Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ನಾಜಮಿನ ನಾಯ್ಕೋಡಿ ೫೫೯ (ಶೇ.೮೯.೪೪) ಅಂಕಗಳಿಸಿ ಶಾಲೆಗೆ ಪ್ರಥಮ, ಭಾಗ್ಯಶ್ರೀ ಬಿರಾದಾರ ಮತ್ತು ಸರಸ್ವತಿ ಬಿರಾದಾರ ತಲಾ ೫೨೬ (ಶೇ.೮೪.೧೬) ಅಂಕಗಳಿಸಿ ಶಾಲೆಗೆ ದ್ವಿತೀಯ, ಮತ್ತು ಸಂಜನಾ ಪಾಟೀಲ ೫೨೪ (ಶೇ.೮೩.೮೪) ಅಂಕಗಳಿಸಿ ಶಾಲೆಗೆ ತೃತೀಯ ಸ್ಥಾನವನ್ನು ಪಡೆದು ಸಾಧನೆ ಮಾಡಿದ್ದಾರೆ
ಚಡಚಣ: 2023-2024 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಚಡಚಣ ತಾಲೂಕಿನ ನಿವರಗಿಯ ಶೃದ್ಧಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಶಾಲೆಯ ವಿದ್ಯಾರ್ಥಿನಿ ಕುಮಾರಿ ಪ್ರತಿಭಾ ಮಲ್ಲಿಕಾರ್ಜುನ ತೆಲಗಾಂವ 91.68% ಜೊತೆಗೆ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದಿದ್ದಾಳೆ, ಕುಮಾರ ಭೀಮಾಶಂಕರ ಚನ್ನಬಸು ಮನಗೇನಿ 86.88%, ಅಂಬಿಕಾ ಮಲ್ಲಪ್ಪ ಖತಾಳೆ 75%, ಅಂಕಗಳನ್ನು ಗಳಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.10 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ದರ್ಜೆಯಲ್ಲಿ 02 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 02 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 06, ವಿದ್ಯಾರ್ಥಿಗಳು ಉತ್ತೀರ್ಣರಾಗುವದರ ಜೊತೆಗೆ ಸಂಸ್ಥಗೆ 100% ಕ್ಕೆ 100% ಫಲಿತಾಂಶ ತಂದು ಕೊಟ್ಟಿದಾರೆ ಎಂದು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ತುಪ್ಪದ ತಿಳಿಸಿದ್ದಾರೆ.ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪಾಲಕರಿಗೆ ಆಡಳಿತ ಮಂಡಳಿಯವರು, ವಿಭಾಗ ಮುಖ್ಯಸ್ಥರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಢವಳಗಿಯ ಪವಿತ್ರಾ ಕೊಣ್ಣೂರ ಶೇ೯೯.೬೮ ಅಂಕ ಪಡೆದು ಜಿಲ್ಲೆಗೆ ಪ್ರಥಮ ಮುದ್ದೇಬಿಹಾಳ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಢವಳಗಿ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಪುತ್ರಿ ಪವಿತ್ರಾ ಕೊಣ್ಣೂರ ಇಂಗ್ಲೀಷ್ ಮಾಧ್ಯಮದಲ್ಲಿ ೬೨೩ (ಶೇ೯೯.೬೮) ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ತೃತೀಯ ಸ್ಥಾನ ಗಿಟ್ಟಿಸಿಕೊಂಡು ಅದ್ವಿತಿಯ ಸಾಧನೆ ಮಾಡಿದ್ದಾಳೆ.ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಪವಿತ್ರಾ ಇಂಗ್ಲೀಷ್ ವಿಷಯದಲ್ಲಿ ೧೨೫ಕ್ಕೆ ೧೨೪, ವಿಜ್ಞಾನ ವಿಷಯದಲ್ಲಿ ೧೦೦ಕ್ಕೆ ೯೯ ಸೇರಿದಂತೆ ಉಳಿದ ಎಲ್ಲ ವಿಷಯಗಳಿಗೆ ನೂರಕ್ಕೆ ನೂರು ಅಂಕ ಪಡೆದಿದ್ದಾಳೆ. ಪುತ್ರಿಯ ಸಾಧನೆಗೆ ತಂದೆ ಮಡಿವಾಳಪ್ಪಗೌಡ ಕೊಣ್ಣೂರ, ತಾಯಿ ಭಾರತಿ ಕೊಣ್ಣೂರ ಹರ್ಷ ವ್ಯಕ್ತಪಡಿಸಿದ್ದಾರೆ.ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ “ಉದಯರಶ್ಮಿ” ಪತ್ರಿಕೆಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಪವಿತ್ರಾ, ನನಗೆ ಇಷ್ಟೊಂದು ಅಂಕಗಳು ಬರುತ್ತೆ ಅಂದುಕೊಂಡಿರಲಿಲ್ಲ. ನನ್ನ ಸಾಧನೆಗೆ ನನ್ನ ತಂದೆ ತಾಯಿಯ ಆಶೀರ್ವಾದ, ಶಿಕ್ಷಕರ ಪರಿಶ್ರಮ ಕಾರಣ. ಮುಂದೆ ಮೆಡಿಕಲ್ ಕ್ಷೇತ್ರದಲ್ಲಿ ಕಾಲಿರಿಸುವ ಆಸೆ ನನ್ನದು ಎಂದಿದ್ದಾಳೆ. ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಸನ್ಮಾನ ಮುದ್ದೇಬಿಹಾಳ:…
ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಆಕೆ ಹೆಣ್ಣು, ಅಬಲೆ ಎಂಬಂತೆ ಜನರಿಂದ ಬಿಂಬಿಸಲ್ಪಟ್ಟರೂ ಸಬಲೆಯಾಗಿದ್ದಳು. ಎಲ್ಲಿ ಬಾಗಬೇಕು, ಎಲ್ಲಿ ಎದ್ದು ನಿಲ್ಲಬೇಕು ಎಂಬುದು ಆಕೆಗೆ ಗೊತ್ತಿತ್ತು. ಗುರು ಹಿರಿಯರಿಗೆ, ಅತ್ತೆ ಮಾವನಿಗೆ, ಕೈಹಿಡಿದ ಪತಿಯ ಜೊತೆ ಗೌರವಾದರದಿಂದ ನಡೆದುಕೊಳ್ಳುತ್ತಿದ್ದ ಆಕೆ ಮೈದುನ ದುಶ್ಚಟಗಳಿಗೆ ಬಲಿಯಾದಾಗ ಆತನನ್ನು ಸರಿದಾರಿಗೆ ತರಲು ಕಠೋರವಾಗಿ ನಡೆದುಕೊಂಡಳು. ನಾದಿನಿಯರನ್ನು, ನೆಗೆಣ್ಣಿಯರನ್ನು ಪ್ರೀತಿ ವಿಶ್ವಾಸದಿಂದ ಒಲಿಸಿಕೊಂಡಳು. ಆ ಪರಶಿವನನ್ನು ಸದಾ ಕಾಲ ಭಕ್ತಿ ಭಾವದಿಂದ ಪೂಜಿಸಿ ಆತನ ಪರಮ ಸಾನಿಧ್ಯ ಪಡೆದಳು.ಗುರುವಿನ ಮಠದಾಗ ತಿರುಗಿ ಹೋದವರಾರು ಗುರುವಿನ ಮಗಳು ಗುರು ತಾಯಿ ಮಲ್ಲಮ್ಮ ಹೇಮರೆಡ್ಡೇರ ಸೊಸಿ….. ಎಂದು ನಮ್ಮ ಜನಪದರು ತಾಯಿ ಮಲ್ಲಮ್ಮನನ್ನು ಹಾಡಿ ಹೊಗಳಿದ್ದಾರೆ. ಸಂತ ಕವಿ ಶಿಶುನಾಳ ಶರೀಫರು ಮಲ್ಲಮ್ಮನ ಕುರಿತು ಗೀತೆಯನ್ನು ರಚಿಸಿದ್ದಾರೆಹೇಮರೆಡ್ಡಿ ಮಲ್ಲಮ್ಮ ಇಂದಿನ ಆಂಧ್ರಪ್ರದೇಶದಲ್ಲಿರುವ ಶ್ರೀಶೈಲ ಪ್ರಾಂತದ ದಕ್ಷಿಣದಲ್ಲಿರುವ ರಾಮಪುರದ ನಾಗಿರೆಡ್ಡಿ ಮತ್ತು ಗೌರಮ್ಮ ಎಂಬ ದಂಪತಿಗಳಿಗೆ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿಯ ಆಶೀರ್ವಾದದಿಂದ ಹುಟ್ಟಿದ ಮಗಳು.ತಂದೆ ತಾಯಿಯರ ಒಳ್ಳೆಯ ಗುಣನಡತೆ,ಗುರುಭಕ್ತಿ,…
