Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಬಸವೇಶ್ವರ ಪೌಢಶಾಲೆಯ ವಿಧ್ಯಾರ್ಥಿಗಳು ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ರೋಷನ್ ರಾಠೋಡ್ ೫೬೯ (೯೧.೦೪%) ಅಂಕ ಪಡೆದು ಪ್ರಥಮ ಸ್ಥಾನ, ಗೊವಿಂದ್ ಚವ್ಹಾಣ ೫೪೮ (೮೭.೬೮%) ಅಂಕ ಪಡೆದು ದ್ವಿತೀಯ ಸ್ಥಾನ, ಮಲ್ಲಮ್ಮ ಜಂಬಗಿ ಹಾಗೂ ಕಾಂಚನಾ ರಾಠೋಡ ೫೩೩ (೮೫.೨೮%) ಅಂಕ ಪಡೆದು ತೃತೀಯ ಸ್ಥಾನ ಹಾಗೂ ಅಂಭಿಕಾ ಮೋಪಗಾರ ೫೨೮ (೮೪.೪೮%) ಅಂಕ ಪಡೆದು ನಾಲ್ಕನೇಯ ಸ್ಥಾನ ಪಡೆದುಕೊಂಡಿದ್ದಾರೆ, ಶಾಲೆಯ ಒಟ್ಟು ಫಲಿತಾಂಶ ಶೇ ೭೯.೫೦ ರಷ್ಟಾಗಿದ್ದು, ವಿಧ್ಯಾರ್ಥಿಗಳ ಸಾಧನೆಗೆ ಮುಖ್ಯಗುರು ಜಗದೀಶ ಗುಮಶೆಟ್ಟಿ ಹಾಗೂ ಶಿಕ್ಷಕ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಮುದ್ದೇಬಿಹಾಳ: ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘದ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.ಶ್ರೀಗೌರಿ ಸಂಕೀನಮಠ ೫೫೬ (ಶೇ೮೮.೯೬) ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಪ್ರಥಮ, ಮಲ್ಲಿಕಾರ್ಜುನ ಕನ್ನೂರ ೫೫೦ (ಶೇ೮೮) ಅಂಕಗಳನ್ನು ಗಳಿಸುವ ಮೂಲಕ ದ್ವಿತಿಯ, ಭಾವನಾ ಕವಡಿಮಟ್ಟಿ ೫೪೨ (ಶೇ೮೬.೭೨) ಅಂಕಗಳನ್ನು ಗಳಿಸುವ ಮೂಲಕ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಶಾಲೆಯ ಒಟ್ಟು ೫೧ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೩ ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, ೩೨ ವಿದ್ಯಾರ್ಥಿಗಳು ಪ್ರಥಮ, ೧೩ ವಿದ್ಯಾರ್ಥಿಗಳು ದ್ವಿತೀಯ, ೩ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಯ ಫಲಿತಾಂಶ ನೂರಕ್ಕೆ ನೂರು ಬಂದಿದೆ.ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ವಿ.ಎಂ.ನಾಗಠಾಣ ಸೇರಿದಂತೆ ಬೋಧಕ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಮುದ್ದೇಬಿಹಾಳ: ಪಟ್ಟಣದಲ್ಲಿ ಬಸವೇಶ್ವರ ಜಯಂತಿಯನ್ನು ವೀರಶೈವ ಲಿಂಗಾಯತ ಸಮಾಜದ ನೇತೃತ್ವದಲ್ಲಿ ಸರ್ವ ಸಮಾಜಗಳ ಮುಖಂಡರನ್ನೊಳಗೊಂಡು ಮುಸ್ಲಿಂ ಸಮಾಜ ಬಾಂಧವರು ಸಹ ಭಾಗಿಯಾಗಿ ಜಾತ್ಯಾತೀತವಾಗಿ ಬಸವೇಶ್ವರರ ಭಾವಚಿತ್ರ, ಕಳಶ, ಪಲ್ಲಕ್ಕಿ ಮತ್ತು ಬಸವಾದಿ ಶರಣರ ಛದ್ಮವೇಶಧಾರಿಗಳೊಂದಿಗೆ ಭವ್ಯ ಮೆರವಣಿಗೆ ನಡೆಸುವ ಮೂಲಕ ಅತ್ಯಂತ ಅದ್ಧೂಯಾಗಿ ಆಚರಿಸಿದರು.