Author: editor.udayarashmi@gmail.com

ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಮೇ.೧೦ ರಂದು ಬೆಳಗ್ಗೆ ೧೦.೩೦ ಗಂಟೆಗೆ ತಾಲೂಕಾಡಳಿತದಿಂದ ಸಾಂಸ್ಕ್ರತಿಕ ನಾಯಕ ವಿಶ್ವಗುರು, ಮಹಾಮಾನವತಾವಾದಿ ಬಸವಣ್ಣನವರ ಜಯಂತಿ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿ ಕಾರ್ಯಕ್ರಮವನ್ನು ಸರ್ಕಾರದ ಆದೇಶನ್ವಯ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ ಇನ್ನೂ ಜಾರಿಯಲ್ಲಿರುವುದರಿಂದ ಸರಳವಾಗಿ, ಸಾಂಕೇತಿಕವಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುವುದು. ಈ ಜಯಂತಿ ಕಾರ್ಯಕ್ರಮಕ್ಕೆ ಎಲ್ಲ ಸರ್ವ ಸಮಾಜ ಬಾಂಧವರು, ಬಸವ ಭಕ್ತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

– ಬಸವರಾಜ ನಂದಿಹಾಳಬಸವನಬಾಗೇವಾಡಿ: ಸಮಾಜ ಸುಧಾರಕ, ದಾರ್ಶನಿಕ, ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಮೇ.೧೦ ರಂದು ಇರುವ ಹಿನ್ನೆಲೆಯಲ್ಲಿ ಬಸವ ಜನಿಸಿದ ಬಸವನಬಾಗೇವಾಡಿಯ ಪಟ್ಟಣದಲ್ಲಿ ಬಸವ ಜಯಂತಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.ಕಳೆದ ಕೆಲ ದಿನಗಳಿಂದ ಬಸವ ಜನ್ಮಸ್ಮಾರಕ, ಬಸವೇಶ್ವರ ದೇವಸ್ಥಾನದಲ್ಲಿ ಮಂಡಳಿಯ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿರುವದು ಕಂಡುಬಂದಿತ್ತು. ಬಸವೇಶ್ವರ ದೇವಸ್ಥಾನ, ಬಸವಜನ್ಮ ಸ್ಮಾರಕ ಸೇರಿದಂತೆ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಯ ಸುತ್ತ ವಿದ್ಯುದೀಪದ ಅಲಂಕಾರ ಮಾಡಲಾಗಿದೆ.ನಾಡಿನಲ್ಲಿ ಅಕ್ಷಯ ತೃತೀಯ ಬಸವ ಜಯಂತಿಯಂದು ಶುಭ ಕಾರ್ಯ ಸೇರಿದಂತೆ ಚಿನ್ನದ ಖರೀದಿಯಲ್ಲಿ ಜನರು ತೊಡಗುತ್ತಾರೆ. ಬಸವ ಜಯಂತಿ ಬರುವದೇ ನಾಡಿಗೆ ದೊಡ್ಡ ಸಡಗರ, ಸಂಭ್ರಮ. ಬಸವ ಜಯಂತಿಯನ್ನು ಜನರು ಶ್ರದ್ದಾ ಭಕ್ತಿಯಿಂದ ಆಚರಿಸುವದು ವಿಶೇಷ. ಬಸವೇಶ್ವರರ ತತ್ವ ಗಳನ್ನು ಜಗತ್ತಿನಲ್ಲಿ ಅಳವಡಿಸಿಕೊಳ್ಳುವದು ತುಂಬಾ ಮುಖ್ಯವಾಗಿದೆ. ಇಂದು ಜಗತ್ತಿನ ಅನೇಕ ಜ್ವಲಂತ ಸಮಸ್ಯೆಗಳಿಗೆ ಬಸವೇಶ್ವರರ ಸಂದೇಶಗಳು ಪರಿಹಾರ ನೀಡುತ್ತವೆ. ಇವು ಜಗತ್ತಿನಲ್ಲಿ ಪ್ರಸಾರವಾಗಿ ಅವು ಜಾರಿಗೆ ಬರಬೇಕಿದೆ. ಇಂದು ಕೇವಲ ಬಸವೇಶ್ವರರ ಹೆಸರನ್ನು…

