Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ

’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ

’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಇನ್ನಷ್ಟು ಬೇಕಾಗಿವೆ.. ಸಾಮಾಜಿಕ ನೀತಿ ಸಂಹಿತೆಗಳು
ವಿಶೇಷ ಲೇಖನ

ಇನ್ನಷ್ಟು ಬೇಕಾಗಿವೆ.. ಸಾಮಾಜಿಕ ನೀತಿ ಸಂಹಿತೆಗಳು

By Updated:No Comments5 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ವೀಣಾಂತರಂಗ”- ವೀಣಾ ಹೇಮಂತ ಗೌಡ ಪಾಟೀಲ್, ಮುಂಡರಗಿ-ಗದಗ

ವಿವಿಧ ಸಂಸ್ಕೃತಿಗಳು, ಜಾತಿಗಳು, ಮತಗಳು, ಆಚರಣೆಗಳು ರೂಢಿಯಲ್ಲಿರುವ ಭಾರತ ದೇಶದಲ್ಲಿ ಒಂದು ಅಲಿಖಿತ ಸಾಮಾಜಿಕ ನೀತಿ ಸಂಹಿತೆ ಜಾರಿಯಲ್ಲಿದೆ. ಕೆಲವೊಮ್ಮೆ ಪುರಾತನ ಎಂದೆನ್ನಿಸಿದರೂ ಕೂಡ ನಮ್ಮ ಸಂಸ್ಕೃತಿಯ ಮೂಲ ಬೇರುಗಳನ್ನು ಎತ್ತಿ ಹಿಡಿಯುವ ಮಾನವೀಯ ಪ್ರಜ್ಞೆಯನ್ನು ಒಳಗೊಂಡಿರುವ ಕೆಲ ಸಾಮಾಜಿಕ ನಿಯಮಾವಳಿಗಳು ಇಂದಿಗೂ ನಮ್ಮ ಸಮಾಜದ ಸ್ವಾಸ್ಥ್ಯವನ್ನು ಕಾಯುತ್ತವೆ.
ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ಬರುತ್ತದೆ ಎನ್ನುವಾಗ ಜಾರಿಯಾಗುವ ಚುನಾವಣಾ ನೀತಿಸಂಹಿತೆಯಂತೆ ನಮ್ಮ ಸಾಮಾಜಿಕ ನೀತಿ ಸಂಹಿತೆಯು ಕೂಡ ಬದಲಾಗುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳ ಜೊತೆ ಜೊತೆಗೆ ಪರಿಷ್ಕರಣೆಗೊಳ್ಳುತ್ತಲೇ ಇರಬೇಕು ಮತ್ತು ಕಡ್ಡಾಯವಾಗಿ ಪಾಲಿಸಲೇಬೇಕು ಎಂಬುದು ಪ್ರಸಕ್ತ ಸಾಮಾಜಿಕ ಅವಶ್ಯಕತೆಯನ್ನು ಸೂಚಿಸುತ್ತದೆ.
ಕೇವಲ ಎರಡೇ ದಶಕಗಳಲ್ಲಿ ಇಡೀ ಜಗತ್ತು ಗ್ಲೋಬಲ್ ವಿಲೇಜ್ ಆಗಿ ಮಾರ್ಪಟ್ಟಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಅಂಗೈಯಲ್ಲಿ ಈ ಬೃಹತ್ ಬ್ರಹ್ಮಾಂಡವನ್ನು ನೋಡಬಹುದಾಗಿದೆ… ಆದರೆ ದೀಪದ ಅಡಿಯಲ್ಲಿಯೇ ಕತ್ತಲೆ ಇರುವಂತೆ ಪ್ರತಿಯೊಂದು ವೈಜ್ಞಾನಿಕ ಆವಿಷ್ಕಾರದ ಹಿಂದೆ ಕೆಲ ಕರಾಳತೆಗಳು ಅಡಗಿವೆ. 21ನೇ ಶತಮಾನದ ಆದಿಯಲ್ಲಿ ಬಂದ ಅಂತರ್ಜಾಲ ಮತ್ತು ಮಾಹಿತಿ ತಂತ್ರಜ್ಞಾನವು ಮಾಹಿತಿಯ ಜೊತೆಜೊತೆಗೆ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಭರಪೂರ ಮನರಂಜನೆಯನ್ನು ಹೊತ್ತು ತಂದಿತು. ಮೊದಮೊದಲು ಮೂರ್ಖರ ಪೆಟ್ಟಿಗೆಯ ಮುಂದೆ ಕುಳಿತು ತರಹೇವಾರಿ ಧಾರಾವಾಹಿಗಳನ್ನು, ಸಿನಿಮಾಗಳನ್ನು ನೋಡುತ್ತಿದ್ದ ಜನರು ಮುಂದಿನ ಒಂದು ದಶಕದಲ್ಲಿ ಮೊಬೈಲ್ ಎಂಬ ಮಾಯಾಂಗನೆಯ ಕೈಯಲ್ಲಿ ಸಿಲುಕಿ ಇದೀಗ ವಾಟ್ಸಪ್, ಇನ್ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್ ಮತ್ತಿತರ ಮಾಹಿತಿ ಜಾಲಗಳ ಬೆನ್ನತ್ತಿ ಹಿಂತಿರುಗಿ ಬಾರದಷ್ಟು ದೂರ ಸಾಗಿದ್ದಾರೆ. ಕೇವಲ ಒಂದೇ ಚಾನೆಲ್ ಬರುತ್ತಿದ್ದ ಕಾಲದಲ್ಲಿ ಮನೆ ಮಂದಿಯನ್ನೆಲ್ಲ ಒಗ್ಗೂಡಿಸುತ್ತಿದ್ದ ದೂರದರ್ಶನವು ಇದೀಗ ಹಲವಾರು ಚಾನಲ್ ಗಳನ್ನು ಹೊಂದಿದ್ದು ದರ್ಶಕರಿಗೆ ಹಲವಾರು ವಿಷಯ ವೈವಿಧ್ಯಗಳನ್ನು ನೀಡುತ್ತಿರುವುದೇನೋ ನಿಜ… ಆದರೆ ಟಿ ಆರ್ ಪಿ ಯ ಬೆಂಬತ್ತಿರುವ ಟಿವಿ ಚಾನೆಲ್ ಗಳು ಒಳ್ಳೆಯ ನ್ಯೂಸ್ ಕೊಡುವ ಸ್ಕೂಪ್ ಗಿಂತ,ಹೆಚ್ಚಿನ ಟಿ ಆರ್ ಪಿ ದೊರೆಯುವ ಕಾರಣ ಸಮಾಜ ಬಾಹಿರ ಕೃತ್ಯಗಳ ದೃಶ್ಯಾವಳಿಗಳನ್ನು ಹೆಚ್ಚು ಪ್ರಸಾರ ಮಾಡುತ್ತಿದ್ದಾರೆ. ಯಾವ ವಸ್ತು, ವಿಷಯಗಳನ್ನು ನಮ್ಮ ಸಮಾಜ ಮಾತನಾಡಲು ಮಡಿವಂತಿಕೆಯನ್ನು ತೋರುತ್ತಿತ್ತೋ ಅದೇ ವಿಷಯಗಳು ಇಂದು ನಮ್ಮ ನಡುಮನೆಯಲ್ಲಿ ಹಾಡಹಗಲೇ ಬಿತ್ತರಗೊಳ್ಳುತ್ತಿವೆ. ಹಾಗೆಂದು ಅಂದು ಯಾವುದೇ ರೀತಿಯ ಅನೈತಿಕತೆ, ಭ್ರಷ್ಟಾಚಾರ ಇರಲಿಲ್ಲ ಎಂದಲ್ಲ… ಆದರೆ ಅದರ ವ್ಯಾಪಕವಾದ ಬಹಿರಂಗ ಪ್ರಚಾರ ಆಗುತ್ತಿರಲಿಲ್ಲ, ಅಷ್ಟರಮಟ್ಟಿಗೆ ಸಮಾಜದಲ್ಲಿ ಬೇಕು ಮತ್ತು ಬೇಡಗಳ ನಡುವಿನ ಸೂಕ್ಷ್ಮ ಗೆರೆ
ಇದ್ದು ಅದನ್ನು ಎಲ್ಲರೂ ಪಾಲಿಸುತ್ತಿದ್ದರು.
ಬದಲಾದ ಈ ಎರಡು ದಶಕಗಳ ಪರಿಣಾಮವಾಗಿ ಇಂದಿನ ಮಕ್ಕಳು ನಮ್ಮ ಭಾರತೀಯ ಸಭ್ಯತೆಯಲ್ಲಿ ಹಾಸು ಹೊಕ್ಕಾಗಿರುವ ಸಂಸ್ಕಾರಗಳನ್ನು ಮರೆತಿದ್ದಾರೆ ಎಂದರೆ ತಪ್ಪಿಲ್ಲ. 12ನೇ ಶತಮಾನದಲ್ಲಿ ನಮ್ಮ ವಚನಕಾರರು ಹೇಳಿರುವ ಗುರು ಹಿರಿಯರಲ್ಲಿ ವಿನಯ ವಿಧೇಯತೆ ಇರಬೇಕು, ಪ್ರೀತಿ ವಿಶ್ವಾಸ ಬದುಕಿನ ಮೂಲ ಮಂತ್ರವಾಗಬೇಕು, ಪರಸ್ತ್ರೀ,ಪರಧನಗಳತ್ತ ಕಣ್ಣೆತ್ತಿಯೂ ನೋಡಬಾರದು ಎಂಬ ನಮ್ಮ ಸಂಸ್ಕೃತಿಯ ಮೂಲ ಬೇರುಗಳು ಅಲುಗಾಡುತ್ತಿವೆ.
ಇದೆಲ್ಲಕ್ಕೂ ಕಾರಣ ನಮ್ಮ ವಿಸ್ಮೃತಿ…. ನಮ್ಮ ಮಕ್ಕಳು ನಮ್ಮ ಸಂಸ್ಕೃತಿ ಆಚಾರ ವಿಚಾರ ಮತ್ತು ಮಾನವೀಯ ಸಭ್ಯತೆಗಳನ್ನು ಮರೆತು ಸಾಮಾಜಿಕ ಬದುಕನ್ನು ದೂರವಾಗಿಸಿಕೊಂಡು ಕೂಪ ಮಂಡೂಕವಾಗಿ ಬದುಕುತ್ತಿದ್ದಾರೆ. ಆದರೆ ಅವರ ಅರಿವಿಗೆ ಬಾರದೆ ಇರುವ ಒಂದು ವಿಷಯವಿದೆ… ಮನುಷ್ಯ ಸಮಾಜ ಜೀವಿ. ಯಾರೂ ತಮ್ಮ ಹೆಣವನ್ನು ತಾವೇ ಹೊರಲು ಸಾಧ್ಯವಿಲ್ಲ. ನಮ್ಮ ಬದುಕು ಸುಸೂತ್ರವಾಗಿ ಸಾಗಲು ನಮಗೆ ಸಾಮಾಜಿಕ ಜೀವನ ಅತ್ಯಗತ್ಯ. ಅಂತೆಯೇ ಕೆಲ ಸಮಾಜಿಕ ನಿಯಮಾವಳಿಗಳನ್ನು ಮರುರೂಪಿಸುವ ಅವಶ್ಯಕತೆಯೂ ಇದೆ. ಅಂತಹ ಕೆಲವು ನಿಯಮಾವಳಿಗಳು ಹೀಗಿವೆ

  • ಒಂದು ಚಿಕ್ಕ ಪೆನ್ನು, ಪುಸ್ತಕ, ಚಾರ್ಜರ್ ನಿಂದ ಹಿಡಿದು ಯಾವುದೇ ವಸ್ತು ಇಲ್ಲವೇ ಹಣವನ್ನು ಬೇರೊಬ್ಬರಿಂದ ಪಡೆದುಕೊಂಡಿದ್ದರೆ ಅವರಿಗೆ ಕೊಡುತ್ತೇನೆ ಎಂದು ವಾಗ್ದಾನ ಮಾಡಿದ ಸಮಯಕ್ಕಿಂತ ಮುಂಚೆಯೇ ಅದನ್ನು ಹಿಂದಿರುಗಿಸಿ. *ಬೇರೆಯವರು ನಿಮಗೆ ಆತಿಥ್ಯ ನೀಡುವಾಗ ದುಬಾರಿಯಾದ ಆಹಾರವನ್ನು ಆರ್ಡರ್ ಮಾಡಬೇಡಿ.
