Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಎಳೆಯರು ನಾವು ಗೆಳೆಯರು ಸಂಘದಿಂದ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮ ಮುದ್ದೇಬಿಹಾಳ: ಕಷ್ಟದ ದಿನಗಳನ್ನು ಯಾರೂ ಮರೆಯಬಾರದು. ಪಾಲಕರು ಎಷ್ಟೇ ಅನುಕೂಲಸ್ಥರಿದ್ದರೂ ನಿಮ್ಮ ಮಕ್ಕಳಿಗೆ ನಿಮ್ಮ ಮನೆತನ ನೋವು, ಹಸಿವಿನ ಜೊತೆಗೆ ಬಡತನದ ಪರಿಚಯ ಮಾಡಿ, ಅಂದಾಗ ಮಾತ್ರ ನಿಮ್ಮ ಮಕ್ಕಳು ಹಾಳಾಗದೇ ಜಗತ್ತನ್ನೇ ಬೆಳಗುವ, ರಕ್ಷಣೆ ಮಾಡುವ ಆದರ್ಶ ವ್ಯಕ್ತಿಗಳಾಗುತ್ತಾರೆ ಎಂದು ಶಿರಹಟ್ಟಿ ಭಾವೈಕ್ಯತಾ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.ಪಟ್ಟಣದ ವಿಬಿಸಿ ಹೈಸ್ಕೂಲ ಮೈದಾನದಲ್ಲಿ ಸನ್ ೧೯೯೩ ನೇ ಸಾಲಿನಲ್ಲಿ ಪಟ್ಟಣದ ಕೆಬಿಎಂಪಿಎಸ್, ವಿಬಿಸಿ, ಮತ್ತು ಎಸ್‌ಎಸ್‌ಎಂ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಕಲಿತ ವಿದ್ಯಾರ್ಥಿಗಳ ಎಳೆಯರು ನಾವು ಗೆಳೆಯರು ಸಂಘದ ವತಿಯಿಂದ ರವಿವಾರ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಹಿಂದಿನ ಕಾಲದಲ್ಲಿ ಮಕ್ಕಳಿಗೆ ಹಸಿವಿನ ಪರಿಚಯ ವಾಗುತ್ತಿತ್ತು. ತಂದೆ ತಾಯಿಗಳು ಇದ್ದ ಬಟ್ಟೆ ಹರೆಯುವ ತನಕ ಮತ್ತೊಂದು ಬಟ್ಟೆಯನ್ನು ಕೊಡಿಸುತ್ತಿರಲಿಲ್ಲ. ಕಾಲಲ್ಲಿ ಚಪ್ಪಲಿ ಇರುತ್ತಿರಲಿಲ್ಲ. ದೂರದ ಶಾಲೆಗೆ ನಡೆದುಕೊಂಡೇ ಹೋಗಿ ಬರುತ್ತಿದ್ದರು. ಹಾಗಾಗಿ ಅವರಲ್ಲಿ ದೇಹಕ್ಕೆ…
ವಿಜಯಪುರ: ಜಿಲ್ಲಾಡಳಿತ ವಿಜಯಪುರ ವತಿಯಿಂದ ನವೆಂಬರ್ ೧೧ ರಂದು ವೀರರಾಣಿ ಒನಕೆ ಒಬವ್ವ ಜಯಂತಿ ಆಚರಿಸುವ ಕುರಿತು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ : ೦೩-೧೧-೨೦೨೩ ರಂದು ಸಂಜೆ ೫ ಗಂಟೆಗೆ ಪೂರ್ವಸಿದ್ಧತಾ ಸಭೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರ: ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಗಳನ್ನು ಪ್ರತಿಯೊಬ್ಬ ನಾಗರಿಕರಿಗೆ ತಲುಪಿಸಲು ಕೇಂದ್ರ ಸರ್ಕಾರವು ೨೦೨೩ರ ಅಕ್ಟೋಬರ್ ೦೧ರಿಂದ ಡಿಸೆಂಬರ್ ೩೧ರವರೆಗೆ ಜನ ಸುರಕ್ಷಾ ಅಭಿಯಾನ ಹಮ್ಮಿಕೊಂಡಿದೆ.ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ೧೮ ರಿಂದ ೭೦ ವರ್ಷ ವಯಸ್ಸಿನವರು ವರ್ಷಕ್ಕೆ ೨೦ ರೂ. ಪಾವತಿಸುವ ಮೂಲಕ ಎರಡು ಲಕ್ಷದ ಅಪಘಾತ ವಿಮೆ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ ೧೮ ರಿಂದ ೫೦ ವರ್ಷ ವಯಸ್ಸಿನವರು ವರ್ಷಕ್ಕೆ ೪೩೬ ರೂ. ಪಾವತಿಸುವ ಮೂಲಕ ಎರಡು ಲಕ್ಷ ಜೀವವಿಮೆ ಪಡೆದುಕೊಳ್ಳಬಹುದಾಗಿದ್ದು, ಸಾರ್ವಜನಿಕರು ತಮ್ಮ ಉಳಿತಾಯ ಖಾತೆ ಇರುವ ಬ್ಯಾಂಕ್‌ನ್ನು ಸಂಪರ್ಕಿಸಿ ಈ ವಿಮೆಗಳಿಗೆ ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಅದರಂತೆ ಅಕ್ಟೋಬರ್ ೦೧ ರಿಂದ ಡಿಸೆಂಬರ್ ೩೧ರವರೆಗೆ ಘರ ಘರ ಕೆಸಿಸಿ ಅಭಿಯಾನ ಸಹ ಹಮ್ಮಿಕೊಂಡಿದ್ದು, ಯಾವುದೇ ಬ್ಯಾಂಕ್ ಅಥವಾ ಸೊಸೈಟಿಯಿಂದ ಬೆಳೆಸಾಲ ಪಡೆಯದಿರುವ ರೈತರು ಈ ಅಭಿಯಾನದಡಿ ತಮ್ಮ ಉಳಿತಾಯ ಖಾತೆ ಇರುವ ಅಥವಾ ತಮ್ಮ…
ವಿಜಯಪುರ: ಜಿಲ್ಲಾಡಳಿತ, ವಿಜಯಪುರ ವತಿಯಿಂದ ನವೆಂಬರ್ ೦೧ ರಂದು ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೭ ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದವರೆಗೆ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಹಾಗೂ ಬೆಳಿಗ್ಗೆ ೯ ಗಂಟೆಗೆ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಧ್ವಜಾರೋಹಣ ನೆರವೇರಿಸಲಿದ್ದಾರೆ.ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್.ಪಾಟೀಲ(ಯತ್ನಾಳ) ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜವಳಿ ಕಬ್ಬು, ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್.ಪಾಟೀಲ, ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ಸಂಸದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ, ಹಣಮಂತ ಆರ್.ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಪಿ.ಎಚ್.ಪೂಜಾರ, ಅಪ್ಪಾಜಿ ಸಿ.ಎಸ್.ನಾಡಗೌಡ, ವಿಠ್ಠಲ ಕಟಕದೊಂಡ, ಭೀಮನಗೌಡ ಬಸನಗೌಡ ಪಾಟೀಲ, ಅಶೋಕ ಮನಗೂಳಿ ಸೇರಿದಂತೆ…
