ಚಡಚಣ: ದೇಶದಲ್ಲಿ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತವೆ. ಸಂವಿಧಾನ ನೀಡಿರುವ ಮತದಾನದ ಹಕ್ಕು ದೇಶದ ಸಂಸತ್ತನ್ನು ನಿರ್ಮಿಸುವ ಹಕ್ಕಾಗಿದೆ. ನಾವೇಲ್ಲ ಚುನಾವಣೆ ದಿನ ಯಾರು ಕೂಡ ಮತದಾನದಿಂದ ಹಿಂದೆ ಉಳಿಯದೆ ಮತ್ತು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಆತ್ಮಸಾಕ್ಷಿಗೆ ಅನುಗುಣವಾಗಿ ಎಲ್ಲರೂ ಮತ ಚಲಾಯಿಸುವ ಮೂಲಕ ನೂರರಷ್ಟು ಮತದಾನ ಮಾಡುವಂತೆ ರೇವತಗಾಂವ ಗ್ರಾಪಂ ಪಿಡಿಓ ದೇವೇಂದ್ರ ವಾಗ್ಮೋಡೆ ಕರೆ ನೀಡಿದರು.
ತಾಲೂಕು ಸ್ವೀಪ್ ಸಮಿತಿ ಶನಿವಾರ ಬೆಳಗ್ಗೆ ಹಾಲಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಚುನಾವಣಾ ಪರ್ವ ದೇಶದ ಗರ್ವ’ ಘೋಷಣೆಯೊಂದಿಗೆ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಸುಭದ್ರ ಸರ್ಕಾರ ರಚನೆಗೆ ಪ್ರತಿಯೊಬ್ಬರ ಮತದಾನವು ಪ್ರಮುಖವಾಗಿದೆ. ಕಡ್ಡಾಯ ಮತದಾನ ರಕ್ತದಾನ, ಅನ್ನದಾನ ಸೇರಿದಂತೆ ಇನ್ನಿತರೆ ಯಾವುದೇ ದಾನಕ್ಕಿಂತಲೂ ಹೆಚ್ಚಿನ ದಾನವಾಗಿದೆ. ಕೂಲಿಕಾರರು ಎಲ್ಲರೂ ಮತಚಲಾಯಿಸಬೇಕು. ಸ್ವಂತ ಊರಿನಿಂದ ಬೇರೆ ಊರಿಗೆ ತೆರಳಿರುವ ತಮ್ಮ ಕುಟುಂಬ ಸದಸ್ಯರನ್ನು ಮತದಾನದ ದಿನ ಕರೆಸಿಕೊಂಡು ಮತದಾನ ಮಾಡಿಸಿ ಎಂದರು.
ಈ ವೇಳೆಯಲ್ಲಿ ಚಡಚಣ ಯೋಜನಾಧಿಕಾರಿ ಎಸ್.ಆರ್.ಕೊಟ್ಟಲಗಿಯವರು ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ತಮ್ಮ ಮತಗಟ್ಟೆಗೆ ಭೇಟಿ ನೀಡಿ ಮತದಾನ ಮಾಡಬೇಕೆಂದು ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡುತ್ತ. ದೇಶದ ಉನ್ನತಿ ಹಾಗೂ ಏಳಿಗೆ ಎಂಬುದು ದೇಶದ ಪ್ರಜೆಗಳ ಅಬಿಪ್ರಾಯದ ಮೇಲೆ ನಿಂತಿರುತ್ತದೆ. ಅಂತಹ ಆಯ್ಕೆಯ ಹಕ್ಕು ಚುನಾವಣೆ ನೀಡುತ್ತದೆ. ಸಮಯೋಚಿತವಾಗಿ ಸೂಕ್ತ ಅಭ್ಯರ್ಥಿಗೆ ಮತ ನೀಡುವುದರಿಂದ ರಾಷ್ಟçದ ಅಬಿವೃದ್ಧಿಗೆ ಪೂರಕವಾಗುತ್ತದೆ. ಈ ಕಾರಣಕ್ಕಾಗಿ ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮತದಾನದ ಹಕ್ಕು ನೀಡಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಮಾದಣ್ಣ ಪೂಜಾರಿ, ಲೆಕ್ಕ ಸಾಹಾಯಕ ಲಾಯಪ್ಪ ಲೋಣಿ, ವಿಆರ್‌ಡಬ್ಲ್ಯೂ ಎಸ್.ಎಂ.ಮಾಳಿ ಸೇರಿದಂತೆ ಬಿಎಲ್‌ಓ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

