Author: editor.udayarashmi@gmail.com

ವಿಜಯಪುರ: ಇತ್ತೀಚಿಗೆ ಯಾವ ಕೊಲೆ ಪ್ರಕರಣಗಳಲ್ಲಿ ಮುಸ್ಲಿಂ ಆರೋಪಿ ಇದ್ದರೆ ಮಾತ್ರ ಪ್ರತಿಭಟನೆ ಮಾಡುವ ಮೂಲಕ ಬಿಜೆಪಿ ಹೆಣಗಳ ಮೇಲೆಯೂ ರಾಜಕಾರಣ ಮಾಡುವ ಕೆಟ್ಟ ಪರಂಪರೆಗೆ ಮುಂದಾಗಿದೆ ಎಂದು ಅಹಿಂದ ವಿಜಯಪುರ ಜಿಲ್ಲಾ ಘಟಕದ ಧುರೀಣ ಎಸ್.ಎಂ. ಪಾಟೀಲ ಗಣಿಹಾರಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿಅಂಜಲಿ ಅಂಬಿಗೇರ ಅವರ ಸಾವನ್ನು ಖಂಡಿಸಿ ಬಿಜೆಪಿ ಏಕೆ ಧರಣಿ ನಡೆಸುತ್ತಿಲ್ಲ, ಆಕ್ರೋಶ ಹೊರಹಾಕುತ್ತಿಲ್ಲ, ಅವರು ಹಿಂದೂಗಳು ಅಲ್ಲವೇ? ಅಲ್ಲಿ ಮುಸ್ಲಿಂ ಆರೋಪಿ ಇಲ್ಲ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದ್ದೆಯೇ? ಎಂದು ಪ್ರಶ್ನಿಸಿದರು.ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇ, ನೇಹಾ ಹಿರೇಮಠ, ರುಕ್ಸಾನಾ, ಮಂಗಳೂರು ಸೇರಿದಂತೆ ಅನೇಕ ಯುವತಿಯರ ಕೊಲೆ ನಡೆದಿರುವುದು ನೋವಿನ ಸಂಗತಿ, ಅಪರಾಧಿಗಳಿಗೆ ಜಾತಿ ಇಲ್ಲ, ಅಪರಾಧಿಗಳು ಅಪರಾಧಿಗಳೇ ಎಂದರು.ಮಣಿಪುರದಲ್ಲಿ ಯುವತಿ ಮೇಲೆ ಅಮಾನವೀಯವಾದ ದೌರ್ಜನ್ಯ ನಡೆದರೂ ಐವತ್ತಾರೂ ಇಂಚಿನ ಪ್ರಧಾನಿ ತುಟಿ ಪಿಟಕ್ ಎನ್ನಲಿಲ್ಲ, ದೇಶ ಕಂಡ ಅತ್ಯಂತ ಅಶಕ್ತ ಪ್ರಧಾನಿ ಮೋದಿ ಎಂದರು.ನೇಹಾ ಹಿರೇಮಠ ಅವರ ಕೊಲೆ ಖಂಡನೀಯ,…

