ಸಿಂದಗಿಯ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಕವಿಗೋಷ್ಠಿ & ಕಾವ್ಯ ಕುಂಚ ಕಾರ್ಯಕ್ರಮ
ವಿಜಯಪುರ: ಕಾವ್ಯ ಸಂಸಾರಕ್ಕೆ ಕವಿಯೇ ಬ್ರಹ್ಮ. ಅವನಿಗೆ ರುಚಿಸುವಂತೆ ಇಡೀ ವಿಶ್ವವನ್ನೇ ಬದಲಿಸುವವನೇ ಕವಿ ಎಂದು ಆದರ್ಶ ವಿದ್ಯಾಲಯದ ಪ್ರಾಚಾರ್ಯ ಶಿವಪ್ಪಗೌಡ ಬಿರಾದಾರ ಹೇಳಿದರು.
ಸಿಂದಗಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ 88ನೇ ತ್ರಿಮೂರ್ತಿ ಶಿವ ಜಯಂತಿ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡ ಶಿವಸ್ಮೃತಿ ಕವಿಗೋಷ್ಠಿ ಹಾಗೂ ಕಾವ್ಯ ಕುಂಚ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವ್ಯ ಹುಟ್ಟಲು ಮುಖ್ಯ ಕಾರಣ ಪ್ರತಿಭೆ, ಇದೇ ಕಾವ್ಯದ ಬೀಜ. ಕಾವ್ಯ ಗಂಗೋತ್ರಿ ಇದು ಕವಿಯಲ್ಲಿರುವ ವಿಶಿಷ್ಟ ಶಕ್ತಿ, ಹೊಳಪು ತೇಜಸ್ಸುಮಯವಾಗಿದೆ ಎಂದರು.
ಕಾವ್ಯವು ಸತತ ಅಧ್ಯಯನದ ಮೂಲಕ ರಚನೆಯಾಗುತ್ತದೆ. ಆಗ ಕವಿಯು ಚೇತನವನ್ನು ಅಚೇತನವನ್ನಾಗಿ, ಅಚೇತನವನ್ನು ಸಚೇತನವನ್ನಾಗಿ ಮಾಡಬಲ್ಲ ಕವಿಗೆ ವರ್ತಮಾನ, ಭೂತ, ಭವಿಷತ್ತನ್ನು ತೋರುವ ಸಾಮರ್ಥ್ಯವಿರಬೇಕು ಎಂದರು.
ಅತಿಥಿಯಾಗಿ ಎಚ್ ಜಿ ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಮಾತನಾಡಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಪವಿತ್ರಾಜಿ ಸಾನಿಧ್ಯ ವಹಿಸಿದ್ದರು
ಈ ಸಂದರ್ಭದಲ್ಲಿ ನಡೆದ ಕಾವ್ಯ ಕುಂಚ ಕಾರ್ಯಕ್ರಮದಲ್ಲಿ ಗುಂಡಣ್ಣ ಕುಂಬಾರ, ಕಾವ್ಯ ನಾಯ್ಕ, ಎಮ್ ಬಿ ಅಲ್ದಿ, ಪ್ರಕಾಶ ಮೂಡಲಗಿ, ಮೀನಾಕ್ಷಿ ವಾಗ್ಮೊರೆ, ಡಾ. ಪ್ರಶಾಂತ ಬಮ್ಮಣ್ಣಿ, ಎಸ್ ಸಿ ಬಿರಾದಾರ, ಮಹಾಂತೇಶ ನಾಗೋಜಿ, ಶೃದ್ದಾನಂದ ಬಡಿಗೇರ, ಪ್ರಹ್ಲಾದ ಜಿಕೆ ಭಾಗವಹಿಸಿದ್ದರು.
20 ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು
ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ ಬಿ ಜಿ ಪಾಟೀಲ ಸ್ವಾಗತಿಸಿ ಪ್ರಸ್ತಾವಿಕರಿಸಿದರು
ಈ ಸಂದರ್ಭದಲ್ಲಿ ಬ್ರಹ್ಮಾಕುಮಾರ ಕೆಂಪೇಗೌಡ, ವಿಜಯಕುಮಾರ ತೇಲಿ, ತಾನಾಜಿ ಕನಸೆ, ಎಸ್ ಎಸ್ ಬುಳ್ಳಾ, ಎಸ್ ವೈ ಬಿರಾದಾರ, ಶಿಕ್ಷಕ ಸಿದ್ದಲಿಂಗ ಚೌದರಿ, ಸೀಮಾ, ಕೆ ಎಸ್ ಪತ್ತಾರ, ಎಸ್ ಎಸ್ ಪಾಟೀಲ, ಪರಿಮಳಾ ಪಾಟೀಲ ಐಶ್ವರ್ಯ, ಮೇಘಾ,ಶಿಕ್ಷಕಿ ಪ್ರೇಮಾ ನಾಯಕ, ಶಿವನಗೌಡ ಬಿರಾದಾರ ಸೇರಿದಂತೆ ಮತ್ತಿತರಿದ್ದರು.
ಕುಮಾರಿ ಕಾವ್ಯ ನಾಯಕ, ಡಾ ಪ್ರಕಾಶ ರಾಗರಂಜನಿ ಪ್ರಾರ್ಥಿಸಿದರು.

