ಬ್ರಹ್ಮದೇವನಮಡು: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಿರ್ಗತಿಕ ಕುಟುಂಬಕ್ಕೆ ಉಚಿತವಾಗಿ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಡಾ.ವಿರೇಂದ್ರ ಹೆಗಡೆ ಹಾಗೂ ಹೇಮಾವತಿ ಅಮ್ಮನವರ ಆಶಯದಂತೆ ಅಸಹಾಯಕರ ನೆರವಿಗೆ ಯೋಜನೆ ಸದಾ ಕಾಲ ಕಾರ್ಯ ನಿರ್ವಹಿಸುತ್ತದೆ ಎಂದು ಸಿಂದಗಿ ತಾಲೂಕು ಯೋಜನಾಧಿಕಾರಿ ಗಿರೀಶಕುಮಾರ ಹೇಳಿದರು.
ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಗುರುವಾರ ನಿರ್ಗತಿಕ ಫಲಾನುಭವಿ ನಿಂಗಮ್ಮ ಸಜ್ಜನ ಅವರಿಗೆ ಹೊನ್ನಳ್ಳಿ ಕಾಯ೯ಕ್ಷೇತ್ರದಲ್ಲಿ ಮಂಜೂರಾಗಿರುವ ವಾತ್ಸಲ್ಯ ಮನೆಯ ಕಟ್ಟಡ ನಿಮಾ೯ಕ್ಕೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮ ಹಾಗೂ ಯೋಜನೆಯ ಇನ್ನಿತರ ಕಾರ್ಯಕ್ರಮಗಳಾದ ವಾತ್ಸಲ್ಯ ಕಿಟ್, ಅಸಹಾಯಕರಿಗೆ ಸೇವಿಸಲು ಪೌಷ್ಠಿಕ ಆಹಾರದ ಕಿಟ್ ಮತ್ತು ಅಂಗವಿಕರಿಗಾಗಿ ವೀಲ್ ಚೇರ್, ಸ್ಟಾಂಡ್, ವಾಟರ್ ಬೆಡ್, ಪ್ರತಿ ತಿಂಗಳು ದುಡಿಯಲು ಶಕ್ತಿ ಇಲ್ಲದೆ ಇರುವ ನಿಗ೯ತಿಕರಿಗೆ ಹಾಗೂ ಪೋಷಕರಿಲ್ಲದೆ ಇರುವ ಹಿರಿಯ ಜೀವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡುವ ಮೂಲಕ ಅವರ ಜೀವನಕ್ಕೆ ಬೆಂಗಾವಲಾಗಿ ಯೋಜನೆ ಕರ್ತವ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಸಿಂದಗಿ ತಾಲೂಕಿನಲ್ಲಿ ೫ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿವೆ ಸದಾ ನಿರ್ಗತಿಕರ ಪಾಲಿಗೆ ಧರ್ಮಸ್ಥಳ ಯೋಜನೆ ಒಂದು ಕುಟುಂಬ ಇದ್ದಂತೆ ಎಂದರು.
ಸ್ಥಳಿಯ ವೀರಘಂಟಿ ಮಡಿವಾಳೇಶ್ವರ ಮಠದ ಗುರುಲಿಂಗಯ್ಶ ಗದ್ದಗಿಮಠ ಸ್ವಾಮೀಜಿ ಸಾನ್ನಿಧ್ಶ ವಹಿಸಿದ್ದರು. ಪ್ರಮುಖರಾದ ಬಸವಂತರಾಯ ಭೈರಿ, ಆನಂದ್ ಗೌಡರ, ರುದ್ರಗೌಡ ಕುಂಟೋಜಿ, ಈರಣ್ಣ ಸಜ್ಜನ್, ನಾಗರಾಜ್ ಸಜ್ಜನ್, ಪತ್ರಕರ್ತ ಮಲ್ಲು ಕೆಂಭಾವಿ, ವಲಯದ ಮೇಲ್ವಿಚಾರಕ ಮಂಜುನಾಥ್ ಸಜ್ಜನ್, ಸೇವಾ ಪ್ರತಿನಿಧಿ ಭೀಮಬಾಯಿ ಗೌಂಡಿ, ಅಂಗನವಾಡಿ ಕಾಯ೯ಕತೆ೯ ರಮಾಜಾನಬಿ ವಸ್ತಾದ, ಸೇವಾದಾರ ಪರಶುರಾಮ್ ಮಂದೇವಾಲೆ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

