ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಜ.೨೧ ಭಾನುವಾರ ಬೆಳಗ್ಗೆ 9-00ಗಂಟೆಗೆ ಹಳೆಯ ಹೈಸ್ಕೂಲ್ ಕಟ್ಟಡದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.
ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ನುಡಿನಮನ ಪ್ರಯುಕ್ತ ಈ ಶಿಬಿರ ಹಮ್ಮಿಕೊಂಡಿದ್ದು, ಶ್ರೀ ಸಾಯಿ ಕಾರ್ಡಿಯಾಕ್ ಮತ್ತು ಕ್ರಿಟಿಕಲ್ ಕೇರಸೆಂಟರ್ ಹಾಗೂ ಶ್ರೀ ಸಾಯಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವಿಜಯಪುರ ಹಾಗೂ ವಿದ್ಯಾಚೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹೊನವಾಡ ಮತ್ತು ಪ್ರತಿಭಾ ಸಾಹಿತ್ಯ ವೇದಿಕೆ, ಪ್ರಥಮ ಫೌಂಡೇಶನ್, ಕುಸುಮಾ ಫೌಂಡೇಶನ್ ಜನಾಬಾಯಿ ಫೌಂಡೇಶನ್, ರೈತ ಸಂಘ ಮಹಿಳಾ ಸಂಘಟನೆಗಳು ಸಾಂಸ್ಕೃತಿಕ ವೇದಿಕೆ ಸ್ವಾಮಿ ವಿವೇಕಾನಂದ ಸಂಘ ಮತ್ತು ಗ್ರಾಮ ಪಂಚಾಯತ್ ಹೊನವಾಡ ಇವರ ಸಹಯೋಗವಿದೆ.
ಈ ಕಾರ್ಯಕ್ರಮದ ಸಾನಿಧ್ಯವನ್ನು ಬಾಬುರಾವ್ ಮಹಾರಾಜರು ವಹಿಸಲಿದ್ದು, ಅಧ್ಯಕ್ಷತೆಯನ್ನು ರೇ ಸಿ ಪಾಟೀಲ, ಮುಖ್ಯ ಅತಿಥಿಗಳಾಗಿ ಡಾ|| ಸಂಜೀವ ಎಲ್ ಸಜ್ಜನರ್, ಡಾ|| ಸೋಮಲಿಂಗ ತಿಮ್ಮಶೆಟ್ಟಿ, ಎಸ್ ಜಿ ಲಕ್ಕುಂಡಿಮಠ, ನಳಿನಿಕಾಂತ ಸಾವಂತ, ಯಂಕಪ್ಪ ಉಪ್ಪಾರ, ಸುರೇಶ ಕಳ್ಳಿಮನಿ, ತುಕಾರಾಮ ದಡಕೆ, ಅರವಿಂದ ಹತ್ತಿಕಾಳ ಪಾಲ್ಗೊಳ್ಳಲಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
