ಸಿಂದಗಿ: ರಕ್ತ ಯಾವುದೋ ಅಂಗಡಿ-ಮುಂಗಟ್ಟುಗಳಲ್ಲಿ ಸಿಗುವ ವಸ್ತುವಲ್ಲ. ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ಸಂಪನ್ಮೂಲ ಎಂದು ರಕ್ತ ನಿಧಿ ಭಂಡಾರದ ವೈದ್ಯೆ ಡಾ. ಜನುಷಾ ಹೇಳಿದರು.
ಪಟ್ಟಣದ ಕೆ.ಎಸ್.ಆರ್.ಟಿ.ಸಿ ಆವರಣದಲ್ಲಿ ಸಿಂದಗಿ ಕೆ.ಎಸ್.ಆರ್.ಟಿ.ಸಿ ನಿಯಂತ್ರಣ ಘಟಕ, ವಿಜಯಪುರ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು, ಯುವಕರು ಯಾವುದೇ ತಪ್ಪು ಭಾವನೆ ಇಲ್ಲದೇ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ರಕ್ತದಾನದಿಂದ ಆರೋಗ್ಯ ಸಮತೋಲನ ಕಾಪಾಡಲು ಸಹಾಯಕಾರಿಯಾಗಿದೆ ಎಂದರು.
ಈ ವೇಳೆ ೧೭ಕ್ಕೂ ಅಧಿಕ ಯುವಕರು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ಆನಂದ ಬಡಿಗೇರ್, ಮಹ್ಮದಆರೀಫ ಹವಾಲ್ದಾರ್, ಅರುಣಕುಮಾರ, ವಿಶಾಲ ಕೌಲಗಿ, ಬಿಬಿಖತೀಜಾ, ರಾಜಕುಮಾರ್ ನರಗೋದಿ, ಪ್ರಕಾಶ್ ಕೌಲಗಿ, ರಾಜು ಸೇರಿದಂತೆ ಡಿ ವರ್ಗದ ನೌಕರರು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