ಸಂಜೆ ಕಿಲ್ಲಾ ಗಲ್ಲಿಯಲ್ಲಿರುವ ಹೊಸಮಠದಿಂದ ಶುರುವಾದ ಮೆರವಣಿಗೆ ಸರಾಫ ಬಜಾರ, ಗ್ರಾಮ ದೇವತೆ ದೇವಸ್ಥಾನ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ರಾಘವೇಂದ್ರ ದೇವಸ್ಥಾನ, ಶಾರದಾ ದೇವಿ ದೇವಸ್ಥಾನ, ಬಿಎಸ್‌ಎನ್‌ಎಲ್ ಕಚೇರಿ ಮಾರ್ಗವಾಗಿ ಹಳೆಯ ತರಕಾರಿ ಮಾರುಕಟ್ಟೆಯಲ್ಲಿರುವ ಬೊಮ್ಮಲಿಂಗೇಶ್ವರ ದೇವಸ್ಥಾನದವರೆಗೆ ದಾರಿಯುದ್ದಕ್ಕೂ ಬಸವೇಶ್ವರರಿಗೆ ಜಯಘೋಷ ಹಾಕುತ್ತ ಸಾಗಿತು.ಬಸವೇಶ್ವರ ವೃತ್ತದಲ್ಲಿ ಬಸವಾಭಿಮಾನಿಗಳನ್ನುದ್ದೇಶಿಸಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಬಸವಣ್ಣನವರು ಇಡೀ ವಿಶ್ವಕ್ಕೆ ಮಾನವ ಕುಲ ಒಂದೇ ಎನ್ನುವ ಸಂದೇಶವನ್ನು ಸಾರಿದವರು. ತನ್ನದೇ ಆದ ತತ್ವಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ ಬದಲಾವಣೆ ತಂದವರು.…
ನಾರಾಯಣಪುರ-ಆಲಮಟ್ಟಿ ಜಲಾಶಯದಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಿಡುಗಡೆ ವಿಜಯಪುರ: ನಾರಾಯಣಪುರ ಜಲಾಶಯದಿಂದ ಐಬಿಸಿ ಹಾಗೂ ಐಎಲ್‌ಐ ಕಾಲುವೆಗಳ ಮೂಲಕ ಮತ್ತು ಆಲಮಟ್ಟಿ ಜಲಾಶಯದಿಂದ ಮುಳವಾಡ ಏತ ನೀರಾವರಿ ಯೋಜನೆ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗಳ ಮೂಲಕ ಬಹುಹಳ್ಳಿ ಕುಡಿಯುವ ನೀರಿನ ಕೆರೆಗಳಿಗೆ ಹಾಗೂ ಇತರೆ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಈ ಅವಧಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.ಕುಡಿಯುವ ಉದ್ದೇಶಕ್ಕಾಗಿ ಹಂತ-ಹಂತವಾಗಿ ತುಂಬಿಸಲು ಬಿಡುಗಡೆಗೊಳಿಸಿರುವ ನೀರು ಪೋಲಾಗದಂತೆ ಮಿತವ್ಯಯವಾಗಿ ಬಳಸುವ ಕುರಿತು ಮತ್ತು ನೀರು ನಿಗದಿತ ಅಂತರವನ್ನು ತಲುಪಿಸುವಗೋಸ್ಕರ ಮತ್ತು ಕೆರೆಗಳಲ್ಲಿನ ನೀರನ್ನು ಉಳಿಸಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಕಾಲುವೆಗಳ ಎಡ-ಬಲ ೧೦೦ಅಡಿ ವ್ಯಾಪ್ತಿಯಲ್ಲಿ ಹಾಗೂ ಕೆರೆಗಳ ಸುತ್ತಲು ೧೦೦ ಅಡಿ ವ್ಯಾಪ್ತಿಯಲ್ಲಿ ದಿನಾಂಕ : ೧೦-೦೫-೨೦೨೪ ರಿಂದ ೩೧-೦೫-೨೦೨೪ರವರೆಗೆ ೧೪೪ರನ್ವಯ ನಿಷೇಧಿತ ಪ್ರದೇಶವನ್ನು ಘೋಷಿಸಿ ಆದೇಶಿಸಲಾಗಿದೆ.ನಿಷೇಧಾಜ್ಞೆ ಸಂದರ್ಭದಲ್ಲಿ ಸದರಿ ಕಾಲುವೆ ವ್ಯಾಪ್ತಿಯ ದಡದ ಎಡ-ಬಲ ೧೦೦ ಅಡಿ ಸುತ್ತಮುತ್ತಲಿನ ಪ್ರದೇಶದಲ್ಲಿ…