  • ನಿಮ್ಮ ಎದುರಿಗಿರುವ ವ್ಯಕ್ತಿಯನ್ನು ಅವರ ಸಂಬಳ, ಅವರ ಮದುವೆ, ಅವರ ಪ್ರೀತಿ ಪ್ರೇಮದ ಬದುಕಿನ ಕುರಿತು, ಮಕ್ಕಳಾಗಿಲ್ಲವೇ ಎಂದು, ಅವರ ಆಸ್ತಿ ಅಂತಸ್ತುಗಳ ಕುರಿತಾಗಿ ಎಂದೂ ಏನನ್ನು ಕೇಳಬಾರದು. ಅವರಿನ್ನೂ ಮನೆ ಖರೀದಿಸಿಲ್ಲವೇ,
    ಕಾರು ತೆಗೆದುಕೊಂಡಿಲ್ಲವೇ ಎಂಬ ಕುತೂಹಲದ ಪ್ರಶ್ನೆಗಳು ಖಂಡಿತ ಬೇಡ!
    *ಯಾರನ್ನು ಕಡೆಗಣಿಸಬೇಡಿ, ಒಬ್ಬ ವ್ಯಕ್ತಿಯ ಘನತೆ ಆತನ ಜಾತಿ, ಮತ, ಪಂಥ ಮತ್ತು ಸಾಮಾಜಿಕ ಅಂತಸ್ತುಗಳಿಂದ ಬರುವುದಿಲ್ಲ ಬದಲಾಗಿ ನಿಮ್ಮ ಎದುರಿಗಿರುವವರ ಜೊತೆಯಲ್ಲಿ ನೀವು ನಡೆದುಕೊಳ್ಳುವ ರೀತಿಯಲ್ಲಿ ಕಂಡು ಬರುತ್ತದೆ. ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿ.
    *ಯಾವುದಾದರೂ ಹೋಟೆಲಿಗೆ ಹೋದರೆ ಅಥವಾ ಒಂದೇ ಗಾಡಿಯನ್ನು ಸ್ನೇಹಿತರ ಜೊತೆ ಹೋಗುವಾಗ ಬಾಡಿಗೆಗೆ ಪಡೆದರೆ ಒಂದೊಮ್ಮೆ ಅವರು ಬಾಡಿಗೆ ಕಟ್ಟಿದರೆ ಮತ್ತೊಮ್ಮೆ ನೀವು ಕಡ್ಡಾಯವಾಗಿ ಕಟ್ಟಲೇಬೇಕು ಎಂಬುದನ್ನು ಮರೆಯಬೇಡಿ.
    *ಯಾವಾಗಲೂ ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗಬೇಕೆಂಬ ಹಠ ಬೇಡ, ಬೇರೆಯವರ ಅಭಿಪ್ರಾಯಕ್ಕೂ ಬೆಲೆ ಕೊಡಿ. ನಾನು ಮಾತ್ರ ಸರಿ ಎಂಬುದು ಖಂಡಿತವಾಗಿಯೂ ತಪ್ಪು.
    *ಇಬ್ಬರೂ ವ್ಯಕ್ತಿಗಳ ನಡುವಣ ಮಾತುಕತೆಯ ಮಧ್ಯದಲ್ಲಿ ಬಾಯಿ, ಮೂಗು ತೂರಿಸಬೇಡಿ. ಮೊದಲು ಅವರನ್ನು ಮಾತನಾಡಲು ಬಿಡಿ ನಂತರ ನಿಮಗೆ ಅವಶ್ಯವಾದುದನ್ನು ಮಾತ್ರವೇ ಆಯ್ದುಕೊಳ್ಳಿ.
    *ವಿನಾಕಾರಣ ಯಾರನ್ನು ಹೊಗಳುವುದು ಇಲ್ಲವೇ ತೆಗಳುವುದನ್ನು ಮಾಡಬೇಡಿ. ಸಮಯ ಪ್ರಜ್ಞೆ ತುಂಬಾ ಮುಖ್ಯ. ಅಷ್ಟಾಗಿಯೂ ಅವಶ್ಯಕತೆಯೆನಿಸಿದರೆ ಸಾರ್ವಜನಿಕವಾಗಿ ಹೊಗಳಿ ಮತ್ತು ಖಾಸಗಿಯಾಗಿ ತಿದ್ದಿಕೊಳ್ಳಲು ಹೇಳಿ.
    ನಿಮಗೆ ಉಪಕಾರ ಮಾಡಿದವರಿಗೆ ಧನ್ಯವಾದಗಳನ್ನು ಸಲ್ಲಿಸಲು ಮರೆಯಬೇಡಿ.
