ಕೊಲ್ಹಾರ: ಪಟ್ಟಣ ಪಂಚಾಯತಿ ಕಾರ್ಯಾಲಯದ ಸಭಾಭವನದಲ್ಲಿ ತಹಶೀಲ್ದಾರ ಎಸ್.ಎಸ್.ನಾಯಕಲ್ಮಠ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವದ ನಿಮಿತ್ಯವಾಗಿ ತಾಲೂಕಿನ ಸಾರ್ವಜನಿಕರ ಚುನಾಯಿತ ಸದಸ್ಯರ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಗುರುವಾರ ಕರೆಯಲಾಗಿತ್ತು.
ದೇಶದ ಪ್ರಜೆಗಳ ಹಬ್ಬವಾದ ಪ್ರಜಾರಾಜ್ಯೋತ್ಸವದ ಸಮಾರಂಭದಲ್ಲಿ ಕೊಲ್ಹಾರ ಪಟ್ಟಣದ ಹಾಗೂ ತಾಲೂಕಿನ ಎಲ್ಲ ಹಳ್ಳಿಗಳ ನಾಗರಿಕ ಬಂಧುಗಳು ಮಹಿಳೆಯರು ಸಂಘ ಸಂಸ್ಥೆಯ ಪದಾದಿಕಾರಿಗಳು ತಮ್ಮ ಊರುಗಳಲ್ಲಿ ಬೆಳಗಿನ ಧ್ವಜಾರೋಹಣ ಕಾರ್ಯಕ್ರಮವನ್ನು ಮುಗಿಸಿದ ನಂತರ ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದ ಧ್ವಜಾರೋಹಣ ಮತ್ತು ಮಕ್ಕಳಿಂದ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದು ಕರೆ ಕೊಟ್ಟರು.
ಅಂದಿನ ದಿವಸ ಎಲ್ಲ ಶಾಲಾ ಕಾಲೇಜುಗಳ, ಸರಕಾರಿ ಹಾಗೂ ಖಾಸಗಿ ಕಚೇರಿಗಳ ಸಂಘ ಸಂಸ್ಥೆಗಳ ಪ್ರಾಂಗಣದಲ್ಲಿ ಬೆಳಗಿನಜಾವ ೭.೩೦ಕ್ಕೆ ಧ್ವಜಾರೋಹಣ ನೆರವೇರಿಸಬೇಕು. ತದನಂತರ ೯.೦೦ ಘಂಟೆಗೆ ನಡೆಯುವ ಸಾರ್ವಜನಿಕ ಧ್ವಜಾರೋಹಣದಲ್ಲಿ ಭಾಗವಹಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಲಾಗುವದು. ರಾಜಕೀಯ ಗಣ್ಯಮಾನ್ಯರು ಚುಣಾಯಿತ ಪ್ರತಿನಿಧಿಗಳು ಸಮಾಜ ಸೇವಕರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ ಚಲವಾದಿ ಶ್ರೀಮತಿ ಡಾ|| ಲಕ್ಷ ತೆಲ್ಲೂರ, ಪಟ್ಟಣ ಪಂಚಾಯತಿ ಲಕ್ಷ್ಮೀ ಚನಮಲ್ಲಪ್ಪ ಗಿಡ್ಡಪ್ಪಗೋಳ ಸೇರಿದಂತೆ ಸರ್ವ ಸದಸ್ಯರು ಅನೇಕರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

