Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶರಣರ ಸಂದೇಶ ಆಲಿಸುವುದು ಪುಣ್ಯದ ಕಾರ್ಯ

ನ್ಯಾಷನಲ್ ಕ್ರಿಕೆಟ್ ಸ್ಫರ್ಧೆ: ಬಾಲಕಿ ಆರಾಧ್ಯ ಆಯ್ಕೆ

ಶ್ರೀ ಪವನ ಸೌಹಾರ್ದ ಸಹಕಾರಿ ಸಂಘದ ಸಾಮಾನ್ಯ ಸಭೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರೈತರು ಸಂಘಟಿತರಾಗದಿದ್ದರೆ ಪರಿಸ್ಥಿತಿ ಗಂಭೀರ :ಪಾಟೀಲ
(ರಾಜ್ಯ ) ಜಿಲ್ಲೆ

ರೈತರು ಸಂಘಟಿತರಾಗದಿದ್ದರೆ ಪರಿಸ್ಥಿತಿ ಗಂಭೀರ :ಪಾಟೀಲ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ: ಪ್ರಕೃತಿಯೂ ರೈತರಿಗೆ ತೊಂದರೆ ಕೊಡುತ್ತಿದೆ. ಅತೀವೃಷ್ಠಿ, ಅನಾವೃಷ್ಠಿ ಹೊಡೆತಕ್ಕೆ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ರೈತರ ಜ್ವಲಂತ ಸಮಸ್ಯೆಗಳಿವೆ. ಅದಕ್ಕೆ ರೈತರ ಗಟ್ಟಿ ಧ್ವನಿಯಾಗಿ ಸರಕಾರ ಗಮನ ಸೆಳೆಯಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಭೀಮನಗೌಡ ಪಾಟೀಲ ಹೇಳಿದರು.
ಬುಧವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಅಕ್ಕ ಮಹಾದೇವಿ ಬ್ಯಾನರ್ ಕಾರ್ಯಾಲಯದಲ್ಲಿ, ರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲೆಯ ನೂತನ ಅಧ್ಯಕ್ಷ ಎಸ್ ಬಿ ಕೆಂಬೋಗಿ ಅವರಿಗೆ “ಸ್ನೇಹ ಸಂಗಮ‌” ಸ್ನೇಹಿತರ ಬಳಗದಿಂದ ಸನ್ಮಾನಿಸಿ ಮಾತನಾಡಿದರು.
ಇಂದು ಬಿತ್ತನೆಯ ಬೀಜ, ಗೊಬ್ಬರದಿಂದ ಹಿಡಿದು ಮಾರುಕಟ್ಟೆಯವರೆಗೂ ರೈತರಿಗೆ ಅನ್ಯಾಯವಾಗುತ್ತಿದೆ. ರೈತರು ಸಂಘಟನೆಯಾಗದಿದ್ದರೆ ಪರಿಸ್ಥಿತಿ ತುಂಬಾ ಗಂಭೀರವಾಗುತ್ತಿದೆ.
ಇಂದು ರೈತರು ಸಮಸ್ಯೆಗಳು ಬೆಟ್ಟದಷ್ಟು, ಬೃಹದಾಕಾರವಾಗಿ ಬೆಳೆದಿವೆ. ಅದಲ್ಲದೇ ಬೇರೆ-ಬೇರೆ ತಿರುವು ಪಡೆದು ರಾಜಕೀಯ ಸ್ವರೂಪ ಪಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖಂಡ ಪಾಪು ಕಿತಲಿ‌ ಮಾತನಾಡಿ ರೈತರು ಇಂದು ಕೃಷಿ ಕಸುಬು ತೊರೆದು ಬೇರೆ ವೃತ್ತಿಯತ್ತ ಮುಖಮಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ‌. ನಮ್ಮ ವಿಜಯಪುರ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳು ಪ್ರತಿ ವರ್ಷ ರೈತರು ಅನುಭವಿಸುತ್ತಿದ್ದಾರೆ.‌ ರೈತರಿಗೆ ಸರಿಯಾದ ಸಮಯಕ್ಕೆ ಬೀಜ ರಸಗೊಬ್ಬರ ಮತ್ತು ಸರಕಾರದ ಸಹಾಯ ಸಹಕಾರ ‌ಮಾರ್ಗದರ್ಶನ ಸಿಗಬೇಕು. ಅದಲ್ಲದೇ ಕಳಪೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ಮತ್ತು ಕೃಷಿ ಜ್ಞಾನ ವಿಲ್ಲದ ಅನೇಕ ಅಂಗಡಿಕಾರರು ಇದ್ದಾರೆ. ಅವರಿಂದ ರೈತರಿಗೆ ಸರಿಯಾದ ಮಾರ್ಗದರ್ಶನ ಸಿಗದೆ ಬೆಳೆ ಹಾನಿ ಅನುಭವಿಸುವ ಕಷ್ಟದ ಪರಿಸ್ಥಿತಿ ಇದೆ. ಹಾಗಾಗಿ ಇಂತಹ ಎಲ್ಲಾ ಸಮಸ್ಯೆಗಳಿಗೆ ಇತೀಶ್ರಿ ಹೇಳಲು ಗಟ್ಟಿಯಾದ ರೈತ ಸಂಘಟನೆ ಅವಶ್ಯಕತೆ ಇದೆ ಎಂದು ಹೇಳಿದರು.
ಇನ್ನೋರ್ವ ಮುಖಂಡ ಮಲ್ಲಿಕಾರ್ಜುನ ವಾಲಿಕಾರ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಗೆ ಚುನಾವಣೆ ಬಂದಾಗ ಮಾತ್ರ ರೈತರು ನೆನಪು ಮಾಡಿಕೊಳ್ಳುತ್ತಾರೆ. ರೈತರು ಒಂದು ವೇಳೆ ಕಸುಬು ಬಿಟ್ಟು ನಿಂತರೆ ಪರಿಸ್ಥಿತಿ ಏನಾಗುತ್ತದೆ ಎಂದು ಊಹಿಸ ಕೊಂಡರೆ ಅರ್ಥವಾಗುತ್ತೆ. ಹಾಗಾಗಿ ರೈತರು ಸಂಘಟಿತರಾದಾಗ ಮಾತ್ರ ಸರಕಾರದ ಸೌಲಭ್ಯಗಳು ದೊರೆಯುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ “ಸ್ನೇಹ ಸಂಗಮ” ಸ್ನೇಹಿತರು ಮಲ್ಲಿಕಾರ್ಜುನ ಹಾವಿನಾಳಮಠ, ಶಿಕ್ಷಕ, ಸಾಹಿತಿ ಧಶರಥ ಕೋರಿ, ಪತ್ರಕರ್ತ ಶಂಕರ್ ಜಮಾದಾರ ಹಾಗೂ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶರಣರ ಸಂದೇಶ ಆಲಿಸುವುದು ಪುಣ್ಯದ ಕಾರ್ಯ