Read More

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಆತ ಹುಟ್ಟಿದ್ದು ರಾಜವಂಶದಲ್ಲಿ. ಕೋಸಲ ರಾಜ್ಯವನ್ನು ಆಳುತ್ತಿದ್ದ ಶಾಖ್ಯ ವಂಶದ ಮಹಾರಾಜ ಶುದ್ಧೋದನ ಆತನ ತಂದೆ, ತಾಯಿ ಮಾಯಾದೇವಿ. ಈತನ ಮೂಲ ಹೆಸರು ಸಿದ್ದಾರ್ಥ ಗೌತಮ. ರಾಜ ಮನೆತನದಲ್ಲಿ ಹುಟ್ಟಿದ ಸಿದ್ದಾರ್ಥನ ಜಾತಕವನ್ನು ಪರಿಶೀಲಿಸಿದ ರಾಜ ಪುರೋಹಿತರು ಈತ ಮುಂದೆ ಸರ್ವ ಸಂಗ ಪರಿತ್ಯಾಗಿಯಾಗಿ ಜಗದೋದ್ಧಾರಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವನು ಎಂದು ಹೇಳಿದರು. ಇದರಿಂದ ಚಿಂತಿತನಾದ ರಾಜನು ತನ್ನ ಮಗನಿಗೆ ಯಾವುದೇ ರೀತಿಯ ನೋವು ಸಂಕಟಗಳ ದೃಶ್ಯಾವಳಿಗಳು ಕಣ್ಣಿಗೆ ಬೀಳದಂತೆ ಅರಮನೆಯ ಚಿನ್ನದ ಪಂಜರದಲ್ಲಿ ಸುಖದ ಸುಪ್ಪತ್ತಿಗೆಯ ಮೇಲೆ ಬೆಳೆಸಿದನು. ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿದನು. ಪ್ರಾಪ್ತ ವಯಸ್ಕನಾದಾಗ ಯಶೋಧರೆ ಎಂಬ ಕನ್ಯಾಮಣಿಯೊಂದಿಗೆ ವಿವಾಹವನ್ನು ಮಾಡಿದನು. ಆತನ ದಾಂಪತ್ಯದ ಫಲವಾಗಿ ಓರ್ವ ಪುತ್ರ ರಾಹುಲನನ್ನು ಪಡೆದನು. ಇಷ್ಟಕ್ಕೆ ಮುಗಿಯಲಿಲ್ಲ ಆತನ ಜೀವನ ಯಾನ…. ಇಲ್ಲಿಂದ ಆರಂಭವಾಯಿತು ಬುದ್ಧನ ಮಹಾ…ಗಮನ. ಎಷ್ಟೇ ಅರಮನೆಯ ಕಣ್ಕಾವಲಿನಲ್ಲಿ ಮಗನನ್ನು ಮಹಾರಾಜನು ಬೆಳೆಸಿದರೂ ಒಂದು ದಿನ ರಥದಲ್ಲಿ ಕುಳಿತು ಪ್ರಯಾಣಿಸುವಾಗ ರಾಜಕುಮಾರ…

Read More

ವಿಜಯಪುರ: ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳ ಹಿಂದೆ ನಡೆದ ರೋಹಿತ್ ಪವಾರ ಎಂಬ ಯುವಕನ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ನಿವಾಸಿ ಮುಜ್‌ಮಿಲ್ ಹಾಸೀಮ್‌ಖಾದ್ರಿ ಇನಾಮದಾರ (೨೨), ರಾಜಾಜಿನಗರ ನಿವಾಸಿ ಸಾಯಿನಾಥ ಪರಶುರಾಮ ಪವಾರ (೨೦), ಗಚ್ಚಿನಕಟ್ಟಿ ಕಾಲೊನಿ ನಿವಾಸಿ ಶರಣು ಶಿವಾನಂದ ಕುರಿ ಎಂದು ಗುರುತಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ ಮಾತನಾಡಿ, ನಗರವನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣವನ್ನು ಬೇಧಿಸುವಲ್ಲಿ ರಚನೆ ಮಾಡಲಾಗಿದ್ದ ಸಿಪಿಐ ಮಲ್ಲಯ್ಯ ಮಠಪತಿ ಅವರ ನೇತೃತ್ವದ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.ಕಳೆದೆರಡು ದಿನಗಳ ಹಿಂದೆ ಇಂಡಿ ರಸ್ತೆಯ ಬಂಬಳ ಅಗಸಿ ನಿವಾಸಿ ರೋಹಿತ್ ಸುಭಾಸ ಪವಾರ ಎಂಬಾತನನ್ನು ಈ ಆರೋಪಿಗಳನ್ನು ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಿದ್ದರು ಎಂದು ಗಣೇಶ ಪವಾರ ದೂರು ನೀಡಿದ್ದರು. ಈ ದೂರಿನನ್ವಯ ಪ್ರಕರಣ ಬೇಧಿಸಲು ವಿಶೇಷ ತಂಡ…

