ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲೀಗ ಬೆಳಕು
ಮುದ್ದೇಬಿಹಾಳ: ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ವಿದ್ಯುತ್ ದೀಪಗಳು ಉರಿಯದೇ ಸಂಜೆಯಾದರೆ ಸಾಕು ಕತ್ತಲೆ ಆವರಿಸಿ ಪ್ರಯಾಣಿಕರು ಭಯದಿಂದ ತಿರುಗಾಡುವ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಇನ್ನೀತರ ಚಟುವಟಿಕೆಗಳಿಗೆ ದಾರಿ ಮಾಡಿ ಕೊಟ್ಟಿತ್ತು. ಈ ಬಗ್ಗೆ ಗುರುವಾರದ ಉದಯರಶ್ಮಿ ಪತ್ರಿಕೆಯಲ್ಲಿ “ಅಂಧಕಾರದಲ್ಲಿ ಮುದ್ದೇಬಿಹಾಳ ಬಸ್ ನಿಲ್ದಾಣ” ಶೀರ್ಷಿಕೆಯಡಿ ಸುದ್ದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ನಿಲ್ದಾಣದಲ್ಲಿ ಬಂದ್ ಆದ ವಿದ್ಯುತ್ ದೀಪಗಳನ್ನು ದುರಸ್ತಿಗೊಳಿಸಿದ್ದಾರೆ. ವಿದ್ಯುತ್ ದೀಪಗಳು ದುರಸ್ತಿಗೊಳಿಸುತ್ತಿದ್ದಂತೆಯೇ ಉದಯರಶ್ಮಿ ನ್ಯೂಸ್ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

