ನಮ್ಮಹೆಮ್ಮೆಯ ಭಾರತ ದೇಶವು, ವೈವಿಧ್ಯಮಯ ಸಂಸ್ಕೃತಿ, ಆಚರಣೆ ಹಬ್ಬಗಳ ಗೂಡಾಗಿದೆ. ಇಲ್ಲಿ ಆಚರಿಸುವ ಪ್ರತಿ ಹಬ್ಬವೂ ತನ್ನದೇ ಆದ ಪೌರಾಣಿಕ, ಸಾಂಸ್ಕೃತಿಕ, ವೈಜ್ಞಾನಿಕ ಮಹತ್ವವನ್ನು ಹೊಂದಿದೆ.
ವಿದೇಶಗಳಲ್ಲಿ ಜನವರಿ ೧ ರಂದು ಹೊಸ ವರ್ಷ ಆಚರಿಸುವ ಹಾಗೆ, ನಮ್ಮ ದೇಶದಲ್ಲಿ ಚೈತ್ರ ಮಾಸದ ಇವತ್ತಿನ (೨೨/೩/೨೦೨೩) ದಿನದಂದು ಯುಗಾದಿಯೊಂದು (ಯುಗ+ಆದಿ) ಹೊಸ ವರ್ಷದ ಸಂಭ್ರಮ ಹೆಸರು ಸೂಚಿಸುವಂತೆ ‘ಹೊಸ ಹೋಗದ ಆರಂಭ’ ಮಾನವರು ಮಾತ್ರವಲ್ಲದೆ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಗಿಡ-ಮರಗಳೆಲ್ಲವೂ ಹಲವು ಎಲೆಗಳನ್ನು ಉದುರಿಸಿ ಹೊಸ ಚಿಗುರು ಹೊಸ ಎಲೆ ಹೂಗಳು ವಸಂತ ಕಾಲದ ಹೊಸ ವರ್ಷವನ್ನು ಸ್ವಾಗತಿಸುತ್ತವೆ.
ಪೌರಾಣಿಕ ಮಹತ್ವ:
ಹಿಂದೂ ಪುರಾಣಗಳ ಪ್ರಕಾರ, ಸೋಮಕಾಸುರ ಎಂಬ ರಾಕ್ಷಸನು, ಬ್ರಹ್ಮದೇವನಿಂದ ವೇದಗಳನ್ನು ಕಳವು ಮಾಡಿಕೊಂಡು ಸಮುದ್ರದಲ್ಲಿ ಬಚ್ಚಿಡುತ್ತಾನೆ. ಆಗ ಬ್ರಹ್ಮನು ವಿಷ್ಣುವಿನ ಹತ್ತಿರ ಹೋಗಿ ವೇದಗಳನ್ನು ಮರಳಿ ತರಲು ಸಹಾಯ ಕೇಳಿದಾಗ, ವಿಷ್ಣುವು ‘ಮತ್ಸ್ಯಾವತಾರ’ವನ್ನು ತಾಳಿ ಸಮುದ್ರದಲ್ಲಿರುವ ಸೋಮಕಾಸುರನನ್ನು ಕೊಂದು, ವೇದಗಳನ್ನು ಬ್ರಹ್ಮನಿಗೆ ಹಿಂತಿರುಗಿಸುತ್ತಾನೆ. ಹಾಗೂ ಈ ದಿನದಂದು ಬ್ರಹ್ಮನು ಹೊಸ ವಿಶ್ವವನ್ನು ಸೃಷ್ಟಿಸಿದನೆಂದು ಪ್ರತೀತಿ ಇದೆ.ವಿಷ್ಣುವಿನ ಇನ್ನೊಂದು ಹೆಸರಾದ ‘ಯುಗಾದಿಕೃತ’ ಹೊಸ ಯುಗ ಸೃಷ್ಟಿಸಿದನೆಂಬುದನ್ನು ಸೂಚಿಸುತ್ತದೆ. ವೇದವ್ಯಾಸರು, ವಸಂತ ಕಾಲದ ಈ ದಿನದಂದು ಶ್ರೀ ಕೃಷ್ಣನು, ಭೂಲೋಕವನ್ನು ತೊರೆದನೆಂದು, ದ್ವಾಪರಯುಗದ ಅಂತ್ಯ ಮತ್ತು ಕಲಿಯುಗವು ಆರಂಭವಾದ ದಿನವೆಂದು ‘ಯಸ್ಮಿನ್ ಕೃಷ್ಣೆಂ, ದಿವಮ್ಯಾತಹಃ, ತಸ್ಮತ್ ಏವ ಪ್ರತಿಪನ್ಮಮ್ ಕಲಿಯುಗಂ” ಎಂದು ರಚಿಸಿದ್ದಾರೆ.
