ಮುದ್ದೇಬಿಹಾಳ: ಪಟ್ಟಣದಲ್ಲಿ ಬಸವೇಶ್ವರ ಜಯಂತಿಯನ್ನು ವೀರಶೈವ ಲಿಂಗಾಯತ ಸಮಾಜದ ನೇತೃತ್ವದಲ್ಲಿ ಸರ್ವ ಸಮಾಜಗಳ ಮುಖಂಡರನ್ನೊಳಗೊಂಡು ಮುಸ್ಲಿಂ ಸಮಾಜ ಬಾಂಧವರು ಸಹ ಭಾಗಿಯಾಗಿ ಜಾತ್ಯಾತೀತವಾಗಿ ಬಸವೇಶ್ವರರ ಭಾವಚಿತ್ರ, ಕಳಶ, ಪಲ್ಲಕ್ಕಿ ಮತ್ತು ಬಸವಾದಿ ಶರಣರ ಛದ್ಮವೇಶಧಾರಿಗಳೊಂದಿಗೆ ಭವ್ಯ ಮೆರವಣಿಗೆ ನಡೆಸುವ ಮೂಲಕ ಅತ್ಯಂತ ಅದ್ಧೂಯಾಗಿ ಆಚರಿಸಿದರು.
ಸಂಜೆ ಕಿಲ್ಲಾ ಗಲ್ಲಿಯಲ್ಲಿರುವ ಹೊಸಮಠದಿಂದ ಶುರುವಾದ ಮೆರವಣಿಗೆ ಸರಾಫ ಬಜಾರ, ಗ್ರಾಮ ದೇವತೆ ದೇವಸ್ಥಾನ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ರಾಘವೇಂದ್ರ ದೇವಸ್ಥಾನ, ಶಾರದಾ ದೇವಿ ದೇವಸ್ಥಾನ, ಬಿಎಸ್‌ಎನ್‌ಎಲ್ ಕಚೇರಿ ಮಾರ್ಗವಾಗಿ ಹಳೆಯ ತರಕಾರಿ ಮಾರುಕಟ್ಟೆಯಲ್ಲಿರುವ ಬೊಮ್ಮಲಿಂಗೇಶ್ವರ ದೇವಸ್ಥಾನದವರೆಗೆ ದಾರಿಯುದ್ದಕ್ಕೂ ಬಸವೇಶ್ವರರಿಗೆ ಜಯಘೋಷ ಹಾಕುತ್ತ ಸಾಗಿತು.
ಬಸವೇಶ್ವರ ವೃತ್ತದಲ್ಲಿ ಬಸವಾಭಿಮಾನಿಗಳನ್ನುದ್ದೇಶಿಸಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಬಸವಣ್ಣನವರು ಇಡೀ ವಿಶ್ವಕ್ಕೆ ಮಾನವ ಕುಲ ಒಂದೇ ಎನ್ನುವ ಸಂದೇಶವನ್ನು ಸಾರಿದವರು. ತನ್ನದೇ ಆದ ತತ್ವಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ ಬದಲಾವಣೆ ತಂದವರು. ಅವರ ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ದಲಿತ ಮುಖಂಡ ವಾಯ್.ಎಚ್.ವಿಜಯಕರ ಮಾತನಾಡಿ, ಕಾಯಕ ಸಿದ್ದಾಂವನ್ನು ನಾಡಿಗೆ ನೀಡಿದ ಬಸವೇಶ್ವರರ ಚಿಂತನೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ನಡೆದಲ್ಲಿ ಭಾರತ ವಿಶ್ವಗುರು ಆಗಲಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಪ್ರಮುಖರಾದ ಅಶೋಕ ನಾಡಗೌಡರು ಬಸವೇಶ್ವರರ ಛದ್ಮವೇಶ ಧರಿಸಿ ಕುದುರೆ ಮೇಲೆ ಕುಳಿತು ಮೆರವಣಿಗೆಯ ಮೆರಗು ಹೆಚ್ಚಿಸಿದರೆ, ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಪ್ರಮುಖರಾದ ಕಾಮರಾಜ ಬಿರಾದಾರ, ಬಸವರಾಜ ನಂದಿಕೇಶ್ವರಮಠ, ಸತೀಶ ಓಸ್ವಾಲ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಅರವಿಂದ ಹೂಗಾರ, ಗುರಣ್ಣ ತಾರನಾಳ, ವೆಂಕನಗೌಡ ಪಾಟೀಲ, ಸಂಗಣ್ಣ ಬಿರದಾರ(ಜಿಟಿಸಿ), ಆರ್.ಐ.ಹಿರೇಮಠ, ವಿಕ್ರಂ ಓಸ್ವಾಲ, ಸಿದ್ಧರಾಜ ಹೊಳಿ, ಬಸವರಾಜ ನಾಗರಾಳ, ಸಂಗಣ್ಣ ಮೇಲಿನಮನಿ, ಮಹೆಬೂಬ ಗೊಳಸಂಗಿ, ಸದಾಶಿವ ಮಠ, ಎಚ್.ಆರ್.ಬಾಗವಾನ, ಸಿದ್ದಯ್ಯ ಪುರಾಣಿಕಮಠ, ಮಹಾಬಳೇಶ್ವರ ಗಡೇದ, ಎಂ.ಬಿ.ನಾವದಗಿ, ರಾಜೇಂದ್ರಗೌಡ ರಾಯಗೊಂಡ, ಪರಶುರಾಮ ನಾಲತವಾಡ, ಬಸಲಿಂಗಪ್ಪಣ್ಣ ರಕ್ಕಸಗಿ, ಸದು ಮಠ, ಸಾಧನಾ ಮಹಿಳಾ ಒಕ್ಕೂಟದ ಗಿರಿಜಾ ಕಡಿ, ಪ್ರತಿಭಾ ಅಂಗಡಗೇರಿ, ಸಂಗಮ್ಮ ದೇವರಳ್ಳಿ, ಸರಸ್ವತಿ ಪೀರಾಪೂರ, ಶೋಭಾ ಶಳ್ಳಗಿ, ಕಾಶಿಬಾಯಿ ನಾಡಗೌಡ, ವಿಜಯಲಕ್ಷ್ಮಿ ಜತ್ತಿ, ಪುಶ್ಪಾ ಸಿದ್ದಾಪೂರ, ಅಕ್ಷತಾ ಚಲವಾದಿ, ಮನೆಯಲ್ಲಿ ಮಹಾಮನೆ ಬಳದ ಸದಸ್ಯರು ಸೇರಿದಂತೆ ಬಸವಾಭಿಮಾನಿಗಳು ಭಾಗಿಯಾಗಿ ಮೆರವಣಿಗೆಯ ಕಳೆ ಹೆಚ್ಚಿಸಿದರು. ಜೈನ ಶ್ವೇತಾಂಬರ್ ಸಮಾಜದ ಬಂಧುಗಳು, ವಿರೇಶ್ವರ ನಗರದ ಯುವಕರು, ಮತ್ತು ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ ಬಸವಾಭಿಮಾನಿಗಳಿಗೆ ದಾಹ ತಣಿಸಲು ಮಜ್ಜಿಗೆ ಮತ್ತು ಪಾನಕದ ಸೇವೆ ನೀಡಿದರು.
Subscribe to Updates
Get the latest creative news from FooBar about art, design and business.
ಬಸವೇಶ್ವರರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ :ದೇಸಾಯಿ
Related Posts
Add A Comment