    *ಬೇರೆಯವರ ದೇಹದ ಬಣ್ಣ, ಗಾತ್ರ ಮತ್ತು ಮಾತುಗಾರಿಕೆಯ ಕುರಿತು ನಿಮ್ಮ ಅನಿಸಿಕೆಯನ್ನು ಹೇಳಲೇಬೇಡಿ. ಈಗಾಗಲೇ ಜನರಿಂದ ಸಾಕಷ್ಟು ಕಮೆಂಟ್ಗಳನ್ನು ಪಡೆದಿರುವ ಅವರಿಗೆ ನಿಮ್ಮ ಮಾತುಗಳಿಂದ ಬೇಸರವಾಗಬಹುದು. ಬೇರೆಯವರನ್ನು ಮುಜುಗರಗೊಳಿಸುವಂತಹ ಪ್ರಶ್ನೆಗಳನ್ನು ಕೇಳಬೇಡಿ.
    *ಒಂದು ಕಂಪನಿಯ ಮುಖ್ಯಸ್ಥನಿಗೆ ಕೊಡುವ ಮರ್ಯಾದೆಯನ್ನು ಆ ಕಂಪನಿಯ ಕಸ ಗುಡಿಸುವ ವ್ಯಕ್ತಿಗೂ ಕೊಡಿ. ದೊಡ್ಡವರನ್ನು ನೀವು ಗೌರವಿಸುವುದನ್ನು ಬೇರೆಯವರು ಗುರುತಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಿಮಗಿಂತ ಕಡಿಮೆ ಇರುವ ಜನರನ್ನು ನೀವು ನಿಜವಾಗಿಯೂ ಗೌರವಿಸುವುದು ನಿಮ್ಮ ವ್ಯಕ್ತಿತ್ವದ ವೈಶಿಷ್ಟತೆಗೆ ಕಾರಣವಾಗುತ್ತದೆ.
  • ಅವರಾಗಿ ಕೇಳದ ಹೊರತು ಯಾರಿಗೂ ಸಲಹೆ ಸೂಚನೆಗಳನ್ನು ಕೊಡಬೇಡಿ. ನಿಮ್ಮನ್ನು ನೀವು ಅವರಾಗಿ ಹೇಳದ ಹೊರತು ಮತ್ತೊಬ್ಬರ ಯಾವುದೇ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಡಿ.
    *ಬೆಳಕಿನಲ್ಲಿ ನೀವು ಬೇರೆಯವರೊಂದಿಗೆ ಮಾತನಾಡುವಾಗ ನೀವು ಧರಿಸಿರುವ ತಂಪು ಕನ್ನಡಕವನ್ನು ತೆಗೆದಿಡಿ. ಅದು ನಿಮ್ಮ ಎದುರಿಗಿನವರಿಗೆ ನೀವು ಕೊಡುವ ಗೌರವ. ಅದೂ ಅಲ್ಲದೆ ಸಂವಹನಕ್ಕೆ ಮುಖ್ಯವಾಗಿ ಬೇಕಾಗಿರುವುದು ಪರಸ್ಪರ ಕಣ್ಣೋಟಗಳ ವಿನಿಮಯ.
    *ಬೇರೆಯವರ ಮುಂದೆ ನಿಮ್ಮ ಶ್ರೀಮಂತಿಕೆಯನ್ನಾಗಲಿ, ನಿಮ್ಮ ಜಾಣ್ಮೆಯನ್ನಾಗಲಿ ತೋರಗೊಡಬೇಡಿ.
  • ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆನಿಸಿಕೊಂಡಿರುವವರ ಪರಿಚಯ ನಿಮಗಿದೆ ಎಂದು ಅದನ್ನು ಬೇರೆಡೆ ದುರ್ಬಳಕೆ ಮಾಡುವ, ಅವರ ಹೆಸರನ್ನು ಬಳಸಿಕೊಂಡು ನಿಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಖಂಡಿತ ಸಲ್ಲದು.
