ಕಲಕೇರಿ: ಸಮೀಪದ ತಿಳಗೂಳ ಗ್ರಾಮದಲ್ಲಿ ವಿಶ್ವಗುರು ಸಾಂಸ್ಕೃತಿಯ ನಾಯಕ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.
ಗ್ರಾಮದ ಹಿರಿಯರು ಮತ್ತು ಯುವಕರು ಬಸವಣ್ಣನವರ ವೃತ್ತದಲ್ಲಿ ಸೇರಿ ಭಕ್ತಿಪೂರ್ವಕವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಮಹಾಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರೊ. ಜಗದೀಶ ಸಾತಿಹಾಳ ಅವರು, ೧೨ನೇ ಶತಮಾನದಲ್ಲಿ ವಚನ ಕ್ರಾಂತಿಯನ್ನು ಮಾಡಿ ನುಡಿದಂತೆ ನಡೆದ ಮಹಾನ್ ಚೇತನ ಅಣ್ಣ ಬಸವಣ್ಣನವರಾಗಿದ್ದು, ಕಾಯಕ ತತ್ವದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾದ ಸಮಾಜದಲ್ಲಿ ಸಮಾನತೆಯನ್ನು ಸಾರಿದ ಅಣ್ಣ ಬಸವಣ್ಣನವರ ಜೀವನ ನಮಗೆಲ್ಲ ದಾರಿದೀಪವಾಗಿದ್ದು, ಅವರ ವಚನಗಳಲ್ಲಿಯ ಒಂದಿಷ್ಟು ವಿಚಾರಗಳನ್ನು ನಮ್ಮ ಜೀವನದಲ್ಲಿ ಪ್ರತಿನಿತ್ಯ ಅಳವಡಿಸಿಕೊಂಡು ನಡೆದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುವುದಲ್ಲದೇ ಅದು ನಾವು ಅವರಿಗೆ ಸಲ್ಲಿಸುವ ನಿಜವಾದ ಭಕ್ತಿ ಮತ್ತು ಗೌರವವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಪುತ್ರ ಸಾತಿಹಾಳ, ಷಡಕ್ಷರಿ ಹಿರೇಮಠ, ಸತೀಶ ನೆಲ್ಲಗಿ, ಶರಣಪ್ಪ ಗದ್ದಗಿ, ಭೀಮು ಕುಂಬಾರ, ಸೋಮನಗೌಡ ಬಾಗೇವಾಡಿ, ಶಿವನಗೌಡ ಬಿರಾದಾರ, ಸಂಗಪ್ಪ ಪೊಲೀಸಪಾಟೀಲ, ಸಂಗಪ್ಪ ಸಾತಿಹಾಳ, ಮುತ್ತು ಸಾತಿಹಾಳ ಎಮ್‌ಆರ್‌ಡಬ್ಲೂ ಸಿಂದಗಿ, ಮಹಾಂತೇಶ ಸಜ್ಜನ, ಸತೀಶ ಬಡಿಗೇರ, ನಿಂಗನಗೌಡ ಸುಬೇದಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