ನ್ಯಾಷನಲ್ ಕ್ರಿಕೆಟ್ ಸ್ಫರ್ಧೆ: ಬಾಲಕಿ ಆರಾಧ್ಯ ಆಯ್ಕೆ

ಶ್ರೀ ಪವನ ಸೌಹಾರ್ದ ಸಹಕಾರಿ ಸಂಘದ ಸಾಮಾನ್ಯ ಸಭೆ

ಏಕರೂಪ ನಾಗರಿಕ ಸಂಹಿತೆ ಜಾರಿ ನಿರ್ಧಾರಕ್ಕೆ ಸ್ವಾಗತ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶರಣರ ಸಂದೇಶ ಆಲಿಸುವುದು ಪುಣ್ಯದ ಕಾರ್ಯ
    In (ರಾಜ್ಯ ) ಜಿಲ್ಲೆ
  • ನ್ಯಾಷನಲ್ ಕ್ರಿಕೆಟ್ ಸ್ಫರ್ಧೆ: ಬಾಲಕಿ ಆರಾಧ್ಯ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಶ್ರೀ ಪವನ ಸೌಹಾರ್ದ ಸಹಕಾರಿ ಸಂಘದ ಸಾಮಾನ್ಯ ಸಭೆ
    In (ರಾಜ್ಯ ) ಜಿಲ್ಲೆ
  • ಏಕರೂಪ ನಾಗರಿಕ ಸಂಹಿತೆ ಜಾರಿ ನಿರ್ಧಾರಕ್ಕೆ ಸ್ವಾಗತ
    In (ರಾಜ್ಯ ) ಜಿಲ್ಲೆ
  • ಜಿಓಸಿಸಿ ಬ್ಯಾಂಕಿಗೆ “ಅತ್ಯುತ್ತಮ ನಗರ ಸಹಕಾರಿ ಬ್ಯಾಂಕ್” ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಎಲ್ಲ ರಂಗಗಳಲ್ಲೂ ಕ್ರಿಯಾಶೀಲವಾಗಿರುವ ಮಹಿಳೆ :ಬಸವಲಿಂಗ ಶ್ರೀ
    In (ರಾಜ್ಯ ) ಜಿಲ್ಲೆ
  • ಧರ್ಮಮಾರ್ಗದಲ್ಲಿ ನಡೆದು ದೇವರ ಕೃಪೆಗೆ ಪಾತ್ರರಾಗಿ
    In (ರಾಜ್ಯ ) ಜಿಲ್ಲೆ
  • ಭ್ರಾತೃತ್ವ ಭಾವದಲ್ಲಿ ಪ್ರಜಾಪ್ರಭುತ್ವದ ಸೌಂದರ್ಯವಿದೆ
    In (ರಾಜ್ಯ ) ಜಿಲ್ಲೆ
  • ಪ್ರಜಾಪ್ರಭುತ್ವದ ಯಶಸ್ಸು ಯುವಜನರ ಹೊಣೆ :ಮ್ಯಾಗೇರಿ
    In (ರಾಜ್ಯ ) ಜಿಲ್ಲೆ
  • ಸೆ.೨೪ರಿಂದ ೨೫ ವರೆಗೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.