Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಪಟ್ಟಣದ ಹೊರವಲಯದಲ್ಲಿರುವ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್‌ನ ಪ್ರಸಕ್ತ ಸಾಲಿನ ಸಿ.ಬಿ.ಎಸ್.ಸಿ ೧೦ನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.೧೦ನೇ ತರಗತಿಯ ವಾಷೀಕ ಪರೀಕ್ಷೆಗೆ ಹಾಜರಾದ ಒಟ್ಟು ೬೨ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ೦೯ ವಿದ್ಯಾರ್ಥಿಗಳು, ೪೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೧೧ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶಾಲೆಯ ಒಟ್ಟು ಪಲಿತಾಂಶ ೧೦೦ಕ್ಕೆ ೧೦೦ರಷ್ಟಾಗಿದೆ.ವಿದ್ಯಾರ್ಥಿನಿಯರ ಕಠಿಣ ಪರಿಶ್ರಮ, ಶಾಲೆಯ ಶಿಕ್ಷಕರ ಅತ್ಯುತ್ತಮ ಭೋಧನೆಯಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳನ್ನು ಪಡೆಯುವದರೊಂದಿಗೆ ಶಾಲೆಯ ಪಲಿತಾಂಶ ಶೇ.೧೦೦ಕ್ಕೆ ೧೦೦ ರಷ್ಟು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು ನಮಗೆ ಬಹಳ ಹೆಮ್ಮೆ ತಂದಿದೆ ಎಂದು ಅಧ್ಯಕ್ಷ ವಿಠ್ಠಲ ಕೋಳೂರ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಸೇರಿದಂತೆ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿಯರಿಗೆ ಶುಭ ಕೋರಿದ್ದಾರೆ.
ಸಿಂದಗಿ: ಪಟ್ಟಣದ ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪-೨೫ನೆಯ ಸಾಲಿನ ಶೈಕ್ಷಣಿಕ ವರ್ಷದ ಬಿಎ, ಬಿ.ಕಾಂ, ಬಿ.ಬಿ.ಎ ಮತ್ತು ಬಿ.ಎಸ್ಸಿ ಪದವಿ ತರಗತಿಗಳಿಗೆ ಪ್ರವೇಶಗಳು ಪ್ರಾರಂಭವಾಗಿವೆ ದ್ವೀತಿಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಕೂಡಲೇ ಪ್ರವೇಶಾತಿ ಪಡೆಯಬೇಕು ಎಂದು ಪ್ರಾಚಾರ್ಯ ಎಸ್.ಎಸ್. ಹಳೇಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.
“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ. ಜೆ. ಅಬ್ಬಿಗೇರಿ,ಇಂಗ್ಲೀಷ ಉಪನ್ಯಾಸಕರು, ಬೆಳಗಾವಿಮೊ:೯೪೪೯೨೩೪೧೪೨ ದೊಡ್ಡ ಕಂಪನಿಯ ವ್ಯವಸ್ಥಾಪಕನೊಬ್ಬ ನಿವೃತ್ತನಾದ. ಆತನಿಗೆ ವಿದಾಯ ಕೂಟವನ್ನು ಏರ್ಪಡಿಸಲಾಗಿತ್ತು. ಆತ ಹೊಸ ವ್ಯವಸ್ಥಾಪಕನಿಗೆ ಎರಡು ಲಕೋಟೆಗಳನ್ನು ಕೊಟ್ಟ. ಕಂಪನಿಯಲ್ಲಿ ಪರಿಹರಿಸಲಾಗದಂಥ ಬಿಕ್ಕಟ್ಟು ತಲೆದೋರಿದಾಗ ಮೊದಲನೇ ಲಕೋಟೆ ತೆರೆ. ಮುಂದಿನ ಬಿಕ್ಕಟ್ಟು ಬಂದಾಗ ಎರಡನೇ ಲಕೋಟೆ ಒಡೆದು ನೋಡು ಎಂದು ಹೇಳಿದ. ಕೆಲ ಕಾಲದ ನಂತರ ಬಿಕ್ಕಟ್ಟು ಉಂಟಾದಾಗ ಮೊದಲನೇ ಲಕೋಟೆ ತೆರೆದ. ‘ಈ ಬಿಕ್ಕಟ್ಟಿಗಾಗಿ ಮೊದಲಿಗಿದ್ದ ವ್ಯವಸ್ಥಾಪಕನನ್ನು ದೂರು.’ ಎಂದು ಆ ಚೀಟಿಯಲ್ಲಿ ಬರೆದಿತ್ತು. ಕೆಲ ವರ್ಷಗಳ ನಂತರ ಮತ್ತೊಂದು ಬಿಕ್ಕಟ್ಟು ಎದುರಾಯಿತು. ಆಗ ಎರಡನೇ ಲಕೋಟೆ ತೆರೆದ. ‘ನಿನ್ನ ಮುಂದಿನ ವ್ಯವಸ್ಥಾಪಕನಿಗೆ ಎರಡು ಲಕೋಟೆ ಸಿದ್ಧಪಡಿಸು.’ ಎಂದು ಬರೆದಿತ್ತು. ಪ್ರಯತ್ನ ಪಡದವರು ಮತ್ತೊಬ್ಬರ ಮೇಲೆ ದೋಷಾರೋಪಣೆ ಮಾಡುವುದನ್ನೇ ಕಾಯಕವಾಗಿಸಿಕೊಂಡಿರುತ್ತಾರೆ ಎನ್ನುವ ದಿವ್ಯ ಸಂದೇಶವನ್ನು ಈ ದೃಷ್ಟಾಂತ ಸಾರುತ್ತದೆ.ಉತ್ಸಾಹದಿ ಒಂದು ಅಡಿ ಇಡಿಬದುಕಿನ ಹಕ್ಕಿಗೆ ಕನಸಿನ ರೆಕ್ಕೆಗಳನ್ನು ಕಟ್ಟಿ ಮುಗಿಲಿನಲ್ಲಿ ಹಾರಲು ಬಿಡುವುದು ಚೆಂದ. ಆದರೆ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಪ್ರತಿದಿನ ಮುಂಜಾನೆ ಯೋಗಾಸನದ ನಂತರ ಮನೆಯ ಮುಂದೆ ವಾಕ್ ಮಾಡುವುದು ನನ್ನ ರೂಢಿಯಾಗಿದೆ. ಇಂದು ಮುಂಜಾನೆ ನಾನು ವಾಕ್ ಮಾಡುತ್ತಿರುವಾಗ ಕಂಡ ಒಂದು ದೃಶ್ಯ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಪರಿಣಾಮ ಬೀರಿತು. ಭಾಷೆಗೆ ನಿಲುಕದ ಭಾವಗೀತೆಯ ಹಾಡಿದ ಅನುಭವವನ್ನು ಕಣ್ಣಾರೆ ಕಂಡಂತಾಯಿತು.ಸಾಮಾನ್ಯವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಕೆಲವು ವರ್ಷಗಳ ಹಿಂದೆ ನಿಲ್ಲಿಸುವಂತೆ, ಗ್ರಾಹಕರ ಅಪೇಕ್ಷೆಯ ಮೇರೆಗೆ ಬೇಕು ಬೇಕಾದಲ್ಲಿ ಬಸ್ಸುಗಳನ್ನು ನಿಲ್ಲಿಸುವುದಿಲ್ಲವಷ್ಟೇ. ಆದರೆ ಇಂದು ಮುಂಜಾನೆ ನಮ್ಮ ಮನೆಯ ಮುಂದೆ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ಸೊಂದು ಕೆಲ ಕ್ಷಣಗಳ ಕಾಲ ನಿಂತದ್ದು ನನ್ನ ಕುತೂಹಲಕ್ಕೆ ಕಾರಣವಾಯಿತು. ಯಾವುದೇ ಕಾರಣಕ್ಕೂ ನಡಿಗೆಯನ್ನು ನಿಲ್ಲಿಸದ ನಾನು ಗೇಟಿನೊಳಗಿನಿಂದಲೇ ನೋಡಿದಾಗ 60ರ ಆಸು ಪಾಸಿನ ವಯೋವೃದ್ಧನೊಬ್ಬನಿಗೆ ಬಸ್ಸಿನಲ್ಲಿದ್ದ ಬೇರೆ ಪ್ರಯಾಣಿಕರ ಸಹಾಯದಿಂದ ಹಸಿ ಮೆಣಸಿನಕಾಯಿಯನ್ನು ತುಂಬಿದ ಮೂರು ದೊಡ್ಡ ಚೀಲಗಳನ್ನು ಕೆಳಗಿಳಿಸಿ ಕೆಲವೇ ಸೆಕೆಂಡುಗಳಲ್ಲಿ ಆ ಬಸ್ಸು ಹೊರಟು ಹೋಯಿತು.ತುಸು ಸೋಜಿಗದಿಂದಲೇ ಮನಸ್ಸಿನಲ್ಲಿ…
ವಿಜಯಪುರ: ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿದ್ಯಾವತಿ ಅಂಕಲಗಿ ಇವರ ನೇತೃತ್ವದಲ್ಲಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ನವರ ಪ್ರಕರಣವನ್ನು ರಾಜ್ಯ ಸರಕಾರವು ಎಸ್.ಐ.ಟಿ. ಗೆ ವಹಿಸಿದ್ದನ್ನು ಸಮರ್ಥಿಸಿಕೊಂಡು ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಅವರು ಮಾತನಾಡಿ ಪ್ರಜ್ವಲ್ ರೇವಣ್ಣ ನವರ ಪ್ರಕರಣವನ್ನು ರಾಜ್ಯ ಸರಕಾರವು ಎಸ್.ಐ.ಟಿ. ಗೆ ವಹಿಸಿದ್ದು ನಮಗೆ ತೃಪ್ತಿ ಇದೆ. ಕರ್ನಾಟಕದ ಎಸ್.ಐ.