Read More

ಇಂಡಿ: ಪ್ರಕೃತಿಯೂ ರೈತರಿಗೆ ತೊಂದರೆ ಕೊಡುತ್ತಿದೆ. ಅತೀವೃಷ್ಠಿ, ಅನಾವೃಷ್ಠಿ ಹೊಡೆತಕ್ಕೆ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ರೈತರ ಜ್ವಲಂತ ಸಮಸ್ಯೆಗಳಿವೆ. ಅದಕ್ಕೆ ರೈತರ ಗಟ್ಟಿ ಧ್ವನಿಯಾಗಿ ಸರಕಾರ ಗಮನ ಸೆಳೆಯಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಭೀಮನಗೌಡ ಪಾಟೀಲ ಹೇಳಿದರು.ಬುಧವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಅಕ್ಕ ಮಹಾದೇವಿ ಬ್ಯಾನರ್ ಕಾರ್ಯಾಲಯದಲ್ಲಿ, ರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲೆಯ ನೂತನ ಅಧ್ಯಕ್ಷ ಎಸ್ ಬಿ ಕೆಂಬೋಗಿ ಅವರಿಗೆ “ಸ್ನೇಹ ಸಂಗಮ‌” ಸ್ನೇಹಿತರ ಬಳಗದಿಂದ ಸನ್ಮಾನಿಸಿ ಮಾತನಾಡಿದರು.ಇಂದು ಬಿತ್ತನೆಯ ಬೀಜ, ಗೊಬ್ಬರದಿಂದ ಹಿಡಿದು ಮಾರುಕಟ್ಟೆಯವರೆಗೂ ರೈತರಿಗೆ ಅನ್ಯಾಯವಾಗುತ್ತಿದೆ. ರೈತರು ಸಂಘಟನೆಯಾಗದಿದ್ದರೆ ಪರಿಸ್ಥಿತಿ ತುಂಬಾ ಗಂಭೀರವಾಗುತ್ತಿದೆ.ಇಂದು ರೈತರು ಸಮಸ್ಯೆಗಳು ಬೆಟ್ಟದಷ್ಟು, ಬೃಹದಾಕಾರವಾಗಿ ಬೆಳೆದಿವೆ. ಅದಲ್ಲದೇ ಬೇರೆ-ಬೇರೆ ತಿರುವು ಪಡೆದು ರಾಜಕೀಯ ಸ್ವರೂಪ ಪಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಮುಖಂಡ ಪಾಪು ಕಿತಲಿ‌ ಮಾತನಾಡಿ ರೈತರು ಇಂದು ಕೃಷಿ ಕಸುಬು ತೊರೆದು ಬೇರೆ ವೃತ್ತಿಯತ್ತ ಮುಖಮಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ‌. ನಮ್ಮ ವಿಜಯಪುರ…

