ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯದ ವಿಡಿಯೋ ಸೋರಿಕೆ ಹಿಂದೆ ದೊಡ್ಡ ತಿಮಿಂಗಲವೇ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ.ಕುಮಾರಸ್ವಾಮಿ ಮಂಗಳವಾರ ಆರೋಪಿಸಿದ್ದು, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಲು ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವಿಡಿಯೋ ಬಿಡುಗಡೆ ಹಿಂದೆ ದೊಡ್ಡ ತಿಮಿಂಗಿಲಗಳ ಕೈವಾಡವಿದೆ ಎಂದು ಹೇಳಿದರು. ದೊಡ್ಡ ತಿಮಿಂಗಿಲ ಯಾರೆಂದು ವಿವರಿಸಲು ಕೇಳಿದಾಗ, ಅದು ಬೇರೆ ಯಾರು? ಇಂದು ಮಂಡ್ಯದ ಶಾಸಕರೊಬ್ಬರು ದೊಡ್ಡ ತಿಮಿಂಗಿಲದ ಬಗ್ಗೆ ಮಾತನಾಡಿದ್ದಾರೆ. ದೊಡ್ಡ ತಿಮಿಂಗಿಲ’ ಏನು ಹೇಳುತ್ತಿದೆಯೋ, ಅದನ್ನೇ ಸಣ್ಣ ತಿಮಿಂಗಿಲಗಳು’ ಅನುಸರಿಸುತ್ತವೆ. ವಕೀಲರ ವಾದ ಆಲಿಸಿದರೆ ಶಾಸಕ ಎಚ್‌ಡಿ ರೇವಣ್ಣ ಅವರ ಬಂಧನ ದ್ವೇಷದ ರಾಜಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಪ್ರತಿಷ್ಠೆಯನ್ನು ಹಾಳು ಮಾಡಲು ಸರ್ಕಾರ ರೇವಣ್ಣ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದರು.
ಅವರೇ ಸರ್ಕಾರದಲ್ಲಿರುವಾಗ ಯಾರಾದರೂ ದೊಡ್ಡ ತಿಮಿಂಗಿಲವನ್ನು ಹೇಗೆ ಹಿಡಿಯುತ್ತಾರೆ ಎಂದು ಅವರು ಪ್ರಶ್ನಿಸಿದರು.
Subscribe to Updates
Get the latest creative news from FooBar about art, design and business.
ಲೈಂಗಿಕ ಕಿರುಕುಳ ಕೇಸ್: ಎಚ್ಡಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು!
Related Posts
Add A Comment

