Author: editor.udayarashmi@gmail.com

ಚಿಮ್ಮಡ: ಅನಾದಿಕಾಲದಿಂದಲೂ ಪ್ರತಿಯೊಂದು ಧರ್ಮಗಳಲ್ಲಿ ಆಚರಣೆಯಲ್ಲಿರುವ ಜಾಗರಣೆ, ಉಪವಾಸ ವೃತಗಳು ಮನುಷ್ಯನ ಆರೋಗ್ಯ ರಕ್ಷಣೆಗೆ ಸಹಾಯಕವಾಗಿವೆ ಎಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಪ್ರಭುಲಿಂಗೇಶ್ವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಉಪವಾಸದೊಂದಿಗೆ ಪ್ರಕೃತಿದತ್ತವಾಗಿ ಕಾಲಕಾಲಕ್ಕೆ ಲಭಿಸುವ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ದೊರೆಯುತ್ತವೆ, ನಿತ್ಯ ಸಮಾಜದಲ್ಲಿ ನಾವು ಉತ್ತಮ ಬದುಕು ಕಂಡುಕೊಳ್ಳಬೇಕಾದರೆ ಸಂಸ್ಕೃತಿ, ಸಂಸ್ಕಾರ, ಸೌಹಾರ್ದತೆಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ನಮ್ಮ ಮಕ್ಕಳಿಗೂ ಕಲಿಸಬೇಕು ಎಂದರು,ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ರಾಚಯ್ಯಾ ಮಠಪತಿ, ಸುರೇಶ ಅಥಣಿ, ಪ್ರಕಾಶ ಹಳ್ಳೂರ, ಎಲ್ಲಪ್ಪಾ ಅರುಟಗಿ, ಬಸಪ್ಪಾ ಪಾಲಭಾವಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ರೈತರು ಉಪಸ್ಥಿತರಿದ್ದರು.ಇಲಾಹಿ ಜಮಖಂಡಿಯವರಿಂದ ಹಮ್ಮಿಕೊಳ್ಳಲಾಗಿದ್ದ ದಾಸೋಹ ಮಹಾಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು

Read More

ಬಸವಕಲ್ಯಾಣ ಪಿಎಸೈ ವಾಗಮೋರೆ ಅಮಾನತಿಗೆ ಪಟ್ಟು | ಪಿಎಸೈಯಿಂದ ಅಮಾನವೀಯ ವರ್ತನೆ, ಜಾತಿ ನಿಂದನೆ ಆರೋಪ ಇಂಡಿ: ಪಟ್ಟಣದ ಮತ್ತು ತಾಲೂಕಿನ ಬಂಗಾರ ಮಾರಾಟದ ಅಂಗಡಿಕಾರರು ಮತ್ತು ಆಭರಣ ತಯಾರಕರು ಬಸವಕಲ್ಯಾಣ ಪಿಎಸ್‌ಐ ಅಂಬರೀಷ ವಾಗಮೋರೆ ಇಂಡಿಯ ಇಬ್ಬರು ಬಂಗಾರದ ವ್ಯಾಪಾರಿಗಳ ಜೊತೆ ಅಮಾನವೀಯವಾಗಿ ವರ್ತಿಸಿ ಜಾತಿ ನಿಂದನೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಮೆರವಣಿಗೆ ಪಟ್ಟಣದ ಅಗಸಿಯ ಹನುಮಾನ ಮಂದಿರದಿಂದ ಮಿನಿ ವಿಧಾನಸೌಧವರೆಗೆ ನಡೆಯಿತು.ದಾರಿಯೂದ್ದಕ್ಕೂ ಪಿಎಸ್‌ಐ ವರ್ತನೆ ವಿರುದ್ಧ ಘೋಷಣೆ ಕೂಗಿದರು.ಸಂಘದ ಅಧ್ಯಕ್ಷ ಸೋಮನಗೌಡ ಬಿರಾದಾರ ಮಾತನಾಡಿ, ಬಸವಕಲ್ಯಾಣದಿಂದ ಆಗಮಿಸಿದ ಐದು ಜನರು ಯಾರೂ ಸಮವಸ್ತ್ರದಲ್ಲಿ ಇರಲಿಲ್ಲ. ಇಂಡಿಯ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿರಲಿಲ್ಲ. ಇಲ್ಲವೆ ಬಸವ ಕಲ್ಯಾಣ ಪೋಲಿಸರಿಂದ ಯಾವದೇ ತರಹದ ಲಿಖಿತ ಮಾಹಿತಿ ಇಲ್ಲ. ಮತ್ತು ಬಾಡಿಗೆ ವಾಹನದಲ್ಲಿ ಬಂದಿದ್ದರು ಎಂದು ಹೇಳಿದರು.ಅಪ್ಪು ಮೋರೆ ಮಾತನಾಡಿ, ತಾನು ತುಡುಗಿನ ಬಂಗಾರ ತೆಗೆದುಕೊಂಡಿರುವುದಾಗಿ ಆರೊಪಿಸಿ ತನಗೆ ಹಣ ನೀಡಬೇಕೆಂದು ಕೇಳಿದರು. ತಾನು ನೀಡದೇ ಇದ್ದಾಗ ಬಸವಕಲ್ಯಾಣಕ್ಕೆ ತೆಗೆದುಕೊಂಡು ಹೋಗಿ…

