ಸಿಂದಗಿ: ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-೧ರ ಪಲಿತಾಂಶ ಗುರುವಾರ ಪ್ರಕಟವಾಗಿದ್ದು ಪಟ್ಟಣದ ಶ್ರೀ ವೇಂಕಟೇಶ್ವರ ವಿದ್ಯಾವರ್ಧಕ ಸಂಘದ ಆಕ್ಸಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶ್ರೀ ಎಚ್.ಟಿ.ಕೆ.(ಚೌಧರಿ) ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಒಟ್ಟು ಫಲಿತಾಂಶ ಶೇ.೧೦೦ ರಷ್ಟಾಗಿದೆ.
ಆಕ್ಸಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆ: ವಿದ್ಯಾರ್ಥಿನಿ ಪವಿತ್ರಾ ದೇವರಮನಿ ೬೧೮ ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪರೀಕ್ಷೆ ಬರೆದ ೬೯ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ೪೨ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, ೨೭ ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪವಿತ್ರಾ ದೇವರಮನಿ ೬೧೮, ರಾಧಿಕಾ ಕಣಮೇಶ್ವರ ೬೦೬, ಮೇಘಾ ಕುಂಬಾರ ೬೦೪, ಅಕ್ಷಯ ತಾಳಿಕೋಟಿ ೫೯೭, ಭೂವನೇಶ್ವರಿ ಗೋನಾಳ ೫೯೭, ಪ್ರಶಾಂತ ಬಿರಾದಾರ ೫೯೭, ವೈಶಾಲಿ ಮಳಲಿ ೫೯೫, ಗೌತಮ ಬಡಿಗೇರ ೫೯೦, ಪ್ರಜ್ವಲ್ ಬಡಿಗೇರ ೫೮೬, ಆಕಾಶ ಬಿರದಾರ ೫೮೩ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ
ಶ್ರೀ ಎಚ್.ಟಿ.ಕೆ.(ಚೌಧರಿ) ಕನ್ನಡ ಮಾಧ್ಯಮ ಪ್ರೌಢಶಾಲೆ: ಪರೀಕ್ಷೆ ಬರೆದ ೨೫ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ೨೦ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, ೫ ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಗಂಗಮ್ಮ ಬಿರಾದಾರ ೫೮೧, ಸುಮಯ್ಯ ನಾಟಿಕಾರ ೫೭೭, ಪವಿತ್ರಾ ಅರಳಗುಂಡಗಿ ೫೭೫, ಭಾಗ್ಯಶ್ರೀ ಪೋಲಿಸ್‌ಪಾಟೀಲ ೫೭೪, ಸಮರ್ಥ ಅಲ್ಲಾಪೂರ ೫೭೪, ಪ್ರೀಯಾ ಹಿಪ್ಪರಗಿ ೫೭೧, ಆಕಾಶ ಪೂಜಾರಿ ೫೬೯ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಚೌಧರಿ, ಆಡಳಿತಾಧಿಕಾರಿ ಮಹಾಂತೇಶ ಚೌಧರಿ, ಮುಖ್ಯೋಪಾಧ್ಯಾಯ ವಿಶ್ವನಾಥ ಯಾತ್ನೂರ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
