ಸಿಂದಗಿ: ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ನೀಡಿ ಜನರ ಹಾದಿ ತಪ್ಪಿಸುತ್ತಿದೆ ಎಂದು ಸಿಂದಗಿ ವಿಧಾನಸಭಾ ಕ್ಷೇತ್ರದ ಸಂಘಟನಾ ಪ್ರಭಾರಿ ವಿಜೂಗೌಡ ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸಾಯಂಕಾಲ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಈ ಐದು ಗ್ಯಾರಂಟಿಯಿಂದ ಅಭಿವೃದ್ದಿ ಕುಂಠಿತಗೊಂಡಿದೆ. ಅಲ್ಲದೇ ರಾಜ್ಯದಲ್ಲಿ ಯಾವಾಗ ಯಾವಾಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಬರಗಾಲ ಬೀಳುವುದು ನಿಶ್ಚಿತವಾಗಿದೆ. ಈ ಕಾರಣಕ್ಕೆ ಮೋದಿ ಅವರ ಸಾಧನೆಯ ಮೇಲೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿ ೨೨,೨೩,.೨೪ರಂದು ಮಹಾಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ರಮೇಶ ಜಿಗಜಿಣಗಿ ೧೩ಬಾರಿ ಚುನಾವಣೆ ಎದುರಿಸಿ ೧೨ಸಲ ಆಯ್ಕೆಯಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಅಧಿಕಾರ ಮಾಡಿ ೧ಲಕ್ಷ ಕೋಟೊ ಅನುದಾನ ತಂದಿದ್ದಾರೆ. ಮೋದಿ ಅವರ ಅಲೆ ಇಡೀ ದೇಶದಲ್ಲದ್ದು, ಅದನ್ನು ಯಾರಿಂದಲು ತಡೆಯಲು ಸಾಧ್ಯವಿಲ್ಲ. ಸುಕಾ ಸುಮ್ಮನೇ ಜಿಗಜಿಣಗಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೇಳುತ್ತಾ ಅವರ ಮಾತುಗಳನ್ನು ತಿರುಚಿ ಗೊಂದಲು ಸೃಷ್ಠಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಎಷ್ಟೇ ಅಪಾದನೆ ಮಾಡಿದರೂ ಈ ಬಾರಿ ರಮೇಶ ಜಿಗಜಿಣಗಿ ಅವರ ಆಯ್ಕೆ ಶತಸಿದ್ದ ಮತ್ತು ಮೋದಿ ಪ್ರಧಾನಿಯಾಗುವುದು ಖಚಿತ ಎಂದರು.
ಈ ವೇಳೆ ಭಾಜಪ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ಗುರು ತಳವಾರ, ಸಿದ್ದರಾಮ ಅನಗೊಂಡ, ಸಿದ್ದಲಿಂಗಯ್ಯ ಹಿರೇಮಠ, ಎಸ್.ಆರ್.ಪಾಟೀಲ, ಅಶೋಕ ನಾರಾಯಣಪೂರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

