Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಮ್ಮನಹಳ್ಳಿ ಮಠದಲ್ಲಿ ಜಾತ್ರಾ ಮಹೋತ್ಸವ | ಲಿಂ.ಮಳೇಂದ್ರ ಶಿವಾಚಾರ್ಯರ ಬೆಳ್ಳಿ ಮೂರ್ತಿ ಉತ್ಸವ | ಧರ್ಮಸಭೆ ಆಲಮೇಲ: ಇಂದಿನ ಜನರಿಗೆ ಎಲ್ಲ ರೀತಿಯ ಸಿರಿ ಸಂಪತ್ತು ಹೊಂದಿದ್ದರೂ ಪ್ರೀತಿ ಮಮತೆ ಇಲ್ಲದೆ ಕೊರಗುತ್ತಿದ್ದಾರೆ. ಅದಕ್ಕೆ ಸಂಸ್ಕಾರ ಇಲ್ಲದೆ ಇರುವುದೇ ಕಾರಣ, ನಮ್ಮ ಧರ್ಮದ ಸಂಸ್ಕಾರ ಸಂಪ್ರದಾಯ ಎಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಅಂದಾಗ ಮಾತ್ರ ಸಮಾಜ ಪರಿವರ್ತನೆ ಆಗಲು ಸಾದ್ಯ ಎಂದು ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.ಭಾನುವಾರ ರಾತ್ರಿ ತಾಲೂಕಿನ ಬಮ್ಮಹಳ್ಳಿ ಗ್ರಾಮದಲ್ಲಿ ಆಲಮೇಲ ಗುರು ಸಂಸ್ಥಾನ ಹಿರೇಮಠದ ಲಿಂ. ಮಳೇಂದ್ರ ಶಿವಾಚಾರ್ಯರ ಪುಣ್ಯಸ್ಮರಣೆಯ ಅಂಗವಾಗಿ ಬಮ್ಮನಹಳ್ಳಿ ಶಾಖಾ ಮಠದಲ್ಲಿ ಜಾತ್ರಾ ಮಹೋತ್ಸವ ಮತ್ತು ಲಿಂ. ಮಳೇಂದ್ರ ಶಿವಾಚಾರ್ಯರ ಬೆಳ್ಳಿ ಮೂರ್ತಿ ಉತ್ಸವ ಹಾಗೂ ಧರ್ಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಇಂದು ಎಷ್ಟೇ ಗಳಿಸಿದರೂ ವೃದ್ದಾಪ್ಯ ಜೀವನ ವೃದ್ದಾಶ್ರದಲ್ಲಿ ಕಳೆಯುವಂತಾಗುತ್ತಿದೆ. ಅದಕ್ಕೆ ಕಾರಣ ಸಂಸ್ಕಾರ ಇಲ್ಲದಿರುವುದು. ಈ ರೀತಿಯ ಕೆಟ್ಟ ಸಂಪ್ರದಾಯ ಸುಶಿಕ್ಷಿತರಲ್ಲೆ ಹೆಚ್ಚಾಗುತ್ತಿದೆ. ಅದನ್ನು ಹೋಗಲಾಡಿಸಬೇಕು ಎಂದರೆ ಸಂಸ್ಕಾರ ಸಂಪ್ರದಾಯ…
ಆಲಮಟ್ಟಿ ಮಂಜಪ್ಪ ಹರ್ಡೇಕರ ಸ್ಮಾರಕ ಶಾಲೆ ಎಸ್ಸೆಸ್ಸೆಲ್ಸಿ ಮಕ್ಕಳ ಬೀಳ್ಕೊಡುಗೆ | ಪ್ರತಿಭಾ ಪುರಸ್ಕಾರ ಆಲಮಟ್ಟಿ: ವಿದ್ಯಾರ್ಥಿಗಳು ತಮ್ಮ ಭವಿಷ್ಯತ್ತಿನ ಬದುಕಿಗಾಗಿ ಸುಂದರ ಕನಸು ಕಾಣಬೇಕು. ಆ ಕನಸು ನನಸಿಗೆ ದಿಟ್ಟ ಸಂಕಲ್ಪ ಭಾವ ತೋರಬೇಕು. ಹಲವು ಸವಾಲುಗಳ ಮಧ್ಯೆ ಗುರಿ, ಛಲ ಸಾಕಾರಕ್ಕೆ ಮುನ್ನುಡಿ ಬರೆಯಬೇಕು.