Author: editor.udayarashmi@gmail.com

-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್ 1947ರಲ್ಲಿ ನಮ್ಮ ಭಾರತ ದೇಶವು ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾಯಿತಷ್ಟೇ, ಆದರೆ ನಮಗೆ ನಮ್ಮದೇ ಆದ ಸಂವಿಧಾನ ಇಲ್ಲದೆ ಇರುವುದರಿಂದ ಸ್ವತಂತ್ರದ ನಂತರವೂ ಕೂಡ ಭಾರತ ದೇಶವು ತನ್ನದೇ ಆದ ಸಂವಿಧಾನವನ್ನು ಹೊಂದುವವರೆಗೆ ಕಿಂಗ್ ಜಾರ್ಜ್ ರ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. 1929 ರಲ್ಲಿ ಲಾಹೋರ್ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸಭೆಯಲ್ಲಿ ಸಂಪೂರ್ಣ ಸ್ವತಂತ್ರ ಭಾರತ ದೇಶವನ್ನು ಪಡೆಯುವ ಒಕ್ಕೊರಲಿನ ಧ್ವನಿ ಹೊಮ್ಮಿತು. ಇದರ ಪರಿಣಾಮವಾಗಿ 1930ರ ಜನವರಿ 26ರಂದು ಭಾರತ ದೇಶವನ್ನು ಪೂರ್ಣ ಸ್ವರಾಜ್ ದೇಶ ಎಂದು ಘೋಷಿಸಲಾಯಿತು. ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಜನವರಿ 26ರ ಈ ದಿನ ಅತ್ಯಂತ ಮಹತ್ವಪೂರ್ಣ ಎನಿಸಿತ್ತು. 1945ರಲ್ಲಿ ದ್ವಿತೀಯ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಕೂಗು ಮತ್ತಷ್ಟು ಜೋರಾಯಿತು. ಇನ್ನು ತಮಗೆ ಭಾರತದಲ್ಲಿ ಉಳಿಗಾಲವಿಲ್ಲ ಎಂದು ಅರಿತ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವ ಮುನ್ನ ಮೂರು ಜನ ಬ್ರಿಟನ್ ಸದಸ್ಯರ…

Read More

ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ | TMC ಮತ್ತು AAP ಏಕಾಂಗಿ ಸ್ಪರ್ಧೆಯ ಘೋಷಣೆ | ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂತರ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು INDIA ಮೈತ್ರಿಕೂಟಕ್ಕೆ ದೊಡ್ಡ ಶಾಕ್ ನೀಡಿದ್ದಾರೆ. ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಭಗವಂತ್ ಮಾನ್ ಘೋಷಿಸಿದ್ದಾರೆ.ಪಂಜಾಬ್‌ನ 13 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಭಗವಂತ್ ಮಾನ್ ಹೇಳಿದ್ದಾರೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪಂಜಾಬ್‌ನ 13 ಸ್ಥಾನಗಳಲ್ಲಿ ಆಪ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಮಮತಾ ಬ್ಯಾನರ್ಜಿ ತಮ್ಮದೇ ಆದ ನಿರ್ಧಾರವನ್ನು ಹೊಂದಿದ್ದಾರೆ. ನಮಗೆ ನಮ್ಮದೇ ಆದ ನಿರ್ಧಾರವಿದೆ ಎಂದಿದ್ದಾರೆ.ಮಮತಾ ಅಲ್ಲದೆ, ನಿತೀಶ್ ಕುಮಾರ್ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಪಕ್ಷ ಎಎಪಿ ಕೂಡ ಗರಿಷ್ಠ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. 16ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಿತೀಶ್ ಅವರ ಪಕ್ಷ ಜೆಡಿಯು ಇತ್ತೀಚೆಗೆ ಹೇಳಿತ್ತು. ಗೆಲ್ಲುವ…

