Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಕೇಂದ್ರ ಸರ್ಕಾರದ ಈ ಮಧ್ಯಂತರ ಬಜೆಟ್ ಜನಗಳ ವಿಶ್ವಾಸಕ್ಕೆ ಕೇಂದ್ರ ಸರ್ಕಾರವು ಅಂತರವನ್ನು ಕಾಯ್ದುಕೊಂಡಂತಾಗಿದೆ. ತೆರಿಗೆ ವಿಷಯಗಳಲ್ಲಿ ಮೃದು ಸ್ವಭಾವದ ಧೋರಣೆಯನ್ನು ತೋರದೆ. ತಮ್ಮದೇ ಹಿಡಿತವನ್ನು ಸಾಧಿಸಿದಂತಾಗಿದೆ. ಹೊಸ ತೆರಿಗೆ ರಿಟರ್ನಿನ ಪದ್ದತಿಗಳಲ್ಲಿ ಇನ್ಸೂರೆನ್ಸ್ ನ ಉಳಿತಾಯಕ್ಕೆ ಮಹತ್ವವನ್ನು ಮತ್ತು ಅಂಗವಿಕಲರಿಗೆ ಯಾವುದೇ ಸವಲತ್ತುಗಳನ್ನು ನೀಡಿರುವುದಿಲ್ಲ. ಇದು ಖಂಡನೀಯ ಎಂದು ನ್ಯಾಯವಾದಿ ಬಿ.ಎನ್.ಹೂಗಾರ ಪ್ರತಿಕ್ರಿಯಿಸಿದ್ದಾರೆ.ವೇತನಗಳನ್ನು ಪಡೆಯುವ ವ್ಯಕ್ತಿಗಳೊಂದಿಗೆ ಸಾಮಾನ್ಯ ವ್ಯವಹಾರ ಮಾಡುವ ಪ್ರತಿಯೊಬ್ಬರಿಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡಬಹುದಾಗಿತ್ತು ಮತ್ತು ಸಮಾನವಾಗಿ ಕಾಣಬಹುದಿತ್ತು. ಜಿಎಸ್ಟಿಯ ಕಾಯ್ದೆಗಳ ವಿಳಂಬಕ್ಕೆ ದಂಡ ಬಡ್ಡಿಗಳ ಬಗ್ಗೆ ವಿನಾಯಿತಿಗಳನ್ನು ನೀಡದಿರುವುದು ಮನುಷ್ಯತ್ವ ರಹಿತವಾಗಿದೆ. ಜಿಎಸ್ಟಿ ಕಾಯ್ದೆಯ ಹುಟ್ಟಿನಿಂದ ಮೊದಲನೇ ಎರಡು ಅಥವಾ ಮೂರು ವರ್ಷಗಳ ವಿನಾಯಿತಿ ವರ್ಷ ಎಂದು ಘೋಷಿಸಬಹುದು ಎಂಬ ನಿರೀಕ್ಷೆಯು ಸುಳ್ಳಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಇವುಗಳನ್ನು ಜಿಎಸ್ಟಿ ವ್ಯಾಪ್ತಿಯಲ್ಲಿ ತರಬಹುದು ಎಂಬ ನಿರೀಕ್ಷೆಯೂ ಶುದ್ಧ ಸುಳ್ಳಾಗುತ್ತಿದೆ ಎಂದು ಹೂಗಾರ ತಿಳಿಸಿದ್ದಾರೆ.
