Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಾಂಗ್ರೆಸ್ ಬಲವಾದ ವಿರೋಧ | ಸಮಿತಿ ವಿಸರ್ಜನೆಗೆ ಕೋರಿಕೆ | ಸಂಸದೀಯ ಪ್ರಜಾಪ್ರಭುತ್ವ ಬುಡಮೇಲು ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಸಮಿತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆಯನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸಿದ್ದು, ಇದು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿದೆ ಎಂದಿದೆ.ಒಂದು ರಾಷ್ಟ್ರ, ಒಂದು ಚುನಾವಣೆಯ ಸಾಧ್ಯತೆಯ ಬಗ್ಗೆ ಪರಿಶೀಲಿಸಲು ರಚಿಸಿರುವ ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ನೇತೃತ್ವದ ಸಮಿತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದು, ಸಮಿತಿಯನ್ನು ವಿಸರ್ಜಿಸುವಂತೆ ಕೋರಿದ್ದಾರೆ.ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವುದರೊಂದಿಗೆ ಮಾಜಿ ರಾಷ್ಟ್ರಪತಿಗಳ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡದಂತೆ ಕೋವಿಂದ್ ಅವರಿಗೆ ಕಾಂಗ್ರೆಸ್ ಮನವಿ ಮಾಡಿದೆ.‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತ ಕೇಂದ್ರದ ಉನ್ನತ ಮಟ್ಟದ ಸಮಿತಿಯ ಕಾರ್ಯದರ್ಶಿ ಡಾ.ನಿತಿನ್ ಚಂದ್ರ ಅವರಿಗೆ ಬರೆದ ನಾಲ್ಕು ಪುಟಗಳ ಪತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಿತಿಯ ರಚನೆ ಮತ್ತು…
ವಿಜಯಪುರ: ಮಹಾ ಮಾನವತಾವಾದಿ, ಸಮಾಜ ಸುಧಾರಣೆಯ ಮಹಾನಾಯಕ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿರುವುದು, ಕರ್ನಾಟಕ ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಸಚಿವರಾದ ಶರಣ ಶ್ರೀ ಎಂ ಬಿ ಪಾಟೀಲ ಹಾಗೂ ಸಂಪುಟದ ಎಲ್ಲ ಸಚಿವರಿಗೆ, ಶಾಸಕರಿಗೆ, ನಾಡಿನ ಸಮಸ್ತ ಮಠಾಧೀಶರಿಗೆ, ಸಮಸ್ತ ಬಸವಾಭಿಮಾನಿಗಳ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿರುವುದರ ಜೊತೆಗೆ ಅವರ ವಚನ ಸಾಹಿತ್ಯ ಚಿಂತನೆಗಳನ್ನು, ಮನೆ ಮನಗಳಿಗೆ ತಲುಪಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಹೇಳಿರುವ ನೈಜ ಬಸವಾನುಯಾಯಿ ಸಿದ್ದರಾಮಯ್ಯನವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಲೆ, ಸಾಹಿತ್ಯ, ಸಂಗೀತ, ರಾಜಕೀಯ, ಸಾಮಾಜಿಕ, ಆರ್ಥಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿದ ಮಹಾತ್ಮ ವಿಶ್ವಗುರು ಬಸವಣ್ಣನವರು. ಅವರು…
ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಮಹಾಶಿವಯೋಗಿ ವೇಮನರ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಯೋಗಿ ಮೇಮನರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.ಬಸವೇಶ್ವರ ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯ ಸಿ ಎಸ್ ಹಿರೇಮಠ, ಮುಖ್ಯಗುರು ಜಗದೀಶ ಗುಮಶೆಟ್ಟಿ ಮಾತನಾಡಿ, ವೇಮನರು ತಮ್ಮ ವಚನಗಳ ಮೂಲಕ ಸಮಾಜದ ಅಭಿವೃದ್ದಿಗೆ ಶ್ರಮಿಸಿದ ವ್ಯಕ್ತಿಯಾಗಿದ್ದಾರೆ, ಅವರ ತತ್ವ ಮತ್ತು ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.ಈ ವೇಳೆ ಸಂಸ್ಥೆ ನಿರ್ದೇಶಕ ಸಿದ್ದಣ್ಣ ಚಳ್ಳಗಿ, ಕಾಶಿನಾಥ ಹೆಗ್ಗಣದೊಡ್ಡಿ, ಉಪನ್ಯಾಸಕರಾದ ಬಿ ಜಿ ಚನಗೊಂಡ, ಡಾ.ಜಿ ಜಿ ಮೇಡೆದಾರ, ಎಸ್ ಎಸ್ ಕಲಶೇಟ್ಟಿ, ರವಿಕುಮಾರ ಗುಮಶೇಟ್ಟಿ, ಬಸಪ್ಪ ಕುಂಬಾರ, ವಿಶ್ವನಾಥ ಸಿಂದಗಿ, ಎಸ್ ಎಸ್ ಕೋರವಾರಮಠ, ಎಸ್ ಎಸ್ ಪಿ ರಾಣಗಟ್ಟಿ, ಕೆ ಎಸ್ ದೇಸಾಯಿ, ನಿಂಗನಗೌಡ ಗುಂಡಕನಾಳ, ವ್ಹಿ ಟಿ ಜಾನಮಟ್ಟಿ, ಶಿವಾನಂದ ಹರಿಜನ, ವಿರೇಶ ಝಳಕಿ ಸೇರಿದಂತೆ ಇತರರು ಇದ್ದರು.
ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಜ.೨೧ ಭಾನುವಾರ ಬೆಳಗ್ಗೆ 9-00ಗಂಟೆಗೆ ಹಳೆಯ ಹೈಸ್ಕೂಲ್ ಕಟ್ಟಡದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ನುಡಿನಮನ ಪ್ರಯುಕ್ತ ಈ ಶಿಬಿರ ಹಮ್ಮಿಕೊಂಡಿದ್ದು, ಶ್ರೀ ಸಾಯಿ ಕಾರ್ಡಿಯಾಕ್ ಮತ್ತು ಕ್ರಿಟಿಕಲ್ ಕೇರಸೆಂಟರ್ ಹಾಗೂ ಶ್ರೀ ಸಾಯಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವಿಜಯಪುರ ಹಾಗೂ ವಿದ್ಯಾಚೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹೊನವಾಡ ಮತ್ತು ಪ್ರತಿಭಾ ಸಾಹಿತ್ಯ ವೇದಿಕೆ, ಪ್ರಥಮ ಫೌಂಡೇಶನ್, ಕುಸುಮಾ ಫೌಂಡೇಶನ್ ಜನಾಬಾಯಿ ಫೌಂಡೇಶನ್, ರೈತ ಸಂಘ ಮಹಿಳಾ ಸಂಘಟನೆಗಳು ಸಾಂಸ್ಕೃತಿಕ ವೇದಿಕೆ ಸ್ವಾಮಿ ವಿವೇಕಾನಂದ ಸಂಘ ಮತ್ತು ಗ್ರಾಮ ಪಂಚಾಯತ್ ಹೊನವಾಡ ಇವರ ಸಹಯೋಗವಿದೆ.ಈ ಕಾರ್ಯಕ್ರಮದ ಸಾನಿಧ್ಯವನ್ನು ಬಾಬುರಾವ್ ಮಹಾರಾಜರು ವಹಿಸಲಿದ್ದು, ಅಧ್ಯಕ್ಷತೆಯನ್ನು ರೇ ಸಿ ಪಾಟೀಲ, ಮುಖ್ಯ ಅತಿಥಿಗಳಾಗಿ ಡಾ|| ಸಂಜೀವ ಎಲ್ ಸಜ್ಜನರ್, ಡಾ|| ಸೋಮಲಿಂಗ ತಿಮ್ಮಶೆಟ್ಟಿ, ಎಸ್ ಜಿ ಲಕ್ಕುಂಡಿಮಠ, ನಳಿನಿಕಾಂತ ಸಾವಂತ, ಯಂಕಪ್ಪ ಉಪ್ಪಾರ, ಸುರೇಶ ಕಳ್ಳಿಮನಿ, ತುಕಾರಾಮ ದಡಕೆ, ಅರವಿಂದ ಹತ್ತಿಕಾಳ ಪಾಲ್ಗೊಳ್ಳಲಿದ್ದಾರೆ.