ಇಂಡಿ ಮತಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ-ಉದ್ಘಾಟನೆ ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿಲ್ಲ ಇಡೀ ಮಾನವ ಕುಲಕ್ಕೆ ಸೀಮಿತವಾದ ಸಂವಿಧಾನ ಸಾಮಾಜಿಕ, ರಾಜಕೀಯ ಆರ್ಥಿಕ, ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಸೋಮವಾರ ಜಿಲ್ಲೆಯ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.ವಿಶ್ವಕಂಡ ಅಪರೂಪದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮಾಡಿದೆ. ಪ್ರತಿಮೆ ಅನಾವರಣಕ್ಕೆ ಮಾತ್ರ ಸೀಮೀತವಾಗದೇ ಅವರ ಹೋರಾಟ, ತ್ಯಾಗ ಪ್ರತಿದಿನ ಸ್ಮರಣೆಯಾಗಬೇಕು. ಅವರು ನೀಡಿದ ಸಂವಿಧಾನದ ಕೊಡುಗೆ ಅಪಾರವಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ ತ್ಯಾಗ ನಮಗೆ ಸ್ಪೂರ್ತಿದಾಯಕ ಹಾಗೂ ಅವರ ಆದರ್ಶಗಳು ನಮಗೆ ದಾರಿದೀಪವಾಗಿವೆ ಎಂದು ಹೇಳಿದರು.ಕಳೆದ ಬಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದ ಸಂದರ್ಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ನೇತೃತ್ವದಲ್ಲಿ…
ಆಲಮಟ್ಟಿ: ಸಮೀಪದ ಚಿಮ್ಮಲಗಿ ಭಾಗ ೧ (ಬಿ)ಪುನರ್ವಸತಿ ಕೇಂದ್ರದಲ್ಲಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪ್ರಸಕ್ತ ಸಾಲಿನ ಮೊದಲನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು.ಮಕ್ಕಳ ದಾಖಲಾತಿ, ಹಾಜರಾತಿ, ವೈಯಕ್ತಿಕ ಶೈಕ್ಷಣಿಕ ಪ್ರಗತಿ, ಕ್ರೋಡೀಕರಿಸಿದ ಪ್ರಗತಿ ಪತ್ರ, ಸಹಪಠ್ಯ ಸಾಂಸ್ಕೃತಿಕ ಚಟುವಟಿಕೆಗಳ ಮಾಹಿತಿ, ಶಾಲಾಭಿವೃಧ್ಧಿ, ಪಠ್ಯಕ್ರಮ ಆಧಾರಿಸಿ ಅನುಸರಿಸಿದ ಕ್ರಮ, ಶಾಲಾ ಪರಿಸರ ಸೇರಿದಂತೆ ಇತ್ಯಾದಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ವಿಷಯದ ಅಂಶಗಳನ್ನು ಪರಿಶೀಲಿಸಲಾಯಿತು. ಕಾರ್ಯಕ್ರಮದ ಮಾರ್ಗದರ್ಶಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಜಿ.ಆರ್.ಜಾಧವ ಸಮುದಾಯದತ್ತ ಶಾಲಾ ಅಂಶಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಬೆರೆತು ಓದು, ಬರಹದ ಆಸಕ್ತಿ ಬಾಲ್ಯಾವಸ್ಥೆಯಲ್ಲಿಯೇ ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಆಧುನಿಕತೆಯ ದಿನಮಾನದಲ್ಲಿಂದು ಸಾಮಾನ್ಯ ಜ್ಞಾನ ಅತ್ಯವಶ್ಯಕ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಶಾಲಾ ಮುಖ್ಯಗುರು ಎಸ್.ಎಂ.ಮಾದರ ಮಾತನಾಡಿ, ಮಕ್ಕಳಿಗೆ ಕಲಿಕಾಭಿರುಚಿ ಮೂಡಿಸಲು ಶಾಲಾ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿ ಆದ್ಯತೆ ನೀಡಲಾಗಿದೆ. ಶಾಲಾ ಕೊಠಡಿಗಳು ಸುಂದರವಾಗಿ ಚಿತ್ರಪಟಗಳಿಂದ ಕೂಡಿವೆ. ಮಕ್ಕಳಿಗೆ ಓದಿನ, ಅದ್ಯಯನದ…
ದೇವರಹಿಪ್ಪರಗಿ: ಸತತ ನಾಲ್ಕು ದಿನಗಳಿಂದ ನಡೆದ ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆ ನಾಡಿನ ಮೂಲೆಗಳಿಂದ ಬಂದ ಸಹಸ್ರಾರು ಭಕ್ತರ ಮದ್ಯೆ ಭಾನುವಾರ ಸಂಪನ್ನವಾಯಿತು.ಪಟ್ಟಣದ ಹೊರವಲಯದ ಮಲ್ಲಯ್ಯನ ದೇವಸ್ಥಾನಕ್ಕೆ ಕಳೆದ ಗುರುವಾರದಂದು ತೆರಳಿದ್ದ ರಾವುತರಾಯನನ್ನು ತೆರೆದ ಬಂಡಿಯಲ್ಲಿ ಸಹಸ್ರಾರು ಭಕ್ತಾಧಿಗಳ ಜಯಘೋಷದ ಮದ್ಯೆ ಮೂಲ ದೇವಸ್ಥಾನಕ್ಕೆ ಕರೆ ತರಲಾಯಿತು. ನಾಡಿನ ಹಾಗು ಮಹಾರಾಷ್ಟç, ಆಂಧ್ರ, ಗೋವಾ ರಾಜ್ಯಗಳಿಂದ ಆಗಮಿಸಿದ ಭಕ್ತ ಸಮೂಹ ವಾಸ್ತವ್ಯ ಹೂಡಿ ವಿವಿಧ ಪೂಜಾ ಕರ‍್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು. ಬೆಳಿಗ್ಗೆ ೭.೦೦ ಗಂಟೆಗೆ ಪ್ರಾರಂಭವಾದ ಭವ್ಯ ಬಂಡಿ ಮೆರವಣಿಗೆಯಲ್ಲಿ ವಿರಾಜಮಾನನಾಗಿ ಕಂಗೊಳಿಸಿದ ರಾವುತರಾಯನನ್ನು ಭಕ್ತಾಧಿಗಳು ಭಕ್ತಿಯೊಂದಿಗೆ ಭಂಡಾರ ಎಸೆದು ಏಳುಕೋಟಿ ಏಳುಕೋಟಿ ಏಳುಕೋಟಿ ಗೇ ಎಂಬ ಜಯಕಾರದೊಂದಿಗೆ ಭಕ್ತಿ ಸಮರ್ಪಿಸಿದರು. ಜಾತ್ರೆಯಲ್ಲಿ ವಿಶೇಷವಾಗಿ ಪುರುಷ ವಗ್ಗೆಗಳು ಹೆಗಲ ಮೇಲೆ ಕಂಬಳಿ ಹೊತ್ತು, ಕೈಯಲ್ಲಿ ತ್ರಿಶೂಲ ಹಿಡಿದು ಹಣೆ ತುಂಬ ಭಂಡಾರ ಬಡಿದುಕೊಂಡು ರಾವುತರಾಯನ ಬಂಡಿ ಮುಂದೆ ಕುಣಿಯುತ್ತ ಜನರ ಗಮನ ಸೆಳೆದರು. ಪಟ್ಟಣದ ಜನರು ನಾಲ್ಕು ದಿನಗಳವರೆಗೆ ತಮ್ಮ ಕೆಲಸ ಕರ‍್ಯಗಳನ್ನು…