Read More

ಕೊಲ್ಹಾರ: ಪಟ್ಟಣದ ವಿಶ್ವಕರ್ಮ ವಿಕಾಸ ಸಂಸ್ಥೆ ಮತ್ತು ಸರ್ವ ಧರ್ಮದ ಜನರ ಸಹಬಾಗಿತ್ವದಲ್ಲಿ ಸರಕಾರಿ ಕನ್ನಡ ಹಿರಿಯ ಹೆಣ್ಣು ಮಕ್ಕಳ ಶಾಲೆಯ ಹತ್ತಿರವಿರುವ ಕಾಳಿಕಾದೇವಿ, ಜಗದ್ಗುರು ಮೌನೇಶ್ವರ ದೇವಸ್ಥಾನದ ೮ನೇ ವಾರ್ಷಿಕೋತ್ಸವ ಹಾಗೂ ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ ೮-೯ ಎರಡು ದಿನಗಳ ಕಾಲ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗುವವು ಎಂದು ಸಂಸ್ಥೆಯ ಅಧ್ಯಕ್ಷರಾದ ಪುಂಡಲೀಕ ಕಂಬಾರ, ಮಳೆಪ್ಪ ಬಡಿಗೇರ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿರುವ ಅವರು ದಿನಾಂಕ ೮ ಶುಕ್ರವಾರ ಬೆಳಿಗ್ಗೆ ೧೧.೩೦ಕ್ಕೆ ಮೌನೇಶ್ವರ ಭಾವಚಿತ್ರದೊಂದಿಗೆ ಎತ್ತಿನ ಬಂಡಿಯಲ್ಲಿ ಹಂದರ ತಪ್ಪಲ ಮೆರವಣಿಗೆ ಸಾಯಂಕಾಲ ೪ ಘಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ದೆ ಇರುವದು. ೯ ಶನಿವಾರದಂದು ಬ್ರಾಹ್ಮಿ ಮಹೂರ್ತದಲ್ಲಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಕಾಳಿಕಾದೇವಿ ಮತ್ತು ಜಗದ್ಗುರು ಮೌನೇಶ್ವರ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಹೋಮ ಹವನ ಹೂವಿನ ಅಲಂಕಾರ ನೈವೇದ್ಯೆ ತೀರ್ಥ ಪ್ರಸಾದದೊಂದಿಗೆ ಮಹಾಮಂಗಳಾರತಿ, ಉಪನಯನ ನೆರವೇರುವದು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಳಿಕಾದೇವಿ ಮತ್ತು ಜಗದ್ಗುರು ಮೌನೇಶ್ವರ ಪಲ್ಲಕ್ಕಿ ಉತ್ಸವ ಪುರವಂತರ…

