Author: editor.udayarashmi@gmail.com

ನಮ್ಮಹೆಮ್ಮೆಯ ಭಾರತ ದೇಶವು, ವೈವಿಧ್ಯಮಯ ಸಂಸ್ಕೃತಿ, ಆಚರಣೆ ಹಬ್ಬಗಳ ಗೂಡಾಗಿದೆ. ಇಲ್ಲಿ ಆಚರಿಸುವ ಪ್ರತಿ ಹಬ್ಬವೂ ತನ್ನದೇ ಆದ ಪೌರಾಣಿಕ, ಸಾಂಸ್ಕೃತಿಕ, ವೈಜ್ಞಾನಿಕ ಮಹತ್ವವನ್ನು ಹೊಂದಿದೆ.ವಿದೇಶಗಳಲ್ಲಿ ಜನವರಿ ೧ ರಂದು ಹೊಸ ವರ್ಷ ಆಚರಿಸುವ ಹಾಗೆ, ನಮ್ಮ ದೇಶದಲ್ಲಿ ಚೈತ್ರ ಮಾಸದ ಇವತ್ತಿನ (೨೨/೩/೨೦೨೩) ದಿನದಂದು ಯುಗಾದಿಯೊಂದು (ಯುಗ+ಆದಿ) ಹೊಸ ವರ್ಷದ ಸಂಭ್ರಮ ಹೆಸರು ಸೂಚಿಸುವಂತೆ ‘ಹೊಸ ಹೋಗದ ಆರಂಭ’ ಮಾನವರು ಮಾತ್ರವಲ್ಲದೆ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಗಿಡ-ಮರಗಳೆಲ್ಲವೂ ಹಲವು ಎಲೆಗಳನ್ನು ಉದುರಿಸಿ ಹೊಸ ಚಿಗುರು ಹೊಸ ಎಲೆ ಹೂಗಳು ವಸಂತ ಕಾಲದ ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಪೌರಾಣಿಕ ಮಹತ್ವ:ಹಿಂದೂ ಪುರಾಣಗಳ ಪ್ರಕಾರ, ಸೋಮಕಾಸುರ ಎಂಬ ರಾಕ್ಷಸನು, ಬ್ರಹ್ಮದೇವನಿಂದ ವೇದಗಳನ್ನು ಕಳವು ಮಾಡಿಕೊಂಡು ಸಮುದ್ರದಲ್ಲಿ ಬಚ್ಚಿಡುತ್ತಾನೆ. ಆಗ ಬ್ರಹ್ಮನು ವಿಷ್ಣುವಿನ ಹತ್ತಿರ ಹೋಗಿ ವೇದಗಳನ್ನು ಮರಳಿ ತರಲು ಸಹಾಯ ಕೇಳಿದಾಗ, ವಿಷ್ಣುವು ‘ಮತ್ಸ್ಯಾವತಾರ’ವನ್ನು ತಾಳಿ ಸಮುದ್ರದಲ್ಲಿರುವ ಸೋಮಕಾಸುರನನ್ನು ಕೊಂದು, ವೇದಗಳನ್ನು ಬ್ರಹ್ಮನಿಗೆ ಹಿಂತಿರುಗಿಸುತ್ತಾನೆ. ಹಾಗೂ ಈ ದಿನದಂದು ಬ್ರಹ್ಮನು ಹೊಸ ವಿಶ್ವವನ್ನು…

Read More