Author: editor.udayarashmi@gmail.com

ಮಹಾರಾಷ್ಟ್ರದ ಗಡಿಗ್ರಾಮದಲ್ಲಿ ಭಾಷಾಭಿಮಾನ ಮೂಡಿಸುವ ನವರಾತ್ರಿ ಸಂಭ್ರಮಕ್ಕೆ ತೆರೆ ಚಡಚಣ: ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಶಿಷ್ಟವಾದದ್ದು, ಇಲ್ಲಿ ನಾಡಹಬ್ಬವನ್ನು ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಕಳೆದ ೬೭ ವರ್ಷಗಳಿಂದಲೂ ಈ ಕಾರ್ಯ ಅತ್ಯಂತ ವೈಭವದಿಂದ ಸದ್ದಿಲ್ಲದೇ ನಡೆಯುತ್ತಿದೆ.ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರಭಾತಪೇರಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ‘ವೇದಿಕೆ’ಯಾಗಿದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಉಮರಜ ಗ್ರಾಮದಲ್ಲಿ ನಾಡು-ನುಡಿಯ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.೧೯೫೬ರಿಂದ ಪ್ರತಿವರ್ಷ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ರಾಷ್ಟ್ರಧ್ವಜ, ಭಾರತಮಾತೆಯ ಭಾವಚಿತ್ರದೊಂದಿಗೆ ಗ್ರಾಮಸ್ಥರು, ಮಕ್ಕಳೆಲ್ಲರೂ ಸೇರಿ ಹೆಜ್ಜೆ ಹಾಕುತ್ತಾರೆ. ದೇಶಾಭಿಮಾನ, ಧಾರ್ಮಿಕ ಮನೋಭಾವ ಮೂಡಿಸುವ ದೃಷ್ಟಿಯಿಂದ ನಡೆದುಕೊಂಡು ಬರುತ್ತಿರುವ ಈ ಪ್ರಭಾತಪೇರಿಯ ಸಂಪ್ರಯದಾಯವನ್ನು ಜನತೆ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಇಲ್ಲಿ ಒಂಬತ್ತು ದಿನಗಳ ಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿ ನಡೆಯುತ್ತದೆ. ಅದರಂತೆ ಈ ವರ್ಷವೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗಿನ ಜಾವ ನಾಡದೇವಿಯ ಭಾವಚಿತ್ರದೊಂದಿಗೆ ಪ್ರಭಾತಪೇರಿ ನಡೆಯಿತು. ಮಕ್ಕಳು ರಾಷ್ಟ್ರಧ್ವಜ…

Read More

ದೀಕ್ಷಾಭೂಮಿ ಯಾತ್ರಾ ರಥಕ್ಕೆ ಚಾಲನೆ ನೀಡಿ ಜಿ.ಪಂ. ಸಿಇಓ ರಾಹುಲ್ ಶಿಂಧೆ ಕರೆ ವಿಜಯಪುರ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಶೈಲಿ ಮತ್ತು ಅವರ ತತ್ವ ಸಿದ್ದಾಂತವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಹೇಳಿದರು.ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಜಲನಗರದ ಬುದ್ಧ ವಿಹಾರ ಆವರಣದಲ್ಲಿ ರವಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳ ದೀಕ್ಷಾಭೂಮಿ ಯಾತ್ರಾ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅಂಬೇಡ್ಕರ್ ಅವರು ಮಹಾನ್ ಜ್ಞಾನಿಗಳು. ಅವರ ಆದರ್ಶ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಹಾಗಾಗಿ ನಾವು ಅವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಮಾನವರ ಅವರು ಮಾತನಾಡಿ, ಪ್ರತಿ ವರ್ಷ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂಬೇಡ್ಕರ್ ಅವರ ಅನುಯಾಯಿಗಳಿಗೆ ದೀಕ್ಷಾಭೂಮಿ ಯಾತ್ರೆ ಎಂಬ ಕಾರ್ಯಕ್ರಮದಡಿ ಅಂಬೇಡ್ಕರ್ ಅವರು ದೀಕ್ಷೆ ಪಡೆದ…