Read More

ಸಿಂದಗಿ: ಪಟ್ಟಣದ ಕೆಎಸ್ಆರ್ ಟಿಸಿ ಬಸ್‌ಡಿಪೋ ಬಳಿಯಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ ಮಂಗಳವಾರ ಜ.23 ರಂದು ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೮ ನೇ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ಹಾಗೂ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಮಹಾ ಮಂಗಲೋತ್ಸವ ಕಾರ್ಯಕ್ರಮದ ಸಮಾರಂಭದಲ್ಲಿ ಮಲಗೊಂಡ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ “ತುಷಾರ್” ಚಲನಚಿತ್ರದ ನಟ, ನಿರ್ದೇಶಕ, ನಿರ್ಮಾಪಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರು ಗೌರವಿಸಿ ಸನ್ಮಾನಿಸಿದರು.ಇತ್ತೀಚೆಗೆ “ತುಷಾರ್” ಚಿತ್ರಕ್ಕೆ ಬಾಗಲಕೋಟೆಯಲ್ಲಿ ಜರುಗಿದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಮಾಜಿಕ ಕಳಕಳಿ ಹಾಗೂ ಭಾವೈಕ್ಯತೆಯ ಸಂದೇಶ ಸಾರುವ ತುಷಾರ್ ಚಲನಚಿತ್ರ ಅತ್ಯುತ್ತಮ ಚಿತ್ರ ಎಂದು ಘೋಷಿಸಿ ಪ್ರಶಸ್ತಿ ನೀಡಲಾಗಿತ್ತು.ಶಾಸಕ ಅಶೋಕ ಎಮ್ ಮನಗೂಳಿ ಅನೇಕ ಶ್ರೀಗಳು ಹಾಗೂ ರಾಜಕೀಯ ಮುಖಂಡರು ಇದ್ದರು.

Read More

ಮುದ್ದೇಬಿಹಾಳ: ಜ.೨೮ ರಂದು ಸಂಜೆ ೫ಗಂಟೆಗೆ ಇಲ್ಲಿನ ವಿಬಿಸಿ ಹೈಸ್ಕೂಲ್ ಹೈಸ್ಕೂಲ್ ಮೈದಾನದಲ್ಲಿರುವ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದರ ೧೬೧ನೇ ಜಯಂತ್ಯೋತ್ಸವದ ಪ್ರಯುಕ್ತ ಸ್ವಾಮಿ ವಿವೇಕಾನಂದ ರಾಷ್ಟ್ರ, ರಾಜ್ಯ ಸದ್ಭಾವನಾ ಪ್ರಶಸ್ತಿ, ಧರ್ಮಯುದ್ಧ ದಿನದರ್ಶಿಕೆ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಯುವ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಧನಾ ಮಹಿಳಾ ಒಕ್ಕೂಟ ಹಾಗೂ ಧರ್ಮಯುದ್ಧ ದಿನಪತ್ರಿಕೆ ಬಳಗದ ಸಂಯಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದ ಸಾನಿಧ್ಯವನ್ನು ಸಿದ್ದನಕೊಳ್ಳದ ಶಿವಕುಮಾರ ಮಹಾಸ್ವಾಮಿಗಳು ವಹಿಸಲಿದ್ದು, ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು. ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಟಿ.ಎಂ.ಭಾಸ್ಕರ್ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಶಾಸಕ ಸಿ.ಎಸ್.ನಾಡಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಬಾಜಪಾ ಮುಖಂಡ ಮಹೇಂದ್ರಕುಮಾರ…

Read More

ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿ, ಉಪನೋಂದಣಿ ಕಚೇರಿ, ಭೂದಾಖಲೆಗಳ ಕಚೇರಿ, ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬುಧವಾರ ಧಿಡೀರ್ ಭೇಟಿ ನೀಡಿ ಪರಿಶೀಲನೆ ಮಾಡಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ ಬಾಕಿಯಿರುವ ಕಂದಾಯ ಪ್ರಕರಣಗಳ ಬಗ್ಗೆ ತಹಸೀಲ್ದಾರರಿಂದ ಮಾಹಿತಿ ಪಡೆದುಕೊಂಡರು. ನಂತರ ಉಪನೋಂದಣಿಯಾಧಿಕಾರಿ ಕಚೇರಿಗೆ ಭೇಟಿ ನೀಡಿದಾಗ ಹೆಚ್ಚು ಜನರು ಕಂಡು ಎಲ್ಲರೂ ಕಚೇರಿ ಕೆಲಸಕ್ಕೆ ಬಂದವರೋ ಅಥವಾ ಬೇರೆ ಜನರು ಇರುವರೋ ಎಂದು ಸಂದೇಹ ಬಂದು ಎಲ್ಲರ ಗುರುತಿನ ಚೀಟಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿದರು.ಉಪನೋಂದಣಾಧಿಕಾರಿ ದ್ಯಾವಪ್ಪ ಅವರಿಗೆ ಕಚೇರಿಯಲ್ಲಿ ಆಸ್ತಿ ಮಾರಾಟಗಾರರು, ಖರೀದಾರರು, ಸಾಕ್ಷಿದಾರರು ಹಾಗೂ ದಾಖಲಾತಿಗೆ ಸಂಬಂಧಿಸಿದವರು ಮಾತ್ರ ಇರುವಂತೆ ನೋಡಿಕೊಳ್ಳಬೇಕು. ಅನಾವಶ್ಯಕವಾಗಿ ಜನರು ಇರದಂತೆ ನೋಡಿಕೊಳ್ಳಬೇಕೆಂದು ಖಡಕ್ಕಾಗಿ ಸೂಚನೆ ನೀಡಿದರು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜನರು ಯಾವ ಮಧ್ಯವರ್ತಿಗಳ ಮೂಲಕ ತಮ್ಮ ಕೆಲಸಗಳನ್ನು ಮಾಡಿಕೊಳ್ಳದೇ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವಂತೆ ಜನರಿಗೆ ಜಿಲ್ಲಾಧಿಕಾರಿಗಳು ಜನರಿಗೆ ಹೇಳಿದರು.ಭೂಮಾಪನ ಇಲಾಖೆಯ ಕಚೇರಿಗೆ…