ಟಿ. ಬಗ್ಗೆ ಭರವಸೆ ಇದ್ದು, ಕರ್ನಾಟಕದ ಪೊಲೀಸರು ದಕ್ಷರಿದ್ದು, ಈಗಾಗಲೇ ಛಾಪಾ ಕಾಗದ ಪ್ರಕರಣದಲ್ಲಿ ಹಾಗೂ ತೀರಾ ಇತ್ತೀಚಿನ ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣವನ್ನು ಭೇದಿಸಿದ ಪ್ರಕರಣದಲ್ಲಿ ಇದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು. ಅಲ್ಲದೆ ಸಂಸದ ಪ್ರಜ್ವಲ್ ರೇವಣ್ಣ ನವರನ್ನು ಎಲ್ಲಿದ್ದರೂ ಕರೆತಂದು ಬಂಧಿಸಲು ಕೇಂದ್ರ ಸರಕಾರದವರು ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಪ್ರಜ್ವಲ್ ರೇವಣ್ಣ ನವರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಿಗೆ ಸೂಕ್ತ ರಕ್ಷಣೆಗಾಗಿ…
ವಿಜಯಪುರ: ಮನೆಯೇ ಮೊದಲ ಪಾಠ ಶಾಲೆ. ಕುಟುಂಬದಿಂದಲೇ ಒಬ್ಬ ವ್ಯಕ್ತಿಯು ಸಂಸ್ಕಾರ, ಪ್ರೀತಿ, ಹೊಂದಾಣಿಕೆಯನ್ನು ಕಲಿಯುತ್ತಾನೆ. ಕುಟುಂಬದ ಪ್ರೀತಿಯನ್ನು ಅರಿತು, ಇಡೀ ವಿಶ್ವವೇ ನಮ್ಮ ಕುಟುಂಬ ಎಂಬ ಭಾವನೆ ಎಲ್ಲರಲ್ಲಿ ಮೂಡಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ನಾಗಠಾಣ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡ ಅಂತಾರಾಷ್ಟ್ರೀಯ ಕುಟುಂಬ ದಿನವನ್ನು ಉದ್ದೇಶಿಸಿ ಮಾತನಾಡಿದರು.ಕುಟುಂಬ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಲು ಕುಟುಂಬದ ತಳಪಾಯ ಅತಿ ಅಗತ್ಯ. ಎಲ್ಲರೂ ತಮ್ಮ ಕುಟುಂಬವನ್ನು ಪ್ರೀತಿಸಬೇಕು. ನಮ್ಮ ಇಡೀ ಜೀವನವನ್ನು ನಿರ್ಮಿಸುವ ಅಡಿಪಾಯವೇ ಕುಟುಂಬವಾಗಿದೆ ಎಂದು ಹೇಳಿದರು.ಸಿ ಆರ್ ಪಿ ಈರಣ್ಣ ಮಾತನಾಡಿ, ಮಾನವನ ಬೆಳವಣಿಗೆಗೆ ಕುಟುಂಬವು ಒಂದು ಅತ್ಯಂತ ಸಮರ್ಥವಾದ ತಳಹದಿಯಾಗಿದೆ. ಕುಟುಂಬವು ಮಕ್ಕಳ ಯೋಗಕ್ಷೇಮ, ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಮಗುವಿನಲ್ಲಿ ಸಾಮಾಜೀಕರಣ, ಭಾಷಾ ಬೆಳವಣಿಗೆ, ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಕುಟುಂಬದ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಬ್ಯಾಂಕ್ ಉದ್ಯೋಗಿ ಶ್ರೀಕಾಂತ ಮಾತನಾಡಿ, ಸಮಾಜ ವ್ಯವಸ್ಥೆಯ ಬಹುಮುಖ್ಯ ಅಂಗ ಕುಟುಂಬ. ಉತ್ತಮ…
ಮೈಸೂರು: ಜೆಡಿಎಸ್–ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವ ತೊಂದರೆಯೂ ಆಗುವುದಿಲ್ಲ, ಪರಿಷತ್ ಚುನಾವಣೆ ಮೇಲೆ ಮೈತ್ರಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಮೈಸೂರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,‘ವಿಧಾನಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಪರವಾದ ವಾತಾವರಣವಿದೆ. ಈ ಬಾರಿ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಹೀಗಾಗಿಯೇ 6 ತಿಂಗಳ ಮುಂಚೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೆವು. ಮತದಾರರನ್ನು ಭೇಟಿಯಾಗಲು ಅವರಿಗೆ ಸಾಕಷ್ಟು ಸಮಯ ಸಿಕ್ಕಿದೆ ಎಂದರು.