Read More

ವಿಜಯಪುರ: ೨೦೨೪-೨೫ ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಂದ ಡಿಪ್ಲೋಮಾ ಪ್ರವೇಶಾತಿಗಾಗಿ ಆಫ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಾರ್ಯಾಲಯದಲ್ಲಿ ಸಲ್ಲಿಸಬಹುದಾಗಿದೆ. ಮೇ.೧೪ ಕೊನೆಯ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮೆರಿಟ್ ಮೇಲೆ ಆಯ್ಕೆಯಾದ ಆಯ್ಕೆಯಾದ ವಿದ್ಯಾಥಿಗಳು ಪಟ್ಟಿಯನ್ನು ಮೇ.೧೫ ರಂದು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುವುದು. ಮೇ.೧೬ ಆಯ್ಕೆಯಾದ ವಿಧ್ಯಾರ್ಥಿಗಳು ಮೂಲ ದಾಖಲೆ ಹಾಗೂ ಶುಲ್ಕದೊಂದಿಗೆ ಪ್ರವೇಶಾತಿಯನ್ನು ಪಡೆಯಲು ಕೊನೆಯ ದಿನಾವಾಗಿದೆ ಎಂದು ಸರಕಾರಿ ಪಾಲಿಟೆಕ್ನಿಕ್ ವಿಜಯಪುರದ ಪ್ರಾಚಾರ್ಯುರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಪ್ರತಿಭಾವಂತ ಪರಿಶಿಷ್ಟ ಜಾತಿ, ಸೇರಿರುವ ೬ನೇ ತರಗತಿ ವಿದ್ಯಾರ್ಥಿಗಳನ್ನು ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಕಲ್ಪಿಸಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.ಆಸಕ್ತ ವಿದ್ಯಾರ್ಥಿಗಳು ಮೇ.೨೧ ರೊಳಗೆ ಆನ್ ಲೈನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯನ್ನು ಪ್ರವೇಶ ಪರೀಕ್ಷೆ ಮೂಲಕ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಸಂಪರ್ಕಿಸಬಹುದಾಗಿದೆ ಎಂದು ಉಪ ನಿರ್ದೇಶಕರಾದ ಪುಂಡಲಿಕ್ ಮಾನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳ ೨೦೨೪-೨೫ನೇ ಶೈಕ್ಷಣಿಕ ಸಾಲಿನ ೬ನೇ ತರಗತಿಯ ಪ್ರವೇಶಕ್ಕಾಗಿ ಮೇ.೧೯ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಪ್ರವೇಶ ಪತ್ರವನ್ನು ಅರ್ಜಿ ಸಲ್ಲಿಸಿದ ಆಯಾ ತಾಲೂಕಿನ ವಸತಿ ಶಾಲೆಯಲ್ಲಿ ಪಡೆಯಬಹುದಾಗಿದೆ.ಪ್ರವೇಶ ಪರೀಕ್ಷೆಗಳು ನಡೆಯುವ ಕೇಂದ್ರಗಳ ವಿಳಾಸ ಹಾಗೂ ಪ್ರಾಂಶುಪಾಲರ ಸಂಪರ್ಕ ಸಂಖ್ಯೆ:ತಿಕೋಟಾದ ಡಾ. ಎ.ಪಿ.ಜೆಅಬ್ದುಲ್ ಕಲಾಂ ವಸತಿಶಾಲೆ, ಅರಕೇರಿ (೮೯೭೧೪೫೯೬೮೩), ಸರಕಾರಿ ಮುಸ್ಲಿಂ ವಸತಿ ಶಾಲೆ ಅಫಜಲಪುರಟಕ್ಕೆ ವಿಜಯಪುರ (೮೩೧೦೮೩೦೪೦೭) ಚಡಚಣ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಲಹಳ್ಳಿ (೯೬೨೦೮೨೮೧೮೫) ಸಿಂದಗಿಯ ಎಚ್. ಜಿ. ಪಿಯು ಕಾಲೇಜು ವಿವೇಕಾನಂದ ಸರ್ಕಲ್ ಸಿಂದಗಿ, ಹೆಚ್.ಟಿ. ಕುಲಕರ್ಣಿ, ಪ್ರೌಢಶಾಲೆ, ಸಿಂದಗಿ(೯೯೮೦೯೫೨೯೬೦), ಶಾಂತೇಶ್ವರ ಪಿಯು ಕಾಲೇಜು ಬಸ್‌ಸ್ಟ್ಯಾಂಡ್ ಹತ್ತಿರ ಮಿನಿವಿಧಾನಸೌಧ ಇಂಡಿ (೭೮೯೨೩೭೧೭೦೯), ಅಭ್ಯುದಯ ಆಂಗ್ಲ ಮಾಧ್ಯಮ ಶಾಲೆ ಮುದ್ದೇಬಿಹಾಳ (೭೨೫೯೧೭೯೩೯೮), ಎಂ.ಜಿ.ಎಂ.ಕೆ ಆಂಗ್ಲ ಮಾಧ್ಯಮ ಶಾಲೆ…

