Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ವಿಜಯಪುರ ನಗರದಲ್ಲಿ ಕೊಳಚೆ ಮಂಡಳಿಯಿಂದ ಯೋಗಾಪುರದಲ್ಲಿ ನಿರ್ಮಿಸಲಾದ ಮನೆಗಳು, ಬಸವನ ನಗರದಲ್ಲಿ ಪಾಲಿಕೆಯಿಂದ ನಿರ್ಮಿಸಲಾದ ಮನೆಗಳು, ತಾಜಬಾವಡಿ, ಭೂತನಾಳ ಕೆರೆಗೆ ನೀರು ತುಂಬಿಸುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ದಿಢೀರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.ಬುಧವಾರ ನಗರದ ಯೋಗಾಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿ, ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಲಾದ ಮನೆಗಳಲ್ಲಿ ಹಲವು ಮನೆಗಳು ಖಾಲಿ ಇದ್ದು, ಕಿಟಕಿ ಬಾಗಿಲುಗಳು ದುರಸ್ತಿಗೊಳಿಸಬೇಕು. ಮನೆಗಳನ್ನು ಹಂಚಿಕೆ ಮಾಡಿರುವ ಫಲಾನುಭವಿಗಳ ಪಟ್ಟಿ ಹಾಗೂ ಖಾಲಿ ಇರುವ ಮನೆಗಳ ಪಟ್ಟಿ ಮಾಡಿ, ಎರಡು ದಿನಗಳಲ್ಲಿ ಪಾಲಿಕೆಗೆ ಒದಗಿಸುವಂತೆ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಸವನ ನಗರದಲ್ಲಿ ಪಾಲಿಕೆಯಿಂದ ನಿರ್ಮಿಸಿದ ಆಶ್ರಯ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಆಶ್ರಯ ಮನೆಗಳಿಗೆ ಹಕ್ಕು ಪತ್ರ ಪಡೆದುಕೊಂಡ ಮಾಲೀಕರಗೆ ಆ ಮನೆಗಳಲ್ಲಿ ವಾಸಿಸುತ್ತಿರುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಪಾಲಿಕೆ ಅಭಿಯಂತರರಿಗೆ ಸೂಚನೆ ನೀಡಿದರು.ಅರಕೇರಿ…
ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ವೈಚಾರಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಪ್ರತಿಜ್ಞಾ ವಿಧಿಯನ್ನು ಶಿಕ್ಷಕಿ ಕೀರ್ತಿ ತಳಗೇರಿ ಬೋಧಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ಲೀಲಾ ಭಟ್ಟ, ಮುಖ್ಯಾಧ್ಯಾಪಕಿ ರಂಜಿತಾ ಹೆಗಡೆ, ಬಸವರಾಜ ಸೋನಾರ, ಶಿಕ್ಷಕರಾದ ಕಿರಣ ಕಡಿ, ಪವಿತ್ರಾ ಸಜ್ಜನ, ರೂಪಾ ನಾಟಿಕರ, ಶಿವಶಂಕರಯ್ಯ ಹಿರೇಮಠ, ಸೇರಿದಂತೆ ಇತರರು ಹಾಜರಿದ್ದರು.