Read More

ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವೆಂಕಟೇಶ್ವರ ತರುಣ ಮಂಡಳಿ ವತಿಯಿಂದ ಹಮ್ಮಿಕೊಂಡ ನಾಡದೇವಿ ಉತ್ಸವದಲ್ಲಿ ಎಸ್ ಎಸ್ ಎಲ್ ಸಿ ಹಾಗು ಪಿಯುಸಿಯಲ್ಲಿ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತಿಯಾದ ಶಿಕ್ಷಕರಿಗೆ ಸತ್ಕಾರ ಕಾರ್ಯಕ್ರಮ ನೆರವೇರಿತು.ಕಕಮರಿಯ ಗುರುದೇವಾಶ್ರಮದ ಆತ್ಮಾನಂದ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿ, ಅತ್ಯುತ್ತಮವಾಗಿ ಪ್ರತಿಭೆಯನ್ನು ತೋರ್ಪಡಿಸುವ ವಿದ್ಯಾರ್ಥಿಗಳನ್ನು ಸಮಾಜ ಮೆರವಣಿಗೆ ಮಾಡುತ್ತದೆ. ಅದೇ ಸೊಮಾರಿಗಳಾಗಿ ಎಲ್ಲೋ ಮೂಲೆಯಲ್ಲಿ ಕುಳಿತರೆ ನಿಮ್ಮನ್ನು ಈ ಸಮಾಜ ಗುರುತಿಸುವುದಿಲ್ಲ ಎಂದರು.ಬಾಪು ದೇವನಾಯಕ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಹಾದೇವ ಜಾಧವ, ರಮೇಶ ಕಟೆ, ಸುನೀಲ ಮೋಳೆ ಭಾಗವಹಿಸಿದ್ದರು.ಶ್ರೀಕಾಂತ್ ಕುಂಬಾರ ನಿರೂಪಿಸಿದರು. ಧರಪ್ಪಾ ಸಿದ್ನಾತ್ ಸ್ವಾಗತಿಸಿದರು.ಶಿವಾನಂದ ಚಾವರ ಸಂಜಯಕುಮಾರ ಯಚ್ಚಿ ನಿಂಗರಾಜ ಕಾಳಿ ಉಪಸ್ಥಿತರಿದ್ದರು.

Read More

ಚಡಚಣ: ರೇವತಗಾಂವ ಗ್ರಾಮದಲ್ಲಿ ದಸರಾ ಹಬ್ಬವನ್ನು ೯ ದಿನಗಳ ಕಾಲ ಸಡಗರದಿಂದ ಆಚರಿಸಲಾಯಿತು.ದಸರಾದ ಕೊನೆಯ ದಿನವಾದ ಮಂಗಳವಾರದಂದು ಬೆಳಗ್ಗೆ ದೇವಿಗೆ ಪೂಜೆ ಮಂಗಳಾರತಿ, ನೈವೇದ್ಯ, ವಿಶೇಷ ಅಲಂಕಾರದೊಂದಿಗೆ ನೆರವೇರಿತು. ಅಲ್ಲದೇ ಬೆಳಗಿನ ಜಾವ ಗ್ರಾಮದ ರೇವಣಸಿದ್ಧೇಶ್ವರರ ಪೂಜಾರಿಯಾದ ಸಿದ್ದಪ್ಪ ಸಂಗಪ್ಪ ಹೂಗಾರರವರು ನಸುಕಿನ ಜಾವ ಬನ್ನಿ ಮರಕ್ಕೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ. ಬನ್ನಿಯನ್ನು ತಂದು ದೇವಸ್ಥಾನದಲ್ಲಿ ಇಡಲಾಯಿತು.ನಂತರ ಗ್ರಾಮ ಪಂಚಾಯತಿಯಲ್ಲಿ ಬನ್ನಿ ಹಾಗೂ ಆಯುಧಗಳ ಪೂಜೆಯನ್ನು ಅಣ್ಣಾರಾಯ ಸಿದ್ದನಗೌಡ ಪಾಟೀಲರವರು ನೆರವೇರಿಸಿ ವಾಲಿಕಾರರವರಿಗೆ ಕಾಣಿಕೆಯನ್ನು ಸಲ್ಲಿಸಿದರು.ಸಂಜೆ ೫ ಗಂಟೆಗೆ ಶ್ರೀ ರೇವಣಸಿದ್ಧೇಶ್ವರ ದೇವಾಸ್ಥಾನದಿಂದ ಬನ್ನಿಯನ್ನು ಹಾಗೂ ಪಲ್ಲಕ್ಕಿಯನ್ನು ವಾಲೀಕಾರರ ರಕ್ಷಣೆಯಲ್ಲಿ ಗ್ರಾಮದ ಪಾದಗಟ್ಟಿ ಹತ್ತಿರ ತಗೆದುಕೊಂಡು ಹೋಗಲಾಯಿತು. ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರೇಲ್ಲರೂ ಹೊಸ ಉಡುಪುಗಳನ್ನು ತೊಟ್ಟು ಬನ್ನಿ ಮುರಿಯಲು ಸೇರಿದ್ದರು. ನಂತರ ಬನ್ನಿಗೆ ಪೂಜೆಯನ್ನು ಸಲ್ಲಿಸಿದ ನಂತರ ಗ್ರಾಮಸ್ಥರೇಲ್ಲರು ಪೂಜೆ ಬನ್ನಿಯನ್ನು ಪಡೆಯಲು ಮುಗಿಬಿದ್ದಿದ್ದರು.ಹೀಗೆ ಪಡೆದ ಬನ್ನಿಯನ್ನು ಗ್ರಾಮಸ್ಥರು ಗ್ರಾಮದ ದೇವರುಗಳಿಗೆ ಬನ್ನಿಯನ್ನು ಮುಡಿಸಿ ದರ್ಶನ ಪಡೆದರು. ಮನೆಯ ಮುಂದೆ ಆರತಿಯನ್ನು…

