ಬಸವನಬಾಗೇವಾಡಿ: ಇಡೀ ಜಗತ್ತಿನಲ್ಲಿಯೇ ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಜಗತ್ತಿನ ಮೊದಲನೇ ವ್ಯಕ್ತಿ ಬಸವಣ್ಣನವರು ಎಂದು ಡಾ ಯುವರಾಜ ಮಾದನಶೆಟ್ಟಿ ಹೇಳಿದರು.
ಪಟ್ಟಣದ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಶುಕ್ರವಾರ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಧ್ವನಿ ಇಲ್ಲದವರಿಗೆ ಧ್ವನಿ ನೀಡಿದವರು ಬಿದ್ದವರನ್ನು ಮೇಲೆತ್ತಿದ ಮಹಾನುಭಾವ ಬಸವಣ್ಣನವರು. ಸರ್ವಕಾಲಕ್ಕೂ ನಮ್ಮ ಮುಂದೆ ಆದರ್ಶರಾಗಿ ನಿಲ್ಲುತ್ತಾರೆ. ಅವರ ತತ್ವಗಳನ್ನು ನಾವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡುವ ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಮಂಜುನಾಥ ಗುಳೇದಗುಡ್ಡ ಮಾತನಾಡಿ. ಬಸವಣ್ಣವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ಸಾಗಿಸಬಹುದು.ನುಡಿದಂತೆ ನಡೆದ ಶರಣರ ವಿಚಾರಗಳು ಸರ್ವಕಾಲಕ್ಕೂ ನಮಗೆ ದಾರಿದೀಪವಾಗಿ ನಿಲ್ಲುತ್ತವೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ವೀರೇಶ ಕುಂಟೋಜಿ ಮಾತನಾಡಿ, 900 ವರ್ಷಗಳು ಗತಿಸಿದರೂ ಕೂಡ ಶರಣರ ವಿಚಾರಗಳು ಇಂದಿಗೂ ಪ್ರಸ್ತುತವಾಗಿ ನಮಗೆ ಮಾರ್ಗದರ್ಶನ ನೀಡುತ್ತವೆ.ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಕಾಯಕಕ್ಕೆ ಹೊಸ ಅರ್ಥವನ್ನು ನೀಡಿದವರು ಶರಣರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕದಳಿ ವೇದಿಕೆ ಅಧ್ಯಕ್ಷ ಸಾವಿತ್ರಿ ಕಲ್ಯಾಣಶೆಟ್ಟಿ, ವೀಣಾ ಗುಳೇದಗುಡ್ಡ, ಅಕ್ಕಮಹಾದೇವಿ ಅಂಗಡಿ, ಕವಿತಾ ಮರ್ತೂರ, ದ್ರಾಕ್ಷಾಯಿಣಿ ತೊಂತನಾಳ ಇದ್ದರು. ಎಸ್ಐ ಮನಗೂಳಿ ನಿರೂಪಿಸಿದರು. ವಿವೇಕಾನಂದ ಕಲ್ಯಾಣಶೆಟ್ಟಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