ಕ್ರಮಕ್ಕೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯಿಂದ ತಹಸೀಲ್ದಾರರಿಗೆ ಮನವಿ ದೇವರಹಿಪ್ಪರಗಿ: ಪಟ್ಟಣದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣವಾಗುತ್ತಿರುವ ಮನೆಗಳಿಗೆ ಕಡಿಮೆ ಅನುದಾನ ನೀಡಿ ಬಡಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು, ಅಧಿಕಾರಿಗಳು ಸೇರಿ ಬಡಜನರಿಗೆ ಮೋಸಮಾಡುತ್ತಿದ್ದಾರೆ ಸಂಘಟನೆ ಮೂಲಕ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದಲ್ಲಿ ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ರೆಹಮಾನ ಕಣಕಾಲ, ಮನವಿ ಸಲ್ಲಿಸಿ ಮಾತನಾಡಿ, ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ೬.೮೬ ಲಕ್ಷ ಹಣ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದಿಂದ ೧.೫೦ ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದಿಂದ ೧.೨೦ ಲಕ್ಷ ರೂಗಳ ಸಬ್ಸಿಡಿಯಿದೆ. ಈ ಯೋಜನೆ ಪಡೆದ ಫಲಾನುಭಾವಿಗಳು ಡಿಡಿ ಮುಖಾಂತರ ಸರ್ಕಾರಕ್ಕೆ ೧.೦೩ ಲಕ್ಷ ರೂ.ಗಳನ್ನು ತುಂಬಬೇಕು ಒಟ್ಟು ಸೇರಿ ೩.೭೩ ಲಕ್ಷರೂ. ಆಗಲಿದೆ. ಇನ್ನುಳಿದ ೩.೧೫ ಲಕ್ಷ ರೂ.ಗಳ ಮೊತ್ತವನ್ನು ಕಾರ್ಮಿಕ ಕಚೇರಿ ಅಥವಾ ವಿವಿಧ ಬ್ಯಾಂಕಗಳ ಸಹಾಯದಿಂದ ಪಡೆದಿರುತ್ತಾರೆ.…
– ಚೇತನ ಶಿವಶಿಂಪಿಮುದ್ದೇಬಿಹಾಳ: ಶ್ರೀಗಳ ದಂಡು, ಪಕ್ಷ ಬೇಧ ಮರೆತು ರಾಜಕೀಯ ನಾಯಕರ ಆಗಮನ. ಹರಿದುಬಂದ ಜನ ಸಮೂಹ. ನಿಲ್ಲಲೂ ಜಾಗವಿಲ್ಲದಷ್ಟು ಅಜ್ಜನ ಸಂಪಾದನೆ. ಕಾಣಿಕೆ ನೀಡಬೇಕು ಅಂದಿದ್ದೇ ತಡ ಲಕ್ಷ ರೂಪಾಯಿಗೂ ವಿಚಾರ ಮಾಡದೇ, ಬಂಗಾರಕ್ಕೂ ಲೆಕ್ಕ ಹಾಕದೇ ನಾ ಮುಂದು ತಾ ಮುಂದು ಅಂತ ಓಡಿ ಬಂದು, ಅಜ್ಜನ ಮೇಲಿರುವ ಪ್ರೀತಿಯನ್ನು ತೋರಲು ಒದಗಿ ಬಂದ ಅವಕಾಶದ ಸದುಪಯೋಗ ಪಡೆದುಕೊಂಡ ಭಕ್ತರು. ಸುಮಾರು ವರ್ಷಗಳಿಂದ ಈ ಭಾಗದಲ್ಲಿ ನಿಸ್ವಾರ್ಥ ಸೇವೆ ನೀಡಿದ ಅಜ್ಜನ ಕಣ್ಣಲ್ಲಿ ಮಾತು ಬಾರದಷ್ಟು ಆನಂದ ಭಾಷ್ಪ. ಇಂತಹದ್ದೊಂದು ಸನ್ನಿವೇಶ ಕಂಡಿದ್ದು ತಾಲೂಕಿನ ಸುಕ್ಷೇತ್ರ ಕುಂಟೋಜಿ ಬಸವೇಶ್ವರ ದೇವಸ್ಥಾನದಲ್ಲಿ.ಅದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಪೂರ್ವಭಾವಿ ಸಭೆ. ಆದರೆ ಅಲ್ಲಿ ನೆರೆದಿದ್ದ ಸಮೂಹ ಮಾತ್ರ ಜಾತಿ, ಮತ, ಬೇಧ, ಪಕ್ಷ ಎನ್ನದೇ ನಿಜವಾಗಿಯೂ ಅಜ್ಜನನ್ನು ಪ್ರೀತಿಸುವ ಜನ.ಸನ್ಯಾಸಿಗಳಿಗೆ ಭಕ್ತರ ಸಮೂಹ ಇರೋದು ಸಹಜ. ಆದರೆ ಈ ಸಂಸ್ಥಾನ ಮಠ ಅತ್ಯಂತ ಚಿಕ್ಕದು.…
ದೇವರಹಿಪ್ಪರಗಿ: ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆಗೆ ವಿವಿಧೆಡೆಗಳಿಂದ ಆಗಮಿಸಿದ ಅಭ್ಯರ್ಥಿಗಳು ಸರಿಯಾದ ಮಾಹಿತಿ, ಸೌಲಭ್ಯಗಳು ಇಲ್ಲದ ಕಾರಣ ಪರದಾಡಿದ ಪ್ರಸಂಗ ಭಾನುವಾರ ಕಂಡು ಬಂದವು.ಪಟ್ಟಣದ ವೆಂಕಟೇಶ್ವರ ಕಾಲೇಜು ಹಾಗೂ ಬಿ.ಎಲ್.ಡಿ,ಇ ಸಂಸ್ಥೆಯ ಕಾಲೇಜಿನಲ್ಲಿ ಭಾನುವಾರ ಜರುಗಿದ ವಿವಿಧ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆಯಲ್ಲಿ ಆಗಮಿಸಿದ ದೂರದ ಅಭ್ಯರ್ಥಿಗಳಿಗೆ ಸರಿಯಾದ ಮಾಹಿತಿ ಹಾಗೂ ಸೌಲಭ್ಯಗಳಿಲ್ಲದೇ ಪರದಾಡುವಂತಾಯಿತು.ಪಟ್ಟಣದಲ್ಲಿ ಭಾನುವಾರ ಜಾತ್ರೆಯಿದ್ದ ಕಾರಣ ಸಿಂದಗಿ, ತಾಳಿಕೋಟೆ, ಬಸವನಬಾಗೇವಾಡಿಗಳಿಂದ ಬರುವ ಬಸ್‌ಗಳು ಬಹಳ ದೂರವೇ ನಿಂತ ಕಾರಣ ಬೇರೆ ಪರ್ಯಾಯ ಸಾರಿಗೆ ವ್ಯವಸ್ಥೆ ಇರದ ಕಾರಣ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ನಡೆದುಕೊಂಡು ವಿಳಂಬವಾಗಿ ಬರುವಂತಾಯಿತು. ಪಟ್ಟಣದಲ್ಲಿ ಅಟೋರಿಕ್ಷಾಗಳಿದ್ದರೂ ಸಹ ಜಾತ್ರೆಯ ಕಾರಣ ಮುಖ್ಯರಸ್ತೆಗಳು ಜನಜಂಗುಳಿಯಿಂದ ಕೂಡಿದ್ದ ಪರಿಣಾಮ ರಿಕ್ಷಾಗಳು ಸಹ ಚಲಿಸಲಿಲ್ಲ. ಇನ್ನೂ ದೂರದ ಅಭ್ಯರ್ಥಿಗಳಿಗೆ ಪಟ್ಟಣದ ಪರೀಕ್ಷಾ ಕೇಂದ್ರಗಳ ಮಾಹಿತಿ ಇರದ ಕಾರಣ ಕೇಳುತ್ತಾ ಅಲೆದಾಡುವಂತಾಯಿತು.ಪರೀಕ್ಷಾ ಕೇಂದ್ರ ತಲುಪಿದ ಅಭ್ಯರ್ಥಿಗಳಿಗೆ ಪ್ರವೇಶಪತ್ರದ ನಕಲುಪ್ರತಿ ಕಡ್ಡಾಯವಾಗಿ ಇರಬೇಕು ಎಂಬ ವಿಷಯದ ಕುರಿತು ಮಾಹಿತಿ ಇರದ ಕಾರಣ ಪರೀಕ್ಷಾ…