ಇಂಡಿ: ದೇಶದ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು’ ಎಂಬುದು ನಮ್ಮೆಲ್ಲರ ಅಭಿಪ್ರಾಯವಾಗಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.ಗುರುವಾರ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ಮಂಡಲ ವತಿಯಿಂದ ಮನೆ ಮನೆಗೆ ತೆರಳಿ ಗೊಡೆ ಬರಹ ಅಭಿಯಾನದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಎಂಬ ಗೋಡೆ ಬರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಬೇಕು ಎನ್ನುವುದು ಮುಖ್ಯ ಗುರಿಯಾಗಿದೆ. ಕಳೆದ 10 ವರ್ಷಗಳಿಂದ ಸುಭದ್ರ ಸರ್ಕಾರ ನೀಡುವ ಮೂಲಕ ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯತ್ತಿದ್ದಾರೆ. ದೇಶದ ಉನ್ನತಿಗೆ ಶ್ರಮಿಸಿದ್ಧಾರೆ. ಆ ಮೂಲಕ ಮೋದಿ ಕೈ ಬಲಪಡಿಸಬೇಕಿದೆ. ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಪಕ್ಷವನ್ನು ಸದೃಢ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಶೀಲವಂತ ಉಮರಾಣಿ, ಪುರಸಭೆ ಸದಸ್ಯ ದೇವೇಂದ್ರ ಕುಂಬಾರ, ರಾಚು ಬಡಿಗೇರ, ವಜ್ರಕಾಂತ್ ಕುಡಿಗನೂರ, ಶಂಕರ್ ಹಲವಾಯಿ, ಶ್ರೀಕಾಂತ್…
ವಿಜಯಪುರ: ರಾಜ್ಯದಲ್ಲಿ ವಿದ್ಯುತ್ ಕಂಪನಿಗಳ ನಷ್ಟ ತಗ್ಗಿಸಿ ವೈಜ್ಞಾನಿಕ ಕ್ರಮಗಳ ಮೂಲಕ ವಾರ್ಷಿಕ ೬೦೦ ಕೋಟಿ ರೂ. ಲಾಭ ತರುವ ವ್ಯವಸ್ಥೆ ಜಾರಿಗೆ ತರಲು ಸಾಧ್ಯವಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್ ಕಂಪನಿಗಳ ನಷ್ಟ ಭರಿಸಲು ಸಾರ್ವಜನಿಕರ ಮೇಲೆ ಹೊರೆ ಹೇರುವ ವಿದ್ಯುತ್ ದರ ಏರಿಕೆ ಪ್ರಸ್ತಾಪದ ಹುನ್ನಾರದಿಂದ ಹಿಂದೆ ಸರಿಯಬೇಕು ಎಂದು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.ಈ ಕುರಿತು ಜಿಲ್ಲಾಡಳಿತ ಮೂಲಕ ಕರ್ನಾಟಕ ವಿದ್ಯುತ್ಚಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಇಂಧನ ಸಚಿವರಿಗೆ, ಬೃಹತ್ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಹಾಗೂ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದಿರುವ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ವಿದ್ಯುತ್ ದರ ಏರಿಕೆ ಕುರಿತು ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು.ಸರ್ಕಾರ ಹಾಗೂ ವಿದ್ಯುತ್ಚಕ್ತಿ ಆಯೋಗ ವಿದ್ಯುತ್ ದರ ಏರಿಕೆ ಪ್ರಸ್ತಾಪದ ಬದಲು, ಕಂಪನಿಗಳಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕ್ರಮಗಳು ಹಾಗೂ ಸೋರಿಕೆ ತಡೆಗೆ ಮುಂದಾಗಬೇಕು. ಇದರಿಂದ…
ವಿಜಯಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಜನಪರವಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಈ ಕುರಿತು ಬಜೆಟ್ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೆ ದೃಷ್ಟಿಕೋನ ಇರಿಸದೇ ಜನಪರ ನಿಲುವಿನ ಹಾಗೂ ದೇಶದ ಪ್ರಗತಿಯ ದೃಷ್ಟಿಯಿಂದ ಬಜೆಟ್ ಮಂಡನೆಯಾಗಿದೆ.ಯಾವ ಹೊಸ ತೆರಿಗೆಯನ್ನು ವಿಧಿಸದೇ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲಾಗಿದೆ, ಸೋಲಾರ್ ಮೂಲಕ ಮನೆ ಮನೆಗೂ ಉಚಿತವಾಗಿ ವಿದ್ಯುತ್ ಪೂರೈಸುವ ಸಂಕಲ್ಪವನ್ನು ಮಾಡಿರುವುದು ಒಂದು ಉತ್ತಮ ಹೆಜ್ಜೆಯಾಗಿದೆ. ಮಾರಕ ಕ್ಯಾನ್ಸರ್ ರೋಗದಿಂದ ತಪ್ಪಿಸಲು ಮಕ್ಕಳಿಗೆ ವಿಶೇಷ ಲಸಿಕೆ ನೀಡಲು ಮುಂದಾಗಿರುವುದು ಕೇಂದ್ರ ಸರ್ಕಾರದ ಆರೋಗ್ಯ ಕಾಳಜಿಯ ಉದಾಹರಣೆಯಾಗಿದೆ. ಒಟ್ಟಾರೆಯಾಗಿ ರೈತಪರ, ಶ್ರೀಸಾಮಾನ್ಯನ ಪರ, ದುಡಿಯುವ ವರ್ಗದ ಪರವಾದ ಬಜೆಟ್ ಮಂಡನೆಯಾಗಿದೆ ಎಂದು ಅವರು ಹೇಳಿದ್ದಾರೆ.ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಸಹ ಪ್ರತಿಕ್ರಿಯೆ ನೀಡಿ, ಜನಪ್ರಿಯತೆಗಿಂತ ಜನಪರತೆಗೆ ಒತ್ತು ನೀಡಿರುವುದು ಕೇಂದ್ರ ಬಿಜೆಪಿ ಸರ್ಕಾರದ ಜನಪರ ಕಾಳಜಿಗೆ ಸಾಕ್ಷಿಯಾಗಿದೆ. ಎಲ್ಲ ವರ್ಗಗಳ ಕಲ್ಯಾಣ ಕೇಂದ್ರಿಕರಿಸಿ ಬಜೆಟ್…