Read More

ದೇವರಹಿಪ್ಪರಗಿ: ಪಟ್ಟಣದ ಬಸವ ಶರಣಸಂಗಮ ಸೇವಾ ಸಮಿತಿಯ ಅಡಿಯಲ್ಲಿ ದಿ:೧೦ ಶುಕ್ರವಾರದಂದು ಬಸವ ಜಯಂತ್ಯುತ್ಸವ ಹಾಗೂ ಶ್ರೀಬಸವಶ್ರೀ ಪ್ರಶಸ್ತಿ ವಿತರಣಾ ಸಮಾರಂಭ ಜರುಗಲಿದೆ.ಪಟ್ಟಣದ ಬಸವೇಶ್ವರ ವೃತದಲ್ಲಿ ಬೆಳಿಗ್ಗೆ ಭಾವಚಿತ್ರಕ್ಕೆ ಪೂಜೆ ಜರುಗಲಿದೆ. ನಂತರ ಸಾಯಂಕಾಲ ಶ್ರೀಸಿದ್ಧೇಶ್ವರ ಸ್ವಾಮೀಜಿ ವಸತಿ ಶಾಲೆಯ ಆವರಣದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ‘ಶ್ರೀಬಸವಶ್ರೀ’ ಪ್ರಶಸ್ತಿ ಹಾಗೂ ಇತರ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಅಧ್ಯಕ್ಷ ಸಂಗಪ್ಪ ತಡವಲ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More

ಇಂಡಿ: 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿಧ್ಯಾರ್ಥಿಗಳು ಅದ್ವಿತೀಯ ಸಾಧನೆಗೈದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆಂದು ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ತಿಳಿಸಿದ್ದಾರೆ.ತಾಲ್ಲೂಕಿನ ಅಂಜುಟಗಿ ಗ್ರಾಮದಲ್ಲಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿಯ ಶಾಲೆಯ ವಿಧ್ಯಾರ್ಥಿನಿ ವೈಶಾಲಿ ಮಣ್ಣೂರ 608 ಅಂಕ ಪಡೆದು ಪ್ರಥಮಸ್ಥಾನ, ಅನುರಾಧ ಹಿರೇಮಾಳ 605 ಅಂಕ ಪಡೆದು ದ್ವೀತಿಯ ಸ್ಥಾನ, ಸುಪ್ರೀಯಾ ನಾಯಕ 599 ಹಾಗೂ ಅಕ್ಷತಾ ಹಳ್ಳದಮನಿ 599 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಅದು ನಮ್ಮ ಶಾಲೆಗೆ ಕ್ರೈಸ್ ಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಅದಲ್ಲದೇ ಪರೀಕ್ಷೆ ಬರೆದ ವಿಧ್ಯಾರ್ಥಿಗಳ ಪೈಕಿ ಯಾರೊಬ್ಬರೂ ಅನುವುತ್ತೀರ್ಣರಾಗಿದೆ ಕ್ರೈಸ್ ಶಾಲೆಯ ಮೆರುಗು ಹೆಚ್ಚಿಸಿದ್ದಾರೆ.ಈ ಸಂದರ್ಭದಲ್ಲಿ ಪ್ರಾಂಶುಪಾಲ ಚನ್ನಪ್ಪ ಸೇಠೆ ಹಾಗೂ ನಿಲಯಪಾಲಕ ಸಂಜೀವ್ ಕುಮಾರ್ ಹಿರೋಳ ಹಾಗೂ ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.ವೈಶಾಲಿ‌ ಮಣ್ಣೂರ 608 ಅಂಕಅನುರಾಧ ಹಿರೇಮಾಳ…