Read More

-ಮಂಡ್ಯ ಮ.ನಾ.ಉಡುಪ ಜೇನು ಅಬ್ಬಾ ಇದರ ರುಚಿಗೆ ಮರುಳಾಗದ ಮನುಷ್ಯರೇ ಇಲ್ಲ. ಪುರಾತನ ಕಾಲದ ಪಾಶ್ಚಾತ್ಯರಿಗೆ ಗೊತ್ತಿದ್ದ ಏಕಮೇವ ಸಿಹಿಯೆಂದರೆ ಜೇನು ಮಾತ್ರವೇ. ಕೂಡಿಬಾಳುವುದಕ್ಕೆ ಮಾನವನಿಗೆ ಹಾದಿಹಾಕಿಕೊಟ್ಟಿದ್ದು ಈ ಜೇನುಗೂಡಿರಲೂ ಸಾಕು.ಹಿಂದಿನ ಕಾಲದಲ್ಲಿ ಸತ್ತು ಕೊಳೆತ ಪ್ರಾಣಿಗಳ ದೇಹದಿಂದ ಜೇನುನೊಣಗಳು ಹುಟ್ಟುತ್ತವೆಂದು ನಂಬಿದ್ದರು ಮತ್ತು ಜೇನು ಹುಳುಗಳನ್ನು ಹೂವುಗಳಿಂದ ಸಂಗ್ರಹಿಸುತ್ತವೆಂದು ನಂಬಿದ್ದರು. ಅರಿಸ್ಟಾಟಲನು ತನ್ನಪುಸ್ತಕ ನ್ಯಾಚುರಲ್ ಹಿಸ್ಟರಿಯಲ್ಲಿ ಜೇನುನೊಣಗಳ ವರ್ಣನೆಯನ್ನು ಹಾಗೂ ಕೆಲಸಕಾರ್ಯಗಳನ್ನೂ ಅದೇ ತೆರೆನಾಗಿ, ತನ್ನ ಜಿಯೊರಿಕ್ ಪುಸ್ತಕ ದಲ್ಲಿ ವರ್ಜಿಲ್ನು ಜೇನು ನೊಣಗಳ ಕುರಿತು ಬರೆದ ನಂತರದಲ್ಲಿ ಜನರು ಈ ನಂಬಿಕೆಯನ್ನು ಬಿಟ್ಟರು. ನಂತರದ ಕಾಲದಲ್ಲಿ ಪಲಾದಿಯಸ್, ಪ್ಲಿನಿ, ಮೋಲೇ, ಮೊದಲಾದ ಮಹನೀಯರು ಜೇನು ಕುರಿತು ಬರೆದು ಜನರಿಗೆ ಹೆಚ್ಚಿನ ಅರಿವು ಮೂಡಿಸಿದರು. ವೇದಕಾಲದಲ್ಲಿಯೇ ಭಾರತೀಯರಲ್ಲಿ ಜೇನಿನ ಬಗ್ಗೆ ಹೆಚ್ಚಿನ ಅರಿವು ಇತ್ತು ಎಂಬುದು ಅಥರ್ವಣ ವೇದದ ಮಧುಸೂಕ್ತದಿಂದ ಕಂಡುಬರುವುದು.ಮಧುಮತೀ ರೋಷಧೀರ್ದ್ಯಾಪ ಆಪೋ ಮಧುವನ್ನೋ ಭವತ್ವಂತರಿಕ್ಷಂ ಕ್ಷೇತ್ರಸ್ಯ ಪತಿರ್ಮಧುಮಾನ್ನೋ ಅಸ್ಟ್ತರಿಷ್ಯಂತೋ ಅನ್ವೇನಂ ಚರೇಮ. ಪನ್ನಾಯ್ಯಂ ತದಶ್ಚಿನಾ ಕೃತಂವಾ ವೃಷಭೋ…

