ವಿಜಯಪುರ: ಅಮ್ಮ ಎಂದರೆ ಮಮತೆಯ ಕಡಲು, ಸ್ವಾಭಿಮಾನದ ಪ್ರತೀಕ ಪ್ರತಿಯೊಬ್ಬರ ಬದುಕಿನ ಸ್ಫೂರ್ತಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾ ಅಕ್ಕನವರು ಹೇಳಿದರು
ಜಿಲ್ಲೆಯ ಸಿಂದಗಿ ಪಟ್ಟಣದ ಲಿಟಲ್ ವಿಂಗ್ಸ್ ಶಾಲೆಯ ವತಿಯಿಂದ ಜ್ಯೋತಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ತಾಯಂದಿರ ದಿನದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ತಾಯಿಯು ಮಮತೆಯ ಆಗರ ಕರುಣೆಯ ಕಡಲು ,ಪ್ರೀತಿಯ ಸೆಲೆಯಾಗಿದ್ದಾಳೆ. ತಾಯಿಯ ಜಗತ್ತಿನ ಸರ್ವ ಶ್ರೇಷ್ಠ ವ್ಯಕ್ತಿಯಾದ ಅಮ್ಮನಿಗೆಂದೇ ಕೇವಲ ಒಂದು ವಿಶೇಷ ದಿನವನ್ನು ಮೀಸಲಿಟ್ಟರೆ ಸಾಲದು ಅದು ನಿತ್ಯ ನಿರಂತರವಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಅತಿಥಿಯಾಗಿ ಮಾತನಾಡಿದ ಶಕುಂತಲಾ ಹಿರೇಮಠ, ಇಡೀ ಜೀವನವನ್ನೇ ಮಕ್ಕಳಿಗಾಗಿ ಬಂಧು ಬಳಗಕ್ಕಾಗಿ ಮೀಸಲಿಡುವ ಅಮ್ಮನ ಪ್ರೀತಿ ಕಾಳಜಿ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು ಅಮ್ಮನ ಮಮತೆಯನ್ನು ಸ್ಮರಿಸುವ ದಿನವಿದು. ಅವಳ ಋಣವನ್ನು ಎಷ್ಟು ಜನ್ಮವೆತ್ತಿ ಬಂದರೂ ತೀರಿಸಲಾಗದು ಎಂದರು.
ಮಹಾನಂದ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ನಿರ್ದೇಶಕಿ ಭಾರತಿ ಚೌದರಿ ಅಧ್ಯಕ್ಷತೆ ವಹಿಸಿದ್ದರು. ಪಾಲಕರ ಪ್ರತಿನಿಧಿಯಾಗಿ ಕಾವೇರಿ ಮಲ್ಲೇವಾಡಿ, ಶಿವಮ್ಮ ಮುಂಡೇವಾಡಗಿ ವೇದಿಕೆ ಮೇಲಿದ್ದರು
ಪೂಜಾ ಗಾಯಕವಾಡ ಸ್ವಾಗತಿಸಿದರು. ಪ್ರಿಯಾಂಕ ಹೊಸಮನಿ ನಿರೂಪಿಸಿದರು. ನಗ್ಮಾ ಪಾಟೀಲ ವಂದಿಸಿದರು
ಈ ಸಂದರ್ಭದಲ್ಲಿ ಭಾರತಿ ಜೋಗೂರ, ನಾಗರೇಖಾ, ಅಭಿಷೇಕ್ ಚೌಧರಿ, ಪ್ರದೀಪ ಹಿರೇಮಠ, ಸೌಜನ್ಯ ಪೂಜಾರಿ, ಪೂಜಾ ಜೋಶಿ, ಆರತಿ ಜೋಶಿ, ಮಂಜುಳಾ ಚೌದರಿ, ಮಹಾನಂದಾ ದೇವಪುರೆ, ಲಕ್ಷ್ಮಿ ಬೂದಿಹಾಳ, ಭಾಗೀರಥಿ ಪಾಟೀಲ, ಶೇತಾ ಭೈರಿ, ಉಮಾ ವಾರದ ರೋಹಿಣಿ ಬಳಗಾನೂರ, ಡಾ. ಸೈದಾ ನಸರಿನ್, ಎಸ್ ಎಸ್ ಪಾಟೀಲ, ಶೃತಿ ಬಿರಾದಾರ, ಬಸವರಾಜ ಬಿರಾದಾರ, ರಾಹುಲ ನಾರಾಯಣಕರ, ಸಂತೋಷ ಇಂಗಳೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

