Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಲಕೇರಿಯಲ್ಲಿ ವಿವಿಧೆಡೆ ೭೫ ನೇ ಗಣರಾಜ್ಯೋತ್ಸವ | ಗಮನ ಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಕಲಕೇರಿ: ಸ್ಥಳೀಯ ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ವಿವಿದ ಶಾಲಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ೭೫ ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ ದ್ವಜಾರೋಹಣ ನೆರವೆರಿಸಿ ಮಾತನಾಡಿ ಸಮಾಜದಲ್ಲಿನ ಅಸಮಾನತೆಯನ್ನು ಹೊಗಲಾಡಿಸಿ ಎಲ್ಲರನ್ನು ಸಮಾನ ರೀತಿಯಲ್ಲಿ ಬದುಕಲು ಅವಕಾಶ ಕಲ್ಪಿಸಿರುವುದು ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ ಅಂಬೇಡ್ಕರವರ ಕೊಡುಗೆ ಆಗಿದ್ದು, ಈ ದೇಶದ ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು, ಮುಖ್ಯವಾಗಿ ಬಲಿಷ್ಠ ರಾಷ್ಟç ನಿರ್ಮಾಣಕ್ಕೆ ಪ್ರತಿಯೋಬ್ಬರು ಕೈಜೊಡಿಸಬೇಕು ಎಂದು ಸಲಹೆ ನಿಡಿದರು.ಈ ವೇಳೆ ಬಸವೇಶ್ವರ ಪ್ರಾಥಮಿಕ ಶಾಲೆ,ಬಸವೇಶ್ವರ ಪ್ರೌಡಶಾಲೆಯ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಈ ವೇಳೆ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಪ್ರಾಚಾರ್ಯ ಸಿ ಎಸ್ ಹಿರೇಮಠ,ಮುಖ್ಯಗುರು ಜಗದೀಶ ಗುಮಶೇಟ್ಟಿ,ಶಾಂತು ಧುರ್ಗಿ, ಎಸ್ ಪಿ ರಾಣಗಟ್ಟಿ,ಶಿವಾನಂದ ಹರಿಜನ್ ಮಾತನಾಡಿದರು.ನಿರ್ಧೇಶಕರಾದ ಷಣ್ಮುಕಪ್ಪ ಝಳಕಿ,ದೇವಿಂದ್ರ…
ಚಿಮ್ಮಡ: ಗ್ರಾಮದಲ್ಲಿ ೭೫ನೇ ಗಣರಾಜೋತ್ಸವವನ್ನು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಡಗರ ಸಂಭ್ರಮದೊಂದಿಗೆ ಅಧ್ದೂರಿಯಿಂದ ಆಚರಿಸಲಾಯಿತು.ಗ್ರಾಮದ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕವಾಯತು, ಪ್ರಭಾತ್ ಫೇರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.ಸ್ಥಳಿಯ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಧ್ವಜಾರೊಹಣವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾ ಅಶೋಕ ಮೋಟಗಿ ನೆರೆವೇರಿಸಿದರು.ಉಪಾಧ್ಯಕ್ಷೆ ಪ್ರೇಮಾ ಪರಪ್ಪಾ ಗೋವಿಂದಗೋಳ, ಮಾಜಿ ಅಧ್ಯಕ್ಷರಾದ ಆನಂದ ಕವಟಗೋಪ್ಪ, ಗುರಲಿಂಗಪ್ಪಾ ಪೂಜಾರಿ, ಪ್ರಭು ನೇಸೂರ, ಪ್ರಕಾಶ ಪಾಟೀಲ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾಲಿಂಗ ಮಾಯಣ್ಣವರ, ಮನೋಜ ಹಟ್ಟಿ ಸೇರಿದಂತೆ ಗ್ರಾ.