ವಿಜಯಪುರ: ೨೦೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಶೇ.೯೦ ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು (ಸಂಘದ ಸದಸ್ಯರು ಮಕ್ಕಳು ಮಾತ್ರ) ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ/ತಾಯಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರಬೇಕು.ಸಂಘವು ನಿಗದಿಪಡಿಸಿರುವ ನಮೂನೆಯಲ್ಲಿ ಜಿಲ್ಲಾ ಸಂಘದ ದೃಢೀಕರಣದೊಂದಿಗೆ ನಿಗದಿತ ದಿನಾಂಕದೊಳಗೆ ಜಿಲ್ಲಾ ಘಟಕಕ್ಕೆ ಸಲ್ಲಿಸಬೇಕು.ನಿಗದಿತ ದಿನಾಂಕದೊಳಗೆ ಸೂಕ್ತ ದಾಖಲೆಯೊಂದಿಗೆ ಜಿಲ್ಲಾ ಸಂಘದ ಮೂಲಕ ಅರ್ಜಿ ಸಲ್ಲಿಸದೇ ಇದ್ದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರಕ್ಕೆ ಪರಿಗಣಿಸುವುದಿಲ್ಲ. ವಿದ್ಯಾರ್ಥಿಯ ಅಂಕ ಪಟ್ಟಿಯ ನಕಲನ್ನು ಶಾಲಾ/ಕಾಲೇಜ್ ಮುಖ್ಯಸ್ಥರಿಂದ ದೃಢೀಕರಿಸಿ ಅರ್ಜಿಯ ಜೊತೆ ಲಗತ್ತಿಸುವುದು ಕಡ್ಡಾಯ.ಜಿಲ್ಲಾ ಸಂಘಕ್ಕೆ ಅರ್ಜಿ ಸಲ್ಲಿಸಲು ಮೇ ೧೮ ಕೊನೆಯ ದಿನ. ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆಧಾರ್ ಝರಾಕ್ಸ್ ಮತ್ತು ಸಂಘದ ಐಡಿ ಕಾರ್ಡ್ ಝರಾಕ್ಸ್ ಹಾಗೂ ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರವನ್ನು ಲಗತ್ತಿಬೇಕು.ಅರ್ಜಿ ಮತ್ತು ಇತರೆ…
ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಎಲ್ಲಾ ವ್ಯವಸ್ಥೆಗಳು ಮತ್ತು ತಯಾರಿಗಳು ಅತ್ಯಂತ ಅಚ್ಚುಕಟ್ಟಾಗಿ ಇರುವಾಗ ಸಾಧನೆಯನ್ನು ಮಾಡಲು ಅವಕಶವೇ ಸಿಗುವುದಿಲ್ಲ, ಅವಕಾಶಗಳು ವಿಫುಲವಾಗಿ ದೊರೆತಾಗ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಅಥವಾ ಯಾವುದೇ ರೀತಿಯ ಪೂರ್ವ ತಯಾರಿಯಿಲ್ಲದೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದಕ್ಕೆ ಹಳ್ಳಿಯಲ್ಲಿ ಚಂದದ ಗಾದೆಯೊಂದು ಹೆಚ್ಚು ಪ್ರಚಲಿತದಲ್ಲಿದೆ. ಅದು ಈ ರೀತಿಯಿದೆ, ‘ಕೋರೆಹಲ್ಲು ಮೂಡುವಾಗ ಮಣ್ಣಿರುವುದಿಲ್ಲ, ಮಣ್ಣಿರುವಾಗ ಕೋರೆಹಲ್ಲು ಮೂಡುವುದಿಲ್ಲ’ ಎಂದು.