ಬಸವನಬಾಗೇವಾಡಿ: ಬಸವಜ್ಯೋತಿಯನ್ನು ಕಳೆದ ಹನ್ನೆರಡು ವರ್ಷಗಳಿಂದ ಕೊಂಡೊಯ್ಯುತ್ತಿರುವ 63 ಹರೆಯದ ಬಸನಗೌಡರು ಇಂತಹ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಗಮನವಿಟ್ಟುಕೊಂಡು ಒಂದು ಆದ್ಯಾತ್ಮಿಕ ಮ್ಯಾರಥಾನ್ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ರಾತ್ರಿ ಬಸವನಬಾಗೇವಾಡಿಯಿಂದ ವಿಜಯಪುರ ನಗರಕ್ಕೆ ಕಳೆದ ಹನ್ನೆರಡು ವರ್ಷಗಳಿಂದ ಬಸವಜ್ಯೋತಿಯನ್ನು ಓಡುತ್ತಲೇ ಕೊಂಡೊಯುತ್ತಿರುವ ಬೆಂಗಳೂರಿನ ಉದ್ಯಮಿ ಬಸನಗೌಡ ಪಾಟೀಲ ಅವರ ಜ್ಯೋತಿಯಾತ್ರೆಗೆ ಚಾಲನೆ ಕೊಟ್ಟು ಮಾತನಾಡಿದರು.
ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅದ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಬಸವತತ್ವ ಪ್ರಚಾರಕ್ಕಾಗಿ ಬಸವಜ್ಯೋತಿಯಾತ್ರೆಯನ್ನು ಮಾಡುತ್ತಿರುವ ಬಸನಗೌಡ ಪಾಟೀಲ ಅವರ ಕಾರ್ಯ ಇಂದಿನ ಯುವಕರಿಗೆ ಮಾದರಿ. ಇಂದಿನ ಪ್ರಸ್ತುತ ಯುಗದಲ್ಲಿ ಬಸವ ತತ್ವ ಬಸವಣ್ಣನವರ ವಚನ ಸಾಹಿತ್ಯದ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಅತಿ ಅವಶ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಜು ಬಿರಾದಾರ, ಮುತ್ತು ಡಂಬಳ, ಮುತ್ತು ಚಿಕ್ಕೊಂಡ, ಎಸ್.ಎ.ಪಾಟೀಲ, ಉಮೇಶ ಅವಟಿ, ಮಹಾಂತೇಶ ಜಾಲಗೇರಿ, ವಿಜಯಪುರ ಸೈಕ್ಲಿಂಗ್ ಗ್ರೂಪಿನ ಸಂಕೇತ ಬಗಲಿ, ಸೋಮಶೇಖರ್ ರಾಜು ಸಾಲೋಟಗಿ, ಡಾ.ಭೀಮನಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