Read More

ಕೊಲ್ಹಾರ: ಪ್ರತಿವರ್ಷದಂತೆ ಈ ವರ್ಷವೂ ಕೂಡ ೦೭ ಗುರುವಾರ ದಿವಸ ೨೦ನೇ ಶತಮಾನದ ಸೂಫಿ ಸಂತ ಶ್ರೀಗುರು ಅಲಹಾಜ ಶಾಹ ಮಹ್ಮದ ಅಬ್ದುಲಗಫಾರ ಕಾದ್ರಿಯವರ ೩೧ನೇ ಉರುಸು ಕಾರ್ಯಕ್ರಮವನ್ನು ಪಟ್ಟಣದ ಅಜಾದ ನಗರದಲ್ಲಿರುವ ಕಾದ್ರಿಯಾ ಮಸೀದಿ ಹತ್ತಿರದ ಖಾನಕಾಯ ಗಪಾರಿಯಾ ಆಶ್ರಮದ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಗುವದು ಎಂದು ಪೀಠಾಧಿಕಾರಿ ಅಲ್‌ಹಾಜ ಡಾ|| ಭಕ್ತಿಯಾರಖಾನ ಪಠಾಣ, ಉತ್ಸವ ಸಮೀತಿ ಅಧ್ಯಕ್ಷ ಉಸ್ಮಾನಸಾಬ ಪಟೇಲ ತಿಳಿಸಿದರು.ಈ ಕುರಿತು ಪತ್ರಿಕಾಗೋಷ್ಟಿಯನ್ನು ಉದ್ದೇಸಿಸಿ ಮಾತನಾಡಿದ ಅವರು ಅಂದು ಅಖಂಡ ವಿಜಯಪೂರ ಜಿಲ್ಲೆಯ ಸರ್ವ ಧರ್ಮದ ಜನರ ಸಮಾವೇಶವನ್ನು ಭಾವೈಕ್ಯತೆಯ ಸಂದೇಶ ಸಾರಲು ಏರ್ಪಡಿಸಲಾಗಿದ್ದು ಅಂದಿನ ದಿವಸ ೧೯ನೇಯ ಅಲಹಾಬಾದ ಮೌಲಾನಾ ಭಾವೈಕ್ಯತಾ ಪ್ರತಿಷ್ಟಿತ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಜಾನಪದ ವಿದ್ವಾಂಸ ಡಾ|| ಶಂಭು ಬಳಗಾರ ಅವರಿಗೆ ಕೊಡಮಾಡಲಾಗುವದು. ಇದು ೨೪ನೇಯ ಸರ್ವಧರ್ಮ ಸದ್ಬವನಾ ಸಮಾರಂಭವಾಗಿದ್ದು ನಾವೆಲ್ಲ ಭಾರತೀಯರು ಎಂಬ ಬಾವ ಮೂಡಲಿ ನಮ್ಮಲ್ಲಿರುವ ಬೇಧ ಭಾವವನ್ನು ಪರಮಾತ್ಮನು ದೂರ ಮಾಡಲಿ ಎಂದು ಶ್ರೀಗಳು ಹೇಳಿದರು.ಮುಸ್ಲೀಂ ಹಾಗೂ ಹಿಂದೂ…

Read More

ಸಿಂದಗಿ: ಕರ್ನಾಟಕ ಸರಕಾರ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ (ಕೆಡಿಪಿ) ಮಹಾನಂದ ಬಮ್ಮಣ್ಣಿ, ಸುರೇಶ ಸಿದ್ದಪ್ಪ ಚೌಧರಿ, ಶಿವಯೋಗೆಪ್ಪ ಹತ್ತರಕಿ, ಖಾದರಬಾಷಾ ವಾಲೀಕಾರ, ನಿಂಗಣ್ಣ ಬುಳ್ಳಾ, ಅಯ್ಯಪ್ಪ ಚಂದ್ರಾಮ ಕಟ್ಟಿಮನಿ ಅವರಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಿ ರಾಜ್ಯ ಸರಕಾರ ಆದೇಶ ಮಾಡಲಾಗಿದೆ.ಸದರಿ ಎಲ್ಲ ನಾಮ ನಿರ್ದೇಶನಗೊಂಡ ಸದಸ್ಯರಿಗೆ ಶಾಸಕ ಅಶೋಕ ಮನಗೂಳಿ ಅಭಿನಂದನೆ ಸಲ್ಲಿಸಿದ್ದಾರೆ.

