ಆಲಮಟ್ಟಿ: ಇಲ್ಲಿಯ ಜಲಾಶಯದಿಂದ ಸ್ಥಳಿಯ ರೈತರ ಜಮೀನುಗಳಿಗೆ ನೀರು ಒದಗಿಸದೆ ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ ತೆಲಂಗಾಣ ಮೂಲದ ಬಾಡಿಗೆ ರೈತರಿಗೆ ನೀರು ಒದಗಿಸಲು ಕಳೆದ ಕೆಲದಿನಗಳಿಂದ ಆಲಮಟ್ಟಿ ಜಲಾಯಶಯದ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ನದಿ ಪಾತ್ರಕ್ಕೆ ನಿತ್ಯ ೨೫೦೦ ಕ್ಯುಸೆಕ್ ನೀರು ಹರಿಬಿಡಲಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘ ಆರೋಪಿಸಿದೆ.
ನೀರು ಬಿಡುಗಡೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಶನಿವಾರ ಇಲ್ಲಿಯ ಕೆಬಿಜೆಎನ್ ಎಲ್ ಉಪ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದ ರೈತರು ನೀರು ನಿಲ್ಲಿಸುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಕುಡಿಯುವ ನೀರಿಗಾಗಿ ಹಾಗೂ ಜಲಚರಗಳಿಗಾಗಿ ಮೀಸಲಿಟ್ಟಿರುವ ನೀರಲ್ಲಿಯೇ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ನೀರು ಹರಿಸಲು ಆರಂಭಿಸಿದ್ದಾರೆ. ಇದರಿಂದ ಜಿಲ್ಲೆಯ ರೈತರು ಕುಡಿಯುವ ನೀರಿಗಾಗಿ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ವಿಜಯಪುರ ಜಿಲ್ಲಾಧಿಕಾರಿಗಳು ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ಅನುಮತಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು ಆಯುಕ್ತರ ಆದೇಶದ ಮೇರೆಗೆ ಆಲಮಟ್ಟಿ ಲಾಲ ಬಹದ್ದೂರ ಜಲಾಶಯದ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ನೀರು ಹರಿಸಲಾಗುತ್ತಿದೆ.
ಆದರೆ ಬಸವಸಾಗರ ಜಲಾಶಯದ ವ್ತಾಪ್ತಿಯಲ್ಲಿ ತೆಲಂಗಾಣ ಮೂಲದ ಕೆಲವು ರೈತರು ಬಾಡಿಗೆ ಆಧಾರದಲ್ಲಿ ನಮ್ಮ ರೈತರ ಜಮೀನು ಪಡೆದು ಅದರಲ್ಲಿ ನಿಷೇದಿತ ಬೆಳೆಗಳನ್ನು ಬೆಳೆದಿದ್ದಾರೆ.
ಈಗ ಅವರಿಗೆ ನೀರು ಬೇಕಾಗಿದ್ದರಿಂದ ರಾಜಕೀಯ ಒತ್ತಡ ಹೇರಿ ನೀರು ಬಿಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಭೀಕರ ಬರಗಾಲವಿದ್ದರಿಂದ ಈ ರ‍್ಷ ಯಾವ ಜಲಾಶಯಗಳೂ ಸಂಪೂರ್ಣ ಭರ್ತಿಯಾಗಿರಲಿಲ್ಲ ಆದರೆ ಅದೃಷ್ಟವಶಾತ್ ಮಹಾರಾಷ್ಟçದಲ್ಲಿ ಮಳೆಯಾದ ಪರಿಣಾಮ ಆಲಮಟ್ಟಿ ಜಲಾಶಯ ತುಂಬಿದ್ದರೂ ವಿಜಯಪುರ ಜಿಲ್ಲೆಯ ರೈತರು ಬೆಳೆದ ಹಿಂಗಾರು ಬೆಳೆಗಳಿಗೆ ನೀರು ಕೊಡಲಿಲ್ಲ ಈ ಭಾರಿ ಬೇಸಿಗೆ ಬಿಸಲಿನ ಪ್ರಖರತೆ ಹೆಚ್ಚಿಗೆ ಇರುವದರಿಂದ ಜಿಲ್ಲೆಯ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತತ್ವಾರ ಎದುರಾಗಿದೆ . ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂ ನಿಂದ ಕೃಷ್ಣಾ ನದಿ ಮೂಲಕ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ. ಆರ್.ಟಿ.ಪಿ.ಎಸ್.ಗೆ ನೀರು ಹರಿಸುವ ನೆಪದಲ್ಲಿ ತೆಲಂಗಾಣಕ್ಕೆ ನೀರು ಬಿಡಲಾಗುತ್ತಿದೆ ಶಾಸ್ತ್ರಿ ಜಲಾಶಯದಲ್ಲಿ ನೀರು ಇಲ್ಲವೆಂದು ರೈತರ ಬೆಳೆಗೆ ನೀರು ಕೊಡದ ಸರ್ಕಾರ ಈಗ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ. ನಮ್ಮ ಜಿಲ್ಲೆಯ ರೈತರಿಗೆ ನೀರು ಇಲ್ಲದ ಸಂದರ್ಭದಲ್ಲಿ ನಾರಾಯಣಪುರಕ್ಕೆ ನೀರು ಹರಿಸಿ ರಾಜ್ಯ ಸರ್ಕಾರ. ವಿಜಯಪುರ ಜಿಲ್ಲೆಯ ರೈತರಿಗೆ ಮೋಸ ಮಾಡುತ್ತಿದೆ ಕೂಡಲೇ ನಾರಾಯಣಪುರ ಜಲಾಶಯಕ್ಕೆ ಕೆ.ಪಿ.ಸಿ.ಎಲ್ ಮೂಲಕ ಹರಿಸುತ್ತಿರುವ ನೀರನ್ನು ಬಂದ್ ಗೊಳಿಸಬೇಕು ಇಲ್ಲದಿದ್ದರೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ.ಕೆ.ಕುಲಕರ್ಣಿ, ಚನ್ನಪ್ಪ ರಾಠೋಡ, ಸೋಮು ಚೌವ್ಹಾಣ, ರಾಜು ರಾಠೋಡ, ಭೀರು ಇಂಡಿ, ರಮೇಶ ಕುಲಕರ್ಣಿ, ಸಂಜು ಕುಲಕರ್ಣಿ, ಗುರುರಾಜ ದೇಶಪಾಂಡೆ ಇತರರು ಇದ್ದರು
Subscribe to Updates
Get the latest creative news from FooBar about art, design and business.
ತೆಲಂಗಾಣಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲು ರೈತಸಂಘ ಆಗ್ರಹ
Related Posts
Add A Comment