ಪಂ. ಸದಸ್ಯರು ಹಲವಾರು ಜನ ಪ್ರಮುಖರು ಆಗಮಿಸಿದ್ದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ ಆವರಣದಲ್ಲಿ ನಡೆದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯದ್ಯಕ್ಷರಾದ ಶಂಕರ ಬಟಕುರ್ಕಿ ನೆರವೇರಿಸಿದರು. ಉಪಾಧ್ಯಕ್ಷರಾದ ವಿರುಪಾಕ್ಷ ಕುದರಿ, ನಿರ್ದೆಶಕರಾದ ನಿಂಗಣ್ಣ ಪೂಜಾರಿ, ಹಣಮಂತ ನೇಸೂರ, ರಾಮಪ್ಪ ಜಗದಾಳ ಸೇರಿದಂತೆ ಹಲವಾರು ಜನ ರೈತ ಪ್ರಮುಖರು ಆಗಮಿಸಿದ್ದರು.ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಧ್ವಜಾರೋಹಣವನ್ನು ಮುಖ್ಯೋಪಾದ್ಯಾಯೆ…
ವಿಜಯಪುರ: ಗಣರಾಜ್ಯೋತ್ಸವ ಅಂಗವಾಗಿ ವಿಜಯಪುರ ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕುಗಳು, ಶಿಕ್ಷಣ ಹಕ್ಕುಗಳು, ಧಾರ್ಮಿಕ ಹಕ್ಕುಗಳು ಇವೆಲ್ಲವೂ ಸಹ ಸಿಕ್ಕಿದ್ದು. ಸಂವಿಧಾನ ಎಂಬುದು ಭಾರತದ ಸರ್ವೋಚ್ಛ ಕಾನೂನು. ನಮ್ಮ ಸಂವಿಧಾನವು ರಷ್ಯಾ, ಬ್ರಿಟನ್, ಅಮೆರಿಕಾ, ಇತರೆ ದೇಶಗಳ ಸಂವಿಧಾನಗಳ ಅಂಶಗಳನ್ನು ಹೊಂದಿದ್ದು, ಇದೊಂದು ಬೃಹತ್ ಸಂವಿಧಾನವಾಗಿದ್ದು, ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ ಬಿ.ಆರ್.ಅಂಬೇಡ್ಕರ್‌ರವರು. ಆದ್ದರಿಂದ ಅಂಬೇಡ್ಕರ್ ರನ್ನು ಭಾರತ ಸಂವಿಧಾನದ ಪಿತಾಮಹರು ಎನ್ನಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಸಿ. ಬಿ ದೇವರಮನಿ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಪಂಚಾಯತಿಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಮುದ್ದೇಬಿಹಾಳ: ತಾಲೂಕಿನ ನೇಬಗೇರಿ ಗ್ರಾಮದ ರವಿಚಂದ್ರ ಕಮ್ಮಾರ ಜ.೨೫ ರಂದು ಕಾಣೆಯಾಗಿದ್ದಾನೆ ಎಂದು ಆತನ ಪತ್ನಿ ಮಾಶಾಬಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಪ್ರೇಮ ವಿವಾಹವಾಗಿದ್ದ ಸಧ್ಯ ಪಟ್ಟಣದ ಗಣೇಶ ನಗರದಲ್ಲಿ ವಾಸವಾಗಿದ್ದ ದಂಪತಿ ಮಧ್ಯೆ ಲೋನ್ ಕಟ್ಟುವ ವಿಷಯಕ್ಕಾಗಿ ಮನಸ್ತಾಪವಾಗಿದ್ದು, ಅಂದು ಮನೆಯಿಂದ ಹೋದವನು ಮರಳಿ ಮನೆಗೆ ಬಂದಿಲ್ಲ ಎಂದು ಪತ್ನಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.ಪೋಟೋದಲ್ಲಿರುವ ಚಹರಾಪಟ್ಟಿಯ ವ್ಯಕ್ತಿ ಯಾರಿಗಾದರೂ ಕಂಡಲ್ಲಿ ೦೮೩೫೬-೨೨೦೩೩೩, ೦೮೩೫೬-೨೨೦೩೩೨ ನಂಬರ್ ಗಳಿಗೆ ಇಲ್ಲವೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ
ಮುದ್ದೇಬಿಹಾಳ: ತಾಲೂಕಿನ ರಕ್ಕಸಗಿ ಗ್ರಾ.ಪಂ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ೧೧ ಅಂಗನವಾಡಿ ಕೇಂದ್ರಗಳಿಗೆ ಕುರ್ಚಿ ಮತ್ತು ಟೇಬಲ್‌ಗಳನ್ನು ಪಂಚಾಯತ ನ ಅಧ್ಯಕ್ಷ ರಿತೇಶ್ ನಾಡಗೌಡರು ವಿತರಿಸಿದರು.ಈ ವೇಳೆ ಸದಸ್ಯರಾದ ಶಂಕರಗೌಡ ನಾಡಗೌಡರ, ನಿಂಗಣ್ಣ ಅಲ್ಲಾಪೂರ, ನಾಗಮ್ಮ ಹುಡೇದ, ಕಾರ್ಯದರ್ಶಿ ಸಿ.ಬಿ.ಹೊಳಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಮುದ್ದೇಬಿಹಾಳದಲ್ಲಿ ವಿಳಂಬವಾದ ತಾಲೂಕಾಡಳಿತದ ಧ್ವಜಾರೋಹಣ! ಮುದ್ದೇಬಿಹಾಳ: ಪಟ್ಟಣದಲ್ಲಿ ವಿವಿಧೆಡೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನ್ಯಾಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ ಧ್ವಜಾರೋಹಣವನ್ನು ನೆರವೇರಿಸಿದರು. ನ್ಯಾಯವಾದಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದಲ್ಲಿ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಧ್ವಜಾರೋಹಣ ನೆರವೇರಿಸಿದರು.ಈ ವೇಳೆ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.ಪೊಲೀಸ್ ಠಾಣೆಯ ಸಿಪಿಐ ಕಾರ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದಲ್ಲಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಕಾರ್ಯಾಲಯದ ವತಿಯಿಂದ ಪಿಎಸ್‌ಐ ಸಂಜೀವ ತಿಪರೆಡ್ಡಿ, ತಾಲೂಕು ಪಂಚಾಯತ ಕಾರ್ಯಾಲಯದ ವತಿಯಿಂದ ಪ್ರಭಾರ ಸಹಾಯಕ ನಿರ್ದೇಶಕ(ಪಂ.ರಾ) ಖೂಬಾಸಿಂಗ್ ಜಾಧವ, ತಾಲೂಕು ಸರ್ಕಾರಿ ಆಸ್ಪತ್ರೆಯ ವತಿಯಿಂದ ಡಾ.ಅನೀಲಕುಮಾರ ಶೇಗುಣಶಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ಡಾ.ಸತೀಶ ತಿವಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಬಿಇಓ ಬಸವರಾಜ ಸಾವಳಗಿ, ಪುರಸಭೆ ಕಾರ್ಯಾಲಯದ ವತಿಯಿಂದ ಮಲ್ಲನಗೌಡ ಬಿರಾದಾರ, ವ್ಹಿಬಿಸಿ ಹೈಸ್ಕೂಲ್ ವತಿಯಿಂದ ಮುಖ್ಯ ಗುರು ಆಯ್.ಆರ್.ಗೌಡರ, ಜ್ಞಾನಭಾರತಿ ವಿದ್ಯಾಮಂದಿರದ…
ವಿಜಯಪುರ: ಮಗುವಿನ ಶಿಕ್ಷಣದ ಜೊತೆಗೆ ಸಮಾಜದ ಮೌಲ್ಯ ಹಾಗು ಸಂಸ್ಕಾರ ನೀಡುವ ಅತ್ಯವಶ್ಯಕತೆ ಉಂಟಾಗಿದೆ ಎಂದು ಮನಗೂಳಿ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಸ್ವಾಮಿಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರುಶುಕ್ರವಾರ ಕೀರ್ತಿ ನಗರದಲ್ಲಿರುವ ಸರಸ್ವತಿ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ” ಮಗುವಿನ ಪರಿಪೂರ್ಣ ವ್ಯಕ್ತಿತ್ವ ರೂಪಿಸುವವಲ್ಲಿ ಶಿಕ್ಷಕರ ಪಾತ್ರ” ಕುರಿತು ಚಿಂತನ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಮಗುವಿನ ಸರ್ವಾಂಗೀಣ ಬೆಳವಣಿಗೆ ಮಹತ್ವ ನೀಡಬೇಕೇಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಗ೯ದ ಕೋಣೆಯಲ್ಲಿ ಮಗುವಿನ ಪರಿಪೂರ್ಣ ವ್ಯಕ್ತಿತ್ವ ವಿಕಸನಗೊಳಿಸುವುದೇ ಶಿಕ್ಷಣವೆಂದುಹೇಳಿದ ಅವರು, ಮಗುವಿನ ಮೇಲೆ ಪಾಲಕರು ಹಾಗು ಶಿಕ್ಷಕರು ತುಂಬ ಒತ್ತಡ ಹೇರುವದು ಮನೋವೈಜ್ಞಾನಿಕವಾಗಿ ಸರಿಯಲ್ಲ. ಮಗು ಆಡುತ್ತಾ ಕಲಿಯಬೇಕೇಂದರು.ಎ ಎ ಪಾಸಿ೯ ವಿಶ್ರಾಂತ ಜಂಟಿ ನಿರ್ದೇಶಕ ಸಾವ೯ಜನಿಕ ಶಿಕ್ಷಣ ಇಲಾಖೆ ವಿಜಯಪುರ ಮಾತನಾಡಿ, ತರಬೇತಿ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಶಿಕ್ಷಕರು ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆ ಗುರುತಿಸುವ ಕಾರ್ಯ ಮಾಡುವುದೇ ಪ್ರಾಧ್ಯಾಪಕರ ಕತ೯ವ್ಯವೆಂದರು.ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ…
ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಜಾರಿಯಿಂದ ೫.೨೦ ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೊಳಪಡಲಿದೆ, ಆದರೆ ಅದನ್ನು ಜಾರಿಗೊಳಿಸಲು ಭೂಸ್ವಾಧೀನವೇ ಸವಾಲಾಗಿದೆ ಎಂದು ಕೆಬಿಜೆಎನ್ ಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಿರಿಯ ಐಎಎಸ್ ಅಧಿಕಾರಿ ಕೆ.ಪಿ. ಮೋಹನರಾಜ್ ಹೇಳಿದರು.ಆಲಮಟ್ಟಿಗೆ ಪ್ರಥಮ ಬಾರಿಗೆ ಆಗಮಿಸಿದ ಅವರು ವಿವಿಧ ಉದ್ಯಾನಗಳಲ್ಲಿನ ಕಾಮಗಾರಿ ಪರಿಶೀಲಿಸಿ, ರಾಕ್ ಉದ್ಯಾನದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ, ಅವಾರ್ಡ್ ಹಂತದಲ್ಲಿರುವ ಜಮೀನಿಗೆ ಪರಿಹಾರ ಕೊಡಲು ಇರುವ ತಾಂತ್ರಿಕ ತೊಂದರೆ ಬಗೆಹರಿಸಲಾಗುವುದು ಎಂದರು. ಕಳೆದ ಮೂರು ದಿನಗಳಿಂದ ಆಲಮಟ್ಟಿಯಲ್ಲಿದ್ದು, ವಲಯವಾರು ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ, ಯೋಜನೆ ಜಾರಿಗೆ ಉಂಟಾಗಿರುವ ತೊಡಕುಗಳನ್ನು ನಿವಾರಿಸಿ ಯಾವ ರೀತಿ ಜಾರಿಗೊಳಿಸಬೇಕು ಎಂದು ಒಂದು ಯೋಜನೆ ಹಾಗೂ ಕಾಲಮಿತಿ ಹಾಕಿಕೊಂಡು ಕಾರ್ಯೋನ್ಮುಖಗೊಳ್ಳಲಾಗುವುದು ಎಂದರು. ನಾರಾಯಣಪುರ ಭಾಗದ ಕಾಲುವೆಗಳಿಗೆ ಅಳವಡಿಸಿರುವ ಸ್ಕಡಾ ತಂತ್ರಜ್ಞಾನವನ್ನು ಆಲಮಟ್ಟಿ ಭಾಗದ ಕೆಲ ಕಾಲುವೆಯ ಯೋಜನೆಗಳಿಗೆ ಅಳವಡಿಸಲು…