Read More

ನವದೆಹಲಿ: ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಎಸ್‌ಒಪಿ ಮಾಹಿತಿಯನ್ನು ನೀಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತೆ ನಿರಾಕರಿಸಿದ್ದು, ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ನಿರಾಕರಣೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಮುಂದಾಗಿದ್ದಾರೆ.ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಲಾದ ಮೊದಲ ಮೇಲ್ಮನವಿಗೆ ಪ್ರತಿಕ್ರಿಯೆಯಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಚುನಾವಣಾ ಬಾಂಡ್‌ಗಳ ಮಾರಾಟ ಮತ್ತು ನಗದೀಕರಣ ಕುರಿತಂತೆ ಶಾಖೆಗಳಿಗೆ ನೀಡಿದ ಎಸ್ಒಪಿ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್) ಪ್ರತಿಯನ್ನು ಒದಗಿಸಲು ಮತ್ತೆ ನಿರಾಕರಿಸಿದೆ. ಮಾಹಿತಿ ಹಕ್ಕು ಕಾಯಿದೆಯಡಿ ಕೋರಲಾದ ಮಾಹಿತಿಯನ್ನು ಬ್ಯಾಂಕ್ “ಕಮರ್ಷಿಯಲ್ ಕಾನ್ಫಿಡೆನ್ಸ್” ಆಗಿ ಇರಿಸಿಕೊಂಡಿದೆ ಮತ್ತು ಅದು “ಬ್ಯಾಂಕ್‌ನ ಬೌದ್ಧಿಕ ಆಸ್ತಿ” ಎಂದು ಮಾಹಿತಿ ನಿರಾಕರಣೆಗೆ ಬ್ಯಾಂಕ್ ಕಾರಣ ನೀಡಿದೆ. ಮೇಲಾಗಿ ಆಂತರಿಕ ಮಾರ್ಗಸೂಚಿಗಳು ಚುನಾವಣಾ ಬಾಂಡ್ ಕುರಿತಂತೆ ಕಾರ್ಯನಿರ್ವಹಿಸುವ ಸಿಬ್ಬಂದಿಗಾಗಿ ಮಾತ್ರ ಆಗಿವೆ ಎಂದೂ ಬ್ಯಾಂಕ್ ಹೇಳಿದೆ.