Read More

ವಿಜಯಪುರ: ನಗರದ ವೆಂಕಟೇಶ ನಗರ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಜರುಗಿತು.ಶ್ರೀ ಮಹಾಲಕ್ಷ್ಮಿ ಕ್ಷೇಮಾಭಿವೃದ್ದಿ ಸಂಘ ವಿಜಯಪುರ ಮತ್ತು ವೆಂಕಟೇಶ ನಗರ ಬಡಾವಣೆಯ ಹಾಗೂ ಸುತ್ತಮುತ್ತಲಿನ ಸದ್ಭಕ್ತರಿಂದ ಹಮ್ಮಿಕೊಂಡ ಜಾತ್ರೆಯಲ್ಲಿ ಬೆಳಿಗ್ಗೆ ಪೂಜೆ ನಂತರ ಲಕ್ಷ್ಮೀದೇವಿಯ ಪಲ್ಲಕ್ಕಿ ಬಡಾಣೆಯ ಓಣಿ, ಕುಂಭ ಮೇಳದಲ್ಲಿ ಹೆಚ್ಚಿನ ಸುಮಂಗಲೆಯರು ಭಾಗವಹಿಸಿದ್ದರು.ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಶ್ರೀ ವೀರಭದ್ರ ಪುರವಂತರು ಹಾಗೂ ಗೊಂಬೆ ಕುಣಿತ ಇತರೆ ಕಲಾ ತಂಡಗಳೊಂದಿಗೆ ಪಲ್ಲಕ್ಕಿ ಶ್ರೀ ಮುರಗಮ್ಮ ದೇವಸ್ಥಾನ, ಶ್ರೀ ಲಕ್ಕಮ್ಮ ದೇವಸ್ಥಾನದ ಮೂಲಕ ಮರಳಿ ಅದೇ ಮಾರ್ಗದಿಂದ ಲಕ್ಷ್ಮೀ ದೇವಸ್ಥಾನದವರೆಗೆ ಸಂಚರಿಸಿತು.ಜಾತ್ರಾ ಮಹೋತ್ಸವಕ್ಕೆ ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ದಶರಥ ನಾವಿ, ಸಂಗು ಕನ್ನಲ್, ಅಶೋಕ ಶಿವಶರಣ, ವಿರೂಪಾಕ್ಷ ಕತ್ನಳ್ಳಿ, ಶ್ರೀಮಂತ ಕವಲಗಿ, ಶೋಭಾ ಕೊಣ್ಣೂರ, ಭಾರತಿ ನಾವಿ, ಶೈಲಾ ವಾಲಿಕಾರ, ಬಾಗುಬಾಯಿ ರಾಠೋಡ, ಸುಮಿತ್ರಾ ಶಿವಶರಣರ, ಶಾರದಾ ಶಿವಶರಣರ, ಬಾಬು ಬಾಗೇವಾಡಿ, ನಾಗಮ್ಮ ವಾಲಿಕಾರ, ಬಸಮ್ಮ…

