ದೇವರಹಿಪ್ಪರಗಿ: ಜ್ವಾಲಾಮುಖಿ ಸ್ಫೋಟ, ಮಳೆ ನೀರು ಕೊಯ್ಲು ಸೇರಿದಂತೆ ವಿಜ್ಞಾನದ ಹಲವು ವಿಷಯಗಳ ಮೇಲೆ ವಿದ್ಯಾರ್ಥಿಗಳೇ ಸಿದ್ಧಪಡಿಸಿದ ವಸ್ತು ಪ್ರದರ್ಶನ ಗಮನ ಸೆಳೆಯಿತು.
ಪಟ್ಟಣದ ಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ಸೋಮವಾರ ವಿಜ್ಞಾನದ ವಿಷಯಕ್ಕೆ ಸಂಬಂಧಿಸಿದ ವಿಶೇಷತೆಗಳನ್ನು ವಿದ್ಯಾರ್ಥಿಗಳು ತಯಾರಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಪ್ರೌಢಶಾಲಾ ವಿಭಾಗದಲ್ಲಿ ೯ನೇ ತರಗತಿಯ ಪ್ರಶಾಂತ ಅವಟಿ ಹಾಗೂ ರಾಜ್‌ಅಹ್ಮದ್ ಮಳಖೇಡ ತಯಾರಿಸಿದ ಸೌರಶಕ್ತಿಯಿಂದ ಗಾಳಿಯಂತ್ರ ಹಾಗೂ ವಿದ್ಯುತ್ ಬೆಲ್‌ಗಳ ಕಾರ್ಯ ನಿರ್ವಹಣೆ, ೭ನೇ ತರಗತಿಯ ಕೌಸರ್ ಮೋಮಿನ್ ಸಿದ್ಧಪಡಿಸಿದ ಮಳೆ ನೀರು ಕೊಯ್ಲು, ೮ನೇ ತರಗತಿಯ ಶಮೀಮ್ ಕರ್ನಾಚಿ ತಯಾರಿಸಿದ ಜ್ವಾಲಾಮುಖಿ ಸ್ಪೋಟ. ಪ್ರಾಥಮಿಕ ವಿಭಾಗದಲ್ಲಿ ೬ನೇ ತರಗತಿಯ ಸುಮಂತ ಒಂಟೇತ್ತಿನ ತಯಾರಿಸಿದ ಚಂದ್ರಯಾನ-೩ ಮಾದರಿ, ಇಸಾ ಕುರ್ಸಿಯ ವಾಟರ್ ಸೈಕಲ್, ೭ನೇ ತರಗತಿಯ ಉಮರ್‌ಫಾರುಖ್ ಕರ್ಜಗಿಯ ಮಳೆನೀರು ಸಂಗ್ರಹಣೆಯ ಮಾದರಿಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕಾಧ್ಯಕ್ಷ ಎಸ್.ಎನ್.ಬಸವರೆಡ್ಡಿ ನಿರ್ಣಾಯಕರಾಗಿ ಆಗಮಿಸಿ, ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಇಂಥ ಕಾರ್ಯಕ್ರಮಗಳು ಅಗತ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಎನ್.ಬಿ.ಪಾಟೀಲ, ಸಿಬ್ಬಂದಿ ಭುವನೇಶ್ವರಿ ಒಂಟೇತ್ತಿನ, ಜ್ಯೋತಿ ಬಾಗೇವಾಡಿ, ಮಹಾಲಕ್ಷ್ಮಿ ಗೊಡ್ಯಾಳ, ಶ್ರೀದೇವಿ ಬಾಗೇವಾಡಿ, ಸೌಭಾಗ್ಯ ದೇಸಾಯಿ, ಅಶ್ವೀನಿ ನಾಗರಬೆಟ್ಟ, ಮಾಲಾಶ್ರೀ ಚವ್ಹಾಣ, ಶಬಾನಾ ನಧಾಪ್, ನಿಲೋಫರ್ ಪಾನಪರೋಷ, ರೇಣುಕಾ ಬಗಲಿ, ಕಲಾವತಿ ಕಾರಜೋಳ, ರಶ್ಮೀ, ಮಾದೇವಿ, ಅಶ್ವೀನಿ, ಅಖಿಲ್ ಬಾಗವಾನ, ಸಂಜಯ ಜಾಧವ, ಕೆ.ಬಿ.ಪಾಟೀಲ, ಪ್ರಶಾಂತ ಹಿರೇಣ್ಣವರ ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment