Author: editor.udayarashmi@gmail.com

ದೇವರಹಿಪ್ಪರಗಿ: ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲೆಯ ಆಂಗ್ಲ್ ಮಾಧ್ಯಮದ ವಿದ್ಯಾರ್ಥಿಗಳು ೨೦೨೪ ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಆಂಗ್ಲ್ ಮಾಧ್ಯಮದಲ್ಲಿ ಪ್ರಭಂಜನ ಕುಲಕರ್ಣಿ-೬೦೨ (ಶೇ ೯೬.೩೨), ಚೇತನಾ ಬುದ್ನಿ-೫೯೫ (ಶೇ ೯೫.೨), ಪವಿತ್ರಾ ಸಜ್ಜನ-೫೯೫ (ಶೇ ೯೫.೨), ಉನ್ನತ ಸಾಧನೆ ಮಾಡಿದ್ದು, ಶಾಲೆಗೆ ಉತ್ತಮ ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ವಿ.ಕೆ.ಪಾಟೀಲ ತಿಳಿಸಿದ್ದಾರೆ.

Read More

ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ವಿಜಯಪುರ: ಸತತ ಪರಿಶ್ರಮ ಹಾಗೂ ಆತ್ಮಸ್ಥೆöÊರ್ಯದಿಂದ ಬದುಕಿನಲ್ಲಿ ಸಾಧನೆಗೈಯ್ಯಲು ಸಾಧ್ಯವಾಗುತ್ತದೆ. ಬಡತನ ಮತ್ತು ಬದುಕಿನ ಕಷ್ಟ ಕಾರ್ಪಣ್ಯಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸತತ ಓದಿನಿಂದ ಏನನ್ನಾದರೂ ಸಾಧನೆ ಮಾಡಬೇಕೆಂಬ ಛಲದೊಂದಿಗೆ ಉತ್ತಮ ಸಾಧನೆಗೈದ ನೀವು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೀರಿ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಿಸಿದರು.ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯೊಂದಿಗೆ ೨೦೨೪ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಸಾಧನೆಗೈದ ಜಿಲ್ಲೆಯ ವಿವಿಧ ಮಾಧ್ಯಮಗಳಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಿದರು.ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಗರಿಷ್ಟ ಪ್ರಮಾಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಉಪಕ್ರಮಗಳನ್ನು ಅಳವಡಿಸಿಕೊಂಡಿರುವ ಪ್ರಯುಕ್ತ ಪ್ರತಿಯೊಂದು ಕ್ಷೇತ್ರದಲ್ಲಿಯೂ ದಕ್ಷತೆ ಮತ್ತು ನಿಖರತೆಯ ಪ್ರಮಾಣ ಹೆಚ್ಚಾಗಿರುತ್ತದೆ. ಆರೋಗ್ಯಕರ ಸಾಮಾಜಿಕ ವ್ಯವಸ್ಥೆಯನ್ನು ಹಾಗೂ ಸುಸ್ಥಿರ ಸಾರ್ವಜನಿಕ ವ್ಯವಸ್ಥೆಯನ್ನು ಬಲಗೊಳಿಸಲು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮಾತ್ರ ಮಾನವಸಂಪನ್ಮೂಲವನ್ನು ನಿರ್ಧರಿಸುವ ಕಾರಣದಿಂದಾಗಿ ಇಂದಿನ ವಿದ್ಯಾರ್ಥಿಗಳು ನಿರಂತರ ಓದು, ಕರಾರುವಾಕ್ ಅಧ್ಯಯನ…

