ವಿಜಯಪುರ: ಬಸವದಿ ಶರಣರು ಭೇದವಿಲ್ಲದ ನಿರ್ಮಾಣ ಮಾಡಿದರು. ವಚನ ಸಾಹಿತ್ಯ ಜನಸಾಮಾನ್ಯರಿಗೂ ಅರ್ಥವಾಗುವಂಥದ್ದು. ಕಾಯಕದಲ್ಲಿ ನಿರಂತನಾಗಿರಬೇಕು, ಹುಸಿ ಹೇಳದೆ ಸತ್ಯ ಪ್ರತಿಪಾದಿಸಬೇಕು, ಸಮಾಜ ಸುಧಾರಣೆ ವಚನದ ಆಶಯ ಎಂದು ಸಿಂದಗಿ ಎಚ್ ಜಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ ಆರ್ ಹೆಗ್ಗಣದೊಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ಅನ್ನಪೂರ್ಣ ಮಹದೇವಪ್ಪ ಕಾಗಲ್ಕರ್ ದಿ ಭೀಮಕ್ಕ ರಾಮಚಂದ್ರ ಕಾಗಲ್ಕರ್ ದತ್ತಿ ಹಾಗೂ ಶ್ರೀಮತಿ ಶಾಂತಾಬಾಯಿ ಸುಖರಾಮ್ ನೂಲಿ ಕರ್ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರಿಗೆ ಮುಖ್ಯ ವಾಹಿನಿಗೆ ತರುತ್ತಿರುವುದು ಶ್ಲಾಘನೀಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ತಿಕೋಟ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಪ್ರಗತಿಪರ ಸಮಾಜದ ನಿರ್ಮಾಣವೇ ವಚನ ಸಾಹಿತ್ಯ. ಶ್ರದ್ಧೆಯಿಂದ ಮಾಡಿದ ಕಾಯಕ ಪೂಜೆಗಿಂತ ಶ್ರೇಷ್ಠ ಇಂದು ವಚನ ಸಾಹಿತ್ಯ ಸುಂದರ ಬದುಕಿನ ಸಾಹಿತ್ಯವಾಗಿದೆ ಎಂದರು.
ಶರಣರ ವಚನ ಸಾಹಿತ್ಯ ಕುರಿತು ಮಮತಾ ಮುಳಸಾವಳಗಿ ಉಪನ್ಯಾಸ ನೀಡಿ, ಪ್ರಬುದ್ಧತೆಯ ಮೊಹೊನ್ನತ್ತ ಶಿಖರ ವಚನ ಸಾಹಿತ್ಯ. ವಚನವೆಂದರೆ ಹುಸಿಯಾಗದ ಮಾತು. ಕನ್ನಡ ವಚನ ಸಾಹಿತ್ಯ ವಿಶ್ವಕ್ಕೆಲ್ಲ ನೀಡಿದ ಕೊಡುಗೆ ಅಲ್ಲಮ ಪ್ರಭು ಹಾಗೂ ಅಕ್ಕಮಹಾದೇವಿ ಸಂವಾದವೇ ವಚನ ಎಂದರು.
ಕಾಯಕ ಕುರಿತು ಶರಣ ಸಂಸ್ಕೃತಿಯ ಚಿಂತಕಿ ಚೈತನ್ಯ ಮುದ್ದೇಬಿಹಾಳ ಉಪನ್ಯಾಸ ನೀಡಿ ಬಸವಣ್ಣ ಬಿತ್ತಿದ ಬೀಜಗಳು ನಾವು ಕಾಯಕವೇ ಕೈಲಾಸದಲ್ಲಿ ನಂಬಿಕೆಯಿಟ್ಟು ಗೌರವದಿಂದ ಬದುಕಿದವರು. ಸತ್ಯ ಶುದ್ಧ ಕಾಯಕವೇ ಶ್ರೇಷ್ಠ ಶರಣರ ದೃಷ್ಟಿಯಲ್ಲಿ ಹೊನ್ನವು ಮಣ್ಣೆ ಎಂದರು.
ಇದೇ ಸಂದರ್ಭದಲ್ಲಿ ಇಂಡಿ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜಯಶ್ರೀ ತಲಗ, ವಿಜಯಲಕ್ಷ್ಮಿ ಡಿಸಲೆ, ರಜಿಯಾ ಚಪ್ಪರಬಂದ, ರಾಜಶ್ರೀ ನಾರಾಯಣಕಾರ, ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆ ಮೇಲೆ ರೇಣುಕಾ ತಳವಾರ, ಡಾ ಸುರೇಶ್ ಕಾಗಲಕರಡ್ಡಿ, ರಾಜಸಾಬ್ ಶಿವನಗುತ್ತಿ, ರೇಣುಕಾ ತಳವಾರ, ಉಪಸ್ಥಿತರಿದ್ದರು. ಸುನಂದ ಕೋರಿ ರೇಣುಕಾ ತಳವಾರ್ ಪ್ರಾರ್ಥಿಸಿದರು, ಡಾ ಆನಂದ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು ಸುರೇಶ್ ಜತ್ತಿ ಸ್ವಾಗತಿಸಿ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ಹಾಸಿಂಪೀರ್ ವಾಲಿಕಾರ, ಕಮಲಾ ಮುರಾಳ್, ಜಿ ಎಸ್ ಬಳ್ಳೂರ್, ಅಹಮದ ವಾಲಿಕಾರ್, ಅರ್ಜುನ್ ಶಿರೂರ್, ಶಾಂತ ವಿಭೂತಿ, ಸುರಭಿ ತಲಗ್, ದ್ಯಾವಪ್ಪ ಗರಸಂಗಿ, ಎಸ್ಎಸ್ ಕುಂಬಾರ್ ಎಸ್ ವಾಯ್ ತುದಿಗಾಲ್, ಎಸ್ ಎಸ್ ಭಟಗೇರಿ, ಭಾಗಿರತಿ ಶಿಂದೆ, ಕೆ ಎಸ್ ಹಣಮಾನಿ, ಟಿ ಆರ್ ಹಾವಿನಾಳ್, ಎಸ್ ಬಿ ಕಲಿಕೇರಿ, ಎಂ ಎನ್ ನಿಂಬಾಳ್ ಮುಂತಾದರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