ವಿಜಯಪುರ: ಇಬ್ರಾಹಿಂಪೂರ ರೇಲ್ವೆ ಸ್ಟೇಶನ್ ಹತ್ತಿರ ಸಂತೋಷ ಮಾತಾ ಜಲನಗರ ಮತ್ತು ಸಾಯಿಪಾಕ್ ರಸ್ತೆಗಳ ಜೋಡಣೆಗಾಗಿ ರೇಲ್ವೆ ಕೆಳ ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಅನುಕೂಲಕ ಕಲ್ಪಿಸುವಂತೆ ಸಂಸದ ರಮೇಶ ಜಿಗಜಿಣಗಿ ಅವರು ರೇಲ್ವೆ ಇಲಾಖೆ ಹುಬ್ಬಳ್ಳಿ ಜನರಲ್ ಮ್ಯಾನೇಜರ್ ಅವರಿಗೆ ಪತ್ರ ಬರೆದಿದ್ದಾರೆ.ಸಂಸದರು ರೇಲ್ವೆ ಮ್ಯಾನೇಜರ್ ಅವರಿಗೆ ಪತ್ರ ಬರೆದು, ಇಬ್ರಾಹಿಂಪೂರ ಹತ್ತಿರದ ರೇಲ್ವೆ ಕೆಳ ಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಕೆಳಸೇತುವೆಗೆ ಮಳೆ ನೀರು ಸುತ್ತುವರೆಯುವ ಸಂಭವವಿರುವುದರಿಂದ ಸದರಿ ನೀರು ನಿಲ್ಲದಂತೆ ಮಹಾನಗರ ಪಾಲಿಕೆಯಿಂದ ಕಾಮಗಾರಿ ಕೈಗೊಳ್ಳುವುದಾಗಿ ತಮ್ಮ ಪತ್ರದಲ್ಲಿ ತಿಳಿಸಿದ ಸಂಸದರು, ರೇಲ್ವೆ ಅಧಿಕಾರಿಗಳು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೆಳಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ವಿಜಯಪುರ: ಜಗತ್ತಿನಲ್ಲಿ ಅನೇಕ ದಾರ್ಶನಿಕ ಮಹನೀಯರು ತಮ್ಮದೇಯಾದ ಸಂದೇಶಗಳನ್ನು ಸಾರಿದ್ದಾರೆ. ನಾವು ಅದನ್ನು ಅರ್ಥ ಮಾಡಿಕೊಂಡು ಅವರ ವಿಚಾರಧಾರೆಗಳನ್ನು ಎಲ್ಲರಿಗೂ ತಿಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಹಾಯೋಗಿಯ ಜೀವನ ಸಂದೇಶ ಎಲ್ಲರಿಗೂ ಪ್ರೇರಣೆಯಾಗಲಿ. ಮಹನೀಯರ ಸಾರಿದ ತತ್ವ ಸಿದ್ದಾಂತಗಳನ್ನು ಅರ್ಥ ಮಾಡಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಹುಟ್ಟಿನಿಂದಲೇ ಎಲ್ಲರೂ ಸಮಾನರು ಎಂದು ಸಾರಿದ ವೇಮರ ಬದುಕು ನಮಗೆ ಸ್ಪೂರ್ತಿಯಾಗಬೇಕು ಎಂದರು ಮಹಾಯೋಗಿ ವೇಮರ ಜೀವನ ಚರಿತ್ರೆಯ ಬಗ್ಗೆ ಡಾ.ಉಷಾದೇವಿ ಹಿರೇಮಠ ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮವನ್ನು ವಿಜಯಪುರ ಮಹಾನಗರ ಪಾಲಿಕೆ ಮಹಾಪೌರರಾದ ಮೆಹೇಜನಬಿ ಹೊರ್ತಿ ಅವರು ಉದ್ಘಾಟಿಸಿದರು.ಉಪ ಮಹಾಪೌರ ದಿನೇಶ ಹಳ್ಳಿ, ತಹಶಿಲ್ದಾರ ಶ್ರೀಮತಿ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಯುಭ್ ದ್ರಾಕ್ಷಿ, ಎಚ್.ಮಮದಾಪುರ ವಿದ್ಯಾವತಿ ಅಂಕಲಗಿ, ಸುರೇಶ ದೇಸಾಯಿ,…
ವಿಜಯಪುರ: ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ೪೫೯೨೫೧ ಗೃಹಬಳಕೆ ಸ್ಥಾವರಗಳಿದ್ದು, ಡಿಸೆಂಬರ್-೨೦೨೩ರ ಅಂತ್ಯಕ್ಕೆ ೪೧೬೮೯೧ ಗ್ರಾಹಕರು ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ ೪೦೮೪೨೫ ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ ಪಡೆದಿದ್ದು, ಪ್ರತಿಶತ ೯೮ರಷ್ಟು ಫಲಾನುಭವಿಗಳು ಒಟ್ಟು ೧೫.೯೬ ಮಿಲಿಯನ್ ಯೂನಿಟ್ ಬಳಕೆ ಮಾಡಿದ್ದು, ಇದರಿಂದ ಇಲಾಖೆಗೆ ೧೫.೮೨ ಕೋಟಿ ರೂ. ಅನುದಾನ ಲಭ್ಯವಾಗಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ ಅವರು ತಿಳಿಸಿದ್ದಾರೆ.