ಶ್ರಮದ ನ್ಯಾಯ ಮಾರ್ಗದಲ್ಲಿ ಜೀವನ ಮೌಲ್ಯ ಕಟ್ಟಿಕೊಳ್ಳಬೇಕು. ಅಂಥದೊಂದು ಆತ್ಮವಿಶ್ವಾಸ ಎದೆಯಲ್ಲಿ ಇದ್ದರೆ ಖಂಡಿತ ಯಶಸ್ಸು ಸಾಧ್ಯ ಎಂದು ಧಾರವಾಡ ಪೋಲಿಸ್ ಆಯುಕ್ತರ ಕಚೇರಿ ಕಾನೂನು ವಿಭಾಗದ ಸಹಾಯಕ ನಿರ್ದೇಶಕಿ ಗೀತಾ ಹೊಸಗಾಣಿಗೇರ ಹೇಳಿದರು. ಸ್ಥಳೀಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ಸೆಸ್ಸೆಲ್ಸಿ ಮಕ್ಕಳ ಬೀಳ್ಕೊಡುಗೆ,ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ನಿಮ್ಮ ಅಂತಃಶಕ್ತಿಯಿಂದ ಸಮಯೋಚಿತವಾಗಿ ನಿಭಾಯಿಸಿಕೊಳ್ಳಬೇಕು ಎಂದರು. ಮೌಲ್ಯಯುತ ಶ್ರಮ,ಶ್ರದ್ಧೆ, ಪ್ರಾಮಾಣಿಕ ಬದ್ದತೆ ಗುಣಗಳೇ ಸಾಧನೆಯ ಸಾಧನಗಳಾಗಿವೆ. ಮನಸ್ಸು ಧೃಡತೆಯಿಂದ ಸಾಗಿದರೆ ಫಲ ದೊರೆಯುವದು. ಯಾವುದೇ…
ವಿಜಯಪುರ: ಕಕ್ಷಿದಾರರು ಬಹಳ ವರ್ಷ ಅಲೆದಾಡುವ ಬದಲು ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ತಮ್ಮ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಹಣ ಮತ್ತು ಸಮಯ ಎರಡೂ ಉಳಿಯುವಾದರಿಂದ ಸಾರ್ವಜನಿಕರು ಜನತಾ ನ್ಯಾಯಾಲಯದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ ಅವರು ಕರೆ ನೀಡಿದರು.ಮಾ.೧೬ರಂದು ನಡೆದ ರಾಷ್ಟ್ರೀಯ ಲೋಕ ಅದಾಲತನ್ನು ನಡೆಸಿ ಅವರು ಮಾತನಾಡಿ, ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗಿದ್ದ ಹಲವಾರು ಪ್ರಕರಣಗಳ ಪೈಕಿ ಒಟ್ಟು ೧೧,೫೫೭ ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಅವುಗಳಲ್ಲಿ ಆಸ್ತಿ ವಿಭಾಗ ಕೋರಿದ ೧೬೯ ದಾವೆಗಳು, ೨೨೭ ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿದ ೧೨೫ ಪ್ರಕರಣಗಳು, ಜೀವನಾಂಶ ಕೋರಿ ಸಲ್ಲಿಸಿದ ೬೩ ಪ್ರಕರಣಗಳು, ರಾಜಿಯಾಗಬಹುದಾದ ೭೮ ಕ್ರಿಮಿನಲ್ ಪ್ರಕರಣಗಳು ಹಾಗೂ ೫೧೮ ಅಮಲ್ಜಾರಿ ಪ್ರಕರಣಗಳು ಸೇರಿವೆ ಎಂದು ಮಾಹಿತಿ…