Read More

ವಿಜಯಪುರ: ಬಿರುಬೇಸಿಗೆಯಲ್ಲಿ ತತ್ತರಿಸಿದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಆಲಮಟ್ಟಿ ಜಲಾಶದಿಂದ ಮುಳವಾಡ ಏತನೀರಾವರಿ ಹಾಗೂ ಚಿಮ್ಮಲಗಿ ಏತನೀರಾವರಿ ಯೋಜನೆಯಡಿ ಇಂದಿನಿಂದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವದನ್ನು ತಪ್ಪಿಸಲು ಈ ಹಿಂದೆ ತಿಡಗುಂದಿ ಕಾಲುವೆಯಿಂದ ನೀರು ಹರಿಸಿ, ಭೂತನಾಳ ಕೆರೆ ತುಂಬಿಸಿ, ನಗರದಲ್ಲಿ ಸಮಪರ್ಕವಾಗಿ ಕುಡಿಯುವ ನೀರು ಪೂರೈಸಲಾಗಿತ್ತು. ಈಗ ಮತ್ತೆ ಭೂತನಾಳ ಕೆರೆಗೆ ಹಾಗೂ ಇಂಡಿ ತಾಲೂಕಿನ ಹೊರ್ತಿ ಮತ್ತು ಇತರೆ 31 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಡಿ ತಿಡಗುಂದಿ ಕಾಲುವೆ ಮೂಲಕ ನೀರು ಹರಿಸಲಾಗುವುದು.ಬಸವನಬಾಗೇವಾಡಿ ತಾಲೂಕಿನ ಅರೇಶಂಕರ ಮತ್ತು ಇತರೆ 19 ಗ್ರಾಮಗಳ ಕಣಕಾಲ ಮತ್ತು 11 ಗ್ರಾಮಗಳ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯು 0.45ಟಿ.ಎಂ.ಸಿ ನೀರನ್ನು ಮುಳವಾಡ ಏತನೀರಾವರಿ ಹಾಗೂ ಚಿಮ್ಮಲಗಿ ಏತನೀರಾವರಿ ಯೋಜನೆಯಡಿ ಕೆರೆಗಳಿಗೆ…

Read More

ನಿಡಗುಂದಿ:ಎಸ್‌ಎಸ್‌ಎಲ್‌ಸಿ -2024ರ ಪರೀಕ್ಷೆಯಲ್ಲಿ ಸ್ಥಳೀಯ ಬನಶಂಕರಿ ಪಬ್ಲಿಕ್ ಸ್ಕೂಲ್ & ಪಿ.ಯು ಕಾಲೇಜ್‌ನ ವಿದ್ಯರ‍್ಥಿಗಳ ಈ ಬಾರಿಯೂ ಸಹ ಉತ್ತಮ ಸಾಧನೆಯನ್ನು ಸಾಧಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಸತೀಶ. ಎಸ್. ಪಾಟೀಲ ತಿಳಿಸಿದ್ದಾರೆ.ಅಲ್ಲದೇ ಕಳೆದ 3ಬ್ಯಾಚ್‌ಗಳಲ್ಲಿಯೂ ಶೇ.100ರಷ್ಟು ಫಲಿತಾಂಶ ಪಡೆಯುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ತಿಳಿಸಿದರು.2024ರ ಪರೀಕ್ಷೆಯಲ್ಲಿ ರ‍್ಪಿತಾ ಮೋಕಾಶಿ (576/625) 92.16% ಪಡೆದು ಶಾಲೆಗೆ ಪ್ರಥ ಮಸ್ಥಾನದಲ್ಲಿದ್ದಾಳೆ. ಅನುಪ್ ಮೂರನಾಳ (574/625) 91.84% ಪಡೆದು ದ್ವೀತಿಯ ಸ್ಥಾನವನ್ನು ಪಡೆದಿರುತ್ತಾನೆ. ಸಾಧಿಕಾ ಪೆಂಡಾರಿ (532/625) 85.12% ಪಡೆದು 3ನೇ ಸ್ಥಾನವನ್ನು ಪಡೆದಿರುತ್ತಾಳೆ.ಉತ್ತಮ ಅಂಕ ಗಳಿಸಿದ ಎಲ್ಲ ವಿದ್ಯರ‍್ಥಿಗಳಿಗೆ ಸಂಸ್ಥೆಯ ಕರ‍್ಯರ‍್ಶಿ ನೀಲಾ ಎಸ್ ಪಾಟೀಲ, ಮುಖ್ಯ ಗುರುಗಳು ಮತ್ತು ಎಲ್ಲ ಶಿಕ್ಷಕವೃಂದ ಅಭಿನಂದನೆಗಳನ್ನು ತಿಳಿಸಿದ್ದಾರೆ.

Read More