Read More

ಚೆನ್ನಮ್ಮ ಜಯಂತಿಗೆ ಬಾರದ ಅಧಿಕಾರಿಗಳು | 38 ಇಲಾಖೆಯ ಅಧಿಕಾರಿಗಳು | ಸಾರ್ವಜನಿಕರ ಆಕ್ರೋಶ ಇಂಡಿ: ಅ.೨೩ ರಂದು ತಾಲೂಕಾ ಆಡಳಿತದಿಂದ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆಯುವ ಕಿತ್ತೂರ ರಾಣಿ ಚೆನ್ನ,ಮ್ಮನವರ ಜಯಂತಿಗೆ ತಾಲೂಕಿನ ೩೮ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾದ ನಿಮಿತ್ಯ ಪಂಚಮಸಾಲಿ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ತಾಲೂಕು ಆಡಳಿತ ಸೌಧದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.ಸಮಾಜ ಕಲ್ಯಾಣ ಇಲಾಖೆಯಿಂದ ಬಿ.ಜೆ.ಇಂಡಿ ಮತ್ತು ಪೋಲಿಸ ಇಲಾಖೆಯಿಂದ ಎಂ.ಎಂ.ಡಪ್ಪಿನ ಮಾತ್ರ ಹಾಜರಿದ್ದರು. ಕಂದಾಯ ಉಪವಿಬಾಗಾಧಿಕಾರಿಗಳು ರಜೆಯ ಮೇಲಿರುವ ನಿಮಿತ್ಯ ತಹಸೀಲ್ದಾರರು ಬೆಳಗ್ಗೆ ೧೦ ಗಂಟೆಗೆ ಜಯಂತಿ ಆಚರಿಸಲು ಈ ಮೊದಲು ಪೂರ್ವಭಾವಿ ಸಭೆಯಲ್ಲಿ ತಿಳಿಸಲಾಗಿತ್ತು.ಅದಲ್ಲದೆ ತಹಸೀಲ್ದಾರರು ಕರೆದ ಪೂರ್ವಭಾವಿ ಸಭೆಗೂ ಯಾವೊಬ್ಬ ಅಧಿಕಾರಿಗಳು ಬಂದಿರಲಿಲ್ಲ. ಮತ್ತು ತಾಲೂಕಿನಲ್ಲಿ ಬರಗಾಲ ಇರುವದರಿಂದ  ಜಯಂತಿಯನ್ನು ಸರಳವಾಗಿ ಆಚರಿಸಲು ಚರ್ಚಿಸಲಾಗಿತ್ತು. ಮತ್ತು ತಹಸೀಲ್ದಾರರು ಎಲ್ಲ ಅಧಿಕಾರಿಗಳು ಬರುವಂತೆ ತಿಳಿಸುವದಾಗಿ ಸಮಜಾಯಿಸಿ ಉತ್ತರ ನೀಡಿದ್ದರು. ಹೀಗಾಗಿ ಸೋಮವಾರ ಬೆಳಗ್ಗೆ ೧೦ ಗಂಟೆಯಾದರೂ ತಹಸೀಲ್ದಾರ ಸೇರಿದಂತೆ…

