ ಬರುವ ಖಾಸಗಿ ಮಾಲೀಕರ ತೆರೆದ ಮತ್ತು ಕೊಳವೆ ಬಾವಿಗಳನ್ನು ಹಾಗೂ ಇನ್ನಿತರ ಯಾವದೇ ನೀರಿನ ಮೂಲಗಳನ್ನು ತಾತ್ಕಾಲಿಕವಾಗಿ ಸರಕಾರದ ಆಧೀನಕ್ಕೆ ಪಡೆಯಲಾಗಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.ತಾಲೂಕಿನ ಸಂಗೊಗಿ ಕೆರೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ ಭೇಟಿ ರೈತರಿಗೆ ಮನವರಿಕೆ ಮಾಡಿ ಬರಗಾಲ ನಿವಾರಿಸಲು ಮಾನವೀಯ ಆಧಾರದ ಮೇಲೆ ಎಲ್ಲರೂ ಕೂಡಿ ಸಹಕಾರ ನೀಡಲು ವಿನಂತಿಸುವ ಸಂದರ್ಭದಲ್ಲಿ ಮಾತನಾಡಿದರು.ಇಂಡಿ ಉಪವಿಭಾಗದಲ್ಲಿ ಬರಗಾಲ ಆವರಿಸುವದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗುವ ಸಂಭವವಿದ್ದು ಮಾನವೀಯ ಆಧಾರದ ಮೇಲೆ ಸಹಕಾರ ನೀಡಬೇಕೆಂದು ಎಸಿಯವರು ಕೋರಿದ್ದಾರೆ.ಇಂಡಿ ತಾಲೂಕಿನ ಸಂಗೊಗಿ,ತಡವಲಗಾ,ಹಂಜಗಿ,ಲೋಣಿ ಕೆಡಿ ಮತ್ತು ಅರ್ಜನಾಳ ಹಾಗೂ ಆಲಮೇಲ ತಾಲೂಕಿನ ಬಳಗಾನೂರ ಮತ್ತು ಸಿಂದಗಿ ತಾಲೂಕಿನ ಹೊನ್ನಳ್ಳಿ, ಯಂಕಚಿ ಗ್ರಾಮದ ಕೆರೆಗಳ ಅಂಚಿನ ಸುತ್ತ ೧೪೭ ಕಾಯ್ದೆ ಜಾರಿ ಮಾಡಿದೆ ಎಂದರು.ಕಾರಣ ಸಧ್ಯ ಮತ್ತು ಮುಂಬರುವ ಬೇಸಿಗೆ ಕಾಲದಲ್ಲಿ…
ಕೊಲ್ಹಾರ: ಪಟ್ಟಣ ಪಂಚಾಯತಿ ಕಾರ್ಯಾಲಯದ ಸಭಾಭವನದಲ್ಲಿ ತಹಶೀಲ್ದಾರ ಎಸ್.ಎಸ್.ನಾಯಕಲ್ಮಠ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವದ ನಿಮಿತ್ಯವಾಗಿ ತಾಲೂಕಿನ ಸಾರ್ವಜನಿಕರ ಚುನಾಯಿತ ಸದಸ್ಯರ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಗುರುವಾರ ಕರೆಯಲಾಗಿತ್ತು.ದೇಶದ ಪ್ರಜೆಗಳ ಹಬ್ಬವಾದ ಪ್ರಜಾರಾಜ್ಯೋತ್ಸವದ ಸಮಾರಂಭದಲ್ಲಿ ಕೊಲ್ಹಾರ ಪಟ್ಟಣದ ಹಾಗೂ ತಾಲೂಕಿನ ಎಲ್ಲ ಹಳ್ಳಿಗಳ ನಾಗರಿಕ ಬಂಧುಗಳು ಮಹಿಳೆಯರು ಸಂಘ ಸಂಸ್ಥೆಯ ಪದಾದಿಕಾರಿಗಳು ತಮ್ಮ ಊರುಗಳಲ್ಲಿ ಬೆಳಗಿನ ಧ್ವಜಾರೋಹಣ ಕಾರ್ಯಕ್ರಮವನ್ನು ಮುಗಿಸಿದ ನಂತರ ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದ ಧ್ವಜಾರೋಹಣ ಮತ್ತು ಮಕ್ಕಳಿಂದ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದು ಕರೆ ಕೊಟ್ಟರು.ಅಂದಿನ ದಿವಸ ಎಲ್ಲ ಶಾಲಾ ಕಾಲೇಜುಗಳ, ಸರಕಾರಿ ಹಾಗೂ ಖಾಸಗಿ ಕಚೇರಿಗಳ ಸಂಘ ಸಂಸ್ಥೆಗಳ ಪ್ರಾಂಗಣದಲ್ಲಿ ಬೆಳಗಿನಜಾವ ೭.೩೦ಕ್ಕೆ ಧ್ವಜಾರೋಹಣ ನೆರವೇರಿಸಬೇಕು. ತದನಂತರ ೯.೦೦ ಘಂಟೆಗೆ ನಡೆಯುವ ಸಾರ್ವಜನಿಕ ಧ್ವಜಾರೋಹಣದಲ್ಲಿ ಭಾಗವಹಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಲಾಗುವದು. ರಾಜಕೀಯ ಗಣ್ಯಮಾನ್ಯರು…
