ದೇವರಹಿಪ್ಪರಗಿ: ಟೈರ‍್ಸ್ ವೃತ್ತಿನಿರತರ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಅಥವಾ ಮಂಡಳಿ ಸ್ಥಾಪಿಸುವಂತೆ ಮುಂಬರುವ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಸರ್ಕಾರಕ್ಕೆ ಒತ್ತಾಯಿಸುವಂತೆ ಆಗ್ರಹಿಸಿ ತಾಲ್ಲೂಕು ಟೈರ‍್ಸ್ ಸಮೀತಿಯಿಂದ ಶಾಸಕ ರಾಜುಗೌಡ ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣ ಹಾಗೂ ತಾಲ್ಲೂಕು ಟೈರ‍್ಸ್ ಸಮೀತಿಯ ಪದಾಧಿಕಾರಿಗಳು ಬುಧವಾರ ಶಾಸಕರನ್ನು ಕಂಡು ತಮ್ಮ ಬೇಡಿಕೆಯ ಕುರಿತು ಗಮನಸೆಳೆದರು. ಈ ಸಂದರ್ಭದಲ್ಲಿ ಸಮೀತಿಯ ಅಧ್ಯಕ್ಷ ಪ್ರಕಾಶ ಚೌಗಲೆ ಮಾತನಾಡಿ, ರಾಜ್ಯಾದ್ಯಂತ ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಪುರುಷ ಹಾಗೂ ಮಹಿಳೆಯರು ಹೊಲಿಗೆ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಈವರೆಗೆ ಇವರಿಗೆ ಯಾವುದೇ ಸಾಮಾಜಿಕ ಜೀವನ ಭದ್ರತೆ ಇರುವುದಿಲ್ಲ. ಸಮಾಜಕ್ಕೆ ಅಗತ್ಯವಾದ ಸೇವೆ ಸಲ್ಲಿಸುತ್ತಿದ್ದರೂ ಇವರ ಮಕ್ಕಳ ವಿದ್ಯಾಭ್ಯಾಸ, ವೃದ್ಧಾಪ್ಯದಲ್ಲಿ ಇವರ ಔಷದೋಪಚಾರ, ಬದುಕಿಗೆ ಭದ್ರತೆಯಿಲ್ಲದೆ ಅಸಹಾಯಕ ಸ್ಥಿತಿ ಎದುರಿಸುವಂತಾಗಿದೆ. ಇಂತಹ ಲಕ್ಷಾಂತರ ಅಸಂಘಟಿತ ಹೊಲಿಗೆ ವೃತ್ತಿಯವರಿಗಾಗಿ ಸರ್ಕಾರ ಟೈರ‍್ಸ್ ಕ್ಷೇಮನಿಧಿ ಮಂಡಳಿ ಸ್ಥಾಪಿಸಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡುವುದರ ಮೂಲಕ ರಾಜ್ಯದ ಎಲ್ಲಾ ಟೈರ‍್ಸ್ ಅಭಿವೃದ್ಧಿಗಾಗಿ ಮುಂಬರುವ ಬಜೆಟ್‌ನಲ್ಲಿ ೪೦೦ ಕೋಟಿ ಹಣ ಮೀಸಲಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವಂತೆ ಆಗ್ರಹಿಸಿದರು. ನಂತರ ಶಾಸಕರಿಗೆ ಮನವಿ ಸಲ್ಲಿಸಿದರು.
ಉಪಾಧ್ಯಕ್ಷ ಲಾಲಸಾಬ್ ನೆಗಿನಾಳ, ಕಾರ್ಯದರ್ಶಿ ನೂರ್‌ಅಹ್ಮದ್ ಕನ್ನೋಳ್ಳಿ, ಖಜಾಂಚಿ ಮಹಮ್ಮದ್ ತಾಂಬೋಳಿ, ಸದಸ್ಯರಾದ ಅಶ್ಫಾಕ್ ತಾಂಬೋಳಿ, ವಿಲಾಸ್ ಹೂಟಗಾರ, ಶಬ್ಬೀರ್ ಲಾಳಸಂಗಿ, ಹಾಜೀ ಮುಲ್ಲಾ, ನೂರ್‌ಅಹ್ಮದ್ ನದಾಫ್, ಜಾವೀದ್ ದಿಡ್ಡಿ, ರೆಹಮಾನ ಇಟಗಿ, ಬಾಷಾಸಾಬ್ ಮಕಾಂದಾರ್ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

