Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚುನಾವಣಾ ಪ್ರಚಾರಕ್ಕಾಗಿ ವಿಕಸಿತ ಭಾರತ ಎಲ್.ಇ.ಡಿ ವಾಹನಗಳಿಗೆ ಶಾಸಕ ಟೆಂಗಿನಕಾಯಿ ಚಾಲನೆ ವಿಜಯಪುರ: ಸಾಮಾನ್ಯ ಕಾರ್ಯಕರ್ತನಿಗೂ ಪಕ್ಷ ಟಿಕೆಟ್ ಕೊಟ್ಟಾಗ ಎಲ್ಲಾ ಕಾರ್ಯಕರ್ತರು ಗೆಲ್ಲಿಸಲು ಬೆನ್ನಿಗೆ ನಿಲ್ಲುತ್ತಾರೆ ಎನ್ನುವದಕ್ಕೆ ನಾನೇ ಸಾಕ್ಷಿ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಲೋಕಸಭಾ ಚುನಾವಣಾ ನಿಮಿತ್ಯ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸಂಜೆ ಜರುಗಿದ ಚುನಾವಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಬೆಳಗಾವಿ, ರಾಯಚೂರು, ಬಳ್ಳಾರಿ, ಧಾರವಾಡ ಸೇರಿದಂತೆ ಬೇರೆ ವಿಭಾಗಗಳಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಮಾಡಿದಾಗಲೂ ವಿಜಯಪುರ ಜಿಲ್ಲೆಯ ಕಾರ್ಯಕರ್ತರು ಅತ್ಯಂತ ಪ್ರೀತಿ ವಿಶ್ವಾಸ ತೋರಿಸಿದ್ದಾರೆಂದು ತಿಳಿಸಿದರು.ಚುನಾವಣೆ ಎದುರಿಸುವಾಗ ಅನೇಕ ಸುಲಭ ಹಾಗೂ ಕಠಿಣ ಕೆಲಸಗಳು ವಿಜಯಪುರ ಜಿಲ್ಲೆಯಿಂದಲೂ ಬಂದಿದ್ದವು. ಅದೆಲ್ಲವನ್ನು ಕಾರ್ಯಗತ ಮಾಡಿಕೊಂಡು ಹುಬ್ಬಳ್ಳಿ-ಧಾರವಾಡದಲ್ಲಿ ನನ್ನಂತ ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಕೊಡುತ್ತಾರೆಂಬುದು ಯಕ್ಷಪ್ರಶ್ನೆಯಾಗಿತ್ತು. ಆದರೆ ಪಕ್ಷ ಕಠಿಣ ನಿರ್ಧಾರವನ್ನು ತೆಗೆದುಕೊಂಡು ಅತ್ಯಂತ ತುರುಸಿನ ಚುನಾವಣೆಯಾಗಿತ್ತು. ಅಂತಹ ಸಂದರ್ಭದಲ್ಲಿ ಇಬ್ಬರು ಮೂವರನ್ನು ಹೊರತುಪಡಿಸಿದರೆ ಬೇರೆ ಕಾರ್ಯಕರ್ತರು…
ಮುದ್ದೇಬಿಹಾಳ: ಬೇಸಿಗೆ ಕಾಲ ಪ್ರಾರಂಭವಾಗಿರುವದರಿಂದ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಸ್ಪಂದನೆಗಾಗಿ ತಾಲೂಕು ಪಂಚಾಯತ ಕಾರ್ಯಾಲಯದ ವತಿಯಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಸಹಾಯವಾಣಿ ಸಂಖ್ಯೆ – ೦೮೩೫೬೨೦೦೬೦೬
ವಿಜಯಪುರ: ಹಣವಂತರಿಗಿಂತ ಸಮಾಜಸೇವೆ ಮಾಡುವ ಗುಣವಂತರನ್ನು ಸಮಾಜ ಸ್ಮರಿಸುತ್ತದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಹೇಳಿದ್ದಾರೆ.ಗುರುವಾರ ನಗರದ ಪರಮಹಂಸರ ಆಶ್ರಮದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಿಂದ ಆಯೋಜಿಸಲಾಗಿದ್ದ ಸಿಟಿಸಿ ಮತ್ತು ಎನ್.ಎಸ್.