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ನಡೆಯುತ್ತಿರುವ ಕಲಬುರಗಿ ಶರಣಬಸವೇಶ್ವರ ಪುರಾಣದಲ್ಲಿ ಮಂಗಳವಾರ ಸಂಜೆ ಶರಣಬಸವೇಶ್ವರರ ತೊಟ್ಟಿಲೋತ್ಸವ ಸಂಭ್ರಮದಿಂದ ಜರುಗಿತು.ಪಟ್ಟಣದ ಅಕ್ಕನ ಬಳಗ, ತಾಯಂದಿರು ಸಂಪ್ರದಾಯದಂತೆ ಕಲಬುರಗಿ ಶರಣಬಸವೇಶ್ವರರ ತೊಟ್ಟಿಲೋತ್ಸವ ಹಾಗೂ ನಾಮಕರಣ ಶಾಸ್ತ್ರವನ್ನು ನಡೆಸಿಕೊಟ್ಟರು.ಸಾನಿಧ್ಯ ವಹಿಸಿದ್ದ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.ತೊಟ್ಟಿಲೋತ್ಸವದಲ್ಲಿ ದಾನಮ್ಮ ಬೀರಲದಿನ್ನಿ, ಕಸ್ತೂರಿ ಚಿಮ್ಮಲಗಿ, ಸಾವಿತ್ರಿ ಬಿರಾದಾರ, ದ್ರಾಕ್ಷಾಯಿಣಿ, ಅಶ್ವಿನಿ ಬಿರಾದಾರ, ಸ್ವಪ್ನಾ ಹುಣಸಿಕಟ್ಟಿ, ಶಶಿ ಬೂದಿಹಾಳ, ನೀಲಮ್ಮ ಮಣ್ಣೂರ, ಬಸಮ್ಮ ಕರಲಿಂಗಪ್ಪಗೋಳ, ಸುಮಾ ಸಂಗಾಪುರ, ಶಾರದಾ ಲೇಸಪ್ಪಗೋಳ, ಶಂಕ್ರಮ್ಮ ಬಿರಾದಾರ, ಜ್ಯೋತಿ ಹಿಟ್ನಳ್ಳಿ, ನೀಲಮ್ಮ ತಪಶೆಟ್ಟಿ, ಸ್ನೇಹಾ ಬುದ್ನಿ, ಸವಿತಾ ಉಪ್ಪಾರ, ನೀಲಮ್ಮ ಕುಂಬಾರ ಇತರರು ಭಾಗವಹಿಸಿದ್ದರು.