ಮುದ್ದೇಬಿಹಾಳ: ಹಾಲುಮತ ಸಮಾಜ ೧೦೯ ನೇ ಇಸ್ವಿ ಪೂರ್ವ ಗುರುಪೀಠ ಹೊಂದಿತ್ತು ಎನ್ನುವುದಕ್ಕೆ ಕಂಚಿನ ಆದೇಶಪತ್ರವೊಂದು ಸಾಕ್ಷಿಯಾಗಿದೆ ಎಂದು ಎಸ್.ಆರ್.ಜೋಗಿ ವಕೀಲರು ಹೇಳಿದರು.ಈ ಕುರಿತು ಕಂಚಿನ ಆದೇಶಪತ್ರದ ಜೊತೆಗೆ ಹೇಳಿಕೆ ನೀಡಿರುವ ಅವರು, ಅಂದಿನ ಮೈಸೂರ ದೇಶದ ವ್ಯಾಪ್ತಿಯ ಇಂದಿನ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ(ಸರವೂರ) ಗ್ರಾಮದಲ್ಲಿರುವ ಹಾಲುಮತದ ಮೂಲ ಗುರೂಪೀಠ ಶ್ರೀ ಶಾಂತಮುತ್ತಯ್ಯ ನವರಿಂದ ಸ್ಥಾಪಿತವಾಗಿದ್ದು, ಭಕ್ತರ ಅನುಕೂಲಕ್ಕಾಗಿ ಕೊಪ್ಪಳದ ಕೇಂಡದಮಠ, ಬಂಕಾಪುರಮಠ, ಹಾಸನದ ಅಣತಿ ಮಠ ಹೀಗೆ ಹಲವಾರು ತನ್ನ ಅಧೀನ ಶಾಖಾ ಮಠಗಳನ್ನು ಹೊಂದಿದ ಉದಾಹರಣೆಗಳಿವೆ. ಸುಮಾರು ೨ ಸಾವಿರ ವರ್ಷಕಿಂತ ಹೆಚ್ಚು ತನ್ನ ಅಸ್ತಿತ್ವ ಉಳಿಸಿ ಕೊಂಡು ಬಂದ ಶ್ರೀಮಠಕ್ಕೆ ಫೆ.೦೨ ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರು ರೇವಣಸಿದ್ದೇಶ್ವರರ ದರ್ಶನಕ್ಕಾಗಿ ಬೇಟಿ ನೀಡುತ್ತಿರುವುದು ಸ್ವಾಗತಾರ್ಹ. ಮುಖ್ಯ ಮಂತ್ರಿಗಳು ಮುಂಬರುವ ದಿನಗಳಲ್ಲಿ ಸುಕ್ಷೇತ್ರ ಸರೂರ ಗ್ರಾಮವನ್ನು ಅಭಿವೃದ್ಧಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೇವರಹಿಪ್ಪರಗಿ: ಮಾಚಿದೇವನ ಜನ್ಮಭೂಮಿಯಲ್ಲಿ ಜನಿಸಿದ ನಾವೆಲ್ಲ ಮಾಚಿದೇವ, ಬಸವಣ್ಣ ಸೇರಿದಂತೆ ಎಲ್ಲ ಶರಣರ ಕಾಯಕ ತತ್ವವನ್ನು ತನು, ಮನದಿಂದ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಜೀವನದಲ್ಲಿ ಶರಣರ ನಡೆ,ನುಡಿ ಇಂದಿಗೂ ಪ್ರಸ್ತುತ. ಅವರನ್ನು ಕೇವಲ ಜಯಂತಿಗಳಿಗೆ ಸೀಮಿತಗೊಳಿಸದೇ ಅವರ ನಡೆದ ಮಾರ್ಗ, ಕಾಯಕ ತತ್ವಗಳನ್ನು ಅರಿತು ಪಾಲಿಸಬೇಕಾಗಿದೆ ಎಂದರು.ಶ್ರೀಬಸವ ಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ತಡವಲ್, ನಿವೃತ್ತ ಶಿಕ್ಷಕರುಗಳಾದ ಪಂಚಾಕ್ಷರಿ ಮಿಂಚನಾಳ, ಬಿ.ಆಯ್.ಹೊಸಳ್ಳಿ ಮಾತನಾಡಿದರು.ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಆಹಾರ ನಿರೀಕ್ಷಕ ದಳವಾಯಿ, ಗೊಲ್ಲಾಳ ಬಿರಾದಾರ, ರಾಮಯ್ಯ ನಾಶೀಮಠ, ಗುರುಪಾದ ಬುದ್ನಿ, ಮಲ್ಲಪ್ಪ ಭತಗುಣಕಿ. ಶ್ರೀಶೈಲ ಅಗಸರ, ಕಾಶೀನಾಥ ಅಗಸರ, ರಮೇಶ ಹಡಪದ, ಮಡಿವಾಳಪ್ಪ ಹಡಪದ, ದುಂಡೇಶ ಅಗಸರ, ಸುರೇಶ ಅಗಸರ ಸಿಬ್ಬಂದಿ ರಾಜು ಕಂಠಿ, ಇತರರು ಇದ್ದರು.