Read More

ಬ್ರಹ್ಮದೆವನಮಡು: ಕುಡಿದ ಮತ್ತಿನಲ್ಲಿ ಪತ್ನಿ ಶೀಲಶಂಕಿಸಿ ಕೊಡಲಿಯಿಂದ ಕೊಚ್ಚಿ ಪತಿ ಕೊಲೆ ಮಾಡಿದ ಘಟನೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದಲ್ಲಿ ನಡೆದಿದೆ.ಕಮಾಲಬಾಯಿ ಇಂಚಗೇರಿ (೪೫) ಕೊಲೆಯಾದ ಮೃತ ದುದೈ೯ವಿಯಾಗಿದ್ದು.ಕುಡಿದ ಮತ್ತಿನಲ್ಲಿ ಗೋಲ್ಲಾಳಪ್ಪಗೌಡ ಭಗವಂತಪಗೌಡ ಇಂಚಗೇರಿ ಗೆ ಜಗಳ ಮಾಡಿಕೊಂಡಿದ್ದಾನೆ.ಜಗಳ ವಿಕೋಪಕ್ಕೆ ಹೋಗಿ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಲ್ಲದೇ ಕೊಲೆ ಮಾಡಿ ಸ್ಥಳದಲ್ಲಿಯೇ ಮಲಗಿದ್ದಾನೆ.ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಇಂಡಿ ಡಿವೈಎಸ್ಪಿ ಎಚ್.ಜಗದೀಶ, ಸಿಂದಗಿ ಸಿಪಿಆಯ್ ನಾನಾಗೌಡ ಪೋಲಿಸ್ ಪಾಟೀಲ, ಕಲಕೇರಿ ಠಾಣೆಯ ಪಿಎಸೈ ರೋಹಿಣಿ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮುದ್ದೇಬಿಹಾಳ: ಇಲ್ಲಿನ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ತಾಲೂಕು ಪಂಚಾಯತ ವ್ಯಾಪ್ತಿಯಲ್ಲಿ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಖಾತೆಗಳ ಬದಲಾವಣೆ ಸೇರಿದಂತೆ ಗ್ರಾಮ ಪಂಚಾಯತಗಳಲ್ಲಿ ಪಿಡಿಓ ಗಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಸರಿಪಡಿಸುವಂತೆ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.ಜಿಪಿಎಸ್ ಮಾಡಿಕೊಡುವದಾಗಿ ಸುಳ್ಳು ಹೇಳಿ ಸಾರ್ವಜನಿಕರಿಕರಿಂದ ಭೂ ಮಾಪಕರು ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಹೀಗಾಗದಂತೆ ಕ್ರಮವಹಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ಕಾಲ ಕಾಲಕ್ಕೆ ಮೊಟ್ಟೆ ಸೇರಿದಂತೆ ಗರ್ಭಿಣಿಯರಿಗೆ ನೀಡುತ್ತಿರುವ ಪೋಶಕಾಂಶಯುಕ್ತ ಪದಾರ್ಥಗಳ ವಿತರಣೆಗಳ ಮಾಹಿತಿ ಕಲೆ ಹಾಕಿದ ಲೋಕಾಯುಕ್ತ ಅಧಿಕಾರಿಗಳು ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಸೂಕ್ತ ಗಮನ ಹರಿಸುವಂತೆ, ಸ್ಕಾö್ಯನಿಂಗ್ ಸೆಂಟರ್‌ಗಳ ಮೇಲೆ ನಿಗಾ ವಹಿಸುವಂತೆ ಸೂಚಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಟ್ಟಣ ಸ್ವಚ್ಛವಿಲ್ಲದ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ, ಕೃಷಿ ಹೊಂಡ ಟಾರ್ಗೇಟ್ ರೀಚ್ ಮಾಡದ ಬಗ್ಗೆ ಕೃಷಿ ಅಧಿಕಾರಿಯನ್ನ ತರಾಟೆಗೆ…

Read More

ಇಂಡಿ: ಸಿಂದಗಿ ಮತ್ತು ಆಲಮೇಲ ತಾಲೂಕುಗಳಲ್ಲಿ ಭೀಮಾ ನದಿಯಲ್ಲಿ ಆಕ್ರಮ ಮರುಳು ಸಾಗಾಣಿಕೆ ಮಾಡುವ ಕುರಿತು ಸೋಮವಾರ ರಾತ್ರಿ ೧೧ ಗಂಟೆಯಿಂದ ರೇಡ್ ಇಂಡಿಯ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರ ನೇತೃತ್ವದಲ್ಲಿ ನಡೆಯಿತು.ಇಂಡಿ, ಸಿಂದಗಿ ಮತ್ತು ಆಲಮೇಲ ತಾಲೂಕುಗಳಲ್ಲಿ ಎಲ್ಲ ಕಡೆಗೂ ಆಕ್ರಮ ಮರುಳು ಮಾಡುವಾಗಲೇ ಹಿಡಿದಿದ್ದಾರೆ.ಎಲ್ಲ ಕಡೆಗೂ ಆಕ್ರಮ ಮರುಳು ಮಾಡುವವರು ತಮ್ಮ ವಾಹನ ಗಳಿಗೆ ಕೀಲಿ ಹಾಕಿ ಓಡಿ ಹೋಗಿದ್ದಾರೆ.ಒಂದು ಹಿಟಾಚಿ, ಒಂದು ಜೆಸಿಪಿ, ಎರಡು ಟ್ಯಾçಕ್ಟರ್ ಒಂದು ಬುಲೆರೋ ಸೇರಿದಂತೆ ಹಲವಾರು ವಾಹನ ವಶದಲ್ಲಿ ಪಡೆದಿದ್ದಾರೆ.ಅದಲ್ಲದೆ ಯಾರೂ ನದಿಯಲ್ಲಿಯ ಮರುಳು ಆಕ್ರಮ ಮಾಡಬಾರದು. ಮರುಳು ತೆಗೆಯಲು ವಾಹನಗಳನ್ನು ಬಳಸಬಾರದು, ನದಿ ದಂಡೆಯ ಸಮೀಪದ ತೋಟದವರು ಮರುಳು ಆಕ್ರಮಕ್ಕೆ ವಾಹನ ಹೋಗಲು ಜಾಗ ನೀಡಬಾರದು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವದು ಎಂದರು.ಆಲಮೇಲ ತಹಸೀಲ್ದಾರ ಮಹಾದೇವ ಸಣ್ಣಮೂರಿ, ಲಕ್ಷö್ಮಣ ಕಾಢೆ, ರವಿ ಕಕ್ಕಳಮೇಲಿ, ಮಾರುತಿ ಸಾಳುಂಕೆ, ಯಮನೂರ ಗೊಂಧಳಿ, ಭೀಮಣ್ಣ ಜೇರಟಗಿ, ಶರಣು ತಳವಾರ, ದತ್ತು ವಾಲಿಕಾರ, ಮಲಕಪ್ಪ ಮತ್ತಿತರಿದ್ದರು.