    ಇನ್ನು ಮೊಬೈಲ್ ಎಂಬ ಮಾಯಾಂಗನೆ ನಮ್ಮೆಲ್ಲರ ಜೀವನದಲ್ಲಿ ಅತಿ ಹೆಚ್ಚಿನ ಖಾಸಗಿತನವನ್ನು ತಂದಿದ್ದಾಳೆ. ಮೊಬೈಲ್ ಬಳಸುವಾಗ ಕೂಡ ನಾವು ಹಲವಾರು ನಿಯಮಾವಳಿಗಳನ್ನು ಹಾಕಿಕೊಳ್ಳಬೇಕು.
  • ಅವಶ್ಯಕತೆ ಇಲ್ಲದ ಹೊರತು ಪದೇ ಪದೇ ಯಾರಿಗೂ ಫೋನ್ ಮಾಡಬೇಡಿ. ಎರಡಕ್ಕಿಂತ ಹೆಚ್ಚು ಬಾರಿ ಒಬ್ಬ ವ್ಯಕ್ತಿ ನಿಮ್ಮ ಫೋನ ಕರೆಯನ್ನು ಎತ್ತುವುದಿಲ್ಲ ಎಂದರೆ ಅವರು ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದಕ್ಕಿಂತ ಅವರು ನಿಮ್ಮ ಕರೆಗಿಂತ ಮುಖ್ಯವಾದ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರ್ಥ.
    *ಯಾರಾದರೂ ತಮ್ಮ ಮೊಬೈಲ್ನಲ್ಲಿ ಯಾವುದಾದರೂ ಫೋಟೋ ಮತ್ತಿತರ ವಿಷಯವನ್ನು ತೋರಿಸುತ್ತಿದ್ದರೆ ಕೇವಲ ಆ ಚಿತ್ರವನ್ನು ಮಾತ್ರ ನೋಡಿ…. ಮೊಬೈಲನ ಪರದೆಯ ಮೇಲೆ ಅತ್ತಿತ್ತ ಕೈ ಆಡಿಸಿ ಬೇರೆ ಚಿತ್ರಗಳನ್ನು ನೋಡುವ ಪ್ರಯತ್ನ ಬೇಡ.
    *ಅದಷ್ಟೇ ಸಾಮಾಜಿಕವಾಗಿ ನಾವು ಮುಂದುವರೆದಿದ್ದರೂ ಮತ್ತೊಬ್ಬರಿಗೆ ಅವಶ್ಯಕತೆ ಇಲ್ಲದ ಹೊರತು ಕರೆ ಇಲ್ಲವೇ ಮೆಸೇಜ್ ಮಾಡಬಾರದು ಅದು ರಾತ್ರಿ 10 ರ ನಂತರ ಮತ್ತು ಇಳಿ ಮಧ್ಯಾಹ್ನದ ಸಮಯಗಳಲ್ಲಿ. ನಿಮ್ಮ ಒಂದು ಫೋನ್ ಕರೆ ಇಲ್ಲವೇ ಮೆಸೇಜ್ ಎದುರಿಗಿನ ವ್ಯಕ್ತಿಯ ವೈಯಕ್ತಿಕತೆಗೆ ಧಕ್ಕೆ ತರಬಾರದು. ಮನುಷ್ಯನಲ್ಲಿರುವ ಸೈತಾನಕೆಯ ಗುಣಲಕ್ಷಣಗಳು ಕೆರಳುವುದು ಅಂತಹ ಸಮಯದಲ್ಲಿಯೇ. ವಿರುದ್ಧ ಲಿಂಗಿಗಳ ಜೊತೆ ಮಾತನಾಡುವಾಗಲಂತೂ ನಿಮ್ಮ ಭಾಷೆಯ ಮೇಲೆ ಹಿಡಿತವಿರಲಿ. ಸಂದೇಶದಲ್ಲಿ ನೀವು ಕಳುಹಿಸುವ ಎಮೋಜಿಗಳು ಬೇರೆಯವರಿಗೆ ತಪ್ಪು ಅರ್ಥವನ್ನು ಕಲ್ಪಿಸಿ ಕೊಡಬಾರದು. ನಿಮ್ಮ ಉದ್ದೇಶಗಳು ಒಳ್ಳೆಯವಾಗಿದ್ದರೆ ಸಾಲದು ಅದನ್ನು ಪ್ರತಿಪಾದಿಸುವಂತೆಯೂ ಇರಬೇಕು.( ಇಂದು ಬಹಳಷ್ಟು ಜನರು ತಮ್ಮ ಕೌಟುಂಬಿಕ ನೆಮ್ಮದಿಯನ್ನು ಕಳೆದುಕೊಂಡಿರುವುದು ಇಂತಹ ತಪ್ಪುಗಳಿಂದಲೇ)
