ಮುದ್ದೇಬಿಹಾಳ: ಇಲ್ಲಿನ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ತಾಲೂಕು ಪಂಚಾಯತ ವ್ಯಾಪ್ತಿಯಲ್ಲಿ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಖಾತೆಗಳ ಬದಲಾವಣೆ ಸೇರಿದಂತೆ ಗ್ರಾಮ ಪಂಚಾಯತಗಳಲ್ಲಿ ಪಿಡಿಓ ಗಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಸರಿಪಡಿಸುವಂತೆ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಿಎಸ್ ಮಾಡಿಕೊಡುವದಾಗಿ ಸುಳ್ಳು ಹೇಳಿ ಸಾರ್ವಜನಿಕರಿಕರಿಂದ ಭೂ ಮಾಪಕರು ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಹೀಗಾಗದಂತೆ ಕ್ರಮವಹಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ಕಾಲ ಕಾಲಕ್ಕೆ ಮೊಟ್ಟೆ ಸೇರಿದಂತೆ ಗರ್ಭಿಣಿಯರಿಗೆ ನೀಡುತ್ತಿರುವ ಪೋಶಕಾಂಶಯುಕ್ತ ಪದಾರ್ಥಗಳ ವಿತರಣೆಗಳ ಮಾಹಿತಿ ಕಲೆ ಹಾಕಿದ ಲೋಕಾಯುಕ್ತ ಅಧಿಕಾರಿಗಳು ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಸೂಕ್ತ ಗಮನ ಹರಿಸುವಂತೆ, ಸ್ಕಾö್ಯನಿಂಗ್ ಸೆಂಟರ್‌ಗಳ ಮೇಲೆ ನಿಗಾ ವಹಿಸುವಂತೆ ಸೂಚಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಟ್ಟಣ ಸ್ವಚ್ಛವಿಲ್ಲದ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ, ಕೃಷಿ ಹೊಂಡ ಟಾರ್ಗೇಟ್ ರೀಚ್ ಮಾಡದ ಬಗ್ಗೆ ಕೃಷಿ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡರು. ಮುಂಗಾರು ಮಳೆ ಪ್ರಾರಂಭವಾಗಿದ್ದು ರೈತರಿಗೆ ನೀಡಬೇಕಾದ ಬೀಜ ಗೊಬ್ಬರಗಳ ವಿತರಣೆಯಲ್ಲಿ ನಿಯಮಗಳ ಪಾಲನೆಯಾಗುವಂತೆ ಸೂಚಿಸಿದರು. ಹೆಸ್ಕಾಂ ನವರು ಯಾವುದೇ ಯಾವುದೇ ರೈತರ ಬೇಡಿಕೆಗೆ ತಕ್ಕಂತೆ ಹಣ ಪಡೆಯದೇ ೭೨ ತಾಸುಗಳ ಒಳಗಾಗಿ ಟಿಸಿ ಅಳವಡಿಸುವಂತೆ, ಒಂದು ವೇಳೆ ಯಾವುದೇ ರೈತರ ಬಳಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಕಚೇರಿಗೆ ದೂರು ನೀಡುವಂತೆ ತಿಳಿಸಿದರು. ಎಲ್ಲ ಕಚೇರಿಗಳಲ್ಲಿ ಅಧಿಕಾರಿಗಳ ಮತ್ತು ನೌಕರರ ದಿನಚರಿ ಪುಸ್ತಕ, ನಗದು ವಹಿ, ಸಂದರ್ಶಕರ ವಹಿ ಪುಸ್ತಗಳ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಇದೇ ವೇಳೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕಾಳಗಿ ಗ್ರಾಮದ ರಿ.ಸ ನಂ ೧೪೮*/೨ ಭೂಮಿಯ ಮೃತರ ವಾರಸಾ, ಕಾಳಗಿ ಗ್ರಾಮದ ರಿ.ಸ.ನಂ ೧೨೭/೧+೨ಎ ಜಮೀನಿನ ನ್ಯಾಯಾಲಯದಲ್ಲಿನ ಆದೇಶದಂತೆ ಪೋಡಿ ಮಾಡದಿರುವ, ಪಟ್ಟಣದ ಮಾರುತಿ ನಗರದಲ್ಲಿ ಸಾರ್ವಜನಿಕ ಜಾಗೆಯಲ್ಲಿ ದೇವಸ್ಥಾನ ನಿರ್ಮಿಸಿದ ಬಗೆಗಿನ ದೂರುಗಳು ಪ್ರಮುಖವಾಗಿದ್ದವು.
ಲೋಕಾಯುಕ್ತ ಅಧಿಕಾರಿಗಳಾದ ಟಿ.ಮಲ್ಲೇಶ, ಸುರೇಶ ರೆಡ್ಡಿ, ಆನಂದ ಟಕ್ಕಣ್ಣವರ, ಆನಂದ ಡೋಣಿ, ಸಿಬ್ಬಂದಿಗಳಾದ ಶಂಕರ ಕಟೆ, ಸಂತೋಷ ಅಮರಖೇಡ್, ಆನಂದ ಪಡಶೆಟ್ಟಿ, ತಹಶೀಲ್ದಾರ ಬಸವರಾಜ ನಾಗರಾಳ, ತಾಲೂಕು ಪಂಚಾಯತ ಇಓ ಎಸ್.ಎಸ್.ಕಲ್ಮನಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