ವಿಜಯಪುರ: ವಿಜಯಪುರ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ವಾಯುಮಾಲಿನ್ಯ ನಿಯಂತ್ರಣ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಸಸಿ ನೆಡುವುದರ ಮೂಲಕ ಈ ಕಾರ್ಯಕ್ರಮವನ್ನು ಚಾಲನೆಗೊಳಿಸಲಾಯಿತು.ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಾದ ವಸಂತ ಈಶ್ವರ ಚವ್ಹಾಣ, ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಜಿ.ಅರ್.ಹೊಸಮನಿ, ಮೋಟಾರು ವಾಹನ ನಿರೀಕ್ಷಕರಾದ ಮಹ್ಮದ ಹುಸೇನ್, ರಾಜು.ಬಿ.ಅಳಗುಂಡಿ, ಎನ್.ಎಂ.ಶೇಖ್, ಸಂತೋಷ ಪಾಟೀಲ, ಮೋಟಾರು ವಾಹನ ಮಾಲಕರ ಪ್ರತಿನಿಧಿಗಳಾದ ಶ್ರೀಮಂತ ಝಳಕಿ, ರಾಜು ಕಟ್ಟಿಮನಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ವಿಜಯಪುರ: ಸಾರ್ವತ್ರಿಕ ಲೋಕಸಭೆ ಚುನಾವಣೆ -೨೦೨೪ ಪ್ರಯುಕ್ತ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಸಾರ್ವಜನಿಕರು ಪಡೆದಂತಹ ಪರವಾನಿಗೆ ಪಡೆದ ಶಸ್ತ್ರಾಸ್ತಗಳ ಠೇವಣಿ ಕುರಿತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸ್ಕ್ರೀನಿಂಗ್ ಕಮಿಟಿ ರಚಿಸಲಾಗಿದೆ.ಸಾರ್ವಜನಿಕರು ಪರವಾನಿಗೆ ಪಡೆದ ಶಸ್ತ್ರಾಸ್ತಗಳ ಠೇವಣಿಯಿಂದ ವಿನಾಯತಿ ಪಡೆಯ ಬಯಸುವವರು ಮಾ.೨೫ ಒಳಗಾಗಿ ತಮ್ಮ ಮನವಿಗಳನ್ನು ಪೊಲೀಸ್ ಉಪಾಧೀಕ್ಷಕರ ಕಚೇರಿಗೆ ಮನವಿ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಂದ ಸ್ವಿಕೃತವಾದ ಮನವಿಗಳನ್ನು ಸ್ಕ್ರೀನಿಂಗ್ ಯಲ್ಲಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ನಗರದ ದರಬಾರ ಹಾಗೂ ಲೋಯಾಲ ಕಾಲೇಜುಗಳಲ್ಲಿ ಸ್ಥಾಪಿಸಲಾಗಿರುವ ದ್ವಿತೀಯ ಪಿ ಯು ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಟಿ. ಭೂ ಬಾಲನ್ ಅವರು ಸೋಮವಾರದಂದು ಭೇಟಿ ನೀಡಿ ಪರೀಕ್ಷಾ ಕೇಂದ್ರಗಳ ಕಾರ್ಯ ವೈಖರಿಯನ್ನು ಪರಿಶೀಲಿಸಿದರು.
ವಿಜಯಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮುಸ್ಲಿಂ ವಸತಿ (ಆಂಗ್ಲ ಮಾಧ್ಯಮ) ಶಾಲೆ ಹಾಗೂ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದ ೬ನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಮಾ.೩೧ ರವರೆಗೆ ವಿಸ್ತರಿಸಲಾಗಿದೆ.ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ website:https://sevasindhuservices.Karnataka.gov.inಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.೭೫ರಷ್ಟ್ಟು ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳಿಗೆ ಶೇ.೨೫ರಷ್ಟು ಮೆರಿಟ್ ಅಥವಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ವಸತಿ ಶಾಲೆಗಳಲ್ಲಿ ಶೇ.೫೦ರಷ್ಟು ಹೆಣ್ಣು ಮಕ್ಕಳಿಗಾಗಿ ಮೀಸಲಿರಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ನೋಟ್‌ಬುಕ್, ಲೇಖನಿ ಸಾಮಗ್ರಿಗಳು, ಸ್ಕೂಲ್ ಬ್ಯಾಗ್ ಹಾಗೂ ಊಟ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ, ಮೌಲಾನಾ ಆಝಾಧ ಭವನ,…
ವಿಜಯಪುರ: ಇದೇ ಮಾ.೨೫ರಿಂದ ಏ.೬ ರವರೆಗೆ ಎಸ್‌ಎಸ್‌ಎಲ್ ಸಿ ಪರೀಕ್ಷೆಗಳು ನಡೆಯಲಿದ್ದು, ವ್ಯವಸ್ಥಿತ ಹಾಗೂ ಸೂಸೂತ್ರವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಸೋಮವಾರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನಡೆದ ಎಸ್‌ಎಸ್ ಎಲ್ ಸಿ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರುಜಿಲ್ಲೆಯಲ್ಲಿ ೧೨೭ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು ೪೧,೭೪೯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸುವ ಕಾರ್ಯವಾಗಬೇಕು. ಪರೀಕ್ಷೆಯ ವೇಳೆ ಯಾವ ಲೋಪವಾಗದಂತೆ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಹಂತದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ೮ ಜಿಲ್ಲಾ ಮಟ್ಟದ ಜಾಗೃತದಳ, ತಾಲೂಕು ಮಟ್ಟದಲ್ಲಿ ಪ್ರತಿ ತಾಲೂಕಿಗೂ ೩ ಜಾಗೃತದಳ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಯಾವುದೇ ಅಧಿಕಾರಿ ಅಥವಾ. ಸಿಬ್ಬಂದಿ ಮೊಬೈಲ್ ಪೋನ್ ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ಪರೀಕ್ಷೆ ಅವಧಿಯಲ್ಲಿ…
