ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಮಹಾಶಿವಯೋಗಿ ವೇಮನರ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಯೋಗಿ ಮೇಮನರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.
ಬಸವೇಶ್ವರ ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯ ಸಿ ಎಸ್ ಹಿರೇಮಠ, ಮುಖ್ಯಗುರು ಜಗದೀಶ ಗುಮಶೆಟ್ಟಿ ಮಾತನಾಡಿ, ವೇಮನರು ತಮ್ಮ ವಚನಗಳ ಮೂಲಕ ಸಮಾಜದ ಅಭಿವೃದ್ದಿಗೆ ಶ್ರಮಿಸಿದ ವ್ಯಕ್ತಿಯಾಗಿದ್ದಾರೆ, ಅವರ ತತ್ವ ಮತ್ತು ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.
ಈ ವೇಳೆ ಸಂಸ್ಥೆ ನಿರ್ದೇಶಕ ಸಿದ್ದಣ್ಣ ಚಳ್ಳಗಿ, ಕಾಶಿನಾಥ ಹೆಗ್ಗಣದೊಡ್ಡಿ, ಉಪನ್ಯಾಸಕರಾದ ಬಿ ಜಿ ಚನಗೊಂಡ, ಡಾ.ಜಿ ಜಿ ಮೇಡೆದಾರ, ಎಸ್ ಎಸ್ ಕಲಶೇಟ್ಟಿ, ರವಿಕುಮಾರ ಗುಮಶೇಟ್ಟಿ, ಬಸಪ್ಪ ಕುಂಬಾರ, ವಿಶ್ವನಾಥ ಸಿಂದಗಿ, ಎಸ್ ಎಸ್ ಕೋರವಾರಮಠ, ಎಸ್ ಎಸ್ ಪಿ ರಾಣಗಟ್ಟಿ, ಕೆ ಎಸ್ ದೇಸಾಯಿ, ನಿಂಗನಗೌಡ ಗುಂಡಕನಾಳ, ವ್ಹಿ ಟಿ ಜಾನಮಟ್ಟಿ, ಶಿವಾನಂದ ಹರಿಜನ, ವಿರೇಶ ಝಳಕಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