ಎಸ್. ಶಿಬಿರ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಪ್ರಕಟಿಸಿರುವ ಡಾ. ಹಳಕಟ್ಟಿಯವರ ನೈಜ ಭಾಷಣದ ಎಂಟನೇ ಸಂಪುಟದ ಭಾಷಣವನ್ನು ಎಲ್ಲಾ ಪ್ರಶಿಕ್ಷಣಾರ್ಥಿಗಳು ಓದಬೇಕು. ವಿದ್ಯಾರ್ಥಿಗಳು ಯಾವಾಗಲೂ ಪುಸ್ತಕ ಪ್ರೇಮಿಯಾಗಬೇಕು. ಇದರಿಂದ ಹೆಚ್ಚಿನ ಜ್ಞಾನ ದೊರೆಯುತ್ತದೆ. ಯಾರೂ ದುಶ್ಚಟಗಳಿಗೆ ದಾಸರಾಗಬಾರದು. ಸಮಾಜದಲ್ಲಿರುವ ಅನಿಷ್ಠ ಪದ್ದತಿಗಳ ನಿರ್ಮೂಲನೆಗಾಗಿ ಶ್ರಮಿಸಬೇಕು ಎಂದು ಹೇಳಿದರು.ರಾಷ್ಟ್ರೀಯ ಯುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮತ್ತು ಎನ್.ಎಸ್.ಎಸ್. ರಾಜ್ಯ ಸಲಹಾ ಸಮಿತಿ ಸದಸ್ಯರ ಡಾ. ಜಾವೀದ ಜಮಾದಾರ ಮಾತನಾಡಿ, ಯುವ ಜನಾಂಗ ಆಸೆ, ಆಮಿಷಗಳಿಗೆ ಬಲಿಯಾಗಬಾರದು. ಆಧುನಿಕ ಜೀವನ ಶೈಲಿಗೆ ಮಾರುಹೋಗದೆ…
ಆಲಮಟ್ಟಿಯ ಚಂದ್ರಗಿರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ | ಭಕ್ತರ ಭಕ್ತಿಭಾವದ ಪರಾಕಾಷ್ಠೆ – ಸಂಪದಾ ಹಿರೇಮಠಆಲಮಟ್ಟಿ: ಬೇಸಿಗೆಯ ಬಿರುಬಿಸಿಲು ಝಳ ಪ್ರಖರವಾಗುತ್ತಿದೆ. ಇತ್ತ ಕೃಷ್ಣಾನದಿಯ ಅಂಗಳು ಜೀವಜಲದಿಂದ ಸೊರಗುತ್ತಿದೆ. ಆದರೆ ಗುರುವಾರ ಕೃಷ್ಣೆಯ ದಡದಲ್ಲಿ ಜಲೋದ್ಬವದ ಬದಲು ಜನೋದ್ಬವದ ಜಯ ಉದ್ಘೋಷ್ ಹರಿದು ಬಂದಿದ್ದು ಕಂಡು ಬಂತು.ಈ ವೇಳೆ ಕೃಷ್ಣೆಯ ಜಲಧಿಯಲ್ಲಿ ಪವನಗೊಂಡ ಜನತೆಯ ಭಕ್ತಿಭಾವದ ಪರಾಕಾಷ್ಠೆ ತರ್ಪಣ ಅವಣೀಯವಾಗಿತ್ತು.ಎಲ್ಲೆಲ್ಲೂ ಭಕ್ತ ಮೊಗಗಳ ಕಲರವದ ಕಂಪು ನಿನಾದ ಮೊಳಗಿತ್ತು !!!ಆಹಾ ! ಎತ್ತ ನೋಡಿದರು ಜನರೋ ಜನ. ಭಕ್ತಿರಸದ ಲೀಲೆಯಲ್ಲಿ ತನ್ಮಯ. ಆ ಜಾಗೃತ ದೇವಿಯ ಗುಂಗು ಪ್ರತಿಯೊಬ್ಬರ ಮನಭಾವದಲ್ಲಿ ನೆಲೆನಿಂತ ಪರಿಣಾಮ ಆರಾಧನಾ ಮಹೋತ್ಸವಕ್ಕೆ ನವಮೆರಗು ಬಂದಿತ್ತು. ಜಾತ್ರಾ ಉತ್ಸವದಲ್ಲಿ ಹರುಷದಿಂದ ಮಿಂದೆದ್ದ ಅಸಂಖ್ಯಾತ ಭಕ್ತ ಸಾಗರ ಧಾಮಿ೯ಕ ಭಕ್ತಿಲೋಕದಲ್ಲಿ ತೇಲಿದರು…!ಇಂಥದೊಂದು ದೃಶ್ಯ ವೈಭವಕ್ಕೆ ಗುರುವಾರ ಇಲ್ಲಿನ ಚಂದ್ರಗಿರಿಯ ಚಂದ್ರಮ್ಮಾ ದೇವಸ್ಥಾನದ ಅಂಗಳ ಸಾಕ್ಷಿಯಾಗಿತ್ತು !ಅಪಾರ ಭಕ್ತ ಸಮೂಹವನ್ನು ಹೊಂದಿರುವ ಇಲ್ವಿನ ಚಂದ್ರಗಿರಿ ಚಂದ್ರಮ್ಮಾ ದೇವಿಯ ಜಾತ್ರಾ ಉತ್ಸವ ಇದೇ…
ತಾಲ್ಲೂಕು ಮಟ್ಟದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೌನ್ ಬನೇಗಾ ವಿದ್ಯಾಧಿಪತಿ ಕಾರ್ಯಕ್ರಮ ಉದ್ಘಾಟನೆ ಇಂಡಿ: ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಒಳ್ಳೆಯ ಶಿಕ್ಷಣ ಪಡೆದುಕೊಳ್ಳಿ, ಪ್ರಪಂಚದ ಜೊತೆಗೆ ಸ್ಪರ್ಧೆಯಿದೆ. ಆದರೆ ಇದರ ಜೊತೆಗೆ ಸಂಸ್ಕಾರವಂತರಾಗಿ ನಿಮ್ಮ ಪಾಲಕರಿಗೆ ಗೌರವಿಸಿ, ಆಗ ಮಾತ್ರ ನಿಮ್ಮ ಜೀವನ ಪಾವನವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ಬುಧವಾರ ಇಂಡಿ ಪಟ್ಟಣದ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಮತ್ತು ಶಿಕ್ಷಕರ ಸಂಘಟನೆಗಳ ಸಹ ಯೋಗದಲ್ಲಿ ತಾಲ್ಲೂಕು ಮಟ್ಟದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕೌನ್ ಬನೇಗಾ ವಿದ್ಯಾಧಿಪತಿ ಕಾರ್ಯಕ್ರಮವನ್ನು ಪ್ರಶ್ನೆಗೆ ಉತ್ತರ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನ ಅಗತ್ಯವಾಗಿದೆ. ಮೊದಲು ಪಾಟೀಲ ಪುಟ್ಟಪ್ಪನವರು ಹೊರತರುತ್ತಿರುವ “ಪ್ರಪಂಚ”ಎನ್ನುವ ಪುಟ್ಟ ವಾರ ಪತ್ರಿಕೆ ಎಲ್ಲರಿಗೂ ಪ್ರಪಂಚದ ಜ್ಞಾನ ನೀಡುತ್ತಿತ್ತು ಎಂದು ಪಾಟೀಲ ಪುಟ್ಟಪ್ಪನವರನ್ನು ನೆನಪಿಸಿಕೊಂಡರು.ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ.ಆಲಗೂರ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಹೊಸ ಪ್ರಯೋಗವನ್ನು ಮಾಡಿ ಸಾಮಾನ್ಯ ಜ್ಞಾನ…
ವಿಜಯಪುರ: ೨೦೨೩-೨೪ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃಧಿ ನಿಗಮ, ಬೆಂಗಳೂರು ರವರು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ವಸತಿ ರಹಿತ ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರಧಾನ ಮಂತ್ರಿ ಆವಾಸ ವಿಶೇಷ ಯೋಜನೆಯಡಿ ೫೦ ಮನೆಗಳ ಗುರಿ ನಿಗದಿಪಡಿಸಿರುತ್ತಾರೆ. ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ನಿರ್ಗತಿಕ ವಸತಿ ರಹಿತ ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಎಪ್ರಿಲ್. ೮ ಕೊನೆಯ ದಿನವಾಗಿದೆ.ಸ್ವವಿವರದ ಅರ್ಜಿ, ಜಿಲ್ಲಾಧಿಕಾರಿಗಳಿಂದ ಪಡೆದಿರುವ ಲಿಂಗತ್ವ ಅಲ್ಪಸಂಖ್ಯಾತ ಗುರುತಿನ ಚೀಟಿ, ಪಡಿತರ ಚೀಟಿ (ಬಿ.ಪಿ.ಎಲ್), ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ಬ್ಯಾಂಕ ಪಾಸ್ ಬುಕ್ ನೊಂದಿಗೆ ಕಚೇರಿಯ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿಜಯಪುರದ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ(ದೂರವಾಣಿ ಸಂಖ್ಯೆ:೦೮೩೫೨೨೯೫೩೫೩) ಇವರನ್ನು ಸಂಪರ್ಕಿಸಬಹುದು ಎಂದು ವಿಜಯಪುರ ಮಹಿಳಾ…