Read More

ದೇವರಹಿಪ್ಪರಗಿ: ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸರಬರಾಜು ಟ್ರಾನ್ಸ್ಫಾರ್ಮರ್‌ಗೆ ಪೂಜೆ ಸಲ್ಲಿಸುವುದರ ಮೂಲ ಆಯುಧ ಪೂಜೆಯನ್ನು ವಿಶೇಷವಾಗಿ ಆಚರಿಸಿದರು.ಪಟ್ಟಣದ ಹೆಸ್ಕಾಂ ಸಿಬ್ಬಂದಿ ಮಹಾನವಮಿಯ ಆಯುಧಪೂಜೆ ಅಂಗವಾಗಿ ಸೋಮವಾರ ಇಂಡಿ ರಸ್ತೆಯಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್‌ಗೆ ಕುಂಬಳಕಾಯಿ ಒಡೆದು, ಪೂಜೆ ಸಲ್ಲಿಸುವುದರ ಜೊತೆಗೆ ಪ್ರಸಾದ ವಿತರಿಸಿದರು.ಶಾಖಾಧಿಕಾರಿ ಉಮೇಶ ಪಟ್ಟಣ, ಮೇಲ್ವಿಚಾರಕ ಶಿವಾನಂದ ಕೊಡಗೆ, ದೇವೇಂದ್ರ ಯಾಳಗಿ, ಪ್ರದೀಪ ಹಿರೇಮಠ, ಶ್ರೀಶೈಲ ನಾವಿ, ಈರಯ್ಯಾ ಹಿರೇಮಠ, ಹರೀಶ ಬಿರಾದಾರ, ಮೃತ್ಯುಂಜಯ ಕಲ್ಯಾಣಮಠ, ಸದಾಶಿವ ನಿಂಗಪ್ಪ, ಪ್ರಭುಗೌಡ ಬಗಲಿ, ಸುರೇಶ ನಡಗೇರಿ, ಮಹೇಶ ವಗ್ಗರ, ಸಲೀಂ ಪಟೇಲ ಉಣ್ಣಿಭಾವಿ, ಮಲ್ಲನಗೌಡ ಬಿರಾದಾರ, ಶಂಕರ ಅವುಟಿ. ಎಸ್.ಎಸ್.ಬಜಂತ್ರಿ ಸೇರಿದಂತೆ ಇತರರು ಇದ್ದರು.

Read More

ದೇವರಹಿಪ್ಪರಗಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ದೇವರಹಿಪ್ಪರಗಿ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರಿಂದ ಪಾದಯಾತ್ರೆ ಹಾಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಅ.೨೫ರಂದು ದೇವರಹಿಪ್ಪರಗಿ ತಾಲ್ಲೂಕಿನ ಕೋರವಾರ ಗ್ರಾಮದ ಹನುಮಾನ ದೇವಸ್ಥಾನದಿಂದ ಆರಂಭಗೊಳ್ಳುವ ಬೃಹತ್ ಪಾದಯಾತ್ರೆ ಜಾಲವಾದ ಮಣೂರ, ದೇವೂರ ಗ್ರಾಮಗಳ ಮೂಲಕ ತೆರಳಿ ದೇವರಹಿಪ್ಪರಗಿ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಸಭೆ ಸೇರಿ ಪ್ರತಿಭಟನೆ ನಡೆಸಲಿದೆ.ರೈತರ ಸಂಪೂರ್ಣ ಸಾಲಮನ್ನಾ, ಬರಗಾಲ ನಿಮಿತ್ಯ ತುರ್ತು ಪರಿಹಾರ ಘೋಷಣೆ, ಕಬ್ಬಿಗೆ ಬೆಂಬಲ ಬೆಲೆ, ಬೆಳೆ ಪರಿಹಾರ ಹಾಗೂ ಬೆಳೆವಿಮೆ ಪರಿಹಾರ, ಗೋಶಾಲೆ ಆರಂಭ, ವಿದ್ಯುತ್ ಪೂರೈಕೆ ಸೇರಿದಂತೆ ರೈತರ ಒಟ್ಟು ೧೧ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾರಣ ತಾಲ್ಲೂಕಿನ ಎಲ್ಲಾ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈರಪ್ಪ ಕುಳೇಕುಮಟಗಿ ಹಾಗೂ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ದೇವರಹಿಪ್ಪರಗಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಮಹನೀಯರ ಜಯಂತಿಗಳಂದು ಎಲ್ಲ ಸಮುದಾಯದವರು ಭಾಗವಹಿಸುವಂತಾಗಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಹೇಳಿದರು.ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಜರುಗಿದ ರಾಣಿ ಚನ್ನಮ್ಮಳ ೨೪೫ ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದು ಎಲ್ಲ ಸ್ವಾತಂತ್ರ್ಯ ಹೋರಾಟಗಾರರು, ಶರಣರು, ಮಹನೀಯರನ್ನು ಒಂದೊಂದು ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು ಖೇದಕರ. ಇಂಥ ರೂಢಿ ಬದಲಾಗಿ ಎಲ್ಲರೂ ಭಾಗವಹಿಸುವಂತಾಗಬೇಕು ಎಂದರು.ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ಪಾಟೀಲ ಹಾಗೂ ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಗುರುರಾಜ್ ಆಕಳವಾಡಿ ಮಾತನಾಡಿ, ಮೈಸೂರಿನ ರಾಜವಂಶಸ್ಥರಿಗೆ ಸರ್ಕಾರದಿಂದ ದೊರೆಯುವ ಗೌರವ ಹಾಗೂ ಸಮ್ಮಾನ ಕಿತ್ತೂರು ಚನ್ನಮ್ಮ ವಂಶಸ್ಥರಿಗೂ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ತಹಶೀಲ್ದಾರ ಪ್ರಕಾಶ ಸಿಂದಗಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಕಾಶೀನಾಥ ಬಜಂತ್ರಿ, ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಕುಮಾರಸ್ವಾಮಿ ಹಿರೇಮಠ, ಬಂಡೆಪ್ಪ ಬಿರಾದಾರ(ದಿಂಡವಾರ),…