ಮುದ್ದೇಬಿಹಾಳ: ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಬುಧವಾರ ಲೋಕಾಯುಕ್ತ ಡಿಎಸ್‌ಪಿ ಸುರೇಶ ರೆಡ್ಡಿ ಎಂ ಎಸ್ ನೇತೃತ್ವದ ಅಧಿಕಾರಿಗಳ ತಂಡ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಕಾರ್ಯಾಲಯದ ಸ್ವಚ್ಛತೆ, ಇಲಾಖಾ ಕಡತಗಳು ಸೇರಿದಂತೆ ಕಛೇರಿಯ ಪ್ರತಿಯೊಂದು ಕೊಠಡಿಗಳು ಮಾತ್ರವಲ್ಲದೇ ಮಹಡಿಯನ್ನೂ ಸಹ ಖುದ್ದು ಡಿಎಸ್‌ಪಿ ಅವರೇ ಜಾಲಾಡಿಸಿದರು. ಕೆಲವು ಕೊಠಡಿಗಳಲ್ಲಿ ಕಡತಗಳ ಮೇಲೆ ಧೂಳು ಬಿದ್ದಿರುವದು, ವಿಲೇವಾರಿಯಾಗದ ಪಿಠೋಪಕರಣಗಳು, ಟ್ಯೂಬ್ ಲೈಟ್‌ಗಳು, ಹಳೆಯ ಕಡತಗಳನ್ನು ಶೇಖರಿಸಿಟ್ಟ ಕೊಠಡಿಯಲ್ಲಿ ಸ್ವಚ್ಛತೆ ಇಲ್ಲದ್ದನ್ನು ಕಂಡು ಪಟ್ಟಣವನ್ನು ಶುಚಿಯಾಗಿ ಇಡಬೇಕಾದ ಕಾರ್ಯಾಲಯದಲ್ಲಿಯೇ ಹೀಗಾದರೆ ಹೇಗೆ ಎಂದು ಪುರಸಭೆಯ ಆಡಳಿತಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಾಯುಕ್ತ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಸರ್ಕಾರಿ ನೌಕರರಿಗೆ ಆಡಳಿತದ ಚುರುಕು ಮುಟ್ಟಿಸುವ, ಸಾರ್ವಜನಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ಸರಳವಾಗಿ ದೊರಕಿಸುವ ಹಾಗೂ ಭ್ರಷ್ಠಾಚಾರ ಮಟ್ಟಹಾಕುವ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ಶೋಧ ಕಾರ್ಯಕ್ಕೆ ಮುಂದಾಗಿದ್ದೇವೆ. ಸಧ್ಯಕ್ಕೆ ಇಲ್ಲೇನು ಭ್ರಷ್ಠಾಚಾರದ ಬಗ್ಗೆ ಯಾವುದೇ ಮಾಹಿತಿಗಳು ಸಿಕ್ಕಿಲ್ಲ. ಇನ್ನೂ ಶೋಧ ಕಾರ್ಯ ಮುಂದುವರೆದಿದೆ.…
ಕಲಕೇರಿ: ಸಮೀಪದ ಸುಕ್ಷೇತ್ರ ತಿಳಗೂಳ ಗ್ರಾಮದಲ್ಲಿ ಶ್ರೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜಗನ್ಮಾತೆ ಶ್ರೀ ದೇವಿಯ ಮಾಹಾಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.ಶ್ರೀ ದೇವಿ ಪುರಾಣವು ಮಾ.೦೯ರ ವರೆಗೆ ನಡೆಯಲಿದ್ದು, ಗ್ರಾಮ ದೇವತೆ ಜಾತ್ರೆ & ರಥತ್ಸೋವವು ಮಾ. ೧೦ ರಂದು ನಡೆಯಲಿದ್ದು, ವೇ.