ಬ್ರಹ್ಮದೇವನಮಡು: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಿರ್ಗತಿಕ ಕುಟುಂಬಕ್ಕೆ ಉಚಿತವಾಗಿ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಡಾ.ವಿರೇಂದ್ರ ಹೆಗಡೆ ಹಾಗೂ ಹೇಮಾವತಿ ಅಮ್ಮನವರ ಆಶಯದಂತೆ ಅಸಹಾಯಕರ ನೆರವಿಗೆ ಯೋಜನೆ ಸದಾ ಕಾಲ ಕಾರ್ಯ ನಿರ್ವಹಿಸುತ್ತದೆ ಎಂದು ಸಿಂದಗಿ ತಾಲೂಕು ಯೋಜನಾಧಿಕಾರಿ ಗಿರೀಶಕುಮಾರ ಹೇಳಿದರು.ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಗುರುವಾರ ನಿರ್ಗತಿಕ ಫಲಾನುಭವಿ ನಿಂಗಮ್ಮ ಸಜ್ಜನ ಅವರಿಗೆ ಹೊನ್ನಳ್ಳಿ ಕಾಯ೯ಕ್ಷೇತ್ರದಲ್ಲಿ ಮಂಜೂರಾಗಿರುವ ವಾತ್ಸಲ್ಯ ಮನೆಯ ಕಟ್ಟಡ ನಿಮಾ೯ಕ್ಕೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮ ಹಾಗೂ ಯೋಜನೆಯ ಇನ್ನಿತರ ಕಾರ್ಯಕ್ರಮಗಳಾದ ವಾತ್ಸಲ್ಯ ಕಿಟ್, ಅಸಹಾಯಕರಿಗೆ ಸೇವಿಸಲು ಪೌಷ್ಠಿಕ ಆಹಾರದ ಕಿಟ್ ಮತ್ತು ಅಂಗವಿಕರಿಗಾಗಿ ವೀಲ್ ಚೇರ್, ಸ್ಟಾಂಡ್, ವಾಟರ್ ಬೆಡ್, ಪ್ರತಿ ತಿಂಗಳು ದುಡಿಯಲು ಶಕ್ತಿ ಇಲ್ಲದೆ ಇರುವ ನಿಗ೯ತಿಕರಿಗೆ ಹಾಗೂ ಪೋಷಕರಿಲ್ಲದೆ ಇರುವ ಹಿರಿಯ ಜೀವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡುವ ಮೂಲಕ ಅವರ ಜೀವನಕ್ಕೆ ಬೆಂಗಾವಲಾಗಿ ಯೋಜನೆ ಕರ್ತವ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಸಿಂದಗಿ ತಾಲೂಕಿನಲ್ಲಿ ೫ ವಾತ್ಸಲ್ಯ…
ಆಲಮೇಲ: ಇದೇ ಜನೇವರಿ ೨೨ ರಂದು ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಕೆಂದ್ರಿಯ ಮಂಡಳಿ ವಿಜಯಪುರ, ಜಿಲ್ಲೆಯ ಆಲಮೇಲ ಪಟ್ಟಣದ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು.ಇದೆ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶ್ರೀಮಂತ ದುದ್ದಗಿ, ಶೇಖರಗೌಡ ಹರನಾಳ, ಮಲ್ಲಿಕಾರ್ಜುನ ರಾಂಪೂರಮಠ, ರಾಜೇಂದ್ರ ರಾಠೋಡ, ಅರವಿಂದ್ ಪತ್ತಾರ ಉಪಸ್ಥಿತರಿದ್ದರು.
ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಟಕ್ಕಳಕಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಜಾಧವನಗರ ಟಕ್ಕಳಕಿ ಶಾಲೆಯ, ವಿಜ್ಞಾನ ಮತ್ತು ಗಣಿತ ವಿಷಯದ ಶಿಕ್ಷಕಿ ಶ್ರೀಮತಿ ಶಿಲ್ಪಾ. ಹಂಜಿ (ಬಿರಾದಾರ) ಅವರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯವರು ಶೈಕ್ಷಣಿಕ ಸಾಧನೆಗಾಗಿ ಕೊಡಮಾಡುವ ‘ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ‘ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಜಿ.ಎಸ್.ಕಾಂಬಳೆ ಹಾಗೂ ಕಾರ್ಯದರ್ಶಿ ರಮೇಶ ನಾಯಕ ತಿಳಿಸಿದ್ದಾರೆ.ವಿಜಯಪುರದ ತೊರವಿಯಲ್ಲಿರುವ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜನೇವರಿ ೨೧ ರಂದು ನಡೆಯಲಿರುವ ಜಿಲ್ಲಾಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀಮತಿ ಶಿಲ್ಪಾ. ಹಂಜಿ (ಬಿರಾದಾರ) ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಟಕ್ಕಳಕಿಯ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮಧುಕರ.ಜಾಧವ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಜಾಲೀಂದ್ರ ಘಾಟಗೆ, ಶಾಲಾಮುಖ್ಯ ಗುರು ಬಿ.ಎಸ್.ಹಾಲಳ್ಳಿ, ಸಿಬ್ಬಂದಿಯವರಾದ ಡಿ.ಎನ್.ಫೋಣಸಗಿ, ಎಸ್.ಆರ್.ಅನಂತಪೂರ, ಎಸ್.ಜಿ.ಬಗಲಿ, ವಿ.ಎಮ್.ಮುಳಗುಂದ…
ಬಸವನಬಾಗೇವಾಡಿ: ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಯಭಾರಿ ಎಂದು ರಾಜ್ಯದ ಮಂತ್ರಿಮಂಡಲದಲ್ಲಿ ನಿರ್ಣಯ ತೆಗೆದುಕೊಂಡು ಘೋಷಣೆ ಮಾಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಅಭಿನಂದನೆ ಸಲ್ಲಿಸಿದ್ದಾರೆ.ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಈ ಹಿಂದೆ ಕೂಡಾ ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ವಿಶ್ವಗುರು ಬಸವಣ್ಣನವರ ಬಾವಚಿತ್ರಗಳನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕು ಎಂದು ಆದೇಶ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕೆಂದ ಅವರು, ವಿಜಯಪುರದ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿ ಹೆಸರನ್ನು ನಾಮಕರಣ ಮಾಡಿದ್ದು ಇತಿಹಾಸ. ಅಲ್ಲದೆ ಇತ್ತೀಚೆಗೆ ವಿಜಯಪುರದ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರನ್ನು ನಾಮಕರಣ ಮಾಡುವ ಮೂಲಕ ನಿಜವಾದ ಶರಣರ ತತ್ವಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡ ನಾಯಕರು ಯಾರಾದರೂ ಇದ್ದಾರೆ ಅವರು ಸಿದ್ದರಾಮಯ್ಯನವರು ಮಾತ್ರ. ಮುಂಬರುವ ಬಜೆಟ್ಟಿನಲ್ಲಿ ಬಸವ ಜನ್ಮ ಸ್ಥಳ ಬಸವನಬಾಗೇವಾಡಿ ಅಭಿವೃದ್ದಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಬಸವನಬಾಗೇವಾಡಿ: ಮಹಾ ಮಾನವತಾವಾದಿ, ಜಗತ್ತಿನ ಪ್ರಥಮ ಸ್ವತಂತ್ರ ವಿಚಾರವಾದಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಮಂತ್ರಿಮಂಡಲದಲ್ಲಿ ನಿರ್ಧಾರ ತೆಗೆದುಕೊಂಡಿರುವುದು ಬಸವಣ್ಣನವರಿಗೆ ಕೊಟ್ಟ ಗೌರವವಾಗಿದೆ. ರಾಜ್ಯ ಸರ್ಕಾರಕ್ಕೆ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಂತ್ರಿ ಮಂಡಲ ಸದಸ್ಯರಿಗೆ ಅಭಿನಂದನೆಗಳು. ರಾಜ್ಯದ ಸಾಂಸ್ಕ್ರತಿಕ ನಾಯಕ ಎಂದು ಎಂದೋ ಆಗಬೇಕಾಗಿತ್ತು. ಆಗಲಾದರೂ ಸರ್ಕಾರ ನಿರ್ಣಯ ತೆಗೆದುಕೊಂಡಿರುವದು ಸಂತಸದ ಸಂಗತಿ. ಕಿತ್ತೂರನ್ನು ಚನ್ನಮ್ಮನ ಕಿತ್ತೂರು ಎಂದು ಕರೆಯುವ ಕುರಿತು ಮಂತ್ರಿಮಂಡಲದಲ್ಲಿ ನಿರ್ಧಾರ ತೆಗೆದುಕೊಂಡಿರುವುದು ಸೂಕ್ತವಾಗಿದೆ. ಈ ಎರಡು ನಿರ್ಧಾರಗಳನ್ನು ತೆಗೆದುಕೊಂಡ ಮಂತ್ರಿಮಂಡಲ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.
ಬಸವನಬಾಗೇವಾಡಿ: ಸಂಸದ ಅನಂತಕುಮಾರ ಹೆಗಡೆ ಅವರು ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯವರ ಬಗ್ಗೆ ಗೌರವ ಇಲ್ಲದೇ ಮಾತನಾಡಿರುವುದು ಖಂಡನೀಯ. ಈ ಹಿಂದೆ ಸಂವಿಧಾನ ಬದಲಾವಣೆ ಮಾಡುವದಕ್ಕೆ ನಾವು ಬಂದಿರುವುದು ಎಂದು ದೇಶ ವಿರೋದಿ ಹೇಳಿಕೆ ನೀಡುವ ಮೂಲಕ ಅನಂತಕುಮಾರ ಹೆಗಡೆ ವಿವಾದಕ್ಕೆ ಗುರಿಯಾಗಿದ್ದರು. ಇವರು ಜವಾಬ್ದಾರಿಯುತ ಜನಪ್ರತಿನಿಧಿ ಸಂಸದ ಸ್ಥಾನದಲ್ಲಿರುವ ಇವರು ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಮೂರ್ಖತನದ ಪರಮಾವಧಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯ, ಜನಪ್ರಿಯತೆ ಇದನ್ನೆಲ್ಲ ಸಹಿಸಿಕೊಳ್ಳಲು ಆಗದೆ ಮುಂಬರುವ ಲೋಕಸಭಾ ಚುನಾವಣೆಯ ಕುತಂತ್ರ ಮಾಡಲು ಹೊರಟಿರುವ ಸಂಸದರು ಕೂಡಲೇ ಕ್ಷಮೆ ಯಾಚಿಸಬೇಕು. ಕ್ಷಮೆ ಯಾಚಿಸದೇ ಹೋದರೆ ಪರಿಣಾಮ ನೆಟ್ಟಗಿರುವದಿಲ್ಲ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕ ರಾಜೇಶ್ವರಿ ಯರನಾಳ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕ ಅಧ್ಯಕ್ಷ ರಾಜಶೇಖರ ಯರನಾಳ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