Read More

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೋಮವಾರ ಆಯುಧ ಪೂಜೆ, ಮಂಗಳವಾರ ವಿಜಯದಶಮಿ ಹಬ್ಬವನ್ನು ಜನರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.ಆಯುಧ ಪೂಜೆಗೆ ಬೇಕಾದ ಚೆಂಡು ಹೂ ಸೇರಿದಂತೆ ವಿವಿಧ ಹೂ, ಬಾಳೆಗಿಡ,ಕಬ್ಬಿನ ಜಲ್ಲೆ, ಹಣ್ಣು-ಹಂಪಲ ಸೋಮವಾರ ಜನರು ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತ್ತು. ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಹೆಚ್ಚು ಕಂಡುಬಂದಿತ್ತು. ಪಟ್ಟಣದಲ್ಲಿ ಮಂಗಳವಾರ ವಿಜಯದಶಮಿ ಹಬ್ಬದಂಗವಾಗಿ ಪೂಜೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಿದ ಜನರು ಮನೆಯಲ್ಲಿ ತಮ್ಮ ದೇವರಿಗೆ ವಿಶೇಷ ಪೂಜೆಯನ್ನು ಕುಟುಂಬ ಸದಸ್ಯರೊಂದಿಗೆ ನೆರವೇರಿಸಿದರು. ಕೆಲವರು ವಿವಿಧ ದೇವಸ್ಥಾನಗಳಿಗೆ ಹಾಗೂ ಬನ್ನಿ ಗಿಡಗಳಿಗೆ ಪೂಜೆ ಸಲ್ಲಿಸಿ ಧನ್ಯತಾ ಭಾವ ಅನುಭವಿಸಿದರು.ಕಳೆದ ಒಂಬತ್ತು ದಿನಗಳಿಂದ ನಸುಕಿನ ಜಾವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುತ್ತಾ ಬಂದಿದ್ದ ಮುತ್ತೈದೆಯರು ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ತಮ್ಮ ಪೂಜೆಯನ್ನು ಕೊನೆಗೊಳಿಸಿ ದೇವಿಗೆ ಪೂಜೆ ಸಲ್ಲಿಸಿದರು. ಸಂಜೆ ಕುಟುಂಬ ಸದಸ್ಯರೊಂದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದ ನಂತರ ತಮ್ಮ ಸಂಬಂಧಿಕರೊಂದಿಗೆ, ಮಿತ್ರಬಾಂಧವರೊಂದಿಗೆ, ಆತ್ಮೀಯರೊಂದಿಗೆ ಪರಸ್ಪರ ಬನ್ನಿ ವಿನಿಮಯ…

Read More