    ಇತ್ತೀಚೆಗಿನ ಮತ್ತೊಂದು ಬೆಳವಣಿಗೆ ಎಂದರೆ ಬೇರೆಯವರು ನಿಮ್ಮೊಂದಿಗೆ ಖಾಸಗಿಯಾಗಿ ಮಾತನಾಡಿದಾಗ ಕಾಲ್ ರೆಕಾರ್ಡ್ ಮಾಡಿಕೊಳ್ಳುವುದು….. ಇದಂತೂ ಅಕ್ಷಮ್ಯ ಅಪರಾಧ. ಕೆಲವು ಬಾರಿ ಇದು ಅನುಕೂಲಕರ ವಾದರೂ ನಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕುರಿತ ನಮ್ಮ ನಂಬಿಕೆಯನ್ನು ಪ್ರಶ್ನಿಸುತ್ತದೆ. ಏನನ್ನೋ ಸಾಬೀತುಪಡಿಸುವ ಹುಚ್ಚಿನಲ್ಲಿ ನಾವು ಬಹಳಷ್ಟನ್ನು ಕಳೆದುಕೊಳ್ಳುತ್ತೇವೆ.
    ಅತಿಯಾದ ಖಾಸಗಿತನ ತಪ್ಪು ದಾರಿಗೆ ಎಡೆ ಮಾಡಿಕೊಡುತ್ತದೆ, ಅದರಲ್ಲೂ ಕುಟುಂಬದ ಇತರ ಸದಸ್ಯರ ಮುಂದೆಯೂ ಖಾಸಗಿತನ ಇರುವುದು ಪರಸ್ಪರ ಅಪನಂಬಿಕೆಗೆ, ಅನುಮಾನಕ್ಕೆ ಕಾರಣವಾಗುತ್ತದೆ. ಕೊನೆಯವರೆಗೂ ನೀವು ಜೀವಿಸಬೇಕಾಗಿರುವುದು ನಿಮ್ಮವರೊಂದಿಗೆ…
    ನಮಗಿರುವುದು ಒಂದೇ ಜೀವನ… ಆ ಜೀವನವನ್ನು ಘನತೆ ಗೌರವದಿಂದ ಬದುಕಿ ಬಾಳಲು ಸಾಮಾಜಿಕ ಅಂಕುಶ ಬೇಕೇ ಬೇಕು. ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಂಡಿರುವ ನಾವುಗಳು ಸಮಾಜದ ಹಂಗು ನಮಗಿಲ್ಲ ಎಂಬಂತೆ ವರ್ತಿಸಲೇ ಬಾರದು. ಈ ಸಮಾಜ ನಮ್ಮನ್ನು ಗುರುತಿಸುವುದು ನಾವು ಇಂಥವರ ಮನೆಯ ಮಕ್ಕಳು, ಸೊಸೆ, ಮೊಮ್ಮಕ್ಕಳು ಎಂಬ ಕೌಟುಂಬಿಕ ಪರಿಚಯದಿಂದಲೇ ಹೊರತು ನಾವು ಗಳಿಸಿರುವ ಓದು ವಿದ್ಯೆ ಐಶ್ವರ್ಯ ಗಳಿಂದಲ್ಲ.
    ಅಂತಿಮವಾಗಿ ಸಾಮಾಜಿಕ ಶಿಶುಗಳು ನಾವು… ಸಾಮಾಜಿಕ ನೀತಿ ನಿಯಮಾವಳಿಗಳನ್ನು ಪಾಲಿಸುತ್ತಾ ನಮ್ಮ ವೈಯಕ್ತಿಕ ಬೆಳವಣಿಗೆಯ ಜೊತೆ ಜೊತೆಗೆ ಉತ್ತಮ ಸಾಮಾಜಿಕ ಬೆಳವಣಿಗೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ.

– ವೀಣಾ ಹೇಮಂತ ಗೌಡ ಪಾಟೀಲ್, ಮುಂಡರಗಿ-ಗದಗ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ

’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ

’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ
    In ವಿಶೇಷ ಲೇಖನ
  • ’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ
    In (ರಾಜ್ಯ ) ಜಿಲ್ಲೆ
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.