ಈ ಗಾದೆಯು ಕಾಡುಹಂದಿಯು ತನ್ನ ದುರಾದೃಷ್ಟವನ್ನು ಶಪಿಸುವ ರೀತಿಯನ್ನು ಉಲ್ಲೇಖಿಸುತ್ತದೆ. ಕಾಡು ಹಂದಿಗಳಿಗೆ ಬಿರು ಬೇಸಗೆಯ ಸಮಯದಲ್ಲಿ ಹಾಗೂ ಭೂಮಿಯು ಒಣಗಿ ಭಣಗುಡುತ್ತಿರುವ ಸಂದರ್ಭದಲ್ಲಿ ಗಟ್ಟಿಯಾದ ಕೋರೆಹಲ್ಲು ಮೂಡುತ್ತದೆ. ಈ ಅವಧಿಯಲ್ಲಿ ಅವುಗಳಿಗೆ ಕೋರೆಹಲ್ಲಿದ್ದರೂ ಗಟ್ಟಿಯಾಗಿರುವ ಹಾಗೂ ಒಣಗಿದ ಮಣ್ಣನ್ನು ಅಗೆಯಲು ಸಾಧ್ಯವಾಗುವುದಿಲ್ಲ. ಆದರೆ ಮಳೆಗಾಲದಲ್ಲಿ ಮಳೆ ಬಿದ್ದು ಮಣ್ಣು ಹದವಾಗಿರುವಾಗ ಅದೇ ಕಾಡು ಹಂದಿಗಳ ಕೋರೆಹಲ್ಲುಗಳು ಉದುರಿ ಬೀಳುವುದರಿಂದ (ಕಾಡು ಹಂದಿಗಳಿಗೆ ಸಾಮಾನ್ಯವಾಗಿ ಬೇಸಗೆಯ…
ವಿಜಯಪುರ: ನಗರದ ಕುಡಿಯುವ ನೀರಿನ ತೊಂದರೆ ನೀಗಿಸಲು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಕೈಗೊಂಡ ಪ್ರಯತ್ನ ಫಲ ನೀಡಿದ್ದು, ಈಗ ಭೂತನಾಳ ಕೆರೆಗೆ ನೀರು ಹರಿದು ಬರುತ್ತಿದೆ.ಭೀಕರ ಬರ ಹಾಗೂ ಬೇಸಿಗೆ ಇರುವದರಿಂದ ಕಾಲುವೆಗಳ ಮೂಲಕ ಕುಡಿಯುವ ನೀರು ಪೂರೈಸಲು ಸಚಿವರು ಒಂದು ತಿಂಗಳಿನಿಂದ ನಿರಂತರವಾಗಿ ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಕೋರಿದ್ದರು. ಅದಕ್ಕೆ ಆಯುಕ್ತರು ಸ್ಪಂದಿಸಿದ್ದು, ಚುನಾವಣೆ ಆಯೋಗದ ಅನುಮತಿ ಪಡೆದು ನೀರು ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ. ಈಗ ಆಲಮಟ್ಟಿ ಜಲಾಶಯದಿಂದ ತಿಡಗುಂದಿ ಅಕ್ವಾಡಕ್ಟ್ ಕಾಲುವೆ ಮೂಲಕ ಭೂತನಾಳ ಕೆರೆಗೆ ನೀರು ಹರಿಸಲಾಗುತ್ತಿದ್ದು, ಈ ನೀರು ಭೂತನಾಳ ಕೆರೆಗೆ ಹರಿದು ಬರುತ್ತಿದೆ.ಈಗ ಭೂತನಾಳ ಕೆರೆಯಿಂದ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡು ಸಂಖ್ಯೆ 4, 5, 6, 10 ಮತ್ತು 12ರ ನಿವಾಸಿಗಳಿಗೆ ಬೇಸಿಗೆ ಮುಗಿಯುವವರೆಗ ಸಮರ್ಪಕವಾಗಿ ನೀರು ಪೂರೈಕೆಯಾಗಲಿದೆ.ಈ ಮುಂಚೆಯೂ ನಗರದಲ್ಲಿ ನೀರಿನ ಸಮಸ್ಯೆ ಪರಿಹರಿಸಲು ತಿಡಗುಂದಿ…
ಸಿಂದಗಿ: ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-೧ರ ಪಲಿತಾಂಶ ಗುರುವಾರ ಪ್ರಕಟವಾಗಿದ್ದು ಪಟ್ಟಣದ ಶ್ರೀ ವೇಂಕಟೇಶ್ವರ ವಿದ್ಯಾವರ್ಧಕ ಸಂಘದ ಆಕ್ಸಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶ್ರೀ ಎಚ್.ಟಿ.ಕೆ.(ಚೌಧರಿ) ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಒಟ್ಟು ಫಲಿತಾಂಶ ಶೇ.೧೦೦ ರಷ್ಟಾಗಿದೆ.