ಇಂಡಿ: ಹೊಲದಲ್ಲಿ ಕೊಳವೆ ಬಾವಿ ನಿರ್ಮಿಸುವ ಪೂರ್ವಭಾವಿಯಾಗಿ ಜಮೀನು ಮಾಲಿಕರು ೧೫ ಮುಂಚಿತವಾಗಿ ತಹಸೀಲ್ದಾರ, ಗ್ರಾ.ಪಂ, ಗ್ರಾಮ ಲೆಕ್ಕಿಗ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗ, ಪಂಚಾಯತ ಇಂಜಿನಿಯರಿಂದ ಇಲ್ಲವೆ ಪುರಸಭೆ ಇವರಿಗೆ ಸಂಬಂದಿತ ಇಲಾಖೆಗೆ ಲಿಖಿತ ಮಾಹಿತಿ ನೀಡತಕ್ಕದ್ದು ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸಬಾಭವನದಲ್ಲಿ ಕೊಳವೆ ಭಾವಿ ಏಜನ್ಸಿ ಮಾಲಿಕರಿಂದ ನಡೆದ ಸಭೆಯಲ್ಲಿ ಕೊಳವೆ ಬಾವಿ ಕೊರೆಯುವ ಕುರಿತು ಪಾಲಿಸ ಬೇಕಾದ ನಿಯಮಗಳ ಮಾಹಿತಿ ನೀಡುವ ಸಭೆಯಲ್ಲಿ ಮಾತನಾಡುತ್ತಿದ್ದರು.
ವಿಫಲವಾದ ಕೊಳವೆ ಬಾವಿಯಾದಲ್ಲಿ ಅದನ್ನು ಮುಚ್ಚಲು ತೆಗೆದುಕೊಳ್ಳಲು ಬೇಕಾದ ಕ್ರಮಗಳ ಕುರಿತು ಮತ್ತು ಕೊಳವೆ ಬಾವಿ ಕೊರೆಯುವ ಕಾರ್ಯ ಮುಗಿದ ನಂತರ ಕೊರೆಯುವ ಏಜನ್ಸಿಯವರು ಕೊಳವೆ ಬಾವಿಗೆ ಸಾರ್ವಜನಿಕರ ಸುರಕ್ಷತೆಗಾಗಿ ಸ್ಟೀಲ್ ಪ್ಲೇಟಿನಿಂದ ಮುಚ್ಚಬೇಕು ಎಂದರು.
ಕೊರೆದ ಕೊಳವೆಬಾವಿಯನ್ನು ಮುಚ್ಚಳದ ಮೇಲಕ್ಕೆ ಒಂದರಿಂದ ಎರಡು ಅಡಿಗಳಷ್ಟು ಹಸಿ ಮಣ್ಣಿನಿಂದ ಮುಚ್ಚಿ ಮುಳ್ಳಿನ ಗಿಡಗಳನ್ನು ಇಡಬೇಕು ಎಂದು ಹೇಳಿ ಇದರಂತೆ ೨೧ ನಿಯಮಗಳನ್ನು ಪಾಲಿಸಬೇಕು ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ ಎಂದರು.
ತಹಸೀಲ್ದಾರ ಮಜುಳಾ ನಾಯಕ, ಗಣಿ ಮತ್ತು ಭೂ ಗರ್ಭ ಇಲಾಖೆಯ ಮೋಹನ್ ಕುಮಾರ ಎಸ್, ಪರಿಸರ ಮಾಲಿನ್ಯ ಇಲಾಖೆಯ ಬಸವರಾಜ ಮಮದಾಪುರ, ಪ್ರೋಬೆಷನರಿ ಡಿ.ಎಸ್.ಪಿ ಮುರ್ತುಜ ಖಾದ್ರಿ ಮಾತನಾಡಿದರು.
ಸಭೆಯಲ್ಲಿ ಎಸ್.ಆರ್.ಮುಜಗೊಂಡ, ಏಜನ್ಸಿ ಮಾಲಿಕರಾದ ಎಂ.ಎಸ್.ಬೇವನೂರ, ಟಿ.ಎಸ್.ಬಿರಾದಾರ, ಎಸ್.ಆರ್.ಕನ್ನೂರ, ಆರ್.ಎಸ್.ಬಿರಾದಾರ, ಜಿ.ಎಸ್.ಮಾದರ, ಇಲಾಖೆಯ ಎಚ್.ಎಚ್.ಗುನ್ನಾಪುರ, ನಂದೀಪ ರಾಠೋಡ, ಪಿ.ಎಸ್.ಐ ಎಚ್.ಎಂ.ಹೊಸಮನಿ,ಉಪ ತಹಸೀಲ್ದಾರ ಎ.ಎಸ್.ಗೋಟ್ಯಾಳ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