Read More

ವಿಜಯಪುರ: ಪಟ್ಟಣದ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೭೮.೮೩ ರಷ್ಟು ಫಲಿತಾಂಶ ಸಾಧಿಸಿದ್ದಾರೆ.ತೃಪ್ತಿ ತೋದಲಬಾಗಿ (ಶೇ. ೯೦.೨೪%) ಪ್ರಥಮ, ಆರತಿ ಚವ್ಹಾಣ್ (ಶೇ. ೮೯.೨೮%) ದ್ವಿತೀಯ, ಅಶ್ವಿನಿ ಚವ್ಹಾಣ್ (ಶೇ. ೮೭.೨೦%) ತೃತೀಯ ಸ್ಥಾನ ಪಡೆದಿದ್ದಾರೆ. ಉಳಿದಂತೆ ರೇಣುಕಾ ಕೋಲಕಾರ ಶೇ. ೮೬.೮೮%, ಅಜೀತ ಚವ್ಹಾಣ್ ಶೇ. ೮೫.೨೮% ಅಂಕ ಪಡೆದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ, ಸಂಸ್ಥೆಯ ಅಧ್ಯಕ್ಷ ಡಿ.ಎಲ್.ಚವ್ಹಾಣ್, ಕಾರ್ಯಾಧ್ಯಕ್ಷ ಕೆ.ಜಿ.ರಾಠೋಡ, ಕಾರ್ಯದರ್ಶಿ ರಾಜಶೇಖರ ಚವ್ಹಾಣ್, ಶಾಲಾ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ವಿಜಯಪುರ: ಪಟ್ಟಣದ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೈದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಒಟ್ಟು ೩೦ ವಿದ್ಯಾರ್ಥಿಗಳಲ್ಲಿ ೨೮ ವಿದ್ಯಾರ್ಥಿಗಳು (ಶೇ.೯೮) ಉತ್ತೀರ್ಣರಾಗಿದ್ದಾರೆ.ಚಂಚಲಾ ಕಾಂಬಳೆ ಶೇ.೯೦.೧೬ ಪ್ರಥಮ, ಲಕ್ಷ್ಮೀ ರಾಠೋಡ ಶೇ.೮೮.೨೪ ದ್ವಿತೀಯ, ಐಶ್ವರ್ಯ ಪಟ್ಟಣದ ಶೇ.೮೫.೫೬ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಉಳಿದಂತೆ ಸುಹಾಸಿನಿ ಕಿಟ್ಟದ ಶೇ.೮೪.೭೮, ಆದರ್ಶ ರಾಠೋಡ ಶೇ.೮೦.೨೮ ಅಂಕಗಳನ್ನು ಪಡೆದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯಗುರು ಸಂದೀಪ ರಾಠೋಡ, ಸಂಸ್ಥೆಯ ಅಧ್ಯಕ್ಷ ಡಿ.ಎಲ್.ಚವ್ಹಾಣ್, ಕಾರ್ಯಾಧ್ಯಕ್ಷ ಕೆ.ಜಿ.ರಾಠೋಡ, ಕಾರ್ಯದರ್ಶಿ ರಾಜಶೇಖರ ಚವ್ಹಾಣ್, ಶಾಲಾ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ ವರ್ಗ ಹರ್ಷವ್ಯಕ್ತಪಡಿಸಿದ್ದಾರೆ.

Read More

ವಿಜಯಪುರ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಡಚಣ ತಾಲೂಕಿನ ನಿವರಗಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿಗಳು ಶೇ.೭೯.೧೦% ಫಲಿತಾಂಶವನ್ನು ದಾಖಲಿಸಿದ್ದಾರೆ. ಪರೀಕ್ಷೆಗೆ ಕುಳಿತ ೬೭ ವಿದ್ಯಾರ್ಥಿಗಳ ಪೈಕಿ ೫೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಪ್ರಜ್ವಲ ನರೂಣಿ ಶೇ.೯೫.೮೪% ಪ್ರಥಮ, ನಿಖಿತಾ ಹಳದಕಿ ಶೇ.೯೪.೦೮% ದ್ವಿತೀಯ, ಚೇತನ ಕರ್ಜಗಿ ಶೇ.೯೦.೭೨% ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೇ ರಕ್ಷಿತಾ ಬಿರಾದಾರ ಗಣಿತ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ, ನಿಖಿತಾ ಹಳದಕಿ ಮತ್ತು ಚೇತನ ಕರ್ಜಗಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಪಾಟೀಲ, ಮುಖ್ಯ ಗುರು ರವಿಕುಮಾರ ನಾಯಕ ಸಂಸ್ಥೆಯ ಸರ್ವ ಸದಸ್ಯರುಗಳು, ಶಾಲೆಯ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.

Read More

ಕಲಕೇರಿ: ಸಮೀಪದ ತಿಳಗೂಳ ಗ್ರಾಮದಲ್ಲಿ ವಿಶ್ವಗುರು ಸಾಂಸ್ಕೃತಿಯ ನಾಯಕ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.ಗ್ರಾಮದ ಹಿರಿಯರು ಮತ್ತು ಯುವಕರು ಬಸವಣ್ಣನವರ ವೃತ್ತದಲ್ಲಿ ಸೇರಿ ಭಕ್ತಿಪೂರ್ವಕವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಮಹಾಪೂಜೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ಪ್ರೊ. ಜಗದೀಶ ಸಾತಿಹಾಳ ಅವರು, ೧೨ನೇ ಶತಮಾನದಲ್ಲಿ ವಚನ ಕ್ರಾಂತಿಯನ್ನು ಮಾಡಿ ನುಡಿದಂತೆ ನಡೆದ ಮಹಾನ್ ಚೇತನ ಅಣ್ಣ ಬಸವಣ್ಣನವರಾಗಿದ್ದು, ಕಾಯಕ ತತ್ವದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾದ ಸಮಾಜದಲ್ಲಿ ಸಮಾನತೆಯನ್ನು ಸಾರಿದ ಅಣ್ಣ ಬಸವಣ್ಣನವರ ಜೀವನ ನಮಗೆಲ್ಲ ದಾರಿದೀಪವಾಗಿದ್ದು, ಅವರ ವಚನಗಳಲ್ಲಿಯ ಒಂದಿಷ್ಟು ವಿಚಾರಗಳನ್ನು ನಮ್ಮ ಜೀವನದಲ್ಲಿ ಪ್ರತಿನಿತ್ಯ ಅಳವಡಿಸಿಕೊಂಡು ನಡೆದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುವುದಲ್ಲದೇ ಅದು ನಾವು ಅವರಿಗೆ ಸಲ್ಲಿಸುವ ನಿಜವಾದ ಭಕ್ತಿ ಮತ್ತು ಗೌರವವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಿವಪುತ್ರ ಸಾತಿಹಾಳ, ಷಡಕ್ಷರಿ ಹಿರೇಮಠ, ಸತೀಶ ನೆಲ್ಲಗಿ, ಶರಣಪ್ಪ ಗದ್ದಗಿ, ಭೀಮು ಕುಂಬಾರ, ಸೋಮನಗೌಡ ಬಾಗೇವಾಡಿ, ಶಿವನಗೌಡ ಬಿರಾದಾರ, ಸಂಗಪ್ಪ ಪೊಲೀಸಪಾಟೀಲ, ಸಂಗಪ್ಪ ಸಾತಿಹಾಳ, ಮುತ್ತು ಸಾತಿಹಾಳ ಎಮ್‌ಆರ್‌ಡಬ್ಲೂ ಸಿಂದಗಿ, ಮಹಾಂತೇಶ ಸಜ್ಜನ,…

Read More

ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ಮೇ. ೧೧ ರಂದು ಸಂಜೆ ೬ ಗಂಟೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾನಿಧ್ಯವನ್ನು ಸಿದ್ದಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಉದ್ಘಾಟಿಸುವರು. ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಪುಷ್ಪಾರ್ಚನೆ ನೆರವೇರಿಸುವರು. ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ ವಹಿಸುವರು. ಮಹಮ್ಮದಗೌಸ ಹವಾಲ್ದಾರ ಉಪನ್ಯಾಸ ನೀಡುವರು. ಮುಖ್ಯಅತಿಥಿಗಳಾಗಿ ರಾಜ್ಯ ವಿಮಾ ಸಹಕಾರ ಮಹಾಮಂಡಳ ಅಧ್ಯಕ್ಷ ಶಿವನಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಕೀಲ ಬಿ.ಕೆ.ಕಲ್ಲೂರ, ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಫ್.ಡಿ.ಮೇಟಿ, ಮುಖಂಡರಾದ ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ಎಂ.ಎನ್. ಅಂಗಡಗೇರಿ ಆಗಮಿಸುವರು ಎಂದು ತಾಲೂಕು ಕಸಾಪ ಪ್ರಕಟಣೆ ತಿಳಿಸಿದೆ.