ಮೂ ನಾಗಯ್ಯಶಾಸ್ತ್ರಿಗಳು ವಡವಡಗಿ ಅವರಿಂದ ವಿದ್ಯುಕ್ತವಾಗಿ ಪುರಾಣ ಪ್ರಾರಂಭಿಸಲಾಯಿತು. ಆಕಾಶವಾಣಿ ಕಲಾವಿದರಾದ ರೇಣುಕಾಚಾರ್ಯ ಹಿರೇಮಠ ಕೆರುಟಗಿ ಮತ್ತು ತಬಲಾವಾದಕರಾದ ಮಹಾಂತೇಶ ಕಾಳಗಿ ಇವರಿಂದ ಸಂಗೀತ ಸೇವೆ ನಡೆಯಿತು.ಈ ಪುರಾಣ ಪ್ರಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡ ಶ್ರೀ ಮಹಾಂತಯ್ಯ ಹಿರೇಮಠ ಮತ್ತು ಶ್ರೀ ಸಂಗಯ್ಯ ಮಠಪತಿ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಊರಿನ ಸದ್ಭಕ್ತರಾದ ವೀರಾತಪ್ಪ ಸಾತಿಹಾಳ, ಬಸಂತ ವಾಲಿಕಾರ, ಶಿವಪುತ್ರ ನೆಲ್ಲಗಿ, ಸೋಮನಗೌಡ ಯಾಳವಾರ, ಪ್ರೇಮಾನಂದ ಮಾಡಗಿ, ಶಿವಪುತ್ರ ಸಾತಿಹಾಳ, ಚಂದ್ರಾಮ ಹುಲಂಕಿ, ಶರಣಪ್ಪ ಗದ್ದಗಿ, ರಾಚಪ್ಪ ಯಡ್ರಾಮಿ, ಗುರಪ್ಪ ಕುಂಬಾರ, ಸಂಗಪ್ಪ ಬಾಗೇವಾಡಿ, ನಾಗಪ್ಪ ಸಜ್ಜನ, ಶಂಕ್ರೆಪ್ಪ ಮಾನ್ವಿ, ಸಂಗಮೇಶ ಬಿರಾದಾರ ಹಾಗೂ…
ಹೆಸ್ಕಾಂ ಕ್ಯಾಶ್ ಕೌಂಟರ್ ಆರಂಭಕ್ಕೆ ಸಾರ್ವಜನಿಕರ ಆಗ್ರಹ | ಮಾಸಿಕ ರೂ.೪೫-೫೦ ಲಕ್ಷ ಬಿಲ್ ಸಂಗ್ರಹ – ಶಿವಾನಂದ ಮ.ಸಜ್ಜನ ಕಲಕೇರಿ: ನೂತನ ತಾಳಿಕೋಟಿ ತಾಲೂಕಿನ ಕಲಕೇರಿಯು ಸುಮಾರು ೨೦ ಸಾವಿರ ಜನಸಂಖ್ಯೆ ಹೊಂದಿದೆ, ಸ್ಥಳೀಯ ಹೆಸ್ಕಾಂ ಶಾಖೆಯು ೧೮ ಹಳ್ಳಿಗಳ ಕೇಂದ್ರವಾಗಿದೆ, ಇಲ್ಲಿ ಪ್ರತಿ ತಿಂಗಳು ರೂ.೪೫-೫೦ ಲಕ್ಷಗಳ ಬಿಲ್ ಹಣ ಸಂಗ್ರಹವಾಗುತ್ತಿದ್ದು, ವಿಜಯಪುರ ಜಿಲ್ಲೆಯ ಕೊನೆ ಹಳ್ಳಿಗಳಲ್ಲಿ ಒಂದಾಗಿರುವ ಈ ಗ್ರಾಮದಲ್ಲಿ ಸುಮಾರು ೪ ವರ್ಷಗಳ ಹಿಂದೆ ಕ್ಯಾಶ ಕೌಂಟರ್ ನೂತನ ಕಟ್ಟಡ ಕಟ್ಟಲಾಗಿದ್ದು, ಇಲ್ಲಿಯವರೆಗೂ ಪ್ರಾರಂಭವಾಗದೇ ನೆನೆಗುದಿಗೆ ಬಿದ್ದಿದೆ.ಈ ಕುರಿತು ಅನೇಕ ಬಾರಿ ಸ್ಥಳೀಯ ಹೋರಾಟಗಾರರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅದು ಪ್ರಯೋಜನವಾಗಿಲ್ಲ. ಇಲ್ಲಿಯ ರೈತರು ಹಾಗೂ ಗ್ರಾಹಕರಿಗೆ ಯಾವುದೇ ಸಮಸ್ಯೆಯಾದರೆ ದೂರದ ಕೋರವಾರದ ಕಂದಾಯ ಶಾಖೆಗೆ ಹೋಗಿ ದೂರು ಸಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಲಕೇರಿ ಹಾಗೂ ಸುತ್ತಲಿನ ೧೮ ಹಳ್ಳಿಗಳಿಂದ ಸುಮಾರು ೪೦-೫೦ಕಿ.ಮೀ ದೂರದಿಂದ ಕೋರವಾರಕ್ಕೆ ಹೋಗಿ ಬರಲು ಸಮಯಕ್ಕೆ…