ಪೆನ್‌ಡ್ರೈವ್ ಪ್ರಕರಣಕ್ಕೂ ಈ ಚುನಾವಣೆಗೂ ಸಂಬಂಧವಿಲ್ಲ. ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರು ಪ್ರಬುದ್ಧರು. ಯಾರು ಸರಿ, ಯಾರು ಸರಿ ಇಲ್ಲ ಎನ್ನುವುದನ್ನು ನಿರ್ಧರಿಸುತ್ತಾರೆ. 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವೈಫಲ್ಯಗಳೇನು, ನಮ್ಮ ಸರ್ಕಾರದ ಸಾಧನೆ ಏನು ಎಂಬುದನ್ನು ತುಲನೆ ಮಾಡುವ ಶಕ್ತಿ ಅವರಿಗಿದೆ ಎಂದು ಹೇಳಿದರು. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ಪೆನ್‌ಡ್ರೈವ್ ಇದೆ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯದ್ದು ಯಾವಾಗಲೂ…
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯದ ವಿಡಿಯೋ ಸೋರಿಕೆ ಹಿಂದೆ ದೊಡ್ಡ ತಿಮಿಂಗಲವೇ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ.ಕುಮಾರಸ್ವಾಮಿ ಮಂಗಳವಾರ ಆರೋಪಿಸಿದ್ದು, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಲು ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ.ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವಿಡಿಯೋ ಬಿಡುಗಡೆ ಹಿಂದೆ ದೊಡ್ಡ ತಿಮಿಂಗಿಲಗಳ ಕೈವಾಡವಿದೆ ಎಂದು ಹೇಳಿದರು. ದೊಡ್ಡ ತಿಮಿಂಗಿಲ ಯಾರೆಂದು ವಿವರಿಸಲು ಕೇಳಿದಾಗ, ಅದು ಬೇರೆ ಯಾರು? ಇಂದು ಮಂಡ್ಯದ ಶಾಸಕರೊಬ್ಬರು ದೊಡ್ಡ ತಿಮಿಂಗಿಲದ ಬಗ್ಗೆ ಮಾತನಾಡಿದ್ದಾರೆ. ದೊಡ್ಡ ತಿಮಿಂಗಿಲ’ ಏನು ಹೇಳುತ್ತಿದೆಯೋ, ಅದನ್ನೇ ಸಣ್ಣ ತಿಮಿಂಗಿಲಗಳು’ ಅನುಸರಿಸುತ್ತವೆ. ವಕೀಲರ ವಾದ ಆಲಿಸಿದರೆ ಶಾಸಕ ಎಚ್‌ಡಿ ರೇವಣ್ಣ ಅವರ ಬಂಧನ ದ್ವೇಷದ ರಾಜಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಪ್ರತಿಷ್ಠೆಯನ್ನು ಹಾಳು ಮಾಡಲು ಸರ್ಕಾರ ರೇವಣ್ಣ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದರು.ಅವರೇ ಸರ್ಕಾರದಲ್ಲಿರುವಾಗ…
ಹಾಸನ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಹಾಸನ ಜಿಲ್ಲೆಯ ವಿವಿಧೆಡೆ ಮಂಗಳವಾರ ದಾಳಿ ನಡೆಸಿದೆ. ಬಿಜೆಪಿ ನಾಯಕರ ಆಪ್ತರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ವೀಡಿಯೊಗಳ ಸೋರಿಕೆಯ ಮೂಲವನ್ನು ಪತ್ತೆಹಚ್ಚಲು ಹುಡುಕಾಟ ನಡೆಸಲಾಗಿದೆ ಎಂದು ಅವರು ಹೇಳಿದರು. ಹಾಸನ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿರುವ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದು, ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