ಗೃಹಜ್ಯೋತಿ ಯೋಜನೆಯಡಿ ನೊಂದಾಯಿಸಲು ಯಾವುದೇ ಕಾಲಮಿತಿ ಇರುವುದಿಲ್ಲ. ಇನ್ನೂ ಬಾಕಿ ಉಳಿದ ೩೩೯೫೯ ಗ್ರಾಹಕರು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಉಪ ವಿಭಾಗ ಕಚೇರಿ (ಸೌಜನ್ಯ ಕೌಂಟರ್), ಗ್ರಾಮ ಒನ್ ಕೇಂದ್ರಗಳು, ಕರ್ನಾಟಕ ಒನ್ ಕೇಂದ್ರ, ಸೈಬರ್ ಕೇಂದ್ರಗಳು, ಸೇವಾ ಸಿಂಧೂ ಪೋರ್ಟಲ್‌ನಲ್ಲಿ ಮತ್ತು ಮೊಬೈಲ್ ಮೂಲಕ https://sevasindhugs.karnataka.gov.in ಮೂಲಕ ಆಧಾರ ಕಾರ್ಡ, ವಿದ್ಯುತ್ ಬಿಲ್ ಹಾಗೂ ಆಧಾರ ಲಿಂಕ್‌ಇರುವ ಮೊಬೈಲ್‌ನೊಂದಿಗೆ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಹಾಗೂ ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸಲು ಕೃಷಿ ನವೋದ್ಯಮ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇ.೫೦ರಷ್ಟು ಸಹಾಯಧನವನ್ನು (ಕನಿಷ್ಠ ೨೦ ಲಕ್ಷ ರೂ.ದಿಂದ ಗರಿಷ್ಠ ೫೦ ಲಕ್ಷ ರೂ.ವರೆಗೆ) ಕೃಷಿ ವಲಯದ ನವೋದ್ಯಮಿಗಳಿಗೆ ಬ್ಯಾಂಕ್ ಸಾಲದ ಮೂಲಕ ನೀಡಲಾಗುವುದು.ಆಸಕ್ತ ನವೋದ್ಯಮಿಗಳು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ : ೨೯-೦೧-೨೦೨೪ರೊಳಗಾಗಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮುದ್ದೇಬಿಹಾಳ: ತಾಲೂಕಿನ ಗುಡಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾಯೋಗಿ ವೇಮನರ ಜಯಂತಿ ಆಚರಿಸಲಾಯಿತು.ಶಾಲೆಯ ಮುಖ್ಯಗುರು ಸಂಗಮೇಶ ನವಲಿ, ಮಡಿಕೇಶ್ವರ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂಗಣ್ಣ ಮೇಟಿ, ಸದಸ್ಯರಾದ ಮಲ್ಲಪ್ಪ ಚಲವಾದಿ, ಗ್ರಾಮದ ಪ್ರಮುಖರಾದ ಮಡಿವಾಳಪ್ಪ ಮಾಡಗಿ, ಗುರುನಾಥಗೌಡ ಬಿರಾದಾರ, ಶಂಕರಗೌಡ ಬಿರಾದಾರ, ಗುರುಬಸಪ್ಪಗೌಡ ಹೂಲಗೇರಿ, ಮಹಾದೇವಪ್ಪಗೌಡ ಬಿರಾದಾರ, ಎಂಜಿವಿಸಿ ಕಾಲೇಜು ಉಪನ್ಯಾಸಕ ಶಿವಾನಂದ ಮೂರ್ತಿ, ವೀರಭದ್ರಪ್ಪಗೌಡ ಮಾಡಗಿ, ಶಿಕ್ಷಕಿ ಲಕ್ಷ್ಮೀ ಮನಿಕಟ್ಟಿ, ಅತಿಥಿ ಶಿಕ್ಷಕಿ ಯಲ್ಲಮ್ಮ ಉತಾಳೆ, ಕಾಶಿಬಾಯಿ ಹಾದಿಮನಿ, ಪ್ರಭುಗೌಡ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಮುದ್ದೇಬಿಹಾಳ: ಮುದ್ದೇಬಿಹಾಳ, ಢವಳಗಿ ಹಾಗೂ ನಾಲತವಾಡ ಹೋಬಳಿಯಲ್ಲಿ ಕೃಷಿಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕಾಗಿ ರೈತರಿಂದ ಸ್ವೀಕರಿಸಲಾದ ಅರ್ಜಿಗಳು ಗುರಿಗಿಂತ ಹೆಚ್ಚಿಗೆ ಬಂದಿದ್ದು, ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲು ಜ.೨೨ ನಿಗದಿಪಡಿಸಲಾಗಿದೆ. ಈ ಭಾಗದಲ್ಲಿ ಅರ್ಜಿ ಸಲ್ಲಿಸಿದ ಪಲಾನುಭವಿಗಳು ಅಂದು ಮದ್ಯಾಹ್ನ ೩ಕ್ಕೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಾಜರಿರುವಂತೆ ಪ್ರಕಟಣೆ ತಿಳಿಸಿದೆ.
