ದೇವರಹಿಪ್ಪರಗಿ: ಪಟ್ಟಣದ ಎಲ್ಲ ೧೭ ವಾರ್ಡುಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೊಳವೆಭಾವಿ ಕೊರೆಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ೨೦೨೩-೨೪ನೇ ಸಾಲಿನ ೧೫ನೇ ಹಣಕಾಸು ಅಡಿ ೩ನೇ ವಾರ್ಡಿನಲ್ಲಿ ಕೊಳವೆಭಾವಿ ಕೊರೆಯುವ ಸಂದರ್ಭದಲ್ಲಿ ಚಾಲನೆ ನೀಡಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯರು ನಿರ್ಧರಿಸುವ ಸ್ಥಳದಲ್ಲಿ ಪಟ್ಟಣದ ಎಲ್ಲ ವಾರ್ಡುಗಳಲ್ಲಿ ಕೊಳವೆಭಾವಿ ಕೊರೆಸಲಾಗುತ್ತಿದೆ.
ಪಟ್ಟಣದ ೪೨೦೦ ಮನೆಗಳಿಗೆ ೨೮.೮೫ ಕೋಟಿ ವೆಚ್ಚದಲ್ಲಿ ನಲ್ಲಿ ಮೂಲಕ ನೀರು ನೀಡುವ ಅಮೃತ್ ೨.೦ ಯೋಜನೆಯ ಕಾರ್ಯ ಚಾಲನೆಯಲ್ಲಿದೆ ಜೊತೆಗೆ ಹಿಂದಿನ ಬಹುಹಳ್ಳಿ ಯೋಜನೆ(ಎಂವ್ಹಿಎಸ್) ಸಹ ಇದೆ ಈಗ ನೂತನ ಕೊಳವೆಭಾವಿ ಕೊರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇವುಗಳೆಲ್ಲ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ಸಹಕಾರಿಯಾಗುತ್ತವೆ ಎಂದರು.
ತಹಶೀಲ್ದಾರ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಪ್ರಕಾಶ ಸಿಂದಗಿ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಉಮೇಶ ರೂಗಿ, ಕಾಶೀನಾಥ ಬಜಂತ್ರಿ, ಬಶೀರ್‌ಅಹ್ಮದ್ ಬೇಪಾರಿ, ಸುಮಂಗಲಾ ಸೆಬೇನವರ, ಸಿಂಧೂರ ಡಾಲೇರ್, ಪ್ರಮುಖರಾದ ಕಾಶೀನಾಥ ಕಡ್ಲೇವಾಡ, ಮಲ್ಲಿಕಾರ್ಜುನ ಜಡಿಮಠ, ಸೋಮು ದೇವೂರ, ಅಬ್ದುಲ್ಲಾ ಬಾಗವಾನ್, ಪ್ರಕಾಶ ಮಲ್ಲಾರಿ, ಬಸಪ್ಪ ದೇವಣಗಾಂವ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment