Author: editor.udayarashmi@gmail.com

ಸಿಂದಗಿ: ಬಸವಣ್ಣನವರ ವಿಚಾರ ಧಾರೆಗಳು ಭಾರತ ಅಲ್ಲದೆ ಹೊರ ರಾಷ್ಟ್ರದಲ್ಲಿ ಪಸರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ನ್ಯೂಜಿಲೆಂಡಿನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ ಅಭಿವ್ಯಕ್ತ ಪಡಿಸಿದರು.ಅವರು ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧುವಾರ ಹಮ್ಮಿಕೊಂಡಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿರುವ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖೇನ ಉದ್ಘಾಟಿಸಿ ಮಾತನಾಡಿದರು.ಬಸವಣ್ಣನವರ ವಚನಗಳಲ್ಲಿ ವೈಜ್ಞಾನಿಕ ಜ್ಞಾನವಿದೆ. ಶರಣರ ಸಂದೇಶಗಳನ್ನು ಅರ್ಥೈಸಿಕೊಳ್ಳುವದರಿಂದ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು. ನ್ಯೂಜಿಲೆಂಡನಲ್ಲಿ ಬಸವ ಸಮಿತಿಯನ್ನು ಸ್ಥಾಪಿಸಿ ಬಸವಣ್ಣನವರ ಮತ್ತು ಶರಣರ ವಿಚಾರಗಳನ್ನು ಅಲ್ಲಿಯ ಜನತೆಗೆ ನೀಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.ಈ ವೇಳೆ ಸಿಂದಗಿಯ ಎಚ್.ಜಿ. ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಅವರು ಗೋಲಗೇರಿಯ ಶ್ರೀ ಗೋಲ್ಲಾಳೇಶ್ವರ ಕುರಿತಾಗಿ ಮಾತನಾಡಿದರು.ಈ ವೇಳೆ ಜಾನಪದ ಸಾಹಿತಿ ಡಾ.ಎಂ.ಎಂ ಪಡಶೆಟ್ಟಿ ಅವರು ತಿಂಥಣಿ ಮೌನೇಶ್ವರ ವಚನಗಳ ಕುರಿತಾಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ಶರಣ…

Read More

ವಿಜಯಪುರ: ಮಾರ್ಚ್ ೯ ರಂದು ನಡೆಯಬೇಕಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಮಾರ್ಚ್ ೧೬ರಂದು ಮುಂದೂಡಲಾಗಿದೆ ಎಂದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸಂತೋಷ ಕುಂದರ್ ಅವರು ತಿಳಿಸಿದ್ದಾರೆ.ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದಲ್ಲಿ ಮುಂಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಇಂಡಿ, ಸಿಂದಗಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ ತಾಲೂಕಾ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ www.kslsa.kar.nic.in ಅಥವಾ ಸಹಾಯವಾಣಿ ಸಂಖ್ಯೆ ೧೫೧೦ ಹಾಗೂ ೧೮೦೦-೪೨೫-೯೯೦೦ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆ ಹೊಂದಲು ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳು ನಿಯಮಿತವಾಗಿ ಪಾಲ್ಗೊಳ್ಳುತ್ತಿರುವುದನ್ನು ಖಚಿತಪಡಿಸಿಕೊಂಡು ಮಗುವಿನಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ-೨೦೨೪ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಕಾರ್ಯ ಚಟುವಟಿಕೆ ರೂಪಿಸಬೇಕು. ಮಕ್ಕಳು ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆಯೂ, ಆ ಮೂಲಕ ಅವರ ಭಾಗವಹಿಸುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪ್ರೇರೇಪಿಸಿಬೇಕು. ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ಒದಗಿಸಬೇಕು.…

Read More

ಬ್ರಹ್ಮದೆವನಮಡು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ನಾಗವಾರ ಬಣದ) ಸಿಂದಗಿ ತಾಲೂಕು ಸಂಘಟನಾ ಸಂಚಾಲಕರಾಗಿ ಹೊನ್ನಳ್ಳಿ ಗ್ರಾಮದ ದಲಿತ ಮುಖಂಡ ಹಣಮಂತ ಎಂ.ಯಂಟಮಾನ ಅವರನ್ನು ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, ತಾಲೂಕು ಸಂಚಾಲಕ ಪರಶುರಾಮ ಕಾಂಬಳೆ ಅವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

Read More

ಮುಗಿಲು ಮುಟ್ಟಿದ ಗ್ರಾಮಸ್ಥರ ಆಕ್ರೋಶ | ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ | ಸಂಚಾರ ಅಸ್ತವ್ಯಸ್ತ ಮೋರಟಗಿ: ವ್ಯಾಪಾರ, ವಹಿವಾಟ, ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಸುತ್ತುವರೆದು ದೂರದ ಆಲಮೇಲ ತಾಲೂಕಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಬಸಾವಳಗಿ ಗ್ರಾಮವನ್ನು ಮರಳಿ ಸಿಂದಗಿ ತಾಲೂಕಿಗೆ ಸೇರ್ಪಡೆ ಮಾಡಿ, ಇಲ್ಲವೇ ವಿಷ ಕೊಡಿ ಎಂದು ಮುಖಂಡ ಬಂಗಾರೆಪ್ಪಗೌಡ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು.ಸಮೀಪದ ಗಬಸಾವಳಗಿ ಗ್ರಾಮವನ್ನು ಮರಳಿ ಸಿಂದಗಿ ತಾಲೂಕಿಗೆ ಸೇರ್ಪಡೆ ಮಾಡಬೇಕೆಂದು ಬುಧವಾರ ಗ್ರಾಮಸ್ಥರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಬಾಗವಹಿಸಿ ಅವರು ಮಾತನಾಡಿದರು.ನಮ್ಮ ಗ್ರಾಮದಿಂದ ಸಿಂದಗಿ ೧೨ ಕಿ ಮಿ ಆಗುತ್ತಿದ್ದು ಇದನ್ನು ೪೦ ಕಿಮಿ ಯ ಆಲಮೇಲ ತಾಲೂಕಿಗೆ ನಮ್ಮ ಹಳ್ಳಿಯನ್ನು ಸೇರ್ಪಡೆ ಮಾಡಿದ್ದಾರೆ. ವೃದ್ಧರು ಅಂಗವಿಕಲರು ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅಡೆ- ತಡೆ ಯಾಗುತ್ತಿದ್ದು ಇದು ಯಾವ ನ್ಯಾಯವೆಂದು ಪ್ರಶ್ನಿಸಿದರು. ಮತ್ತು ಈ ಕುರಿತು ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳಿಗಳಿಗೆ ಮನವಿ ಸಲ್ಲಿಸಿದ್ದು ಕೂಡಾ ಇರುತ್ತದೆ. ನಮ್ಮ ಗ್ರಾಮದ ಸಂಕಷ್ಟ ಕುರಿತು ಜನ ನಾಯಕರು…

Read More

ವಿಜಯಪುರ: ಇಂದಿನ ವಿದ್ಯಾರ್ಥಿಗಳಲ್ಲಿ ಗ್ರಹಿಕಾ ಶಕ್ತಿ, ಆಲೋಚನಾ ಶಕ್ತಿ, ಆಸಕ್ತಿಯ ಕೌಶಲ್ಯಗಳ ಜೊತೆಗೆ ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಗೊಳಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿದೆ ಎಂದು ಹಿರೇರೂಗಿ ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ಜಂಬಗಿ ಗ್ರಾಮದ ಶ್ರೀ ಬಿ ಎಂ ಪಾಟೀಲ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಶಾಲಾ ವಾರ್ಷಿಕೋತ್ಸವ ಹಾಗೂ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.ಶಿಕ್ಷಕರು ಬಿತ್ತಿದ ಜ್ಞಾನ, ಬುದ್ಧಿವಂತಿಕೆ, ಮೌಲ್ಯಗಳು ವಿದ್ಯಾರ್ಥಿಯ ಜೀವನವನ್ನು ಪರಿವರ್ತಿಸುತ್ತವೆ.ವಿದ್ಯಾರ್ಥಿಗಳ ಬೆನ್ನೆಲುಬಾದ ಶಿಕ್ಷಕರು ಪ್ರತಿಯೊಬ್ಬರ ಜೀವನಕ್ಕೆ ಸ್ಪೂರ್ತಿಯಾಗಿ, ವಿದ್ಯಾರ್ಥಿಗಳಿಗೆ ನೀತಿಯುತ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುತ್ತಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ರೇಣುಕಾ ಕೊಣ್ಣೂರ ಮಾತನಾಡಿದರು.ವೇದಮೂರ್ತಿ ಗುರುಬಸಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಶೈಲ ಮಸೂತಿ ಉದ್ಘಾಟಿಸಿದರು. ಬಸವರಾಜ ಭಾವಿಮನಿ, ಮುತ್ತಪ್ಪ ನಾಯ್ಕೊಡಿ, ಶಿವಪ್ಪ ಪೂಜಾರಿ, ಶರಣಪ್ಪ ಕಡ್ಲೆವಾಡ, ಹನಮಂತ ಉಕ್ಕಲಿ, ಶಿಕ್ಷಕರಾದ ರಿಯಾಜ್ ಮುಜಾವರ, ಎ ಆರ್ ತುಬಾಕೆ, ನಿಂಗನಗೌಡ ಬಿರಾದಾರ,…

Read More

ಆಲಮೇಲ: ಬನವಾಸಿಯ ಕದಂಬೋತ್ಸವ ಅಂಗವಾಗಿ ಮಯೂರವರ್ಮ ವೇದಿಕೆಯಲ್ಲಿ ಇತ್ತೀಚೆಗೆ ಜರುಗಿದ ಕವಿಗೋಷ್ಠಿಯಲ್ಲಿ ಆಲಮೇಲದ ವೈದ್ಯಸಾಹಿತಿ ಡಾ ಸಮೀರ ಹಾದಿಮನಿ ಕವನವಾಚಿಸಿದರು.ಹಿರಿಯ ಸಾಹಿತಿ ಆರ್ ಡಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕಥೆಗಾರ ಸಂತೋಷಕುಮಾರ ಮೆಹೆಂದಳೆ, ಕಾರವಾರ ಕಸಾಪ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ, ಶಿರಸಿ ತಾಲೂಕಾಧ್ಯಕ್ಷ ಸುಬ್ರಾಯ ಭಟ್ ಉಪಸ್ಥಿತರಿದ್ದರು.

Read More

ಚಡಚಣ: ಸಮೀಪದ ಲೋಣಿ ಬಿಕೆ ಗ್ರಾಮದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಮಾ.9 ರಿಂದ ಮಾ.13 ರವರಗೆ 5 ದಿನಗಳ ಕಾಲ ಶ್ರೀ ಸಿದ್ಧೇಶ್ವರ ಜಾತ್ರಾ ಕಾರ್ಯಕ್ರಮಗಳು ಜರುಗಲಿದೆ.ಮಾ. 9 ಶನಿವಾರ ರಂದು ಮಹಾಶಿವರಾತ್ರಿ ಶಿವಯೋಗ ಪ್ರಯುಕ್ತ ಸಂಜೆ 7 ಗಂಟಗೆ ಸದಭಕ್ತಿ ದೀಪೋತ್ಸವ ಮಂಗಲಕರ ವೈವಿದ್ಯಮಯ ಮಧುರತರ ವಾದ್ಯಗಳೊಂದಿಗೆ ಶ್ರೀ ಸಿದ್ಧೇಶ್ವರ ನಂದಿ ಧ್ವಜದೊಂದಿಗೆ ಪಲ್ಲಕ್ಕಿಯು ಗ್ರಾಮದೊಳಗಿನ ಮಠದಿಂದ ನ್ಯಾಯ, ನೀತಿ ಧರ್ಮವನ್ನೆ ವಿಜಯಿಸುವ ಮಾರ್ಗವಾಗಿ ದೇವಾಲಯದವರೆಗೆ ಮೆರವಣೆಗೆ ಜರಗುವುದು. ಜಾಗರಣೆಯೊಂದಿಗೆ ಭಕ್ತಿ ಭಜನೆಗಳು ಜರಗುವವು.ಮಾ.10 ರವಿವಾರ ಮಹಾಶಿವಾರಾತ್ರಿ ಅಮವಾಸೆ ಮುಂಜಾನೆ 8.30 ಗಂಟೆಗೆ ಶ್ರೀ ಸಿದ್ಧೇಶ್ವರ ಪಲ್ಲಕ್ಕಿ ಪ್ರದಕ್ಷಿಣೆ. ಮಧ್ಯಾಹ್ನ 12.30 ಗಂಟೆಗೆ ವರ್ಷವಿಡಿ ದುಡಿದ ಸಮಾಜಕ್ಕೆ ಸಂತೋಷಗೊಳಿಸಲು “ ಹರದೇಶೀ-ನಾಗೇಶೀ” ಗೀಗೀ ಪದಗಳು ಜರಗುವವು. ಸಂಜೆ 5 ಗಂಟೆಗೆ ಸರ್ವ ಶಿವಚಾರ್ಯರ ಅಮೃತ ಹಸ್ತದಿಂದ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರಗುವುದು.ಮಾ.11 ಸೋಮವಾರ ಮುಂಜಾನೆಯಿಂದ ಗೀಗೀ ಪದಗಳು ಜರಗುವವು. ಅದೇ ದಿನ ರಾತ್ರಿ ಮನರಂಜಿಸುವ ವರ್ಣರಂಜಿತ “ ಚಿತ್ರ…