ಇಂಡಿ: ನಮ್ಮ ಸಂಸ್ಥೆಯಲ್ಲಿ ಹಣಕ್ಕಾಗಿ ಶಿಕ್ಷಣ ನೀಡುತ್ತಿಲ್ಲ. ಬದಲಾಗಿ ಮಕ್ಕಳು ಸಂಸ್ಕಾರವಂತವಾಗಿ ದೇಶದ ಹೆಮ್ಮೆಯ ಪ್ರಜೆಗಳಾಗಲಿ ಎಂಬ ಸದುದ್ದೇಶದಿಂದ ಶಿಕ್ಷಣ ನೀಡಲಾಗುತ್ತಿದೆ ಎಂದು ನೂರಂದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮೋರಟಗಿ ವಿರಕ್ತ ಮಠದ ಗುರುಲಿಂಗ ಮಹಾಸ್ವಾಮೀಜಿ ತಿಳಿಸಿದರು.ಅವರು ಇತ್ತೀಚೆಗೆ ಪಟ್ಟಣದ ನೂರಂದೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಪ್ರೌಢಶಾಲೆಯ ೧೯ ನೇ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ನಾವು ಮಠಾಧೀಶರು ನಮಗೆ ಮಕ್ಕಳಿಲ್ಲ. ಹೀಗಾಗಿ ನಿಮ್ಮೆಲ್ಲರ ಮಕ್ಕಳು ನಮ್ಮ ಮಕ್ಕಳಂತೆ ತಿಳಿದು ಶಿಕ್ಷಣ ನೀಡುತ್ತಿದ್ದೇವೆ. ಈ ಶಿಕ್ಷಣ ಸಂಸ್ಥೆಯ ಏಳ್ಗೆ ನಿಮ್ಮ ಕೈಯಲ್ಲಿದ್ದು ಪಾಲಕರು ಸಂಸ್ಥೆಯ ಬಗ್ಗೆ ಕಾಳಜಿ ವಹಿಸಬೇಕೆಂದರು.ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯೆ ಶೈಲಜಾ ಬಿರಾದಾರ ಉದ್ಘಾಟಿಸಿದರು.ಸಾನಿಧ್ಯವನ್ನು ಹಿರೇಬೇವನೂರದ ದಯಾನಂದ ಹಿರೇಮಠ, ಅಧ್ಯಕ್ಷತೆಯನ್ನು ಎಂ.ಎಸ್, ಹಿರೇಮಠ ವಹಿಸಿದ್ದರು.ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳ ನೃತ್ಯ, ಭಾಷಣ ನೋಡುಗರ ಕಣ್ಮನ ಸೆಳೆಯಿತು.ವೇದಿಕೆಯಲ್ಲಿ ಪತ್ರಕರ್ತ ಉಮೇಶ ಬಳಬಟ್ಟಿ, ಬಸಯ್ಯ ಮಠ, ಎಸ್.ಕೆ. ಬಡಿಗೇರ, ಎಸ್.ಎ. ಇನಾಮದಾರ, ಟಿ.ಹೆಚ್.…
ಇಂಡಿ: ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷಿಯಾದ ಮೊಟ್ಟ ಮೊದಲ ವಿಜ್ಞಾನಿ ಭಾರತೀಯ ಸರ್.ಸಿ.ವಿ.ರಾಮನ್. ಇದು ಭಾರತೀಯರಿಗೆ ಹೆಮ್ಮೆಯ ವಿಷಯ ಎಂದು ಪ್ರಾಧ್ಯಾಪಕಿ ಶೃತಿ ಬಿರಾದಾರ ಹೇಳಿದರು.ಅವರು ಬುಧವಾರ ಇಂಡಿ ಪಟ್ಟಣದ ಜಿ.ಆರ್. ಗಾಂಧಿ ಕಲಾ ಮಹಾ ವಿದ್ಯಾಲಯದ ಸಭಾ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪನ್ಯಾಸ ನೀಡಿದರು.