ವಿಜಯಪುರ: ಜಿಲ್ಲಾ ಅಧ್ಯಕ್ಷರ ಸೂಚನೆ ಮೇರೆಗೆ ಬಿಜೆಪಿ ನಗರ ಮಂಡಲದ ಓಬಿಸಿ ಮೋರ್ಚಾ, ಅಲ್ಪಸಂಖ್ಯಾತರ ಮೋರ್ಚಾ, ರೈತ ಮೋರ್ಚಾ, ಮಹಿಳಾ ಮೋರ್ಚಾಗೆ, ಈ ಕೆಳಕಂಡ ಮುಖಂಡರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಆದೇಶ ಹೊರಡಿಸಿದ್ದಾರೆ.ಹಿಂದುಳಿದ ವರ್ಗಗಳ ಮೋರ್ಚಾ:ಉಪಾಧ್ಯಕ್ಷರು ನೀತಿನಖಂಡಾಗಳೆ, ಭೀಮರಾಯ ಮಾಶ್ಯಾಳ, ಸಂಜು ಬಡಿಗೇರ (ಜೈ ಜನುಮಾನ ನಗರ), ಸತೀಶ ಅಗಸರ, ರಾಹುಲ ಪನಾಳಕರ, ಕಾರ್ಯದರ್ಶಿಗಳು ಪ್ರಭಾಕರ ಪೂಜಾರಿ, ಮಹಾರಾಜ ಕೋಟಗೊಂಡ, ಜಟ್ಟಿಂಗರಾಯ ಹುಲ್ಲೂರ, ನಾಗರಾಜ ನಿಂಬಾಳ, ಶ್ರೀಧರ ಮಹೀಂದ್ರಕರ, ಕೋಶಾಧ್ಯಕ್ಷರು ಧನಂಜಯ ನಿಮಾಗ್ರೆ.ಅಲ್ಪಸಂಖ್ಯಾತರ ಮೋರ್ಚಾ:ಉಪಾಧ್ಯಕ್ಷರು ಪಾರೀಶ ಶಿರಹಟ್ಟಿ, ಭರಮಣ್ಣ ಶೆಟ್ಟಿ, ಶೀತಲ ಮಹಾವೀರ ಪಾಟೀಲ, ಸಿಮೋನ್ ಗೌಡಲ್ಲರ್, ಕಾರ್ಯದರ್ಶಿಗಳು ಜಾನ್ಸನ್ ಗೌಡ್ಯಾಳರ, ಸಂಪತ್ ವಣಕುದರಿ, ಸನ್ನಿ ಪೋರವಾಲ, ಪ್ರಶಾಂತ ಕೇಶಿ, ಮಂಜುನಾಥ ಸೌದಿ, ಕೋಶಾಧ್ಯಕ್ಷರು ಅನೀಲ ಬಾಗೇವಾಡಿ.ಮಹಿಳಾ ಮೋರ್ಚಾ:ಉಪಾಧ್ಯಕ್ಷರು ಮೀನಾ ಕುಂದನಗಾರ, ಮೀತಾ ದೇಸಾಯಿ, ಮಂಗಲಾಬಾಯಿ ಚವ್ಹಾಣ, ಕಾವೇರಿ ದಯಾನಂದ ಸ್ವಾಮಿ, ರಶ್ಮೀ ಆಳಗಿ, ಕಾರ್ಯದರ್ಶಿಗಳು ಭಾರತಿ ತೇಲಿ, ವೈಶಾಲಿ ಅಗಸರ, ಶುಭಾಂಗಿ ಇಂಗಳೆ,…
ಸಿಂದಗಿಯ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಕವಿಗೋಷ್ಠಿ & ಕಾವ್ಯ ಕುಂಚ ಕಾರ್ಯಕ್ರಮ ವಿಜಯಪುರ: ಕಾವ್ಯ ಸಂಸಾರಕ್ಕೆ ಕವಿಯೇ ಬ್ರಹ್ಮ. ಅವನಿಗೆ ರುಚಿಸುವಂತೆ ಇಡೀ ವಿಶ್ವವನ್ನೇ ಬದಲಿಸುವವನೇ ಕವಿ ಎಂದು ಆದರ್ಶ ವಿದ್ಯಾಲಯದ ಪ್ರಾಚಾರ್ಯ ಶಿವಪ್ಪಗೌಡ ಬಿರಾದಾರ ಹೇಳಿದರು.ಸಿಂದಗಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ 88ನೇ ತ್ರಿಮೂರ್ತಿ ಶಿವ ಜಯಂತಿ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡ ಶಿವಸ್ಮೃತಿ ಕವಿಗೋಷ್ಠಿ ಹಾಗೂ ಕಾವ್ಯ ಕುಂಚ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವ್ಯ ಹುಟ್ಟಲು ಮುಖ್ಯ ಕಾರಣ ಪ್ರತಿಭೆ, ಇದೇ ಕಾವ್ಯದ ಬೀಜ. ಕಾವ್ಯ ಗಂಗೋತ್ರಿ ಇದು ಕವಿಯಲ್ಲಿರುವ ವಿಶಿಷ್ಟ ಶಕ್ತಿ, ಹೊಳಪು ತೇಜಸ್ಸುಮಯವಾಗಿದೆ ಎಂದರು.ಕಾವ್ಯವು ಸತತ ಅಧ್ಯಯನದ ಮೂಲಕ ರಚನೆಯಾಗುತ್ತದೆ. ಆಗ ಕವಿಯು ಚೇತನವನ್ನು ಅಚೇತನವನ್ನಾಗಿ, ಅಚೇತನವನ್ನು ಸಚೇತನವನ್ನಾಗಿ ಮಾಡಬಲ್ಲ ಕವಿಗೆ ವರ್ತಮಾನ, ಭೂತ, ಭವಿಷತ್ತನ್ನು ತೋರುವ ಸಾಮರ್ಥ್ಯವಿರಬೇಕು ಎಂದರು.ಅತಿಥಿಯಾಗಿ ಎಚ್ ಜಿ ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಮಾತನಾಡಿದರು.ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಪವಿತ್ರಾಜಿ ಸಾನಿಧ್ಯ ವಹಿಸಿದ್ದರುಈ ಸಂದರ್ಭದಲ್ಲಿ ನಡೆದ ಕಾವ್ಯ ಕುಂಚ…