Read More

ಕೊಲ್ಹಾರ: “ಏಕ ಸಾಅತ್ ಸ್ವಹಬತೇ ಬಾ ಅವಲಿಯಾ ಬಹತರ ಅಜ್ ಸದ್ ಸಾಲಾ ತಾಅತೆ ಬೇರಿಯಾ” ಸಂದೇಶದಂತೆ ಭೂತ ಮತ್ತು ಭವಿಷ್ಯತ್ ಕಾಲದ ಬಗ್ಗೆ ಒಂದಿಷ್ಟು ಚಿಂತನೆ ಮಾಡದೆ ಮೂಡನಂಬಿಕೆಯನ್ನು ಮನದಲ್ಲಿ ಮೂಡಿಸಿಕೊಳ್ಳದೆ ವರ್ತಮಾನ ಕಾಲದಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ಅಳಿಸಿ ಹಾಕಿ ಸಾಧ್ಯವಾಗಿಸುವ ಶಕ್ತಿ ಹೊಂದಿರುವ ವ್ಯಕ್ತಿಗಳು ಅಂದರೆ ಶರಣರು ಸಂತರು ದಾರ್ಶನಿಕರು ಹಾಗೂ ಸೂಪಿತತ್ವವನ್ನು ನಂಬಿ ಜೀವನ ನಡೆಸುವವರು ಮನುಜಮತ ವಿಶ್ವಪಥ ಎಂದು ತಿಳಿಸಲು ಸದಾಕಾಲ ಚಿಂತನೆ ಮಾಡುತ್ತಿರುತ್ತಾರೆ.ಅಂತಹ ಸೂಫಿಗಳಲ್ಲಿ ಒಬ್ಬರು ಅಲಹಾಬಾದ್ ಮೌಲಾನ ಎಂದು ಕಲಿಯುಗದಲ್ಲಿ ಪ್ರಖ್ಯಾತರಾದ ಹಜರತ್ ಅಬ್ದುಲ್ ಗಫಾರ್ ಖಾದ್ರಿ ಶ್ರೇಷ್ಠ ಪವಾಡ ಪುರುಷ ಯೋಗಿಗಳಾಗಿದ್ದರು ಇವರು ಉತ್ತರ ಪ್ರದೇಶದ ಅಲಹಾಬಾದನಲ್ಲಿ ಕ್ರಿ.ಶ ೧೮೫೫ ರಲ್ಲಿ ಜನ್ಮತಾಳಿದರು. ಮಾನವೀಯತೆ ಉದ್ದಾರಕ್ಕಾಗಿ ಸೂಫಿ ಧರ್ಮ ಅದರ ತತ್ವಗಳ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಹಲವಾರು ರಾಜ್ಯಗಳಲ್ಲಿ ಸುತ್ತಾಡಿ ತಮ್ಮ ಸಾವಿರಾರು ಶಿಷ್ಯ ಬಳಗವನ್ನು ಹುಟ್ಟುಹಾಕಿದರು. ನಿರಂತರವಾಗಿ ಮನುಜ ಕುಲದ ಉದ್ದಾರಕ್ಕಾಗಿ ಆಸೆ ಆಮಿಷಗಳಿಗೆ ಒಳಗಾಗದೇ ಮಾನವ…

