ಬಸವನಬಾಗೇವಾಡಿ: ಚಿತ್ರದುರ್ಗದಲ್ಲಿ ಜ.೨೮ ರಂದು ಹಮ್ಮಿಕೊಂಡಿರುವ ರಾಜ್ಯ ಶೋಷಿತರ ಜಾಗೃತಿ ಸಮಾವೇಶಕ್ಕೆ ತಾಲೂಕಿನ ಶೋಷಿತ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಯಾರ ಹೇಳಿದರು.
ಪಟ್ಟಣದ ಗಣೇಶ ನಗರದ ಯಲ್ಲಾಲಿಂಗ ಮಠದ ಆವರಣದಲ್ಲಿ ಬುಧವಾರ ಜರುಗಿದ ಶೋಷಿತ ಸಮುದಾಯಗಳ ಮಹಾಒಕ್ಕೂಟದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಶೋಷಿತ ಸಮುದಾಯ ಬಾಂಧವರು ಸಂಘಟಿತರಾಗಿ ತಮ್ಮ ತಮ್ಮ ಸಮುದಾಯಕ್ಕೆ ನ್ಯಾಯ ಸಿಗುವಂತೆ ಮಾಡಿಕೊಳ್ಳಬೇಕು. ಸಮಾವೇಶದಲ್ಲಿ ಸಿಎಂ ಸೇರಿದಂತೆ ಅನೇಕ ಸಚಿವರು, ಶಾಸಕರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಶೋಷಿತರ ಜಾಗೃತಿ ಸಮಾವೇಶದ ಮಹತ್ವ, ಗಂಭೀರತೆ, ಸಮಾವೇಶಕ್ಕೆ ಹೇಗೆ ತೆರಳುವ ವ್ಯವಸ್ಥೆ, ತಾಲೂಕಿನಲ್ಲಿ ಸಮಾವೇಶದ ಕುರಿತು ಪ್ರಚಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮುಖಂಡರಾದ ಸೋಮನಾಥ ಕಳ್ಳಿಮನಿ, ನಾಗರಾಜ ಲಂಬೂ, ಪ್ರಭುಗೌಡ ಪಾಟೀಲ, ಜಕ್ಕಪ್ಪ ಯಡವೆ, ಬಿ.ಎಸ್.ಗಸ್ತಿ, ರಾಜು ತೊರವಿ, ಕಾಮೇಶ ಉಕ್ಕಲಿ, ಬಸವರಾಜ ತಳವಾರ, ಸಲೀಂ ಸೈಯದ, ಎಸ್.ಎಸ್.ಕುದರಕರ, ಸಂಗಮೇಶ ಓಲೇಕಾರ, ರಾಜು ಯರನಾಳ, ಅಶೋಕ ಚಲವಾದಿ, ಮಹಾಂತೇಶ ಸಾಸಾಬಾಳ, ಪಿ.ಎಸ್.ಕೋಳೂರ, ಶಿವರಾಯ ಶಿಲ್ಪಿ , ಸಮಗಾರ, ಕಲಾಲ, ಭಜಂತ್ರಿ, ಮಡಿವಾಳರ, ಹಡಪದ ಸಮಾಜದ ಮುಖಂಡರು ಇತರರು ಇದ್ದರು. ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕಿ ರಾಜೇಶ್ವರಿ ಯರನಾಳ ಸ್ವಾಗತಿಸಿ, ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