ರಾಮನ್ ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಮುಂದೆ ಇಂಡಿಯನ್ ಇನ್ಸಿಟಿಟ್ಯುಟ್ ಆಫ್ ಸೈನ್ಸ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ೧೯೨೮ ರಲ್ಲಿ ಪ್ರಕಟಿಸಿದ್ದು, ಅದಕ್ಕಾಗಿ ಪ್ರತಿವರ್ಷ ಫೆಬ್ರುವರಿ ೨೮ ರಂದು ದೇಶದಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತದೆ. ಹಾಗಾಗಿ ಇಂದು ದೇಶದ ಉನ್ನತಿಗಾಗಿ ವಿಜ್ಞಾನಿಗಳು ನೀಡಿರುವ ಕೊಡುಗೆಗಳನ್ನು ಗುರುತಿಸುವ ಮತ್ತು ಸ್ಮರಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.ವಿದ್ಯಾರ್ಥಿ ಆಕಾಶ ಜಾಲಗೇರಿ ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಬಿ.ಜಾಧವ ಅಧ್ಯಕ್ಷತೆವಹಿಸಿದ್ದರು.ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಲಕ್ಷ್ಮೀ ಬನಸೋಡೆ ನಿರೂಪಿಸಿದರು. ಉಪನ್ಯಾಸಕಿ ಶೃತಿ ಪಾಟೀಲ ಪ್ರಾರ್ಥನಾ…
ವಿಜಯಪುರ: ಜಿಲ್ಲೆಯ ನಿಡಗುಂದಿ ೧೧೦ಕೆವ್ಹಿ ಉಪಕೇಂದ್ರದಲ್ಲಿ ೧೦ ಎಂವಿಎ ಪರಿವರ್ತಕ ಬದಲಾಯಿಸಿ ೨೦ ಎಂವಿಎ ಪರಿವರ್ತಕ ಅಳವಡಿಸುವ ಕಾಮಗಾರಿ ಹಾಗೂ ತ್ರೆöÊಮಾಸಿಕ ದುರಸ್ಥಿ ಕಾಮಗಾರಿಯನ್ನು ಫೆ.೨೯ರಂದು ಕೈಗೊಳ್ಳುವುದರಿಂದ ಸದರಿ ವಿದ್ಯುತ್ ಉಪ ಕೇಂದ್ರಗಳಿಂದ ಸರಬರಾಜಾಗುವ ೩೩ಕೆವ್ಹಿ ಮಾರ್ಗಗಳೂ ಹಾಗೂ ೧೧ಕೆವ್ಹಿ ನಿರಂತರ ಜ್ಯೋತಿ ಮಾರ್ಗಗಳು, ಕೃಷಿ ನೀರಾವರಿ ಮಾರ್ಗಗಳು, ನಿಡಗುಂದಿ ಪಟ್ಟಣ, ಆಲಮಟ್ಟಿ ಹಾಗೂ ಬಸವನಬಾಗೇವಾಡಿ, ಇಂಗಳೇಶ್ವರ ಬಹುಹಳ್ಳಿ ಕುಡಿಯುವ ನೀರಿನ ಘಟಕಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಅಂದು ಬೆಳಿಗ್ಗೆ ೮ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ವಿಜಯಪುರ: ವಿಜಯಪುರ ರೇಲ್ವೆ ಪೊಲೀಸ್ ಠಾಣೆಯಲ್ಲಿ ಅಂದಾಜು ೫೦ ರಿಂದ ೫೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಯಾದ ವ್ಯಕ್ತಿಯ ವಾರಸುದಾರರ ಪತ್ತೆಗೆ ರೇಲ್ವೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಪತ್ತೆಯಾದ ವ್ಯಕ್ತಿಯು ೫.