ಕೆಬಿಜೆಎನ್ ಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜ್ ಅಭಿಮತ ಆಲಮಟ್ಟಿ: ಈ ಭಾಗದ ಏಳು ಜಿಲ್ಲೆಗಳ ಸುಮಾರು ೬.೨೦ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿರುವ ಆಲಮಟ್ಟಿ ಜಲಾಶಯ ನೀರಾವರಿಯ ದೇಗುಲ ಎಂದು ಕೆಬಿಜೆಎನ್ ಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ, ಹಿರಿಯ ಐಎಎಸ್ ಅಧಿಕಾರಿ ಕೆ.ಪಿ.ಮೋಹನರಾಜ್ ಅಭಿಪ್ರಾಯಪಟ್ಟರು. ಕೆಬಿಜೆಎನ್ ಎಲ್ ವತಿಯಿಂದ ಇಲ್ಲಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ, ವಿವಿಧ ಶಾಲೆಯ ಮಕ್ಕಳಿಂದ ಪಥಸಂಚಲನದ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಈ ಜಲಾಶಯ ಬರಪ್ರದೇಶದ ಸುಮಾರು ಏಳು ಜಿಲ್ಲೆಗಳ ಲಕ್ಷಾಂತರ ರೈತರ ಜೀವನಶೈಲಿಯನ್ನೇ ಬದಲಾಯಿಸಿದೆ ಎಂದರು. ಮುಳವಾಡ ಏತ ನೀರಾವರಿ ಯೋಜನೆಯ ಮೂಲಕ ಸುಮಾರು ೫೫ ಟಿಎಂಸಿ ಅಡಿಯಷ್ಟು ನೀರನ್ನು ಕಾಲುವೆಗೆ ಪಂಪಸೆಟ್ ಮೂಲಕ ಹರಿಸಲಾಗುತ್ತದೆ. ಇದರಿಂದ ಇಡೀ ಒಂದು ನದಿಯನ್ನೇ ಪಂಪಸೆಟ್ ಮೂಲಕ ಎತ್ತಿ ಹರಿಸಿದಂತಾಗುತ್ತದೆ, ಇದರಿಂದ ೨.೨೭ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಲಿದೆ ಎಂದರು. ಹನಿ ನೀರಾವರಿ ಯೋಜನೆಗಳನ್ನು ಹೆಚ್ಚೆಚ್ಚು ಜಾರಿಗೆ ಬಂದರೆ ನೀರಿನ ಹಿತಮಿತ ಉಳಿತಾಯದ ಜತೆಗೆ ಸವುಳು-ಜವುಳಿನ…
ಬ್ರಹ್ಮದೇವನಮಡು: ಸಿಂದಗಿ ತಾಲೂಕು ಬ್ರಹ್ಮದೇವನಮಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದ್ವಜಾರೋಹಣವನ್ನು ಎಸ್ಡಿಎಂಸಿ ಅಧ್ಶಕ್ಷ ಅಂಬ್ರುತ್ ದೊಡ್ಡಮನಿ ನೆರವೇರಿಸಿದರು.ಚನ್ನಮಲ್ಲಯ್ಶ ಹಿರೇಮಠ, ಮಲ್ಲಿಕಾಜು೯ನ ಮನಗೂಳಿ, ಬಾಲಚಂದ್ರ ಕರಿಕಲ್ಲ್, ನಿವೃತ್ತ ಶಿಕ್ಷಕ ಎಸ್.ವೈ.ಅಮರಗೋಳ, ಯಮನಪ್ಪ ಅಮರಗೋಳ, ಮುಖ್ಶಗುರು ರಘನಂದ ಉದ್ದಾರ,ನಮಂಜುನಾಥ ಸಿ.ಎಚ್.ಬಂದೇನಮಾಜ್ ಸೀತನೂರ, ಡಿ.ಕೆ.ಸೀತನೂರ, ಪತ್ರಕತ೯ ಮಲ್ಲು ಕೆಂಭಾವಿ,ಮಅಲೀಮ್ ರಾಜಾಕೋಳ, ಬುಡ್ಡಾ ಏವುರ, ಅಲ್ಲಾಪಟೇಲ ಸೀತನೂರ, ಮನೋಹರ ಗುಡಿಮನಿ, ಪರಸುರಾಮ ತೊನಶ್ಶಾಳ, ಮಡಿವಾಳಪ್ಪ ಅಮರಗೋಳ, ಮುಖ್ಶ ಅಡುಗೆಯ ಶ್ರೀದೇವಿ ಕೆಂಭಾವಿ, ಸೇರಿದಂತೆ ಮತ್ತಿತ್ತರಿದ್ದರು.ಅತಿಥಿ ಶಿಕ್ಷಕ ಅಹ್ಮದ ಸೀತನೂರ ಸ್ವಾಗತಿಸಿದರು. ಶಿಕ್ಷಕ ಮಹೇಶಕುಮಾರ ಟಿ.ಎಚ್.ವಂದಿಸಿದರು.ಈ ವೇಳೆ ಸಮಾಜ ಸೇವಕ,ಪ್ರಥಮ ದಜೆ೯ ಗುತ್ತಿಗೆದಾರ ಚಂದ್ರು ಕೆಂಭಾವಿ ಕೊಡ ಮಾಡಿದ ನೋಟ್ ಬುಕ್ ವಿದ್ಶಾಥಿ೯ಗಳಿಗೆ ವಿತರಿಸಲಾಯಿತು. ವಿದ್ಶಾಥಿ೯ಗಳಿಂದ ಸಾಂಸ್ಕ್ರತಿಕ ಕಾಯ೯ಕ್ರಮಗಳು ಜರುಗಿದವು.
