ಸಿಂದಗಿ: ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ೧ ಫಲಿತಾಂಶದಲ್ಲಿ ಪಟ್ಟಣದ ಆಕ್ಷಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪವಿತ್ರಾ ದೇವರಮನಿ ೬೧೮ ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯ ಎಂದು ಇಂಡಿ ಪಟ್ಟಣದ ಆರ್‌ಎಂಎಸ್ ಶಾಲೆಯ ಶಿಕ್ಷಕಿ ಸುನಿತಾ ಸಾಲಿ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದರು.
ಪಟ್ಟಣದ ಶ್ರೀವೇಂಕಟೇಶ್ವರ ವಿದ್ಯಾವರ್ಧಕ ಸಂಘದ ಆಕ್ಷಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶ್ರೀ ಎಚ್.ಟಿ.ಕೆ.(ಚೌಧರಿ) ಕನ್ನಡ ಮಾಧ್ಯಮ ಪ್ರೌಢಶಾಲೆಯ ಆವರಣದಲ್ಲಿ ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ೧ರಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ, ಕಲಿಕೆ ಮತ್ತು ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಪ್ರಕಾಶ ಚೌಧರಿ ಅವರು ಆಕ್ಷಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶ್ರೀ ಎಚ್.ಟಿ.ಕೆ.(ಚೌಧರಿ) ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮತ್ತು ಶೈಕ್ಷಣಿಕ ಮಾರ್ಗದರ್ಶನ ನೀಡುವ ಮೂಲಕ ಅವರು ವಿದ್ಯಾರ್ಥಿಗಳ ಸಾಧನೆಗೆ ಬೆನ್ನೆಲುಬಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಆಕ್ಷಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪವಿತ್ರಾ ದೇವರಮನಿ ಹಾಗೂ ಉತ್ತಮ ಸಾಧನೆ ಮಾಡಿದ ರಾಧಿಕಾ ಕಣಮೇಶ್ವರ, ಮೇಘಾ ಕುಂಬಾರ, ಅಕ್ಷಯ ತಾಳಿಕೋಟಿ, ಭೂವನೇಶ್ವರಿ ಗೋನಾಳ, ಪ್ರಶಾಂತ ಬಿರಾದಾರ, ವೈಶಾಲಿ ಮಳಲಿ, ಗೌತಮ ಬಡಿಗೇರ, ಪ್ರಜ್ವಲ್ ಬಡಿಗೇರ ಮತ್ತು ಶ್ರೀ ಎಚ್.ಟಿ.ಕೆ.(ಚೌಧರಿ) ಕನ್ನಡ ಮಾಧ್ಯಮ ಪ್ರೌಢಶಾಲೆಯ ಗಂಗಮ್ಮ ಬಿರಾದಾರ, ಪವಿತ್ರಾ ಅರಳಗುಂಡಗಿ, ಭಾಗ್ಯಶ್ರೀ ಪೋಲಿಸ್‌ಪಾಟೀಲ, ಸುಮಲತಾ ಶಿವಣಗಿ, ತೇಜಶ್ವಿನಿ ಸಾಸಟ್ಟಿ, ನಿವೇದಿತಾ ಕಲ್ಲೂರ, ಸಮರ್ಥ ಅಲ್ಲಾಪೂರ, ಆಕಾಶ ಪೂಜಾರಿ, ಆಕಾಶ ನಾಯ್ಕೋಡಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದ ಅಧ್ಯತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಚೌಧರಿ, ಆಡಳಿತಾಧಿಕಾರಿ ಮಹಾಂತೇಶ ಚೌಧರಿ ಮಾತನಾಡಿ, ಶಿಕ್ಷಣದಲ್ಲಿ ಎಸ್.ಎಸ್.ಎಲ್.ಸಿ ಹಂತ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ವಿಶ್ವನಾಥ ಯಾತನೂರ, ನೀಲಾಂಬಿಕಾ ಕತ್ತಿ, ರೇಣುಕಾ ಅಂಗಡಿ, ಮಂಜುನಾಥ ಮಠ, ಮಹೇಶ ಬಿರಾದಾರ, ಸಂಜೀವ ರಾಠೋಡ, ರುದ್ರಗೌಡ ಅವರಾದಿ, ರಾಜಕುಮಾರ ಹೊಸಮನಿ, ಅಬ್ದುಲ್‌ರಜಾಕ, ಗಂಗಾ. ಅಪೂರ್ವ ಹಿರೇಮಠ, ಭಾಗ್ಯಶ್ರೀ ಮಲ್ಲಾಬಾದಿಮಠ, ಈರಣ್ಣಗೌಡ ಮ್ಯಾಗೇರಿ ಸೇರಿದಂತೆ ಸಿಬ್ಬಂದಿವರ್ಗ, ಪಾಲಕರು ಇದ್ದರು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳ ಸಾಧನೆಗೆ ಬೆನ್ನೆಲುಬಾದ ಪ್ರಕಾಶ ಚೌಧರಿ :ಸಾಲಿ
Related Posts
Add A Comment

