ಮುದ್ದೇಬಿಹಾಳ: ಯಾವುದೇ ಸೂಕ್ತ ಕಾರಣಗಳಿಲ್ಲದೇ ಬಂದ ಮಾಡಲಾದ ಬಸ್ ಸೇವೆಗಳನ್ನು ಪುನರ್ ಆರಂಭಿಸಬೇಕು ಮತ್ತು ಅವಶ್ಯವಿರುವ ಕೆಲ ಹೊಸ ಬಸ್ ಸೇವೆಗಳನ್ನು ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದ ಮರ್ಚೆಂಟ್ ಅಸೋಸಿಯೇಶನ್, ನಗರಾಭಿವೃದ್ಧಿ ಹೋರಾಟ ವೇದಿಕೆ ಸೇರಿದಂತೆ ವಿವಿದ ಪ್ರಗತಿಪರ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಶುಕ್ರವಾರ ಸಂಜೆ ಕೆಎಸ್‌ಆರ್‌ಟಿಸಿ ಘಟಕಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಗ್ರಾಮದೇವತೆ ದೇವಸ್ಥಾನದಿಂದ ಶುರುವಾದ ಪ್ರತಿಭಟನೆ ಮುಖ್ಯ ಬಜಾರ, ಬಸವೇಶ್ವರ ವೃತ್ತ ಮಾರ್ಗವಾಗಿ ಬಸ್ ನಿಲ್ದಾಣದ ವರೆಗೆ ಸಾರಿಗೆ ಮಂತ್ರಿಗೆ ಧಿಕ್ಕಾರ ಹಾಕುತ್ತ ಸಾಗಿತು. ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಹೋರಾಟಗಾರ ಬಸವರಾಜ ನಂದಿಕೇಶ್ವರಮಠ, ಬಿ.ಎಸ್.ಮೇಟಿ, ಉಮೇಶ ಜತ್ತಿ ಮತ್ತೀತರರು ಮಾತನಾಡಿ, ಬಹು ದಿನಗಳಿಂದ ಪಟ್ಟಣದಿಂದ ಆಲಮಟ್ಟಿ ರೇಲ್ವೆ ನಿಲ್ದಾಣಕ್ಕೆ ಬಸ್ ಸೌಲಭ್ಯ ಇತ್ತು. ಇದು ದೂರದ ಊರುಗಳಿಗೆ ರೈಲ್‌ಗಳ ಮೂಲಕ ಹೋಗುವ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿತ್ತು. ಅದರಂತೆ ಇನ್ನೂ ಅನೇಕ ಬಸ್‌ಗಳು ಇಲ್ಲಿಂದಲೇ ಹೊರಡುತ್ತಿದ್ದವು. ಈ ಎಲ್ಲ ಬಸ್‌ಗಳು ಬಂದ್ ಮಾಡಿದ ಕಾರಣ ಸಾರ್ವಜನಿಕರಿಗೆ ಸಾಕಷ್ಟು ಅನಾನುಕೂಲವಾಗಿದೆ. ಬಸ್ ಸೇವೆ ನಿಲ್ಲಿಸಿದ್ದಕ್ಕೆ ಆದಾಯದ ನೆಪ ಹೇಳುತ್ತಿರುವ ಸಾರಿಗೆಯವರು ಬಸ್‌ಗಳಿರೊದೇ ಸಾರ್ವಜನಿಕರ ಸೇವೆಗಾಗಿ ಎಂಬ ಬಗ್ಗೆ ತಿಳಿದುಕೊಳ್ಳಬೇಕು. ಮೊದಲು ಇದ್ದ ಆದಾಯ ದಿಢೀರನೆ ಬಂದ್ ಆಗೋಕೆ ಹೇಗೆ ಸಾಧ್ಯ. ಇದೆಲ್ಲ ನೆಪಗಳನ್ನು ಹೇಳುವದು ಬಿಟ್ಟು ಕೂಡಲೇ ಬಂದ್ ಮಾಡಲಾದ ಬಸ್‌ಗಳನ್ನು ಪುನರ್ ಆರಂಭಿಸಬೇಕು. ಜೊತೆಗೆ ಅವಶ್ಯವಿರುವ ಮನವಿ ಪತ್ರದಲ್ಲಿ ತಿಳಿಸಿರುವ ಬಸ್ ಸೇವೆಗಳನ್ನು ಹೊಸದಾಗಿ ನೀಡಬೇಕು. ಇಲ್ಲವಾದಲ್ಲಿ ಇಡೀ ಪಟ್ಟಣವನ್ನು ಬಂದ್ ಮಾಡಿ ಉಗ್ರ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಸಿದರು.