Read More

ಬಸವನಬಾಗೇವಾಡಿ: ಬಸವಜ್ಯೋತಿಯನ್ನು ಕಳೆದ ಹನ್ನೆರಡು ವರ್ಷಗಳಿಂದ ಕೊಂಡೊಯ್ಯುತ್ತಿರುವ 63 ಹರೆಯದ ಬಸನಗೌಡರು ಇಂತಹ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಗಮನವಿಟ್ಟುಕೊಂಡು ಒಂದು ಆದ್ಯಾತ್ಮಿಕ ಮ್ಯಾರಥಾನ್ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ರಾತ್ರಿ ಬಸವನಬಾಗೇವಾಡಿಯಿಂದ ವಿಜಯಪುರ ನಗರಕ್ಕೆ ಕಳೆದ ಹನ್ನೆರಡು ವರ್ಷಗಳಿಂದ ಬಸವಜ್ಯೋತಿಯನ್ನು ಓಡುತ್ತಲೇ ಕೊಂಡೊಯುತ್ತಿರುವ ಬೆಂಗಳೂರಿನ ಉದ್ಯಮಿ ಬಸನಗೌಡ ಪಾಟೀಲ ಅವರ ಜ್ಯೋತಿಯಾತ್ರೆಗೆ ಚಾಲನೆ ಕೊಟ್ಟು ಮಾತನಾಡಿದರು.ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅದ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಬಸವತತ್ವ ಪ್ರಚಾರಕ್ಕಾಗಿ ಬಸವಜ್ಯೋತಿಯಾತ್ರೆಯನ್ನು ಮಾಡುತ್ತಿರುವ ಬಸನಗೌಡ ಪಾಟೀಲ ಅವರ ಕಾರ್ಯ ಇಂದಿನ ಯುವಕರಿಗೆ ಮಾದರಿ. ಇಂದಿನ ಪ್ರಸ್ತುತ ಯುಗದಲ್ಲಿ ಬಸವ ತತ್ವ ಬಸವಣ್ಣನವರ ವಚನ ಸಾಹಿತ್ಯದ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಅತಿ ಅವಶ್ಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಜು ಬಿರಾದಾರ, ಮುತ್ತು ಡಂಬಳ, ಮುತ್ತು ಚಿಕ್ಕೊಂಡ, ಎಸ್.ಎ.ಪಾಟೀಲ, ಉಮೇಶ ಅವಟಿ, ಮಹಾಂತೇಶ ಜಾಲಗೇರಿ, ವಿಜಯಪುರ ಸೈಕ್ಲಿಂಗ್ ಗ್ರೂಪಿನ ಸಂಕೇತ ಬಗಲಿ, ಸೋಮಶೇಖರ್ ರಾಜು ಸಾಲೋಟಗಿ, ಡಾ.ಭೀಮನಗೌಡ…

Read More

ಬಸವನಬಾಗೇವಾಡಿ: ಇಡೀ ಜಗತ್ತಿನಲ್ಲಿಯೇ ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಜಗತ್ತಿನ ಮೊದಲನೇ ವ್ಯಕ್ತಿ ಬಸವಣ್ಣನವರು ಎಂದು ಡಾ ಯುವರಾಜ ಮಾದನಶೆಟ್ಟಿ ಹೇಳಿದರು.ಪಟ್ಟಣದ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಶುಕ್ರವಾರ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಧ್ವನಿ ಇಲ್ಲದವರಿಗೆ ಧ್ವನಿ ನೀಡಿದವರು ಬಿದ್ದವರನ್ನು ಮೇಲೆತ್ತಿದ ಮಹಾನುಭಾವ ಬಸವಣ್ಣನವರು. ಸರ್ವಕಾಲಕ್ಕೂ ನಮ್ಮ ಮುಂದೆ ಆದರ್ಶರಾಗಿ ನಿಲ್ಲುತ್ತಾರೆ. ಅವರ ತತ್ವಗಳನ್ನು ನಾವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡುವ ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಮಂಜುನಾಥ ಗುಳೇದಗುಡ್ಡ ಮಾತನಾಡಿ. ಬಸವಣ್ಣವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ಸಾಗಿಸಬಹುದು.ನುಡಿದಂತೆ ನಡೆದ ಶರಣರ ವಿಚಾರಗಳು ಸರ್ವಕಾಲಕ್ಕೂ ನಮಗೆ ದಾರಿದೀಪವಾಗಿ ನಿಲ್ಲುತ್ತವೆ ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ವೀರೇಶ ಕುಂಟೋಜಿ ಮಾತನಾಡಿ, 900 ವರ್ಷಗಳು ಗತಿಸಿದರೂ ಕೂಡ…

Read More

ಬಸವನಬಾಗೇವಾಡಿ: ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಜಯಂತಿ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲ ಅವರು ಶುಕ್ರವಾರ ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ನಂತರ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಸವೇಶ್ವರರಿಗೆ ನಮನ ಸಲ್ಲಿಸಿದರು. ನಂತರ ಬಸವ ಜನ್ಮ ಸ್ಮಾರಕಕ್ಕೆ ಭೇಟಿ ನೀಡಿ ಬಸವ ತೊಟ್ಟಿಲು ತೂಗಿ ನಮಸ್ಕರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಭರತು ಅಗರವಾಲ, ಬಸವರಾಜ ಹಾರಿವಾಳ, ಸುರೇಶಗೌಡ ಪಾಟೀಲ. ಸಂಕನಗೌಡ ಪಾಟೀಲ, ಸಂಗಮೇಶ ಓಲೇಕಾರ, ಬಸವರಾಜ ಗೊಳಸಂಗಿ, ಕಾಶೀನಾಥ ರಾಠೋಡ ಸೇರಿದಂತೆ ಇತರರು ಇದ್ದರು.

Read More