ಸಿಂದಗಿ: ಬಸವಣ್ಣನವರ ವಚನ ತತ್ವಗಳನ್ನು ಅಳವಡಿಸಿಕೊಂಡರೆ ಜಗತ್ತಿನಲ್ಲಿ ಅಸಾದ್ಯ ಎನ್ನುವುದು ಯಾವದು ಇಲ್ಲಾ ಎಂದು ನಿವೃತ್ತ ಪ್ರಾಚಾರ್ಯ ಬಿ.ಪಿಕರ್ಜಗಿ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಜ್ಯ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ನಿಮಿತ್ಯ ಜಾಗತಿಕ ಬಸವ ಶಾಂತಿ ಸಂಸ್ಥೆ, ಕತಾರ್ ವತಿಯಿಂದ ಸಚಿವ ಸಂಪುಟದ ಸಚಿವರಿಗೆ, ಶ್ರಮಿಸಿದ ಮಠಾಧೀಶರಿಗೆ, ಬಸವ ಅನುಯಾಯಿಗಳಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಜಗತ್ತಿಗೆ ಸರಳ ವಚನಗಳ ಮೂಲಕ ಅಂಧಕಾರ ಕಳೆಯುವ ಗುರುವಾಗಿದ್ದಾರೆ ಎಂದರು.ಈ ವೇಳೆ ಹಿಕ್ಕಣಗುತ್ತಿ ಲಿಂಗಾಯತ ಮಹಾಮಠದ ಪ್ರಭುಲಿಂಗದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಇದೇ ಸಂದರ್ಭದಲ್ಲಿ ಶಶಿಕಾಂತಗೌಡ ಪಾಟೀಲ, ರವಿ ರಾಥೋಡ್, ಎಂ.ಆರ್.ಡೋಣಿ, ಶಶಿಧರ್ ಹೆಬ್ಬಾಳ, ಶಿವಾನಂದ ಕಲಬುರ್ಗಿ, ಗುರು ತಾರಾಪೂರ, ಆರ್,ಆರ್.ಪಾಟೀಲ, ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಆನಂದ ಶಾಬಾದಿ, ಚಂದ್ರಶೇಖರ ನಾಗರಬೆಟ್ಟ, ಎಂ.ಎಂ,ಹಂಗರಗಿ, ಶ್ರೀಶೈಲ ಯಳಮೇಲಿ ಸೇರಿದಂತೆ ಬಸವ ದಳದ ಸದಸ್ಯರು, ಬಸವಣ್ಣನವರ ಅನುಯಾಯಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು
ಸಿಂದಗಿ: ಕೇಂದ್ರ ಸರ್ಕಾರವು ಭಾರತದ ಏಳಿಗೆಗೆ ಪೂರಕವಾದ ಬಜೆಟ್ ಮಂಡಿಸಿದ್ದು ಬಡವರು, ಮಹಿಳೆಯರು, ರೈತರು ಹಾಗೂ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಅಭಿವೃದ್ಧಿ ಪರವಾದ ಉತ್ತಮ ಬಜೆಟ್ ಇದಾಗಿದೆ ಎಂದು ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಅಭಿಪ್ರಾಯಿಸಿದ್ದಾರೆ.
ಸಿಂದಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಚ್ರದ ಹಿತಾಸಕ್ತಿಯನ್ನು ಗಮದಲ್ಲಿಟ್ಟುಕೊಂಡು ಜನಪರ ಬಜೆಟ್ ಮಂಡನೆ ಮಾಡಿದ್ದಾರೆ. ಇದು ಅಭಿವೃದ್ಧಿ ಪರವಾದ ಬಜೆಟ್ ಆಗಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಬಣ್ಣಿಸಿದ್ದಾರೆ.
ಸಿಂದಗಿ: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಿರಾಶದಾಯಕವಾಗಿದೆ. ರೈತರಿಗೆ ಬಡವರಿಗೆ ಮಹಿಳೆಯರಿಗೆ ಮತ್ತು ಯುವಕರಿಗೆ ಹೊಸ ಯೋಜನೆಗಳು ಮತ್ತು ಹೊಸ ಕಾರ್ಯಕ್ರಮಗಳು ಇಲ್ಲದ ಬಜೆಟ್ ಇದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಟೀಕಿಸಿದ್ದಾರೆ.ಇದು ಒಂದು ದೇಶದ ಭರವಸೆಯ ಬಜೆಟ್ ಆಗಬೇಕಾಗಿತ್ತು. ಆದರೆ ಇದು ಚುನಾವಣಾ ಬಜೆಟ್ ಆಗಿರುವುದರಿಂದ ಇದರಲ್ಲಿ ಯಾವುದೇ ರೀತಿಯ ಪರಿಣಾಮಕಾರಿಯಾಗಿರುವ ಹೊಸ ಯೋಜನೆಗಳನ್ನ ಕಾಣುತ್ತಿಲ್ಲ ಎಂದು ಶಾಸಕ ಅಶೋಕ್ ಮನಗೂಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