ವಿಜಯಪುರ: ನಗರದ ಇಂಡಿ ರಸ್ತೆಯಲ್ಲಿರುವ ಬಿ ಎ ಬಿಜ್ಜರಗಿ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ದಿನಾಂಕ ೧೮ ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಶಿಶಿಕ್ಷು ಮೇಳವನ್ನು ಆಯೋಜಿಸಲಾಗಿದೆ.ಐ.ಟಿ.ಐ ಪಾಸಾದ ಅಭ್ಯರ್ಥಿಗಳು Google link www.apprenticeshipindia.gov.in/establishment-registration ನೋಂದಾಯಿಸಿಕೊಂಡು ಬಾಗವಹಿಸಬಹುದಾಗಿದೆ. ಹಾಗೆಯೇ ಉದ್ದಿಮೆದಾರರು ಉoogಟe Google link www.apprenticeshipindia.gov.in/establishment-registrationನಲ್ಲಿ ನೋಂದಾಯಿಸಿಕೊಂಡು ಈ ಮೇಳದ ಪ್ರಯೋಜನೆ ಪಡೆದುಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೯೮೮೬೪೩೭೫೧೭, ೯೮೮೦೧೨೧೩೯೩ ಅಥವಾ ಹತ್ತಿರದ ಯಾವುದೇ ಸರ್ಕಾರಿ/ಅನಿದಾನಿತ/ಖಾಸಗಿ ಐ.ಟಿ.ಐ ಗಳನ್ನು ಸಂಪರ್ಕಿಸಬಹುದಾಗಿದೆ. ಆಸಕ್ತಿ ಅಭ್ಯರ್ಥಿಗಳು ನಾಲ್ಕು ಪ್ರತಿ ಸ್ವವಿವರದ ಮಾಹಿತಿಯೊಂದಿಗೆ ಶೈಕ್ಷಣಿಕೆ ದಾಖಲೆಗಳು ಮತ್ತು ಭಾವಚಿತ್ರದೊಂದಿಗೆ ಸದರಿ ಮೇಳಕ್ಕೆ ಹಾಜರಾಗಿ ಸದುಪಯೋಗ ಪಡೆದುಕೊಳ್ಳಬೇಕೆಂದು ದೇವರಹಿಪ್ಪರಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ನಗರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರದಲ್ಲಿ ಪ್ರಸ್ತಿತ ೨೦೨೩-೨೪ನೇ(ಜನೆವರಿ ಆವೃತ್ತಿ) ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭಗೊಂಡಿದ್ದು, ಸ್ನಾತಕ, ಸ್ನಾತಕೋತ್ತರ ಕೋರ್ಸ್ಗಳಿಗೆ ಅರ್ಜಿಯನ್ನು ಸಲ್ಲಿಸಲು ಮಾರ್ಚ್ ೩೧ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ (ಐಟಿ), ಬಿಎಸ್ಸಿ (೧೪ ಕಾಂಬಿನೇಷನ್ಸ್), ಬಿಎಸ್‌ಡಬ್ಲೂ, ಬಿಎಲ್‌ಐಸಿ, ಎಂಎ(೧೪ ವಿಷಯಗಳು), ಎಂಕಾಂ, ಎಂಬಿಎ(೮ ಕಾಂಬಿನೇಷನ್ಸ್), ಎಂಎಲ್‌ಐಸಿ, ಎಂಎಸ್ಸಿ(೧೬ ವಿಷಯ), ಎಂಸಿಎ, ಎಂಎಸ್‌ಡಬ್ಲೂ, ಪಿಜಿ ಸರ್ಟಿಫಿಕೇಟ್ ಪ್ರೋಗ್ರಾಮ್ಸ್, ಡಿಪ್ಲೋಮಾ ಪ್ರೋಗ್ರಾಮ್ಸ್, ಮತ್ತು ಸರ್ಟಿಫಿಕೇಟ್ ಪ್ರೋಗ್ರಾಮ್ಸ್ಗಳಿಗೆ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ.ಯುಜಿಸಿ ನಿಯಮಾವಳಿ ಪ್ರಕಾರ (ಭೌತಿಕ ಹಾಗೂ ರೆಗ್ಯುಲರ್) ಹಾಗೂ (ಓಪನ್ ಯೂನಿವರ್ಸಿಟಿ)ದಲ್ಲಿ ಪಡೆಯುವ ಶಿಕ್ಷಣಗಳೆರಡು ಒಂದೇ ಸಮನಾದ ಅರ್ಹತೆಯನ್ನು ಹೊಂದಿರುತ್ತದೆ.ಆಸಕ್ತ ವಿದ್ಯಾರ್ಥಿಗಳು ಕರಾಮುವಿ ಅಧಿಕೃತ ವೆಬ್‌ಸೈಟ್ ತಿತಿತಿ.ಞsoumಥಿsuಡಿe.ಚಿಛಿ.iಟಿ ನಲ್ಲಿ ಕೋರ್ಸ್ಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪ್ರವೇಶಾತಿಯನ್ನು ಪಡೆಯಬಹುದಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್, ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಆಟೋ/ಕ್ಯಾಬ್ ಚಾಲಕರು, ಅವರ…