ಚೈತ್ರಮಾಸದ ಈ ಮೊದಲ ದಿನದಂದೇ ಶ್ರೀ ರಾಮನ ಪಟ್ಟಾಭಿಷೇಕವಾಯಿತೆಂದು ಮೂಲಗಳು ತಿಳಿಸುತ್ತವೆ.
ವೈಜ್ಞಾನಿಕ ಮಹತ್ವ:
ಸೂರ್ಯನು, ಭೂಮಿಯ ಸಮಭಾಜಕ ರೇಖೆಯನ್ನು, ದಕ್ಷಿಣದಿಂದ ಉತ್ತರಕ್ಕೆ ಹಾದುಹೋಗುವ ಕಾಲವನ್ನು ಸೂಚಿಸುತ್ತದೆ. ಈ ಸಮಯದಲ್ಲಿ, ಭೂಮಿಯ ಅರ್ಧಗೋಳಗಳಿಗೆ ಸೂರ್ಯನ ರಶ್ಮಿಗಳು ಸಮವಾಗಿ ತಲುಪುತ್ತವೆ. ಹಾಗೂ ದಿನ ಮತ್ತು ರಾತ್ರಿ ಎರಡೂ ಸಮಾನ ಅಳತೆಯಿಂದ ಕೂಡಿರುತ್ತವೆ.
ಸೂರ್ಯ, ಸಮಭಾಜಕ ರೇಖೆಯನ್ನು ದಾಟಿದಾಗ, ದಿನದ ಸಮಯವು ಹೆಚ್ಚು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ, ಪ್ರಖರವಾಗಿ ಇರುತ್ತವೆ. ಚಳಿಗಾಲದ ಅಂತ್ಯವಾಗಿ, ವಸಂತಕಾಲವು ಆರಂಭವಾಗುತ್ತದೆ.
ಸಾAಸ್ಕೃತಿಕ ಮಹತ್ವ:
ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಯುಗಾದಿ ಎಂದು, ಮಹರಾಷ್ಟçದಲ್ಲಿ ‘ಗುಡಿಪಾಡುವ’ ಎಂದು ಆಸ್ಸಾಂನಲ್ಲಿ ‘ಬಿಹು’, ಪಶ್ಚಿಮ ಬಂಗಾಳದಲ್ಲಿ ‘ನವ ವರ್ಷ’ ಎಂದು ಕೇರಳದಲ್ಲಿ ‘ವಿಶು’, ಪಂಜಾಬ ನಲ್ಲಿ ‘ಬೈಸಾಕಿ’ ಎಂದು ಬೇರೆ-ಬೇರೆ ಹೆಸರುಗಳಿಂದ, ವೈವಿಧ್ಯಮಯ ರೀತಿಯಲ್ಲಿ ಆಚರಿಸಲ್ಪಡುತ್ತದೆ.
ನಮ್ಮ ಕರ್ನಾಟಕದಲ್ಲಿ ನೋಡುವುದಾದರೆ, ಯುಗಾದಿಯಂದು ಮನೆ, ಅಂಗಳವನ್ನು ತೊಳೆದು, ರಂಗೋಲಿ ಹಾಕಿ, ಮಾವಿನ ಎಲೆಗಳಿಂದ ತೋರಣ ಕಟ್ಟಿ ಸಿಂಗಾರಗೊಳಿಸುತ್ತಾರೆ. ಈ ಹಬ್ಬದಂದು ತಯಾರಿಸುವ ವಿಶೇಷ ಖಾದ್ಯವಾದ ಪಾನಕವು ವಿಶಿಷ್ಠವಾದದ್ದು ಹಾಗೂ ವೈಜ್ಞಾನಿಕವಾಗಿ ತುಂಬಾ ಆರೋಗ್ಯವಾಗಿದೆ.
ಯುಗಾದಿಯ ಪಾನಕವನ್ನು ಬೇವಿನ ಹೂ, ಮಾವಿನಕಾಯಿ, ಬೆಲ್ಲ, ಉಪ್ಪು, ಹುಣಸೆಹಣ್ಣಿನ ರಸಗಳಿಂದ ತಯಾರಿಸುತ್ತಾರೆ.
ನಮ್ಮ ಹಿರಿಯರಿಂದ ಆರಂಭಿಸಲ್ಪಟ್ಟ ಈ ಪಾನಕದ ಮಹತ್ವವೆಂದರೆ, ಚೈತ್ರಮಾಸದ ಆರಂಭದಲ್ಲಿ ದೊರೆಯುವ ಮಾವಿನಕಾಯಿ, ಬೇವಿನ ಗಿಡದ ಹೂ ತುಂಬಾ ಪ್ರಮಾಣದಲ್ಲಿ ಅ್ಯಂಟಿ ಬ್ಯಾಕ್ಟೇರಿಯಲ್ ಮತ್ತು ಅ್ಯಂಟಿ ಕ್ಯಾನ್ಸರ್ ಅಂಶಗಳನ್ನು, ಫ್ಲ್ಯಾವಯಿಡ್ಸ್ ಪಾಲಿಫೆನೋಲ್ಸ್, ಲೂಟೀನ್ ಮ್ಯಾಗ್ನಿಫೆರಿನ್ ಎಂಬ ಅ್ಯಂಟಿAಟಿ ಆಕ್ಸಿಡಂಟ್ಸ್ ಅಂಶಗಳನ್ನು ಹೊಂದಿದೆ. ಇವುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚಾಗಿ, ಹೃದಯಸಂಬAಧಿತ, ಕ್ಯಾನ್ಸರ್, ಚರ್ಮ ಸಂಬAಧಿತ ಕಾಯಿಲೆಗಳನ್ನು ತಡೆಗಟ್ಟಬಹುದು.