ಸಧ್ಯ ಬಂದ್ ಮಾಡಲಾದ, ಪಟ್ಟಣದಿಂದ ಹೊರಡುವ ಮುಂಬಯಿ, ಆಲಮಟ್ಟಿ ಸ್ಟೇಷನ್, ಲಿಂಗಸೂರು (ನಿರಂತರ), ವಾಸ್ಕೋ (ರಾತ್ರಿ 9), ಪುಣೆ, ರತ್ನಾಗಿರಿ, ನಾಸಿಕ, ಹಾಸನ ಈ ಊರುಗಳಿಗೆ ಪುನರ್ ಆರಂಭಿಸುವಂತೆ ಮತ್ತು ವಿಜಯಪುರ-ಮುದ್ದೇಬಿಹಾಳ-ಮೈಸೂರು, ವಿಜಯಪುರ-ಮುದ್ದೇಬಿಹಾಳ- ಶ್ರೀಶೈಲ, ಇಂಡಿ-ಮುದ್ದೇಬಿಹಾಳ-ಕಾಗಿನೆಲೆ-ರಾಣಿಬೆನ್ನೂರು, ಇಂಡಿ-ಮುದ್ದೇಬಿಹಾಳ-ಹುಬ್ಬಳ್ಳಿ ಸೇರಿದಂತೆ ಪಟ್ಟಣದಿಂದ ತಿರುಪತಿ, ಕೊಟ್ಟೂರು-ಉಜ್ಜಯಿನಿ, ಗಾಣಗಾಪುರ, ಗೋಕಾಕ-ಘಟಪ್ರಭಾ, ರಾಮದುರ್ಗ-ಸವದತ್ತಿ-ಧಾರವಾಡ, ಬೆಂಗಳೂರು ಸ್ಲೀಪರ್, ಹುಬ್ಬಳ್ಳಿ-ಮಣಿಪಾಲ, ಆನೆಗುಂದಿ, ಗುಡ್ಡಾಪುರ, ಲಿಂಗಸೂರು ಈ ಊರುಗಳಿಗೆ ಹೊಸದಾಗಿ ಬಸ್ ಸೇವೆ ಪ್ರಾರಂಭಿಸುವಂತೆ ಮನವಿ ಪತ್ರದಲ್ಲಿ ನಮೂದಿಸಲಾಗಿದೆ.
ಪ್ರತಿಭಟನೆಯಲ್ಲಿ ರಾಜಶೇಖರ ಕಲ್ಯಾಣಮಠ, ಮಹಾಂತೇಶ ವಡವಡಗಿ, ಮಹಾಂತೇಶ ಬೂದಿಹಾಳಮಠ, ಜಗದೀಶ ಲಕ್ಷೆಟ್ರ, ಹಸನ್ ಬಾಗವಾನ, ಮಲ್ಲಣ್ಣ ಹತ್ತಿ, ಸಂಜು ಬಾಗೇವಾಡಿ, ರವೀಂದ್ರ ಬಿರಾದಾರ, ಉದಯ ರಾಯಚೂರ, ಸಂತೋಷ ಬಾದರಬಂಡಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ಬಸ್ ಸೇವೆಗಳ ಪುನರಾರಂಭಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ
Related Posts
Add A Comment