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಸಂಗೀತಾ ಹುಲ್ಲೂರ ಅವರು ಸಲ್ಲಿಸಿದ್ದ “ಎಫೆಕ್ಟ್ ಆಫ್ ಮೆಡಿಟೇಷನ್‌ಆ್ಯಂಡ್ ಫಿಜಿಕಲ್ ಎಕ್ಸ್ರ್‌ಸೈಜಸ್ ಆನ್ ಸೈಕೋ-ಸೋಸಿಯೋಲಾಜಿಕಲ್ ಆ್ಯಂಡ್ ಫಿಜಿಯೋಲಾಜಿಕಲ್ ವೇರಿಯಬಲ್ಸ್ ಆಫ್ ಸ್ಪೋರ್ಟ್ಸ್ವುಮನ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಸಂಗೀತಾ ಹುಲ್ಲೂರ ಅವರು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊ. ಡಿ.ಎಂ. ಜ್ಯೋತಿ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಸಂಗೀತಾ ಹುಲ್ಲೂರ ಅವರನ್ನು ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ
ವಿಜಯಪುರ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿ, ವಿಜಯಪುರ ಇವರ ಸಹಯೋಗದಲ್ಲಿ ಗುರುವಾರ ಜಿಲ್ಲಾ ಪಂಚಾಯತಿ, ಸಭಾ ಭವನದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಹಿನ್ನೆಲೆಯಲ್ಲಿ ಭವಿಷ್ಯದ ಮತ್ತು ಯುವ ಮತದಾರರಿಗೆ ಮತದಾನ ಶಿಕ್ಷಣದ ಪ್ರಾಮುಖ್ಯತೆ ಜಾಗೃತಿ ಮತ್ತು ಅರಿವು ಮೂಡಿಸುವ ಸಂಬಂಧ ಶಾಲಾ, ಕಾಲೇಜು, ಕಾರ್ಯಾಲಯದ ಮುಖ್ಯಸ್ಥರುಗಳಿಗೆ ತಾಲೂಕ ಮಟ್ಟದ ಸಂಪನ್ಮೂಲ ತರಬೇತುದಾರರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.ಈ ತರಬೇತಿಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ಬಿ.ಎಸ್.ಮೂಗನೂರಮಠ್, ಯೋಜನಾ ನಿರ್ದೇಶಕರಾದ ಸಿ.ಆರ್.ಮುಂಡರಗಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವರು ಶಂಕರಗೌಡ ಸೋಮನಾಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯ ಉಪನಿರ್ದೇಶಕರು ಎನ್.ಎಚ್.ನಾಗೂರ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರು ಡಾ.ಸಿ.ಕೆ.ಹೊಸಮನಿ, ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಮಹಾದೇವಿ ಸೊನ್ನದ, ಇವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ತರಬೇತಿಯಲ್ಲಿ ಭಾಗವಹಿಸಿದ ಶಾಲಾ, ಕಾಲೇಜು, ಕಾರ್ಯಾಲಯದ ಮುಖ್ಯಸ್ಥರುಗಳಿಗೆ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ…