ಇದರಲ್ಲಿರುವ ಬೆಲ್ಲ, ಹುಣಸೆಹಣ್ಣಿನ ರಸವು ವಿಟಮಿನ್ ಮತ್ತು ಖನಿಜಾಂಶಗಳಿAದ ಭರಿತವಾಗಿದೆ. ಇವುಗಳನ್ನು ಸೇವಿಸುವದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಪಾರಾಗಬಹುದು.
ಯುಗಾದಿಯ ಪಾನಕವು ನಮ್ಮ ಜೀವನದ ಭಾವನೆಗಳ ವಿಶ್ರಣವನ್ನು ಬಿಂಬಿಸುತ್ತದೆ. ಬೆಲ್ಲ ನಮ್ಮ ಸಂತೋಷದ ಕ್ಷಣಗಳನ್ನು, ಹುಣಸೆಹಣ್ಣು ಸವಾಲುಗಳನ್ನು, ಬೇವಿನ ಹೂ ಕಷ್ಟಗಳನ್ನು, ಮಾವಿನಕಾಯಿ ಆಶ್ಚರ್ಯಕರ ಘಟನೆಗಳನ್ನು ಸ್ಪೈಸಿಸ್ & ಸಾಲ್ಟ್ ಸಿಟ್ಟಿನ ಕ್ಷಣಗಳನ್ನು ಹೊಲಿಕೆ ಮಾಡಬಹುದು.
ಬೀಳುವುದು ನಿಲ್ಲಿಪುದು, ಬಿದ್ದುದನು ಕಟ್ಟುವದು | ಹಾಲೊಡೆಯ ಕಡೆದದನು ತಕ್ರವಾಗಿಪುದು||
ಹಾಳ ಹಾಳಾಗಿಪುದು, ಹಳದ ಹೊಸತಾಗಿಪುದು |
ಬಾಳಿಗಿದೆ ಚಿರಧರ್ಮ-ಮಂಕುತಿಮ್ಮ
ಡಿವಿಜಿಯವರು ಹೇಳಿದಂತೆ, ಯಾರು ಸೋತಿರುತ್ತಾರೋ ಅವರಿಗೆ ಸಹಾಯ ಹಸ್ತ ನೀಡಿ, ಕೆಟ್ಟಿದ್ದನ್ನು ಮತ್ತೆ ನಿರ್ಮಿಸಿ, ಹೇಗೆ ಒಡೆದು ಹೋದ ಹಾಲಲ್ಲಿ ಪನೀರ ತಯಾರಿಸುವಂತೆ, ಹಾಳಾಗಿದೆಯೆಂದು ಕೈಚೆಲ್ಲಿ ಕೂಡದೇ, ಹಳೆಯದನ್ನೇ ಹೊಸದಾಗಿಸಿ, ಬಾಳಿಗೊಂದು ಅರ್ಥ ಕೊಡುವದೇ, ನಮ್ಮೆಲ್ಲರ ಚಿರಧರ್ಮ. ಯುಗಾದಿಯ ಈ ಶುಭ ಸಮಯದಲ್ಲಿ, ಒಣಗಿದ ಎಲೆ ಉದುರಿ, ಹೊಸ ಚಿಗುರು ಮೂಡುವಂತೆ, ನಮ್ಮ ಬಾಳಿನಲ್ಲಿ ನಡೆದು ಹೋಗಿರುವ ಕೆಟ್ಟ, ಕಹಿ ಘಟನೆಗಳನ್ನು ಮರೆತು, ಕಷ್ಟಗಳನ್ನು ಎದುರಿಸಿ, ಸಾಧಿಸುವ ಗುಣ ಬೆಳೆಸಿಕೊಂಡು, ಸಂತೋಷವಾಗಿ ಬಾಳೋಣ ಮತ್ತು ಹಂಚೋಣ ಎಲ್ಲರ ಬಾಳು ಹಸಿರಾಗಲಿ.
ಎಲ್ಲ ಓದುಗರಿಗೂ ‘ಯುಗಾದಿ’ ಹೊಸವರ್ಷದ ಶುಭಾಷಯಗಳು.