Read More

ಕೆಂಭಾವಿ: HTC ಶಟಲ್ ಬ್ಯಾಡ್ಮಿಂಟನ್ ಕ್ಲಬ್ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿದ್ದು. ಇದೇ ತಿಂಗಳು ಮಾ.09ರಂದು ಹಿಲ್ ಟಾಪ್ ನ ಬ್ಯಾಡ್ಮಿಂಟನ್ ಗ್ರೌಂಡ್ ನಲ್ಲಿ ಓಪನ್ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿವೆ ಎಂದು HTC ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಚ್. ಆರ್. ಬಡಿಗೇರ್ ತಿಳಿಸಿದರು.ದಶರಥ ಮೂಡಲಗಿರಿ, ಸದ್ದಾಂ ಕೆ. ಕೆ, ಕಲ್ಯಾಣಿ, ಪ್ರವೀಣ್ ಸೇರಿದಂತೆ ಇತರರು ಪಂದ್ಯಾವಳಿ ಪ್ರಾಯೋಜಕರಾಗಿದ್ದಾರೆ. ಪ್ರಥಮ ಬಹುಮಾನ 11, 001ರೂ, ದ್ವಿತೀಯ ಬಹುಮಾನ 5,001ರೂ, ತೃತೀಯ ಬಹುಮಾನ 2,501ರೂ, ಬೆಸ್ಟ್ ಸ್ಮಾಶರ 1111ರೂ, ಉತ್ತಮ ತಂಡಕ್ಕೆ 1111ರೂ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಶುಲ್ಕ 400ರೂ ಇರುತ್ತದೆ. ತಂಡವನ್ನು ನೊಂದಾಯಿಸಲು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ. 6361947131, 7353735418, 9964609143.

Read More

ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ | ಧರ್ಮ ಸಮನ್ವಯ ಸಮಾರಂಭ | ಪುರಾಣ ಮಂಗಲೋತ್ಸವ ಮುದ್ದೇಬಿಹಾಳ: ಮಂತ್ರಿಗಳೊಂದಿಗೆ, ಪ್ರತಿಷ್ಠಿತ ನಾಯಕರೊಂದಿಗೆ, ಎಲ್ಲ ಜಗದ್ಗುರುಗಳೊಂದಿಗೆ, ಎಲ್ಲ ಮಠಾಧೀಶರೊಂದಿಗೆ, ಸಾಹಿತಿಗಳೊಂದಿಗೆ ಒಳ್ಳೆಯ ಸಂಪರ್ಕವನ್ನು ಹೊಂದಿದ ಕುಂಟೋಜಿ ಶ್ರೀಗಳಿಗೆ ಇಡೀ ರಾಜ್ಯವನ್ನೇ ತಂದು ಕುಂಟೋಜಿಯಲ್ಲಿ ಕೂರಿಸುವಷ್ಟು ಶಕ್ತಿ ಇದೆ ಎಂದು ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಜಗದ್ಗುರು ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಮೊದಲನೇ ದಿನದ ಕಾರ್ಯಕ್ರಮವಾದ ಧರ್ಮ ಸಮನ್ವಯ ಸಮಾರಂಭ ಹಾಗೂ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸ್ವಾಮಿಗಳಿಗೆ ಸಹಕಾರ ನೀಡುವುದರಿಂದ ಸ್ವಾಮಿಗಳು ಬೆಳೆಯುವದಿಲ್ಲ ಬದಲಾಗಿ ಸಮಾಜ, ಮಠಗಳು ಬೆಳೆಯುತ್ತವೆ. ಚನ್ನವೀರ ದೇವರು ತಮ್ಮ ಜೀವನದಲ್ಲಿ ಸುಖದ ಬದಲು ದುಃಖವನ್ನೇ ಹೆಚ್ಚು ಕಂಡವರು. ಸಾಕಷ್ಟು ಕ್ರಿಯಾಶೀಲರಾಗಿರುವ ಅವರಿಗೆ ಗ್ರಾಮಸ್ಥರು ಎಷ್ಟು ಸಹಕಾರ ನೀಡುತ್ತೀರೋ ಅಷ್ಟು ದೊಡ್ಡ ಕೀರ್ತಿಗೆ ನಿಮ್ಮೂರು ಪಾತ್ರವಾಗುತ್ತದೆ ಎಂದರು.ಕಪ್ಪತಗುಡ್ಡದ ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಗುರು…