Read More

ಕೆಂಭಾವಿ: ಪಟ್ಟಣದ ವಾರ್ಡ್ 1 ಮತ್ತು 2 ರಲ್ಲಿ ಇರುವ ಅಂಗನವಾಡಿ ಕೇಂದ್ರ 5 & 6ರಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕಾರ್ಯಕ್ರಮ ಮಾಡಲಾಯಿತು.ಮೆಲ್ವಿಚಾರಕಿ ಸುನಿತಾ ಪಾಟೀಲ್ ಅವರು ಮಕ್ಳಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.ಅಂಗನವಾಡಿ ಕಾರ್ಯಕರ್ತೆ ಬಸಮ್ಮ ಬಿ.ಮಾಳಳ್ಳಿಕರ್, ವಿಜಯಲಕ್ಷ್ಮಿ ದೊಡ್ಡಮನಿ ಮತ್ತು ಆಶಾ ಕಾರ್ಯಕರ್ತೆ ರೇಣುಕಾ ಸೋಮನಾಹಳ್ಳಿ, ಅಶ್ವಿನಿ ದೊಡ್ಡಮನಿ, ಭೀಮಭಾಯಿ ತೀರ್ಥ ಸೇರಿದಂತೆ ಇತರರು ಇದ್ದರು.

Read More

ವಿಜಯಪುರ: ಪ್ರಯಾಣಿಕರ ಅನುಕೂಲಕ್ಕಾಗಿ ಆಲಮಟ್ಟಿಯಲ್ಲಿ ಮೂರು ಪ್ರಮುಖ ರೈಲುಗಳು ನಿಲ್ಲುವಂತೆ ಮಾಡುವ ಮೂಲಕ ಕೇಂದ್ರ ರೈಲ್ವೇ ಇಲಾಖೆ ವಿಜಯಪುರ ಪ್ರಯಾಣಿಕರಿಗೆ ಅನುಕೂಲಕರ ಸೌಲಭ್ಯ ಕಲ್ಪಿಸಿರುವುದು ಸಂತೋಷ ತಂದಿದೆ ಎಂದು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರದ ಬಿಜೆಪಿ ಸರ್ಕಾರ ರೈಲ್ವೇಯನ್ನು ಜನರ ಆಪ್ತಸ್ನೇಹಿಯಾಗಿ ಮಾರ್ಪಾಡು ಮಾಡಿದೆ. ವಂದೇ ಭಾರತದಂತಹ ಶ್ರೇಷ್ಠ ರೈಲು ಸೇವೆಗಳ ಜೊತೆಗೆ ವಿವಿಧ ರೈಲ್ವೇ ಸೇವೆಗಳನ್ನು ಜನರ ಅನುಕೂಲಕ್ಕಾಗಿ ಜಾರಿಗೊಳಿಸಿರುವುದು ಅತ್ಯಂತ ಸಂತೋಷದ ಸಂಗತಿ, ಇದರ ಭಾಗವಾಗಿ ಶ್ರೀನಗರ-ಶಿರಡಿ-ಮೈಸೂರು ರೈಲು (ಎಸ್‌ಎನ್‌ಎಸ್‌ಐ – ಎಂವೈಎಸ್ ಎಕ್ಸಪ್ರೆಸ್), ಕೋಲ್ಕತ್ತಾ ಹವರಾ ಜಂಕ್ಷನ್ -ಬಿಕಾನೇರ್ ರೈಲು (ಬಿಕೆಎನ್-ವೈಆರ್‌ಪಿ ಎಕ್ಸಪ್ರೆಸ್) ಹಾಗೂ ಛತ್ರಪತಿ ಶಿವಾಜಿ ಮಹಾರಾಜಾ ಟರ್ಮಿನಲ್- ಹೊಸಪೇಟೆ (ಸಿಎಸ್‌ಎಂಟಿ-ಎಚ್‌ಪಿಟಿ ಎಕ್ಸಪ್ರೆಸ್) ರೈಲುಗಳು ಆಲಮಟ್ಟಿಯಲ್ಲಿ ನಿಲ್ಲಲಿವೆ, ಹೀಗಾಗಿ ಈ ಭಾಗದಿಂದ ಮುಂಬೈ ಮೊದಲಾದ ಮಹಾನಗರಗಳಿಗೆ ಪ್ರಯಾಣ ಮಾಡಬಯಸುವವರಿಗೆ ಅತ್ಯಂತ ಅನುಕೂಲರವಾಗಲಿದೆ ಎಂದು ಕಾರಜೋಳ ಸಂತಸ ವ್ಯಕ್ತಪಡಿಸಿದ್ದಾರೆ.

Read More