ವಿಜಯಪುರ: ರಾಜ್ಯದಲ್ಲಿ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ವಿಜಯಪುರ ನಗರದ ಪ್ರತಿಷ್ಠಿತ ಛತ್ರಪತಿ ಶಿವಾಜಿ ಮಹಾರಾಜರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಠಾಗೋರ್ ಕನ್ನಡ ಮಾಧ್ಯಮ ಶಾಲೆಯು 100 ಕ್ಕೆ 98% ರಷ್ಟು ಸಾಧನೆ ಮಾಡಿದೆ. ಶಾಲೆಯ ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಪರೀಕ್ಷೆಯಲ್ಲಿ ಕಲ್ಪನಾ ಗುರವ್ ಎಂಬ ವಿದ್ಯಾರ್ಥಿನಿ 579 ಅಂಕ ಗಳಿಸಿ ಶೇ.92.64 ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ರ‌್ಯಾಂಕ್ ಗಳಿಸಿದ್ದಾಳೆ. ಮಲ್ಲಿಕಾರ್ಜುನ ಬ್ಯಾಲ್ಯಾಳ್ ಎಂಬ ವಿದ್ಯಾರ್ಥಿ 578 ಅಂಕ ಗಳಿಸಿ ಶೇ.92.48% ಪ್ರತಿಶತದೊಂದಿಗೆ ಶಾಲೆಗೆ ಎರಡನೇ ರ‌್ಯಾಂಕ್ ಪಡೆದಿದ್ದಾನೆ . ಪ್ರತೀಕ್ಷಾ ಕಾಂಬಳೆ ಎಂಬ ವಿದ್ಯಾರ್ಥಿನಿ ಶೇ. 92.% ಪ್ರತಿಶತದೊಂದಿಗೆ 575 ಅಂಕ ಪಡೆದು ಮೂರನೇ ರ‌್ಯಾಂಕ್ ಪಡೆದಿದ್ದಾಳೆ. ಪ್ರಫುಲ್ ವಾಲಿಕಾರ ಎಂಬ ವಿದ್ಯಾರ್ಥಿ 572 ಅಂಕ ಪಡೆದು ಶೇ.91.52% ಪ್ರತಿಶತ ಪಡೆದು ನಾಲ್ಕನೆಯ ಸ್ಥಾನ ಪಡೆದಿದ್ದಾನೆ . 15 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದು 12 ವಿದ್ಯಾರ್ಥಿ ಗಳು ಪ್ರಥಮ ಶ್ರೇಣಿಯಲ್ಲಿ…
ಮುದ್ದೇಬಿಹಾಳ: ತಾಲೂಕಿನ ತಾರನಾಳ ಗ್ರಾಮದ ಅಂಗನವಾಡಿಯಲ್ಲಿ ವಿತರಿಸಲಾದ ಪೌಷ್ಟಿಕ ಅಹಾರ ಪದಾರ್ಥಗಳು (ರವಾ, ಬೆಲ್ಲ, ಉಪ್ಪಿಟ್ಟು÷ಚಟ್ನಿ) ಅತ್ಯಂತ ಕಳಪೆ ಮಟ್ಟದ್ದಾಗಿವೆ. ಅಲ್ಲದೇ ಮೊಟ್ಟೆ ಸೇರಿದಂತೆ ಇನ್ನುಳಿದ ಅಹಾರ ಪದಾರ್ಥಗಳನ್ನು ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.ಕಳಪೆ ಮಟ್ಟದ್ದಾಗಿವೆ ಎಂದು ದೂರಿದ ಅಹಾರ ಪದಾರ್ಥಗಳ ಫೋಟೋ ಕ್ಲಿಕ್ಕಿಸಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಗ್ರಾಮಸ್ಥರು, ಪೌಷ್ಠಿಕ ಅಹಾರ ಪದಾರ್ಥಗಳನ್ನು ಸೇವಿಸಿ ಗರ್ಭಿಣಿಯರು ಆರೋಗ್ಯಯುತ ಮಗುವಿಗೆ ಜನ್ಮ ನೀಡಲಿ, ಮಕ್ಕಳು ದೈಹಿಕವಾಗಿ ಸದೃಢರಾಗಲಿ ಎಂಬುದು ಈ ಯೋಜನೆಯ ಉದ್ದೇಶ. ಆದರೆ ಈ ಯೋಜನೆ ಸದುಪಯೋಗವಾಗುತ್ತಿಲ್ಲ. ಕಳಪೆ ಗುಣಮಟ್ಟದ ಅಹಾರಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದಾರೆ. ಅಲ್ಲದೇ ಇನ್ನುಳಿದ ಅಹಾರ ಪದಾರ್ಥಗಳನ್ನು ನೀಡುತ್ತಿಲ್ಲ. ಮೊಟ್ಟೆಯನ್ನಂತೂ ಕಂಡೇ ಇಲ್ಲ. ಅಪೌಷ್ಠಿಕ ಅಹಾರ ಸೇವಿಸಿದ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ಆದರ ಹೊಣೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳೇ ಹೊರಬೇಕಾಗುತ್ತದೆ. ಈ ಕೂಡಲೇ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೋರಟಗಿ: ೨೦೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗ್ರಾಮದ ಕಲ್ಪವೃಕ್ಷ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ೬೬ ವಿದ್ಯಾರ್ಥಿಗಳಲ್ಲಿ ೬೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುತ್ತಮ ಶ್ರೇಣಿ ೨೦, ಪ್ರಥಮ ಶ್ರೇಣಿ ೩೯, ದ್ವಿತೀಯ ಶ್ರೇಣಿ ೪ ವಿದ್ಯಾರ್ಥಿಗಳು ಮತ್ತು ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ೭೬ ವಿದ್ಯಾರ್ಥಿಗಳಲ್ಲಿ ೭೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಅತ್ಯುನ್ನತ ಶ್ರೇಣಿ ೧೮, ಪ್ರಥಮ ಶ್ರೇಣಿ ೪೫, ದ್ವಿತೀಯ ಶ್ರೇಣಿ ೬ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆಆಂಗ್ಲ ಮಾಧ್ಯಮ ಪ್ರೌಢ ಶಾಲೆ೧) ಅಶುತೋಷ ೬೧೩ (೯೮.೦೮%)೨) ತನುಷಾ ಮಂದೇವಾಲಿ ೫೯೯ (೯೫.೮೪%)೩) ರಮ್ಯಾ ತಮಗೊಂಡ ೫೮೫ (೯೩.೬೦%)೪) ಪ್ರಸಾದ ರಾಠೋಡ ೫೮೫ (೯೩.೬೦)ಕನ್ನಡ ಮಾಧ್ಯಮ ಪ್ರೌಢ ಶಾಲೆ೫) ಭಗವಂತ್ರಾಯ ಮುದ್ದಾ ೫೯೪ (೯೫.೦೪%)೬) ದ್ಯಾವಮ್ಮ ನಾಯ್ಕೋಡಿ ೫೭೬ (೯೨.೧೬%)೭) ಸುನೀಲ ಆಸಂಗಿಹಾಳ ೫೭೨ (೯೧.೫೨%)ಉತ್ತಮ ಸಾದನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಸಂಸ್ಥಾಪಕ ಅಧ್ಯಕ್ಷರು ಆಡಳಿತ ಮಂಡಳಿ ಅಭಿನಂದನೆಗಳನ್ನು ಸಲ್ಲಿಸಿ ವಿದ್ಯಾರ್ಥಿಗಳ ಜೀವನ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು…
ಬಸವನಬಾಗೇವಾಡಿ: ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ನಂದಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಉತ್ತಮ ಫಲಿತಾಂಶ ನೀಡಿದ್ದಾರೆ. ಈ ಪ್ರೌಢಶಾಲೆಯಲ್ಲಿ ೧೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇದರಲ್ಲಿ ೧೪ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಮೃತಾ ರಾಠೋಡ ಶೇ. ೯೧, ಸಹನಾ ಅವಟಿ ಶೇ. ೮೯, ಶ್ರವಣಕುಮಾರ ಅರಕೇರಿ ಶೇ. ೮೬ ಅಂಕ ಪಡೆದುಕೊಂಡಿದ್ದಾರೆ.ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅಭಿನಂದನೆಗಳನ್ನು ಶಾಲೆಯ ಮುಖ್ಯಸ್ಥ ಬಸವರಾಜ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಮೇ.೧೦ ರಂದು ಬೆಳಗ್ಗೆ ೧೦.೩೦ ಗಂಟೆಗೆ ತಾಲೂಕಾಡಳಿತದಿಂದ ಸಾಂಸ್ಕ್ರತಿಕ ನಾಯಕ ವಿಶ್ವಗುರು, ಮಹಾಮಾನವತಾವಾದಿ ಬಸವಣ್ಣನವರ ಜಯಂತಿ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿ ಕಾರ್ಯಕ್ರಮವನ್ನು ಸರ್ಕಾರದ ಆದೇಶನ್ವಯ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ ಇನ್ನೂ ಜಾರಿಯಲ್ಲಿರುವುದರಿಂದ ಸರಳವಾಗಿ, ಸಾಂಕೇತಿಕವಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುವುದು. ಈ ಜಯಂತಿ ಕಾರ್ಯಕ್ರಮಕ್ಕೆ ಎಲ್ಲ ಸರ್ವ ಸಮಾಜ ಬಾಂಧವರು, ಬಸವ ಭಕ್ತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ಬಸವರಾಜ ನಂದಿಹಾಳಬಸವನಬಾಗೇವಾಡಿ: ಸಮಾಜ ಸುಧಾರಕ, ದಾರ್ಶನಿಕ, ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಮೇ.೧೦ ರಂದು ಇರುವ ಹಿನ್ನೆಲೆಯಲ್ಲಿ ಬಸವ ಜನಿಸಿದ ಬಸವನಬಾಗೇವಾಡಿಯ ಪಟ್ಟಣದಲ್ಲಿ ಬಸವ ಜಯಂತಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.ಕಳೆದ ಕೆಲ ದಿನಗಳಿಂದ ಬಸವ ಜನ್ಮಸ್ಮಾರಕ, ಬಸವೇಶ್ವರ ದೇವಸ್ಥಾನದಲ್ಲಿ ಮಂಡಳಿಯ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿರುವದು ಕಂಡುಬಂದಿತ್ತು. ಬಸವೇಶ್ವರ ದೇವಸ್ಥಾನ, ಬಸವಜನ್ಮ ಸ್ಮಾರಕ ಸೇರಿದಂತೆ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಯ ಸುತ್ತ ವಿದ್ಯುದೀಪದ ಅಲಂಕಾರ ಮಾಡಲಾಗಿದೆ.ನಾಡಿನಲ್ಲಿ ಅಕ್ಷಯ ತೃತೀಯ ಬಸವ ಜಯಂತಿಯಂದು ಶುಭ ಕಾರ್ಯ ಸೇರಿದಂತೆ ಚಿನ್ನದ ಖರೀದಿಯಲ್ಲಿ ಜನರು ತೊಡಗುತ್ತಾರೆ. ಬಸವ ಜಯಂತಿ ಬರುವದೇ ನಾಡಿಗೆ ದೊಡ್ಡ ಸಡಗರ, ಸಂಭ್ರಮ. ಬಸವ ಜಯಂತಿಯನ್ನು ಜನರು ಶ್ರದ್ದಾ ಭಕ್ತಿಯಿಂದ ಆಚರಿಸುವದು ವಿಶೇಷ. ಬಸವೇಶ್ವರರ ತತ್ವ ಗಳನ್ನು ಜಗತ್ತಿನಲ್ಲಿ ಅಳವಡಿಸಿಕೊಳ್ಳುವದು ತುಂಬಾ ಮುಖ್ಯವಾಗಿದೆ. ಇಂದು ಜಗತ್ತಿನ ಅನೇಕ ಜ್ವಲಂತ ಸಮಸ್ಯೆಗಳಿಗೆ ಬಸವೇಶ್ವರರ ಸಂದೇಶಗಳು ಪರಿಹಾರ ನೀಡುತ್ತವೆ. ಇವು ಜಗತ್ತಿನಲ್ಲಿ ಪ್ರಸಾರವಾಗಿ ಅವು ಜಾರಿಗೆ ಬರಬೇಕಿದೆ. ಇಂದು ಕೇವಲ ಬಸವೇಶ್ವರರ ಹೆಸರನ್ನು…