ಆಕ್ಸಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆ: ವಿದ್ಯಾರ್ಥಿನಿ ಪವಿತ್ರಾ ದೇವರಮನಿ ೬೧೮ ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪರೀಕ್ಷೆ ಬರೆದ ೬೯ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ೪೨ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, ೨೭ ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪವಿತ್ರಾ ದೇವರಮನಿ ೬೧೮, ರಾಧಿಕಾ ಕಣಮೇಶ್ವರ ೬೦೬, ಮೇಘಾ ಕುಂಬಾರ ೬೦೪, ಅಕ್ಷಯ ತಾಳಿಕೋಟಿ ೫೯೭, ಭೂವನೇಶ್ವರಿ ಗೋನಾಳ ೫೯೭, ಪ್ರಶಾಂತ ಬಿರಾದಾರ ೫೯೭, ವೈಶಾಲಿ ಮಳಲಿ ೫೯೫, ಗೌತಮ ಬಡಿಗೇರ ೫೯೦, ಪ್ರಜ್ವಲ್ ಬಡಿಗೇರ ೫೮೬, ಆಕಾಶ ಬಿರದಾರ ೫೮೩ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆಶ್ರೀ ಎಚ್.ಟಿ.ಕೆ.(ಚೌಧರಿ) ಕನ್ನಡ ಮಾಧ್ಯಮ ಪ್ರೌಢಶಾಲೆ: ಪರೀಕ್ಷೆ ಬರೆದ ೨೫ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.…
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ಕೇಜ್ರಿವಾಲ್ ಗೆ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್ ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಕೊನೆಗೂ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ್ದು, ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊನೆಗೂ ಜಾಮೀನು ದೊರಕಿದ್ದು, ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಕುರಿತು ಸುಪ್ರೀಂ ಕೋರ್ಟ್ ಇಂದು ತನ್ನ ಆದೇಶವನ್ನು ನೀಡಿದೆ.ಜೂನ್ 1 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದು, ಇದರಿಂದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಂತಾಗಿದೆ.ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಜಾಮೀನಿಂದ ಆಮ್ ಆದ್ಮಿ ಪಕ್ಷ ಹಾಗೂ ದಿಲ್ಲಿ ಸರ್ಕಾರಕ್ಕೆ ದೊಡ್ಡ ನಿರಾಳತೆ ಕೊಟ್ಟಿದೆ. ಆದರೆ ಅರವಿಂದ್ ಕೇಜ್ರಿವಾಲ್ ಅವರು ಆಡಳಿತಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ಮುಂದಿನ…