೬ ಅಡಿ ಎತ್ತರ, ಸಾದಗಪ್ಪು ಮೈಬಣ್ಣ, ತೆಳ್ಳನೆಯ ಮೈಕಟ್ಟು ಕೋಲುಮುಖ, ನೇರವಾದ ಮೂಗು, ತಲೆಯಲ್ಲಿ ೨ ಇಂಚು ಬಿಳಿ-ಕಪ್ಪು ಬಣ್ಣದ ಮಿಶ್ರಿತ ಕೂದಲು, ಅರ್ಧ ಇಂಚು ಬಿಳಿ ಬಣ್ಣದ ಕುರುಚಲ ದಾಡಿ, ಮೀಸೆವುಳ್ಳವನಾಗಿದ್ದು, ಚಾಕಲೇಟ್ ಬಣ್ಣದ ಅರ್ಧ ತೊಳಿನ ರೇಡಿಮಢ್ ಅಂಗಿ, ಚಾಕಲೇಟ್ ಬಣ್ಣದ ಪ್ಯಾಂಟ್ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಆರಕ್ಷಕ ಉಪನಿರೀಕ್ಷಕರು, ರೇಲ್ವೆ ಪೊಲೀಸ್ ಠಾಣೆ. ವಿಜಯಪುರ : ೦೮೩೫೨-೨೫೦೮೮೩, e-mail address:- bijapurrly@ksp.gov.in ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ ೦೮೦-೨೨೮೭೧೨೯೧, ಇ-ಮೇಲ್ : dcrly@ksp.gov.inಮಾಹಿತಿ ನೀಡಲು ಕೋರಿದೆ.
ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗವು ಎಂಸಿಎ ಡಾ.ಫಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೀಟು ಹಂಚಿಕೆಯ ನಂತರ ಖಾಲಿ ಉಳಿದಿರುವ ೨೦೨೩-೨೪ನೇ ಸಾಲಿನ ಸೀಟುಗಳನ್ನು ಭರ್ತಿ ಮಾಡಲು ವಿಶ್ವವಿದ್ಯಾನಿಲಯದ ಸಾಮಾನ್ಯ ಪರೀಕ್ಷೆಯನ್ನು ಮಾ.೪ರಂದು ನಡೆಸಲಾಗುತ್ತಿದೆ.ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು www.rcub.ac.in ನಿಂದ ಡೌನಲೋಡ್ ಮಾಡಿಕೊಂಡು ಧೃಡೀಕೃತ ದಾಖಲೆಗಳೊಂದಿಗೆ ಮಾರ್ಚ ೧ರ ಒಳಗಡೆ ಅರ್ಜಿ ಸಲ್ಲಿಸಬಹುದಾಗಿದೆ. ಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಗದಿತ ಶುಲ್ಕ ಭರಿಸಿ ದೃಢೀಕೃತ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮುಖ್ಯ ಆವರಣ ಹಾಗೂ ಸ್ನಾತಕೋತ್ತರ ಕೇಂದ್ರಗಳ ಗಣಕ ವಿಜ್ಞಾನ ವಿಭಾಗಕ್ಕೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯ ಅಂತರ್ಜಾಲ ಅಥವಾ ಡಾ.ಫಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರವನ್ನು (೦೮೩೧-೨೫೬೫೨೪೪)ನ್ನು ಸಂಪರ್ಕಿಸಬಹುದು ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