Read More

ಸಿಂದಗಿ: ಇತ್ತೀಚೆಗೆ ಮರಗೂರ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆಯಲ್ಲಿ ಸಿಂದಗಿ ತಾಲೂಕಿನ ಹೂವಿನಳ್ಳಿ ಗ್ರಾಮದ ಮಾಜಿ ಜಿಪಂ ಸದಸ್ಯ ಸಿದ್ದರಾಮ ಪಾಟೀಲ ಅವರ ಧರ್ಮಪತ್ನಿ ಸರೋಜನಿ ಪಾಟೀಲರು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾದ ಪ್ರಯುಕ್ತ ಅವರಿಗೆ ತಾಲೂಕಿನ ಪಂಚಮಸಾಲಿ ಸಮಾಜ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, ಮೀಸಲಾತಿ ಹೋರಾಟ ಸಮಿತಿ ಅದ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಯುವ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ, ಕಸಾಪ ಅಧ್ಯಕ್ಷ ಶಿವು ಬಡಾನೂರ, ಎಂ.ಬಿ.ಯಡ್ರಾಮಿ, ರಮೇಶ ಯಾಳಗಿ, ಸಂಗನಗೌಡ ಪಾಟೀಲ ಅಗಸಬಾಳ, ದಾನಪ್ಪಗೌಡ ಚೆನಗೊಂಡ, ಶೇಖರಗೌಡ ಬಿರಾದಾರ ಬ್ಯಾಕೋಡ, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ ಸೇರಿದಂತೆ ಅನೇಕರಿದ್ದರು.

Read More

ದೇವರಹಿಪ್ಪರಗಿ: ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕ ಹಾಗೂ ಪಾಲಕ ಈರ್ವರ ಪಾತ್ರ ಗಮನಾರ್ಹ ಹಾಗೂ ಜವಾಬ್ದಾರಿಯುತವಾಗಿದೆ ಎಂದು ಖ್ಯಾತವೈದ್ಯ ಆರ್.ಆರ್.ನಾಯಿಕ್ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದಿನ ಮಕ್ಕಳೇ ನಾಳಿನ ನಾಗರೀಕರು. ಇವರ ಸರ್ವತೋಮುಖ ಬೆಳವಣಿಗೆಯಲ್ಲಿ ಮನೆ, ಶಾಲಾ ಪರಿಸರ, ಶಿಕ್ಷಕ, ತಾಯಿ, ತಂದೆ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.ಸ್ಥಳೀಯ ಜಡಿಮಠದ ಜಡಿಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ನಮ್ಮ ಸಂಸ್ಕಾರಗಳು ಬೆಳೆಯುವ ಮಗುವಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ. ಆದ್ದರಿಂದ ಮಗುವಿಗೆ ಮಾದರಿಯಾಗಿ ನಾವುಗಳು ವರ್ತಿಸಬೇಕು ಎಂದರು.ಸಿಂದಗಿ ಪದ್ಮರಾಜ ಮಹಿಳಾ ಪ.ಪೂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಹಾಗೂ ಹಾಸ್ಯಕಲಾವಿದ ಗಿರೀಶ ಕುಲಕರ್ಣಿ ತಮ್ಮ ಗಾಯನದ ಮೂಲಕ ಮಕ್ಕಳ ಗಮನ ಸೆಳೆದರು.ಎ.ಬಿ. ಸಾಲಕ್ಕಿ ಪ.ಪೂ ಕಾಲೇಜಿನ ಪ್ರಾಚಾರ್ಯ ವ್ಹಿ.ಜಿ.ಹೂನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು ಹಾಗೂ ವಿಶೇಷವಾಗಿ ಪಾಲಕರಿಗೂ ಸಹ ಬಹುಮಾನ ವಿತರಿಸಲಾಯಿತು.ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ಮುಖ್ಯಗುರು…

Read More