Read More

ಬಸವನಬಾಗೇವಾಡಿ: ಚಿತ್ರದುರ್ಗದಲ್ಲಿ ಜ.೨೮ ರಂದು ಹಮ್ಮಿಕೊಂಡಿರುವ ರಾಜ್ಯ ಶೋಷಿತರ ಜಾಗೃತಿ ಸಮಾವೇಶಕ್ಕೆ ತಾಲೂಕಿನ ಶೋಷಿತ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಯಾರ ಹೇಳಿದರು.ಪಟ್ಟಣದ ಗಣೇಶ ನಗರದ ಯಲ್ಲಾಲಿಂಗ ಮಠದ ಆವರಣದಲ್ಲಿ ಬುಧವಾರ ಜರುಗಿದ ಶೋಷಿತ ಸಮುದಾಯಗಳ ಮಹಾಒಕ್ಕೂಟದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಶೋಷಿತ ಸಮುದಾಯ ಬಾಂಧವರು ಸಂಘಟಿತರಾಗಿ ತಮ್ಮ ತಮ್ಮ ಸಮುದಾಯಕ್ಕೆ ನ್ಯಾಯ ಸಿಗುವಂತೆ ಮಾಡಿಕೊಳ್ಳಬೇಕು. ಸಮಾವೇಶದಲ್ಲಿ ಸಿಎಂ ಸೇರಿದಂತೆ ಅನೇಕ ಸಚಿವರು, ಶಾಸಕರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.ಸಭೆಯಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಶೋಷಿತರ ಜಾಗೃತಿ ಸಮಾವೇಶದ ಮಹತ್ವ, ಗಂಭೀರತೆ, ಸಮಾವೇಶಕ್ಕೆ ಹೇಗೆ ತೆರಳುವ ವ್ಯವಸ್ಥೆ, ತಾಲೂಕಿನಲ್ಲಿ ಸಮಾವೇಶದ ಕುರಿತು ಪ್ರಚಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.ಸಭೆಯಲ್ಲಿ ಮುಖಂಡರಾದ ಸೋಮನಾಥ ಕಳ್ಳಿಮನಿ, ನಾಗರಾಜ ಲಂಬೂ, ಪ್ರಭುಗೌಡ ಪಾಟೀಲ, ಜಕ್ಕಪ್ಪ ಯಡವೆ, ಬಿ.ಎಸ್.ಗಸ್ತಿ, ರಾಜು ತೊರವಿ, ಕಾಮೇಶ ಉಕ್ಕಲಿ, ಬಸವರಾಜ ತಳವಾರ, ಸಲೀಂ ಸೈಯದ, ಎಸ್.ಎಸ್.ಕುದರಕರ, ಸಂಗಮೇಶ ಓಲೇಕಾರ, ರಾಜು…

Read More

ಮುದ್ದೇಬಿಹಾಳ: ತಾಲೂಕಿನ ಢವಳಗಿ ಗ್ರಾಮದ ಬಸ್‌ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಗಾ ಆಡುತ್ತಿದ್ದ ಮೂರು ಜನರ ಮೇಲೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಕರ್ನಾಟಕ ಪೊಲೀಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.ಆರೋಪಿತರಾದ ಬಸವರಾಜ ಕೋರಿ, ದಾವಲಭಾಷ್ಯಾ ಹಳ್ಳೂರ, ಲಾಳೇಸಾಬ ನಬಿಸಾಬ ಪಿಂಜಾರ ಇವರಿಂದ ಓ.ಸಿ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಸಮೇತ ಕೆಲ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

Read More

ಮುದ್ದೇಬಿಹಾಳ: ಇಲ್ಲಿನ ಆಲಮಟ್ಟಿ ರಸ್ತೆಯಲ್ಲಿರುವ ಶಾ.ಸೊಗಮಲ್ ಪೀರಾಜಿ ಓಸ್ವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.೨೫ ರಂದು ಬೆಳಿಗ್ಗೆ ೧೦ ಗಂಟೆಗೆ ಮತದಾರರ ದಿನಾಚರಣೆ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ ಉದ್ಘಾಟಿಸುವರು. ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ ಉಪಸ್ಥಿತಿಯಲ್ಲಿ ತಹಶೀಲ್ದಾರ ಬಲರಾಮ ಕಟ್ಟಿಮನಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಸಹಾಯಕ ಸರಕಾರಿ ಅಭಿಯೋಜಕ ಬಸವರಾಜ ಆಹೇರಿ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಪ್ರಭಾರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಯುವರಾಜ ಹನಗಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪ್ರಾಂಶುಪಾಲ ಸಿಕಂದರ ಧನ್ನೂರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ ಆಗಮಿಸುವರು. ವಿಜಯಪುರದ ಸ.ಪ್ರ.ದ.ಕಾ ಸಹಾಯಕ ಪ್ರಾಧ್ಯಾಪಕ…

Read More