Read More

ಇಂಡಿ: ಪಟ್ಟಣದ ಕೆನರಾ ಬ್ಯಾಂಕ್ ಖಾತೆಯಲ್ಲಿರುವ ಶಿವಾನಂದ ಲಕ್ಕುಂಡಿಮಠ ಇವರ ಖಾತೆ ೧೨೫೦೦೪೯೩೯೨೧೯ ಅಕೌಂಟಿನಿಂದ ಎರಡು ಲಕ್ಷ ಹತ್ತು ಸಾವಿರ ರೂ ವಂಚನೆ ಯಾಗಿರುತ್ತದೆ.ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಯಾಗಿದ್ದು ಯಾರು ಈ ಕೃತ್ಯ ಮಾಡಿದ್ದಾರೆ ಎಂಬುದು ಇನ್ನೂ ತಿಳಿಸಿದಿಲ್ಲ.ಖಾತೆಯಲ್ಲಿಯ ಹಣ ಒಂದೇ ಬಾರಿಗೆ ತೆಗೆಯದೇ ರವಿವಾರ ಮಧ್ಯಾಹ್ನ ಸುಮಾರಿಗೆ ಮೊದಲಬಾರಿಗೆ ಒಂದು ಲಕ್ಷ ರೂ, ೨ ನೇ ಸಲ ೩೫ ಸಾವಿರ ರೂ, ೩ ನೇ ಸಲ ೫೦ ಸಾವಿರ ರೂ, ೪ ನೇ ಬಾರಿ ೨೫ ಸಾವಿರ ರೂ ಹಣ ಹೋಗಿದೆ.ಬ್ಯಾಂಕ್ ಮೊಬಾಯಿಲ್ ಆಪ್ ಇಲ್ಲ, ಎಟಿಎಂ ಇಲ್ಲ,ಚೆಕ್ ಇಲ್ಲ ಹಿಗಿದ್ದರೂ ಸಹಿತ ಖಾತೆಯಲ್ಲಿಯ ಹಣ ಖಾಲಿಯಾಗಿದೆ.ಈ ಕುರಿತು ಭಾನುವಾರ ಸಾಯಂಕಾಲವೇ ವಿಜಯಪುರ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.ಇಂದು ಪಟ್ಟಣದ ಅನೇಕ ಜನರು ಕೆನರಾ ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರ ಜೊತೆಗೆ ಚರ್ಚಿಸಿದರು.ಹಿರಿಯ ವ್ಯವಸ್ಥಾಪಕ ಸಿದ್ದನಗೌಡ ಮಾತನಾಡಿ ಬ್ಯಾಂಕ ಖಾತೆಯಿಂದ ಹಣ…

Read More